ಉಚಿತವಾಗಿ ಮೊಬೈಲ್ ನಲ್ಲಿ ವೋಟರ್ ಕಾರ್ಡಿನಲ್ಲಿರುವ ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಹಾಗೆಯೇ ನಿಮ್ಮ ಗ್ರಾಮದ ವೋಟರ್ ಲಿಸ್ಟ್ ನೋಡಬಹುದು, ಹೊಸದಾಗಿ ವೋಟರ್ ID ಗೆ ಅಪ್ಲೈ ಕೂಡ ಮಾಡಬಹುದು ಹೇಗೆ ಅಂತ ನೋಡಿ
18 ವರ್ಷ ತುಂಬಿದ ಬಳಿಕ ಪ್ರತಿಯೊಬ್ಬರಿಗೂ ಕೂಡ ಮತದಾನ (Voting) ಮಾಡಿ ತನ್ನ ಇಚ್ಛೆಯ ಅಭ್ಯರ್ಥಿಯನ್ನು ನಾಯಕನಾಗಿ ಆರಿಸಿಕೊಳ್ಳುವ ಹಕ್ಕು ಇರುತ್ತದೆ. ಈ ರೀತಿ ನಾವು ನಮ್ಮ ಗ್ರಾಮದ ಗ್ರಾಮಪಂಚಾಯಿತಿ ಚುನಾವಣೆಗಳು ಅಥವಾ ರಾಜ್ಯದ ವಿಧಾನಸಭೆ ಚುನಾವಣೆ ಮತ್ತು ದೇಶದ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡಬೇಕು ಎಂದರೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇರಬೇಕು.
ಹೀಗೆ ಮತದಾರರ ಪಟ್ಟಿಯಲ್ಲಿ (Voter list) ನೋಂದಾಯಿಸಿಕೊಂಡವರಿಗೆ ವೋಟರ್ ಐಡಿ (Voter ID) ಎನ್ನುವ ಒಂದು ದಾಖಲೆ ಕೂಡ ನೀಡಲಾಗುತ್ತದೆ. ಈ ಕಾರ್ಡ್ POI ಆಗಿ ಎಲ್ಲೆಡೆ ಮಾನ್ಯವಾಗುತ್ತದೆ ಇದನ್ನು ಈಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ಇದರ ಜೊತೆಗೆ ಈಗಾಗಲೇ ವೋಟರ್ ಐಡಿ ಪಡೆದಿದ್ದರೆ ಅದರಲ್ಲಿ ಹೆಸರು, ವಿಳಾಸ ಮತ್ತಿತರ ಇನ್ಯಾವುದೇ ತಿದ್ದುಪಡಿ (correction) ಇದ್ದರೂ ಆನ್ಲೈನಲ್ಲಿ ನಿಮ್ಮ ಮೊಬೈಲ್ ಮೂಲಕ (through mobile) ಮಾಡಿಕೊಳ್ಳಬಹುದು ಮತ್ತು ಯಾವುದೇ ಗ್ರಾಮದ ಮತದಾರರ ಕರಡು ಪಟ್ಟಿಯನ್ನು ಕೂಡ ವೀಕ್ಷಿಸಬಹುದು. ಇದು ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಭಾರತ ಚುನಾವಣಾ ಆಯೋಗ (ECI) ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಇವರ ವತಿಯಿಂದ ಈ ರೀತಿ ಒಂದು ನೋಟಿಫಿಕೇಶನ್ (notification) ಹೊರ ಬಿದ್ದಿದೆ. ಆ ಪ್ರಕಾರವಾಗಿ ಇರುವ ಮಾಹಿತಿ ಏನೆಂದರೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ರಲ್ಲಿ ನಿಮ್ಮ ಹೆಸರಿದಿಯೇ ಎಂದು ಪರೀಕ್ಷಿಸಿ
ಅಥವಾ ವೋಟರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ, ಭಾವಚಿತ್ರ ಬದಲಾವಣೆ, ವಿಳಾಸ ಬದಲಾವಣೆ ಇನ್ನಿತರ ಯಾವುದೇ ತಿದ್ದುಪಡಿ ಇದ್ದರೂ ಕೂಡ ದಿನಾಂಕ 9.12.2023ರ ಒಳಗೆ ಈ ಪ್ರಕ್ರಿಯೆ ಪೂರ್ತಿಗೊಳಿಸಿ ಎಂದು ತಿಳಿಸಲಾಗಿದೆ. ನೀವು ನಿಮ್ಮ ಮೊಬೈಲ್ ಮೂಲಕವೇ ಈ ಒಂದು ಪ್ರಕ್ರಿಯೆ ಪೂರ್ತಿಗೊಳಿಸಬಹುದು.
