ಆಗಿನ ಕಾಲದಿಂದಲೂ ಕೂಡ ಇಬ್ಬರ ನಡುವೆ ಆಸ್ತಿ ಅಥವಾ ಹಣಕಾಸಿನ ಕುರಿತು ವ್ಯವಹಾರಗಳು ಅಥವಾ ಯಾವುದೇ ಮಾತುಕತೆ ನಡೆದಾಗ ಅದನ್ನು ಬಿಳಿ ಹಾಳೆಯಲ್ಲಿ ಬರೆಸಿ ಇಡುವ ನಿಯಮ ಇತ್ತು ಆದರೆ ಇದಕ್ಕೆ ಹೆಚ್ಚು ಮಾನ್ಯತೆ ಇರಲಿಲ್ಲ ಇಂತಹ ಸಮಯಗಳಲ್ಲಿ ಅತಿ ಹೆಚ್ಚು ಜನ ಮೋ’ಸ ಹೋಗುತ್ತಿದ್ದರು.
ಈ ರೀತಿ ಅತಿ ಹೆಚ್ಚಾಗಿ ವಂ’ಚ’ನೆ, ದ್ರೋ’ಹಗಳು ನಡೆಯುತ್ತಿದ್ದದನ್ನು ತಪ್ಪಿಸಲು ಇದನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದು ನಿರ್ಧರಿಸಲಾಯಿತು. ಈ ರೀತಿ ಪತ್ರ ವ್ಯವಹಾರವು ಕಾನೂನು ಬದ್ಧವಾಗಿ ಬದಲಾದದ್ದಕ್ಕೆ ಇ-ಸ್ಟ್ಯಾಂಪ್ (e-Stamp), ಕರಾರು ಪತ್ರ, ವ್ಯವಹಾರಿಕ ಪತ್ರ, ಒಪ್ಪಂದ ಪತ್ರ ಎಂದು ಕರೆಯಲಾಗುತ್ತಿದೆ.
ಈ ಸುದ್ದಿ ಓದಿ:- ನಿಮ್ಮ ಕಾಲುಗಳಲ್ಲಿ ಈ 10 ಲಕ್ಷಣಗಳು ಇದ್ದರೆ ಡಯಾಬಿಟೀಸ್ ಬಂದಿದೆ ಎಂದರ್ಥ.!
ಇನ್ನು ಸರಳವಾಗಿ ಹೇಳುವುದಾದರೆ ವ್ಯವಹಾರ ನಡೆದಿದೆ ಅಥವಾ ಘಟನೆ ನಡೆದಿದೆ ಎನ್ನುವುದನ್ನು ಕಾನೂನು ಬದ್ಧ ಸ್ಟಾಂಪ್ ಪೇಪರ್ ಮೇಲೆ ಬರೆಯುವ ವಿಧಾನ ಎನ್ನಬಹುದು. ಸ್ಟ್ಯಾಂಪ್ ಪೇಪರ್ ಕುರಿತಾದ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಸ್ಟ್ಯಾಂಪ್ ಪೇಪರ್ ಬರೆಯುವುದಕ್ಕೂ ಕೂಡ ಕೆಲವು ವಿಧಾನಗಳಿವೆ, ಅದು ಹೀಗಿದೆ.
* ತಿಳುವಳಿಕೆ ಇರುವ ಯಾವುದೇ ವ್ಯಕ್ತಿ ಇದನ್ನು ಬರೆಯಬಹುದು
* 1st ಪಾರ್ಟಿ ಹಾಗೂ 2nd ಪಾರ್ಟಿ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಕು
* ಬರೆದವರು ಅಥವಾ ಆಸ್ತಿ ಮಾರಿದವರನ್ನು 1st ಪಾರ್ಟಿ ಆಗಿರುತ್ತಾರೆ.
* ಬರೆಸಿ ಕೊಳ್ಳುವವರು ಅಥವಾ ಖರೀದಿದಾರರನ್ನು 2nd ಪಾರ್ಟಿ ಎನ್ನಲಾಗುತ್ತದೆ.
