ಈ ಒಂದು ಪಾನೀಯವನ್ನು ಕುಡಿದರೆ ಸಾಕು ನಿಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ವೇಗವಾಗಿ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ರಕ್ತ ಹೀನತೆ ಉಂಟಾಗುತ್ತಿದೆ ಅಂದರೆ ರಕ್ತದ ಕೊರತೆ ಉಂಟಾಗುತ್ತಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತಾ ಇದೆ ಇದರಿಂದಾಗಿ ತುಂಬಾ ಸುಸ್ತಾಗುವುದು, ಯಾವುದರಲ್ಲೂ ಸಹ ಆಸಕ್ತಿ ಇರುವುದಿಲ್ಲ, ನಿಶಕ್ತಿಯಿಂದ ಕೂಡಿರೋದು ಹೀಗೆಲ್ಲಾ ಆಗುತ್ತದೆ, ಇದಕ್ಕೆಲ್ಲಾ ಕಾರಣ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇಲ್ಲದೆ ಇರುವುದು. ಹಿಮೋಗ್ಲೋಬಿನ್ ಯಾಕೆ ಇರುವುದಿಲ್ಲ ಎಂದು ನೋಡುವುದಾದರೆ ನಾವು ತಿನ್ನುವಂತಹ ಆಹಾರದಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರುವುದಿಲ್ಲ ಇದನ್ನೇ ನಾವು ಅನೀಮಿಯ ಅಥವಾ ರಕ್ತಹೀನತೆ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಿಗೆ ರಕ್ತಹೀನತೆ ಕಂಡುಬರುತ್ತದೆ.

WhatsApp Group Join Now
Telegram Group Join Now

ನಮಗೆ ತುಂಬಾ ಸುಸ್ತು, ನಿಶಕ್ತಿ ಆಗುತ್ತಿದ್ದರೆ ನಾವು ವೈದ್ಯರಲ್ಲಿ ಹೋಗಿ ಬ್ಲಡ್ ಟೆಸ್ಟ್ ಮಾಡಿಸುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದಿಯಾ ಇಲ್ಲವಾ ಎಂದು ತಿಳಿಯುತ್ತದೆ. ರಕ್ತ ಬೇಗ ಉತ್ಪತ್ತಿ ಮಾಡಲು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದನ್ನು ತಯಾರಿಸಿಕೊಂಡು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಮೊದಲಿಗೆ ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಎರಡು ಗ್ಲಾಸ್ ನಷ್ಟು ನೀರನ್ನು ಹಾಕಿ ನಂತರ ಅದಕ್ಕೆ 25 ರಿಂದ 30 ಒಣದ್ರಾಕ್ಷಿಯನ್ನು ಹಾಕಿ ಒಣ ದ್ರಾಕ್ಷಿಯಲ್ಲಿ ಅತಿ ಹೆಚ್ಚಾಗಿ ಕಬ್ಬಿಣಾಂಶ ಇದೆ ರಕ್ತವನ್ನು ಬೇಗ ಉತ್ಪತ್ತಿ ಮಾಡುವುದಕ್ಕೆ ಇದು ಉತ್ತಮ ಪಾತ್ರ ವಹಿಸುತ್ತದೆ. ಪಾತ್ರೆಯನ್ನು ಮೀಡಿಯಂ ಉರಿಯಲ್ಲಿ ಇಟ್ಟು ಚೆನ್ನಾಗಿ ಕುದಿಯಲು ಬಿಡಿ ಹತ್ತು ನಿಮಿಷಗಳ ನಂತರ ಆ ನೀರಿನ ಕಲರ ಚೇಂಜ್ ಆಗಿರುತ್ತದೆ. ನೀವು ತಯಾರಿಸಿಕೊಂಡಿರುವ ಪಾನೀಯವನ್ನು ಮುಚ್ಚಿ ಹಾಗೆ ಒಂದು ರಾತ್ರಿ ಇಡಬೇಕು.

ರಾತ್ರಿ ಇಡೀ ಇಡುವುದರಿಂದ ದ್ರಾಕ್ಷಿಯಲ್ಲಿ ಇರುವಂತಹ ಎಲ್ಲಾ ಅಂಶಗಳು ಸಹ ನೀರಿನಲ್ಲಿ ಬಿಟ್ಟಿರುತ್ತದೆ. ಬೆಳಿಗ್ಗೆ ಎದ್ದ ನಂತರ ದ್ರಾಕ್ಷಿ ತುಂಬಾ ಉಬ್ಬಿಕೊಂಡು ಬಂದಿರುತ್ತದೆ ನಂತರ ಇದನ್ನು ನೀವು ಶೋಧಿಸಿಕೊಂಡು ದಿನಾ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಸಪರೇಟ್ ಮಾಡಿಕೊಂಡಿರುವಂತಹ ದ್ರಾಕ್ಷಿಯನ್ನು ಸಹ ನೀವು ತಿನ್ನಬೇಕು ಆಗ ನಿಮಗೆ ಕಬ್ಬಿಣಾಂಶ ಪೂರ್ತಿಯಾಗಿ ಸಿಗುತ್ತದೆ. ಒಂದು ವಾರದಲ್ಲಿ ನಿಮಗೆ ರಿಸಲ್ಟ್ ಎನ್ನುವಂತಹದ್ದು ಸಿಕ್ಕೆ ಸಿಗುತ್ತದೆ. ನೀವು ಜೀವನಪೂರ್ತಿ ಇದನ್ನು ಅಳವಡಿಸಿಕೊಳ್ಳಬಹುದು ನಿಮಗೆ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ, ಬದಲಿಗೆ ನಿಮ್ಮ ಆರೋಗ್ಯದಲ್ಲಿ ಯಥೇಚ್ಛವಾಗಿ ಆರೋಗ್ಯಕರವಾದಂತಹ ಬದಲಾವಣೆಗಳು ಉಂಟಾಗುತ್ತದೆ.

ಸಾಕಷ್ಟು ಜನರು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಇದಕ್ಕೆಲ್ಲ ಕಾರಣ ಅವರ ಜೀವನಶೈಲಿ ಹಾಗೆ ಆಹಾರ ಪದ್ಧತಿ, ಇದರಿಂದಾಗಿ ಅವರ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕುಸಿಯುತ್ತಾ ಇರುತ್ತದೆ ಅಂತಹವರಿಗೆ ಇದೊಂದು ಒಳ್ಳೆಯ ಮನೆಮದ್ದು ಎಂದು ಹೇಳಬಹುದು. ನಾವು ಯಾವುದೇ ಡಾಕ್ಟರ್ ಗಳ ಬಳಿ ಹೋಗುವಂತಹ ಅವಶ್ಯಕತೆ ಇಲ್ಲ ನಮ್ಮ ಮನೆಯಲ್ಲಿ ಈ ಒಂದು ದ್ರಾಕ್ಷಿ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಇದು ಹೆಚ್ಚು ಮಾಡುತ್ತದೆ. ಯಾರಿಗೆಲ್ಲ ಅನಿಮಿಯ ಸಮಸ್ಯೆಯಿಂದ ಬಳಲುತ್ತಾ ಇದ್ದೀರೋ ಅಂತಹವರು ಇಂದಿನಿಂದಲೇ ಈ ಒಂದು ವಿಧಾನವನ್ನು ಅನುಸರಿಸಿ ನಿಮಗೆ ಖಂಡಿತವಾಗಿ ಒಳ್ಳೆಯ ರಿಸಲ್ಟ್ ಅನ್ನುವಂತಹ ಸಿಗುತ್ತದೆ. ಈ ಒಂದು ಮನೆ ಮದ್ದು ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now