Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಅತಿ ಹೆಚ್ಚು ದೂರಗಳನ್ನು ವಾಹನ ಸವಾರರು ಹೇಳುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಅಡ್ಡಗಟ್ಟುತ್ತಾರೆ ಎಲ್ಲಾ ದಾಖಲೆಗಳು ಸರಿ ಇದ್ದರು ಏನನ್ನಾದರೂ ಫೈನ್ ಹಾಕಲು ಹುಡುಕುತ್ತಾರೆ ಅನೇಕ ಪ್ರಕರಣಗಳಲ್ಲಿ ತಾವೇ ದಂಡ ವಸೂಲಿ ಮಾಡುತ್ತಾರೆ.
ಯಾವುದೇ ಅತಿ ಮುಖ್ಯವಾದ ಕೆಲಸಕ್ಕೆ ವಾಹನ ಸವಾರ ಹೊರಟಿದ್ದರೂ ಕೂಡ ಈ ರೀತಿ ದಂಡ ಕಟ್ಟುವವರೆಗೂ ತಡೆದು ನಿಲ್ಲಿಸುವುದರಿಂದ ಬಹಳ ಕ’ಷ್ಟಗಳಾಗುತ್ತಿವೆ ಎನ್ನುವ ದೂರು ಇದೆ. ಕೆಲವು ಪ್ರಕರಣಗಳಲ್ಲಿ ತಾಳ್ಮೆ ಕಳೆದುಕೊಂಡು ವಾಹನ ಸವಾರರು ಮತ್ತು ಸಂಚಾರಿ ಪೊಲೀಸ್ ಗಳ ನಡುವೆ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಇದೆ.
ಪ್ರತಿನಿತ್ಯ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳ ಬಗ್ಗೆ ನೋಡುತ್ತಲೇ ಇದ್ದೇವೆ ಈಗ ಈ ಪ್ರಕರಣಕ್ಕೆಲ್ಲ ಒಂದು ಇತ್ಯರ್ಥವನ್ನು ಮಾನ್ಯ ಘನ ನ್ಯಾಯಾಲಯವು ನೀಡಿದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ರಸ್ತೆ ಮೇಲೆ ವಾಹನ ಸವಾರಿ ಮಾಡಲು ವಾಹನ ಸವಾರರಿಗೆ ಕೆಲವು ನಿಯಮಗಳನ್ನು ಮಾಡಲಾಗಿದೆ ಒಂದು ವೇಳೆ ವಾಹನ ಸವಾರರು ಈ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಂಚಾರಿ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸುತ್ತಾರೆ. ಸಂಚಾರ ನಿಯಮಗಳ ಉಲ್ಲಂಘನ ಜೊತೆ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಪರಿಶೀಲಿಸುತ್ತಾರೆ.
ಇವುಗಳಲ್ಲಿ ಯಾವುದಾದರೂ ನಿಯಮ ಮೀರಿದ್ದರೆ ದಂಡ ಬೀಳುತ್ತದೆ ಆದರೆ ಇನ್ನು ಮುಂದೆ ಈ ರೀತಿ ಟ್ರಾಫಿಕ್ ಪೊಲೀಸರು ದಂಡದ ಮೊತ್ತ ಸಂಗ್ರಹಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇಂತಹದೇ ಒಂದು ಪ್ರಕರಣದಲ್ಲಿ ಹೆಲ್ಮೆಟ್ ಧರಿಸದೆ ಇದ್ದದ್ದಕ್ಕೆ ದಂಡ ವಿಧಿಸಿದ್ದನ್ನು ಪಾವತಿಸಲು ನಿರಾಕರಿಸಿ ಮತ್ತು ಬಲಪ್ರಯೋಗ ನಡೆಸಿ ಸರ್ಕಾರಿ ಅಧಿಕಾರಿಗೆ ಆತನ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದ ಆರೋಪದ ಸಂಬಂಧ ಕೆ.ಆರ್.ಪೇಟೆ ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ.ಟಿ.ನಟರಾಜು ಅವರು ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರ’ದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠವು ಈ ರೀತಿ ಆದೇಶ ಮಾಡಿದೆ. ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಿ ಕೊಳ್ಳಬೇಕು ಹಾಗೂ ಸಂಚಾರಿ ಪೊಲೀಸರು ಯಾವುದೇ ಕಾರಣಕ್ಕೂ ಆರೋಪಿಯಿಂದ ದಂಡದ ಮೊತ್ತ ಸಂಗ್ರಹಿಸಲು ಅವಕಾಶವಿಲ್ಲ, ಸ್ಥಳದಲ್ಲೇ ಹಣ ಪಾವತಿ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದಿದೆ ಕೋರ್ಟ್.
ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ. ಸಂಚಾರ ಪೊಲೀಸರು ಆರೋಪಿಯಿಂದ ದಂಡ ಸಂಗ್ರಹಿಸಲು ಸಾಧ್ಯವಿಲ್ಲ. ಪೊಲೀಸ್ ಅಧಿಕಾರಿಯ ಮೇಲೆ ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಯಾವುದೇ ನಿಯಮ ಉಲ್ಲಂಘನೆ ಆಗಿದ್ದರೂ ಅದಕ್ಕೆ ಸಂಬಂಧಿಸಿದಂತೆ ವಾಹನ ಸವಾರರಿಗೆ ಸ್ಲಿಪ್ ಕೊಡಬೇಕು.
ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದರೆ ವ್ಯಕ್ತಿಯನ್ನು ತಡೆಯಬೇಕು. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಠಾಣೆಯ ಪೊಲೀಸರನ್ನು ಕರೆಸಿ, ಆರೋಪಿಯನ್ನು ವಶಕ್ಕೆ ನೀಡಬೇಕು. ಇಲ್ಲದಿದ್ದರೆ ಹಲ್ಲೆ ಹಾಗೂ ಬಲಪ್ರಯೋಗ ನಡೆಸಿ ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಹಾಗಾಗಿ ವಾಹನ ಸವಾರರು ಇನ್ನು ಮುಂದೆ ಈ ವಿಷಯವಾಗಿ ಸಮಸ್ಯೆ ಎದುರಿಸುವ ಪರಿಸ್ಥಿತಿ ಬರುವುದಿಲ್ಲ.