ಟೆರೇಸ್ ಮೇಲೆ ಸ್ಪೇಸ್ ಇದ್ದರೆ ಅದನ್ನು ಸರಿಯಾಗಿ ಯುಟಿಲೈಸ್ ಮಾಡಿಕೊಂಡು ನಮ್ಮ ಮನಸ್ಸಿಗೆ ಖುಷಿ ಮತ್ತು ನಮ್ಮ ಹಣಕಾಸಿನ ಖರ್ಚು ಸ್ವಲ್ಪ ಕಡಿಮೆ ಕೂಡ ಮಾಡಿಕೊಳ್ಳಬಹುದು. ಯಾಕೆಂದರೆ ಜನಪ್ರಿಯ ಇಂಗ್ಲಿಷ್ ಗಾದೆಯೊಂದು ಹೇಳುತ್ತದೆ. ಯಾರು ಗಾರ್ಡನ್ ಹಾಗೂ ಲೈಬ್ರರಿ ಹೊಂದಿದ್ದಾರೆ ಅವರು ಪ್ರಪಂಚದ ಎಲ್ಲಾ ಸಂಗತಿಗಳನ್ನು ಕೂಡ ಹೊಂದಿದ್ದಾರೆ ಎಂದು.
ಇದರಿಂದ ಗಾರ್ಡನ್ ಮಾಡುವುದು ಎಷ್ಟು ಲಾಭದಾಯಕವಾದ ಒಂದು ಹವ್ಯಾಸ ಎಂದು ತಿಳಿಯುತ್ತದೆ. ಇದು ನಮ್ಮ ಸಮಯವನ್ನು ಉತ್ತಮವಾಗಿ ಬದಲಾಯಿಸುತ್ತದೆ ಮತ್ತು ಗಾರ್ಡನ್ ನಲ್ಲಿ ಸಮಯ ಕಳೆಯುವುದರಿಂದ ಮಾನಸಿಕ ಆರೋಗ್ಯವೃದ್ಧಿಯಾಗುತ್ತದೆ. ಹಾಗಾಗಿ ಗಾರ್ಡನಿಂಗ್ ಮಾಡಲು ಬಯಸುವವರಿಗೆ ಅನುಕೂಲ ಮಾಡಿ ಕೊಡಲು ಕೆಲ ಉಪಯುಕ್ತ ಟಿಪ್ಸ್ ಗಳನ್ನು ಈ ಲೇಖನದಲ್ಲಿ ಕೊಡಲು ಬಯಸುತ್ತಿದ್ದೇವೆ.
* ಮತ್ತೊಮ್ಮೆ ನಾವು ಈ ಮೇಲೆ ತಿಳಿಸಿದಂತೆ ಗಾರ್ಡನ್ ನಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಯುವುದರಿಂದ ಮನೆ ಅಂದ ಹೆಚ್ಚಾಗುತ್ತದೆ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 4660 ರೈಲ್ವೆ ಪೊಲೀಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
* ಇನ್ನು ಗಾರ್ಡನ್ ನಲ್ಲಿ ಅನೇಕ ರೀತಿಯ ತರಕಾರಿಗಳನ್ನು ಕೂಡ ಬೆಳೆಯಬಹುದು. ನಮ್ಮ ಮನೆಯ ವೇಸ್ಟ್ ಗಳನ್ನು ಉಪಯೋಗಿಸಿ ಗೊಬ್ಬರ ಮಾಡಿ ಆರ್ಗಾನಿಕ್ ಆಗಿ ತರಕಾರಿ ಬೆಳೆದು ನೆಮ್ಮದಿಯಾಗಿ ತೃಪ್ತಿಯಾಗಿ ಮನೆ ಮಂದಿ ಸೇವಿಸಬಹುದು, ಇದರಿಂದ ಆರೋಗ್ಯದ ರಕ್ಷಣೆ ಕೂಡ ಆಗುತ್ತದೆ
* ನಮ್ಮ ಮನೆಯಲಯೇ ಲಿ ಪೂಜೆಗೆ ಬೇಕಾದ ಹೂಗಳನ್ನು ಬೆಳೆದು ದೇವರಿಗೆ ಅರ್ಪಿಸಬಹುದು. ನಮ್ಮ ಹಿಂದೂ ಸಂಸ್ಕೃತಿ ಪ್ರಕಾರವಾಗಿ ಖರೀದಿಸಿದ ಹೂಗಳಿಗಿಂತ ನಾವೇ ಬೆಳೆಸಿದ ಹೂಗಳಿಂದ ಪೂಜೆ ಮಾಡೋದು ದೇವರಿಗೆ ಹೆಚ್ಚು ಸಲ್ಲುತ್ತದೆ ಎಂದು ಕೂಡ ಹೇಳುತ್ತಾರೆ. ಅನುಕೂಲತೆ ಇದ್ದರೆ ಅವಕಾಶ ಇದ್ದರೆ ಈ ರೀತಿ ನಾವೇ ಬೆಳೆಸಿದ ಹೂಗಳಿಂದ ಪೂಜೆ ಮಾಡುವುದು ಉತ್ತಮ ಮತ್ತು ನಾವು ಹೆಚ್ಚಾಗಿ ಹೂವು ಬೆಳೆದರೆ ಅದನ್ನು ಮಾರಾಟ ಕೂಡ ಮಾಡಬಹುದು ಇದರಿಂದ ಹಣ ಉಳಿತಾಯವಾಗುತ್ತದೆ
