ಒಬ್ಬ ವ್ಯಕ್ತಿಯು ಬದುಕಿರುವಾಗಲೇ ತಾನು ಸತ್ತ ನಂತರ ತನ್ನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು ಕರಾರು ಪತ್ರ ಮಾಡಿ ಇಡುವುದಕ್ಕೆ ವಿಲ್ ಅಥವಾ ಮರಣ ಶಾಸನ ಪತ್ರ ಅಥವಾ ಉಯಿಲು ಕರಾರು ಪತ್ರ (Will deed) ಎಂದು ಕೂಡ ಕರೆಯುತ್ತಾರೆ. ವಿಲ್ ಬರೆಸಿರುವ ವ್ಯಕ್ತಿ ಮರಣ ಹೊಂದಿದ ನಂತರವೇ ಆ ವಿಲ್ ನಲ್ಲಿರುವ ಅಂಶಗಳು ಕಾರ್ಯರೂಪಕ್ಕೆ ಬರುತ್ತದೆ.
ಚರಾಸ್ತಿಯಾಗಲಿ ಅಥವಾ ಸ್ಥಿರಸ್ತಿಯಾಗಲಿ ಅದರ ಮೇಲೆ ವ್ಯಕ್ತಿಗೆ ಸಂಪೂರ್ಣ ಅಧಿಕಾರವಿದ್ದರೆ ಮಾತ್ರ ಆ ವ್ಯಕ್ತಿಗಳು ವಿಲ್ ಬರೆಯಬಹುದು. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಪಿತ್ರಾರ್ಜಿತ ಆಸ್ತಿಗಳಿಗೆ ಉತ್ತರಾಧಿಕಾರಿಗಳು ಇರುವುದರಿಂದ ಆ ಆಸ್ತಿಗೆ ವಿಲ್ ಬರೆಯಲು ಆಗುವುದಿಲ್ಲ, ಸ್ವಯಾರ್ಜಿತ ಆಸ್ತಿಗಳಿಗೆ ಮಾತ್ರ ಬಿಲ್ ಪತ್ರವನ್ನು ಬರೆದು ಇಡಬಹುದು.
ಈ ಸುದ್ದಿ ಓದಿ:-ಬ್ಯಾಂಕ್ ಗಳು ನಿಮಗೆ ಯಾವ ರೀತಿ ಮೋಸ ಮಾಡುತ್ತಿವೆ ಗೊತ್ತಾ.? ಬ್ಯಾಂಕ್ ಅಕೌಂಟ್ ಇರುವ ಪ್ರತಿಯೊಬ್ಬರು ಈ ವಿಚಾರ ತಿಳಿದುಕೊಳ್ಳಿ.!
ಪಿತ್ರಾರ್ಜಿತ ಆಸ್ತಿಗಳಲ್ಲಿ ಕೆಲವೊಂದು ಕೇಸ್ ಗಳಲ್ಲಿ ಮಾತ್ರ ವಿಲ್ ಬರೆಸುವುದಕ್ಕೆ ಅವಕಾಶವಿದೆ. ಉದಾಹರಣೆಯೊಂದಿಗೆ ಹೇಳುವುದಾದರೆ ಇಬ್ಬರು ಅಣ್ಣ-ತಮ್ಮಂದಿರು ಅವರ ತಂದೆಯಿಂದ ಬಂದ ಪಿತ್ರಾರ್ಜಿತ ಆಸ್ತಿಯನ್ನು ವಿಭಾಗ ಮಾಡಿಕೊಂಡ ಇರುತ್ತಾರೆ ಎಂದುಕೊಳ್ಳೋಣ.
ಇದರಲ್ಲಿ ಅಣ್ಣನಿಗೆ ಇಬ್ಬರು ಮಕ್ಕಳಿರುತ್ತಾರೆ ಮತ್ತು ತಮ್ಮನಿಗೆ ಮಕ್ಕಳು ಇರುವುದಿಲ್ಲ ಇಂತಹ ಸಮಯದಲ್ಲಿ ಅಣ್ಣ ತಂದೆಯಿಂದ ತನಗೆ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೂ ಕೂಡ ಪಾಲು ನೀಡಬೇಕಾದ್ದರಿಂದ ಆತನಿಗೆ ವಿಲ್ ಬರೆಯುವ ಅಧಿಕಾರ ಇರುವುದಿಲ್ಲ ಆದರೆ ತಮ್ಮನಿಗೆ ಮಕ್ಕಳಿರದ ಕಾರಣ ಆತ ವಿಲ್ ಮಾಡಬಹುದಾಗಿರುತ್ತದೆ.
ಈ ಸುದ್ದಿ ಓದಿ:- ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!