ಹೇಗೆಂದರೆ ನಿಮ್ಮ ಮೊಬೈಲ್ ಫೋನ್ನಲ್ಲಿ ವೋಟರ್ ಹೆಲ್ಪ್ಲೈನ್ ಅಪ್ಲಿಕೇಶನ್ (Voter helpline application) ಆಪ್ ಡೌನ್ಲೋಡ್ ಮಾಡಿಕೊಂಡು ಈ ಮೇಲೆ ತಿಳಿಸಿದ ರೀತಿ ಹೊಸದಾಗಿ ಅಪ್ಲಿಕೇಶನ್ ಹಾಕಬಹುದು ಅಥವಾ ತಿದ್ದುಪಡಿ ಮಾಡಿಕೊಳ್ಳಬಹುದು. ಇಲ್ಲ ನೇರವಾಗಿ https://voters.eci.gov.in ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು. ಈಗ ವರ್ಷಕ್ಕೆ ನಾಲ್ಕು ಬಾರಿ ಇದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಅಂತೆಯೇ ಅಭಿಯಾನವನ್ನು ಶುರು ಮಾಡಲಾಗಿದೆ
ಯಾವ ರೀತಿ ತಿದ್ದುಪಡಿ ಮಾಡಿಸಿಕೊಳ್ಳಬಹುದು:-
* ಈ ಮೇಲೆ ತಿಳಿಸಿದ ಲಿಂಕ್ ಬಳಸಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ ಹೊಸದಾಗಿ ಅರ್ಜಿ ಸಲ್ಲಿಸುವವರಾಗಿದ್ದರೆ ಅದಕ್ಕೆ ಸಂಬಂಧಿಸಿದ ನಮೂನೆ 6ರ ಲಿಂಕ್ ಕ್ಲಿಕ್ ಮಾಡಿ, ಮಾಹಿತಿಗಳನ್ನು ತುಂಬಿಸಿ ಪ್ರಿಂಟ್ ಪಡೆದುಕೊಂಡು ಆಧಾರ್ ಕಾರ್ಡ್ ಹಾಗೂ ಕುಟುಂಬದಲ್ಲಿ ಒಬ್ಬರ ವೋಟರ್ ಐಡಿ ದಾಖಲೆಯೊಂದಿಗೆ ನಿಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ BLO ಅಧಿಕಾರಿ ಬಳಿ ಸಲ್ಲಿಸಬೇಕು, ಅವರು ಅನುಮೋದನೆ ಮಾಡಿದ ನಂತರ ನಿಮ್ಮ ಹೆಸರು ಮತದಾರ ಪಟ್ಟಿಗೆ ಸೇರುತ್ತದೆ ಹಾಗೂ ನೀವು ವೋಟರ್ ಐಡಿ ಪಡೆಯುತ್ತಿರಿ.
* ಅಥವಾ ಬೇರೆ ಯಾವುದೇ ತಿದ್ದುಪಡಿ ಇದ್ದರೂ ವೆಬ್ಸೈಟ್ಗೆ ಭೇಟಿ ನೀಡಿದ ಮೇಲೆ ತಿದ್ದುಪಡಿಗಾಗಿ ಇರುವ ನಮೂನೆ 8 ಲಿಂಕ್ ಮೇಲೆ ಕ್ಲಿಕ್ ಮಾಡಿ, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ 7, ವೋಟರ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ನಮೂನೆ 6A ಲಿಂಕ್ ಕ್ಲಿಕ್ ಮಾಡಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಕೂಡ ಈ ಪ್ರಕ್ರಿಯೆಗಳನ್ನು ಪೂರೈಸಬಹುದು.
* ಮುಖಪುಟದಲ್ಲಿ ಕರಡು ಪಟ್ಟಿಯನ್ನು ವೀಕ್ಷಿಸಿ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿಯನ್ನು ಸೆಲೆಕ್ಟ್ ಮಾಡುವ ಮೂಲಕ ನಿಮ್ಮ ಗ್ರಾಮದ ವೋಟರ್ ಲಿಸ್ಟ್ ಕೂಡ ಚೆಕ್ ಮಾಡಬಹುದು.
* ಗ್ರಾಮ ಸೇವಾ ಕೇಂದ್ರಗಳು ಮತ್ತು CSC ಕೇಂದ್ರಗಳಲ್ಲಿ ಕೂಡ ತಿದ್ದುಪಡಿಗೆ ಅವಕಾಶವಿದೆ.