ಮನುಷ್ಯನ ದೇಹ ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತದೆ ಅದನ್ನು ನಾವು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ನಮ್ಮ ದೇಹದಲ್ಲಿ ಸ್ವಲ್ಪ ಏರುಪೇರು ಆದರೂ ಸಹ ನಮ್ಮ ಆರೋಗ್ಯದ ಮೇಲೆ ಅದು ಅಡ್ಡ ಪರಿಣಾಮಗಳನ್ನು ಬೀರುತ್ತದೆ ತುಂಬಾ ಜನರು ಈ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಹೈಪರ್ ಅಸಿಡಿಟಿ ಸಮಸ್ಯೆ ಇರುವಂತಹ ಅವರಿಗೆ ತಲೆನೋವು, ವಾಂತಿ ಬರುವ ಹಾಗೆ ಆಗುವುದು, ಹೊಟ್ಟೆ ಉರಿ, ಎದೆಯಲ್ಲಿ ಉರಿ, ಉಳಿತೇಗು, ಆಲಸ್ಯತನ, ವಾಂತಿ ಬರುವುದು ಇದೆಲ್ಲವೂ ಸಹ ಹೈಪರ್ ಅಸಿಡಿಟಿಯ ಲಕ್ಷಣಗಳು. ಈ ಒಂದು ಅಸಿಡಿಟಿ ಸಮಸ್ಯೆ ನಮ್ಮ ದೇಹದಲ್ಲಿ ಏಕೆ ಕಾಣಿಸಿಕೊಳ್ಳುತ್ತದೆ ಎಂದರೆ ನಮ್ಮ ಹೊಟ್ಟೆಯಲ್ಲಿ ನೈಸರ್ಗಿಕವಾದ ಆಸಿಡ್ ಇರುತ್ತದೆ ಅದರಲ್ಲಿ ಏರುಪೇರು ಉಂಟಾಗುವುದರಿಂದ ನಮ್ಮಲ್ಲಿ ಅಸಿಡಿಟಿ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಕಾರಣ ಏನು ಎಂದು ನೋಡುವುದಾದರೆ ಅತಿಯಾದ ಒತ್ತಡ ಹಾಗೆಯೇ ನಾವು ಹೆಚ್ಚಾಗಿ ಹುಳಿ ಪದಾರ್ಥ ಅಥವಾ ಖಾರವಾದಂತಹ ಪದಾರ್ಥಗಳು, ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು, ಮಧ್ಯಪಾನ, ಧೂಮಪಾನ ಮಾಡುವುದು. ವ್ಯಾಯಮ ಮಾಡದೇ ಇರುವುದು ಹಾಗೆಯೇ ಅತಿಯಾಗಿ ವ್ಯಾಯಾಮ ಮಾಡುವುದು, ನಮ್ಮ ನಿದ್ರೆಯಲ್ಲಿ ವ್ಯತ್ಯಾಸ ಕಂಡು ಬರುವುದು ಇದು ಸಹ ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಈ ಅಸಿಡಿಟಿ ಸಮಸ್ಯೆಯನ್ನು ನಾವು ಬಾರದಂತೆ ನೋಡಿಕೊಳ್ಳುವುದು ಹಾಗೆಯೇ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ನಮ್ಮ ಆಹಾರದಲ್ಲಿ ನಾವು ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಆಹಾರದಲ್ಲಿ ಖಾರ ಮತ್ತು ಉಳಿಯಿಂದ ಆದಷ್ಟು ಕಡಿಮೆ ಇರುವಂತಹ ಪದಾರ್ಥಗಳನ್ನು ಸೇವನೆ ಮಾಡಬೇಕು.
ಹಾಗೆಯೇ ನೀವು ನಿಯಮಿತವಾಗಿ ನಿದ್ರೆಯನ್ನು ಮಾಡಬೇಕು ಅಂದರೆ ರಾತ್ರಿ ಸಮಯದಲ್ಲಿ ನಿದ್ರೆ ಚೆನ್ನಾಗಿ ಮಾಡಿ ಬೆಳಗಿನ ಸಮಯದಲ್ಲಿ ನಿದ್ರೆ ಮಾಡದೇ ಇರುವ ಹಾಗೆ ನೋಡಿಕೊಳ್ಳಬೇಕು ಇದು ಸಹ ನಿಮ್ಮ ಅಸಿಡಿಟಿಯನ್ನು ಹೋಗಲಾಡಿಸಲು ಒಂದು ಮುಖ್ಯವಾದ ಅಂತಹ ಪರಿಹಾರವಾಗಿದೆ. ಒಂದು ದಿನಕ್ಕೆ ನೀವು 45 ರಿಂದ 60 ನಿಮಿಷಗಳ ಕಾಲ ವ್ಯಾಯಾಮ, ಪ್ರಾಣಾಯಾಮ ಮಾಡಬೇಕು ಈ ರೀತಿಯಾಗಿ ಬೆವರು ಬರುವ ಹಾಗೆ ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಹಾಗೆ ನಿಮ್ಮ ದೇಹಕ್ಕೆ ಎಷ್ಟು ಅಗತ್ಯವಾಗಿ ಬೇಕು ಅಷ್ಟನ್ನು ಮಾತ್ರ ಸೇವನೆ ಮಾಡಬೇಕು ಅದಕ್ಕಿಂತ ಹೆಚ್ಚು ಸೇವನೆ ಮಾಡುವುದು ಸಹ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಹಾಗೆಯೇ ದಿನದಲ್ಲಿ ಮೂರು ಹೊತ್ತು ಊಟ ಮಾಡಬೇಕು.
ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬೇಕಾದರೆ ನೀವು ಹಾಗಲಕಾಯಿಯ ಸೇವನೆಯನ್ನು ಮಾಡಬೇಕು ಹಾಗಲಕಾಯಿ ಕಹಿ ಇರುತ್ತದೆ ಆದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ನಾವು ಪಲ್ಯದ ರೂಪದಲ್ಲಿ ಅಥವಾ ಡ್ರೈ ರೋಸ್ಟ್ ಮಾಡಿಕೊಂಡು ಹಾಗಲಕಾಯಿಯನ್ನು ಸೇವನೆ ಮಾಡಬೇಕು. ನಾವು ಪ್ರತಿದಿನ ಮಧ್ಯಾಹ್ನ ಊಟದ ನಂತರ ಮಜ್ಜಿಗೆಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಊಟ ಮಾಡುವಂತಹ ಸಂದರ್ಭದಲ್ಲಿ ಅರ್ಧ ಟೇಬಲ್ ಸ್ಪೂನ್ ನಷ್ಟು ತುಪ್ಪವನ್ನು ನಿಮ್ಮ ಆಹಾರದಲ್ಲಿ ಸೇರಿಸಿ ನಂತರ ಸೇವನೆ ಮಾಡುವುದು ಸಹ ಪ್ರಯೋಜನಕಾರಿ. ಒಂದು ಲೋಟ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆಯನ್ನು ಸೇರಿಸಿ ಅದನ್ನ ಐದು ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಶೋಧಿಸಿ ದಿನದಲ್ಲಿ ಒಮ್ಮೆ ಕುಡಿದರೆ ಕ್ರಮೇಣವಾಗಿ ನಿಮ್ಮ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.