ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಪ್ರತಿ ವರ್ಷ ಸಿಗಲಿದೆ ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನ ಕೂಡಲೇ ಅರ್ಜಿ ಸಲ್ಲಿಸಿ.

 

WhatsApp Group Join Now
Telegram Group Join Now

ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಅವರ ಇಚ್ಛೆಯ ಕೋರ್ಸ್ ನಾಗಲಿ ಅಥವಾ ಅವರು ಇಚ್ಛೆ ಪಟ್ಟ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಪಡಬೇಕು ಎಂದರೆ ವಿಪರೀತವಾದ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಭಾರತದ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಇದು ದಕ್ಕದು. ಆದ ಕಾರಣ ಎಷ್ಟೋ ಜನ ತಮ್ಮ ಕನಸನ್ನೇ ಮರೆತುಬಿಡುತ್ತಾರೆ.

ಆದರೆ ಪ್ರತಿಭಾನ್ವಿತ ಮಕ್ಕಳ ಓದು ಹಣಕಾಸಿನ ಸಮಸ್ಯೆಯಿಂದ ನಿಲ್ಲಬಾರದು ಎನ್ನುವ ಕಾರಣಕ್ಕೆ ಸರ್ಕಾರಗಳು ವಿದ್ಯಾರ್ಥಿಗಳ ಮೂಲಕ ಇಂತಹ ಮಕ್ಕಳಿಗೆ ಸಹಾಯ ಮಾಡುತ್ತಿವೆ, ಮಾತ್ರವಲ್ಲದೆ ದೇಶದಲ್ಲಿರುವ ಅನೇಕ ಸಂಸ್ಥೆಗಳು ಕೂಡ ಈ ರೀತಿ ಬಡ ಪ್ರತಿಭಾನ್ವಿತ ಮಕ್ಕಳ ಪ್ರತಿಭೆಯನ್ನು ಪೋಷಿಸಿ ಬೆಳೆಸುತ್ತಿವೆ.

ಇದರಲ್ಲಿ ವಿಶೇಷವಾಗಿ ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಬಗ್ಗೆ ಹೆಚ್ಚಿಗೆ ಕಾಳಜಿ ಮಾಡಲಾಗುತ್ತದೆ. ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ ವಿದೇಶಗಳಲ್ಲಿ ಹೋಗಿ ವಿದ್ಯಾಭ್ಯಾಸ ಶುಲ್ಕ ಪಾವತಿ ಮಾಡಿ ವಿದ್ಯೆ ಕಲಿಯುವುದರ ಜೊತೆಗೆ ಅವರ ಬದುಕನ್ನು ಕೂಡ ನಿರ್ವಹಿಸಿಕೊಳ್ಳಬೇಕಾದ ದೊಡ್ಡ ಹೊಣೆಗಾರಿಕೆ ಅವರ ಮೇಲೆ ಇರುತ್ತದೆ.

ಈ ಕಾರಣಕ್ಕಾಗಿ ಅವರ ಕಲಿಕಾ ಆಸಕ್ತಿಗೆ ತೊಂದರೆ ಆಗಬಾರದು ಎಂದು ಬೋಧನೆ ಶುಲ್ಕ, ವಸತಿ ಠೇವಣಿ, ಸಾರಿಗೆ ವೆಚ್ಚ, ಪುಸ್ತಕ ಸಾಮಾಗ್ರಿಗಳ ಖರೀದಿ ಇತ್ಯಾದಿ ಸೇರಿದಂತೆ ಎಲ್ಲಕ್ಕೂ ಅನುಕೂಲ ಆಗಲಿ ಅನ್ನುವ ಕಾರಣಕ್ಕಾಗಿ ಕೆಲ ಸಂಸ್ಥೆಗಳು ಆ ಮಕ್ಕಳನ್ನು ಗುರುತಿಸಿ ಸಹಾಯಧನ ನೀಡುವ ಮೂಲಕ ಸಹಾಯ ಮಾಡುತ್ತಿವೆ. ಈಗ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮತ್ತೊಂದು ಸಂಸ್ಥೆಯು ಈ ರೀತಿ ಸಹಾಯ ಹಸ್ತ ಚಾಚಿದೆ.

ನ್ಯಾಷನಲ್ ಇಂಡಿಯನ್ ಸ್ಟೂಡೆಂಟ್ಸ್ ಮತ್ತು ಅಲುಮ್ನಿ ಯೂನಿಯನ್ ಸಂಸ್ಥೆಯು ಈಗ UKಗೆ ಹೋಗಿ ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಿದೆ. ಇದಕ್ಕೆ ETS ಎಂದರೆ ಎಜುಕೇಶನ್ ಟೆಸ್ಟಿಂಗ್ ಸರ್ವಿಸ್ ಕೂಡ ಕೈಜೋಡಿಸಿದ್ದು, ಎರಡು ಸಂಸ್ಥೆಗಳು ಸೇರಿ TOFEL ಎನ್ನುವ ಹೆಸರಿನ ಒಪ್ಪಂದವನ್ನು ಮಾಡಿಕೊಂಡಿವೆ.

ಈ ಸಂಸ್ಥೆಗಳ ಮಾನದಂಡಗಳ ಪ್ರಕಾರ ಆಯ್ಕೆ ಆಗುವ 25 ಭಾರತೀಯ ವಿದ್ಯಾರ್ಥಿಗಳಿಗೆ ಯುಕೆ ಇಂಡಿಯಾ ಟಫೆಲ್ ಸ್ಕಾಲರ್ಶಿಪ್ ಎನ್ನುವ ಹೆಸರಿನಲ್ಲಿ ಒಟ್ಟು 64 ಲಕ್ಷ ರೂಗಳು ಸ್ಕಾಲರ್ಶಿಪ್ ಸಿಗಲಿದೆ. ಒಟ್ಟಾರೆಯಾಗಿ 64 ಲಕ್ಷ ಮೌಲ್ಯದ ಸ್ಕಾಲರ್ಶಿಪ್ ನೀಡಲು ಸಂಸ್ಥೆಯು ನಿರ್ಧರಿಸಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ 2.4 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ.

ಯುನೈಟೆಡ್ ಕಿಂಗ್ಡಮ್ ಗೆ ಹೋಗಿ ಪದವಿ ಪೂರ್ಣ ಮತ್ತು ಸ್ನಾತಕೋತರ ಪದವಿ ವಿದ್ಯಾಭ್ಯಾಸ ಮಾಡಲು ಇಚ್ಛೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದರೆ ಸಂಸ್ಥೆ ಸೂಚಿಸಿರುವ ಅಧಿಕೃತ ವೆಬ್ಸೈಟ್ ಆದ https://toefltest.in/scholarship ವೆಬ್ ಸೈಟ್ ಗೆ ಹೋಗಿ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 31, ಕೊನೆ ದಿನಾಂಕವಾಗಿದೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ತೀರ್ಮಾನವೆ ಅಂತಿಮವಾಗಿರುತ್ತದೆ.NISAU, UK ವಿಶ್ವವಿದ್ಯಾಲಯದ ಪ್ರತಿನಿಧಿಗಳು ಒಳಗೊಂಡ ಆಯ್ಕೆ ಸಮಿತಿಯು ವಿದ್ಯಾರ್ಥಿ ವೇತನ ಪಡೆಯುವ ಅರ್ಹ ವಿದ್ಯಾರ್ಥಿಗಳನ್ನು ಆರಿಸುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now