ಆತ ತನ್ನ ಕುಟುಂಬದ ಸದಸ್ಯರಿಗೆ ಅಥವಾ ಬೇರೆ ಯಾರಿಗೆ ಬೇಕಾದರೂ ಆತನ ಪಾಲಿನ ಆಸ್ತಿ ಹೋಗಬೇಕು ಎಂದು ವಿಲ್ ಮಾಡಬಹುದು ಮತ್ತು ಒಬ್ಬ ವ್ಯಕ್ತಿ ತನ್ನ ಸಾಯುವ ತನಕ ಎಷ್ಟು ಬಾರಿ ಬೇಕಾದರೂ ಬಿಲ್ ಮಾಡಬಹುದು ಮತ್ತು ಕ್ಯಾನ್ಸಲ್ ಮಾಡಬಹುದು, ತಿದ್ದುಪಡಿ ಕೂಡ ಮಾಡಬಹುದು. ಆತ ಸಾಯುವ ಮುನ್ನ ಕೊನೆ ಬಾರಿಗೆ ಮಾಡಿದ ವಿಲ್ ಮಾತ್ರ ಮಾನ್ಯವಾಗುತ್ತದೆ. ವಿಲ್ ನ್ನು ಖಾಲಿ ಪೇಪರ್ ಮೇಲೆ ಕೂಡ ಬರೆಯಬಹುದು ಅಥವಾ e-stamp ಮೇಲೆ ಕೂಡ ಬರೆದು ನೋಟರಿ ಮಾಡಿಸಬಹುದು.
ಒಂದು ವೇಳೆ ಆ ವ್ಯಕ್ತಿಯು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೋಂದಣಿ ಮಾಡಿಸಿದ್ದರೆ ಕಾನೂನು ಬದ್ದ ಮಾನ್ಯತೆ ಸಿಗುತ್ತದೆ. ವಿಲ್ ರಿಜಿಸ್ಟರ್ ಆಗಿದ್ದರೆ ವಿಲ್ ಬರೆದ ವ್ಯಕ್ತಿ ಮರಣ ಹೊಂದಿದ ನಂತರ ಸರಳವಾಗಿ ವಿಲ್ ಬರೆಸಿಕೊಂಡ ವ್ಯಕ್ತಿಗೆ ಆಸ್ತಿ ಹಕ್ಕು ವರ್ಗಾವಣೆ ಆಗಲು ಸಹಾಯವಾಗುತ್ತದೆ. ಆದ್ದರಿಂದ ಎಲ್ಲರೂ ಕೂಡ ವಿಲ್ ಪತ್ರವನ್ನು ಕೂಡ ರಿಜಿಸ್ಟರ್ ಮಾಡಿಸಲು ಸೂಚಿಸುತ್ತಾರೆ.
ಈ ಸುದ್ದಿ ಓದಿ:-ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!
ವಿಲ್ ಬರೆಯಲು ಇರುವ ಕೆಲವು ನಿಯಮಗಳು:-
* ವಿಲ್ ಬರೆಯುವ ವ್ಯಕ್ತಿಗೆ ಬುದ್ಧಿ ಸೀಮಿತದಲ್ಲಿರಬೇಕು
* ಆಸ್ತಿಯ ಬಗ್ಗೆ ಚೆಕ್ಕುಬಂದಿ ಸೇರಿ ಪೂರ್ತಿ ವಿವರವನ್ನು ಸರಿಯಾಗಿ ವಿಲ್ ಪತ್ರದಲ್ಲಿ ತಿಳಿಸಿರಬೇಕು. ಅಂದರೆ ಯಾವ ಆಸ್ತಿಯನ್ನು ವಿಲ್ ಬರೆದುಕೊಡುತ್ತಿದ್ದೇನೆ ಎನ್ನುವುದರ ಬಗ್ಗೆ ಸರಿಯಾದ ವಿವರ ತಿಳಿಸಬೇಕು ಮತ್ತು ಅಕ್ಕ ಪಕ್ಕ ಯಾರ ಜಮೀನಿಗೆ ಅದರ ಬಗ್ಗೆಯೂ ಕೂಡ ಪತ್ರದಲ್ಲಿ ಮಾಹಿತಿ ಇರಬೇಕು
* ಆಸ್ತಿಯನ್ನು ಯಾರಿಗೆ ಕೊಡುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿರಬೇಕು.
* ಉಯಿಲು ಪತ್ರ ಬರೆದ ವ್ಯಕ್ತಿಯು ತಪ್ಪದೇ ಅದರ ಮೇಲೆ ಸಹಿ ಮಾಡಿರಬೇಕು
* ಉಯಿಲು ಪತ್ರ ಬರೆದಿರುವ ವ್ಯಕ್ತಿಯು ಸಹಿ ಮಾಡಿದ್ದನ್ನು ನೋಡಿದ ಇಬ್ಬರು ಸಾಕ್ಷಿಗಳು ಇದಕ್ಕೆ ರುಜು ಹಾಕಬೇಕು.