* ನಮ್ಮ ಮನೆ ಹಿತ್ತಲಲ್ಲಿ ಅಥವಾ ಟೆರೇಸ್ ಮೇಲೆ ಕನಿಷ್ಠ ಐದು ಆದರೂ ಔಷಧೀಯ ಸಸ್ಯ ಬೆಳೆಸಲೇಬೇಕು ಎನ್ನುತ್ತದೆ ಆಯುರ್ವೇದ. ಶುಂಠಿ, ಒಂದೆಲಗ, ತುಳಸಿ, ಅಲೋವೆರಾ ಮುಂತಾದ ಔಷಧೀಯ ಸಸ್ಯಗಳನ್ನು ಹಾಗೂ ಅಡುಗೆ ಮಾಡಲು ಬೇಕಾದಂತಹ ಸೊಪ್ಪುಗಳನ್ನು ಕೂಡ ಸುಲಭವಾಗಿ ಟೆರೇಸ್ ಮೇಲೆ ಬೆಳೆಯಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
* ಈ ರೀತಿ ಗಾರ್ಡನ್ ಮಾಡಿದರೆ ಅದರ ಸೆಟಪ್ ಬಗ್ಗೆ ಕೂಡ ಸ್ವಲ್ಪ ಕಾಳಜಿ ವಹಿಸಬೇಕು ಇಲ್ಲವಾದಲ್ಲಿ ಇದು ಮನೆಗೆ ತರಬಹುದು. ಪಾಟ್ ಗಳನ್ನು ನೇರವಾಗಿ ನೆಲದ ಮೇಲೆ ಇಡುವುದಕ್ಕಿಂತ ಸ್ಟ್ಯಾಂಡ್ ಗಳ ಮೇಲೆ ಇಡುವುದು ಒಳ್ಳೆಯದು. ಯಾಕೆಂದರೆ ಮಳೆ ಬಂದಾಗ ಅಥವಾ ನಾವೇ ಪಾಟ್ ಗಳಿಗೆ ನೀರು ಹಾಕಿದಾಗ ನೀರು ಹೊರ ಬಿದ್ದು ಪಾಟ್ ಕೆಳಗೆ ನಿಲ್ಲುತ್ತದೆ.
ಅದು ಸರಿಯಾಗಿ ಆಚೆ ಹೋಗದ ಕಾರಣ ಸೊಳ್ಳೆಗಳು ಉತ್ಪತ್ತಿ ಆಗಬಹುದು ಮತ್ತು ನಿಧಾನವಾಗಿ ಅದು ಮನೆ ಸ್ಟ್ರೆಂತ್ ಕಡಿಮೆ ಮಾಡುವಷ್ಟು ಅಪಾಯಕಾರಿಯಾಗಿದೆ ಹಾಗಾಗಿ ಸ್ಟ್ಯಾಂಡ್ ನಲ್ಲಿ ಪಾಟ್ ಗಳನ್ನು ಇಡುವುದು ಉತ್ತಮ, ಅದರಲ್ಲೂ ಎರಡು ಸ್ಟೆಪ್ ಇದ್ದರೆ ಸಾಕು ಅತಿಯಾದ ಎತ್ತರವೂ ಕೂಡ ಬೇಡ.
* ಕೆಲವರು ನ್ಯಾಚುರಲ್ ಆಗಿ ಟೆರೇಸ್ ಮೇಲೆ ಗ್ರಾಸ್ ಬೆಳೆಸುತ್ತಾರೆ ಈ ರೀತಿ ಬೆಳೆಸಬೇಕು ಎಂದರೆ ಅದಕ್ಕೆ ಮಣ್ಣು ಹಾಗೂ ಮರಳು ನೇರವಾಗಿ ಹಾಕಬೇಕು ಇದು ಕೂಡ ಮನೆಗೆ ಉತ್ತಮವಲ್ಲ ಹಾಗಾಗಿ ನೀವು ಆರ್ಟಿಫಿಷಿಯಲ್ ಗ್ರಾಸ್ ಕಾರ್ಪೆಟ್ ಹಾಕುವುದೇ ಒಳ್ಳೆಯದು. ಈ ವಿಚಾರವಾಗಿ ಇನ್ನಷ್ಟು ಉಪಯುಕ್ತ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.