* ಪೇಪರ್ ಟೈಪ್ ಆಗಿರಲೇಬೇಕು ಎನ್ನುವ ನಿಯಮ ಇಲ್ಲ ಬರವಣಿಗೆ ರೂಪದಲ್ಲಿ ಇದ್ದರೂ ಕೂಡ ಮಾನ್ಯವಾಗುತ್ತದೆ.
ಈ ಸುದ್ದಿ ಓದಿ:- ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!
* ಸ್ಪಷ್ಟವಾಗಿ ಅರ್ಥವಾಗುವ ರೀತಿ ಬರವಣಿಗೆ ಇರಬೇಕು ಮತ್ತು ಸಂಪೂರ್ಣ ವಿವರ ಇರಬೇಕು ಹಣಕಾಸಿನ ವಿಷಯ ಮತ್ತು ಸಾಕ್ಷಿಗಳ ಸಹಿ ಕೂಡ ಅಷ್ಟೇ ಮುಖ್ಯ ಆಗಿರುತ್ತದೆ
* ಸ್ಟ್ಯಾಂಪ್ ಪೇಪರ್ ಬರೆದವರ ಹೆಸರು, ಸಹಿ ಹಾಗೂ ದಿನಾಂಕವನ್ನು ತಪ್ಪದೆ ಬರೆಯಬೇಕು
* ಸಾಕ್ಷಿಗಳ ಹೇಳಿಕೆ ಹಾಗೂ ಸಾಕ್ಷಿಗಳ ಸಹಿ ಸ್ಟ್ಯಾಂಪ್ ಪೇಪರ್ ನಲ್ಲಿ ಇರುವುದು ಬಹಳ ಅನುಕೂಲ.
* ಸ್ಟ್ಯಾಂಡ್ ಪೇಪರ್ ಮೊದಲನೇ ಪೇಜ್ ನಲ್ಲಿ ಪೇಪರ್ ಮಾಡಲು ಯಾರು ಹಣ ಕೊಟ್ಟರು ಫಸ್ಟ್ ಪಾರ್ಟಿ ಸೆಕೆಂಡ್ ಪಾರ್ಟಿ ಹೆಸರು ರಿಜಿಸ್ಟರ್ ನಂಬರ್ ಮತ್ತು ಆ ಸ್ಟ್ಯಾಂಪ್ ಪೇಪರ್ ನ ಬೆಲೆ ಇರಬೇಕು.
* ವಿವರವನ್ನು ಮೊದಲ ಪೇಜ್ ನ ಕೆಳಭಾಗದಿಂದಲೇ ಶುರು ಮಾಡಬಹುದು ಅಥವಾ ನಂತರದ ಪೇಜ್ ನಿಂದ ಶುರು ಮಾಡಬಹುದು, ವಿಷಯ ವಿವರವಾಗಿ ಇರಬೇಕು.
* ಪೇಪರ್ ಬರೆದ ಮೇಲೆ ಫಸ್ಟ್ ಪಾರ್ಟಿ ಸೆಕೆಂಡ್ ಪಾರ್ಟಿ ಹಾಗೂ ಸಾಕ್ಷಿದಾರರ ಸಮ್ಮುಖದಲ್ಲಿ ಒಮ್ಮೆ ಓದಿ ನಂತರವೇ ಅವರಿಂದ ಸಹಿ ಪಡೆಯತಕ್ಕದ್ದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2,000 ಹಣ ಬರದೇ ಪೆಂಡಿಂಗ್ ಇರುವ ಎಲ್ಲರಿಗೂ ಈ ದಿನ ಹಣ ಬಿಡುಗಡೆ.!
ಉದಾಹರಣೆ:- (ನಿವೇಶನ ಖರೀದಿ ಕುರಿತು ಬರವಣಿಗೆ ಪತ್ರ ಹೀಗಿರುತ್ತದೆ)
1. ಫಸ್ಟ್ ಪಾರ್ಟಿ ಹೆಸರು
2. ಸೆಕೆಂಡ್ ಪಾರ್ಟಿ ಹೆಸರು
3. ನಿವೇಶನದ ಕುರಿತು ