ವಂಶವೃಕ್ಷ ಪ್ರಮಾಣ ಪತ್ರ ಅಥವಾ ವಂಶಾವಳಿ ಪತ್ರ ಇದರ ಬಗ್ಗೆ ನೀವು ಕೇಳಿರುತ್ತೀರಿ. ಹೆಸರೇ ಹೇಳುವಂತೆ ವಂಶವೃಕ್ಷ ಎಂದರೇನು ಎಂದು ಸುಲಭವಾಗಿ ಹೇಳುವುದಾದರೆ ಆ ಕುಟುಂಬದ ಮಾಹಿತಿ ಎಂದು ಹೇಳಬಹುದು. ಒಂದು ಕೂಡು ಕುಟುಂಬ ಇದೆ ಎಂದುಕೊಳ್ಳೋಣ. ಆ ಅವಿಭಜಿತ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ ಅದರೆ ತಂದೆಗೆ ಎಷ್ಟು ಜನ ಮಕ್ಕಳಿದ್ದಾರೆ.
ಆ ಮಕ್ಕಳಲ್ಲಿ ಎಷ್ಟು ಜನರಿಗೆ ಮದುವೆ ಆಗಿದೆ, ಅವರ ಪತ್ನಿಯರು ಮತ್ತು ಅವರಿಗೆ ಮಕ್ಕಳಿದ್ದರೆ ಅವರ ಮಕ್ಕಳು ಹೀಗೆ ಒಬ್ಬ ತಂದೆಯ ಎಲ್ಲ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳ ಹೆಸರನ್ನು ಪ್ರಮಾಣಿಸಿ ಕೊಡುವ ಪತ್ರ. ಈ ಪ್ರಮಾಣ ಪತ್ರವನ್ನು ಪಡೆಯಲು ಪೂರಕ ದಾಖಲೆಗಳೊಂದಿಗೆ ನಿಮ್ಮ ವ್ಯಾಪ್ತಿಗೆ ಬರುವ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು. ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದೆ.
ವಂಶವೃಕ್ಷ ಪ್ರಮಾಣ ಪತ್ರದ ಉಪಯೋಗಗಳು:-
● ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಕೆಲಸಗಳಿಗೆ ವಂಶವೃಕ್ಷ ಪ್ರಮಾಣ ಪತ್ರವನ್ನು ಒಂದು ಅಧಿಕೃತ ದಾಖಲೆ ಆಗಿ ಕೇಳುತ್ತಾರೆ.
● ತಂದೆಯು ಸರ್ಕಾರಿ ನೌಕರಿಯಲ್ಲಿದ್ದು ಮ’ರ’ಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಮುಖ್ಯವಾಗಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
● ಕುಟುಂಬದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ನಡುವೆ ಅಥವಾ ದಾಯಾದಿಗಳ ನಡುವೆ ವಿವಾದಗಳು ನಡೆಯುತ್ತಿದ್ದರೆ, ಆ ಬಗ್ಗೆ ಕೋರ್ಟಿನಲ್ಲಿ ಕೇಸ್ ಹಾಕಿದ್ದರೆ ವಂಶಾವಳಿ ಪ್ರಮಾಣ ಪತ್ರವನ್ನು ಅವಶ್ಯವಾಗಿ ಕೇಳುತ್ತಾರೆ.
● ತಂದೆ ಹೆಸರಿನಲ್ಲಿ ಜಮೀನು ಇದ್ದು ಅವರ ಮ’ರ’ಣ’ದ ನಂತರ ತಂದೆ ಆಸ್ತಿಯನ್ನು ಮಕ್ಕಳ ಭಾಗ ಮಾಡಿಕೊಳ್ಳುತ್ತಿದ್ದರೆ ಪೌತಿ ಖಾತೆಯನ್ನು ಉತ್ತರಾಧಿಕಾರಿ ಹೆಸರಿನಲ್ಲಿ ತೆರಯಬೇಕು. ಆ ಸಂದರ್ಭದಲ್ಲಿ ವಂಶಾವಳಿ ಪತ್ರ ಕೇಳುತ್ತಾರೆ.
● ಕುಟುಂಬದವರು ಇನ್ಸೂರೆನ್ಸ್ ಮಾಡಿಸಿ ಅಕಾಲಿಕವಾಗಿ ಸಾವನಪ್ಪಿದ್ದರೆ, ವಾರಸುದಾರರಿಗೆ ಇನ್ಸೂರೆನ್ಸ್ ಕಂಪನಿಯಿಂದ ವಿಮೆ ಹಣ ಕ್ಲೇಮ್ ಮಾಡಿಕೊಳ್ಳಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ವಂಶಾವಳಿ ಪ್ರಮಾಣ ಪತ್ರ ಮಾಡಿಸಬೇಕಾಗುತ್ತದೆ.
● ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
● ನಮ್ಮ ರಾಜ್ಯದಲ್ಲಿ ಕುಟುಂಬದ ಗುರುತಿಗಾಗಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
● ಪ್ರಕೃತಿ ವಿಕೋಪಗಳಾದ ಜಲಪ್ರಳಯ, ಭೂಕಂಪದ ಸಂದರ್ಭದಲ್ಲಿ ಸಿಲುಕಿ ಕುಟುಂಬದವರು ಮರಣ ಹೊಂದಿದಲ್ಲಿ, DNA ಟೆಸ್ಟ್ ಮಾಡುವ ಸಂದರ್ಭ ಒದಗಿ ಬಂದಾಗ ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.
● ಅವಿಭಜಿತ ಕುಟುಂಬದ ಆಸ್ತಿ ವಿಭಜನೆಯ ಸಂದರ್ಭದಲ್ಲಿ ವಂಶಾವಳಿ ಪ್ರಮಾಣ ಪತ್ರ ಅಗತ್ಯ ದಾಖಲೆಯಾಗಿ ಬೇಕೇ ಬೇಕು.
● ಕುಟುಂಬದವರು ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ನಾಮಿನಿ ಆಗಿ ಮನೆಯವರ ಹೆಸರನ್ನು ಕೊಟ್ಟಿರುತ್ತಾರೆ, ಕಾರ್ಮಿಕ ಮರಣ ಹೊಂದಿದಲ್ಲಿ ಸಂಸ್ಥೆಯಿಂದ ಸಿಗುವ ಅನುದಾನಗಳನ್ನು ಪಡೆಯಲು ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.
● ಸರ್ಕಾರದ ಪೆನ್ಷನ್ ಯೋಜನೆಗಳಲ್ಲಿ ಸುಮಾರು ಜನರು ಹಣ ಹಾಕಿರುತ್ತಾರೆ. ಪೆನ್ಶನ್ ಮಾಡಿದ ವ್ಯಕ್ತಿ ಸತ್ತರೆ ಆ ಹಣ ವಾರಸುದಾರರಿಗೆ ಸೇರುತ್ತದೆ. ಮನೆಯವರು ಹಣ ಪಡೆಯಲು ವಂಶಾವಳಿ ಪ್ರಮಾಣ ಪತ್ರವನ್ನು ಪಡೆಯಬೇಕು.
● ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ ವ್ಯಕ್ತಿ ಸತ್ತರೆ ನಾಮಿನಿ ಹೊಂದಿರುವ ಕುಟುಂಬದ ಸದಸ್ಯರು ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಪಡೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
● ಕುಟುಂಬದಲ್ಲಿ ಎಲ್ಲರು ಒಟ್ಟಿಗಿದ್ದಾಗ ಸೈಟ್ ಅಥವಾ ಫ್ಲಾಟ್ ಗಳನ್ನು ಖರೀದಿಸಿದರೆ ನಂತರ ಕುಟುಂಬ ವಿಭಜನೆಯಾಗುವ ಭಾಗ ಮಾಡಿಕೊಳ್ಳುವ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.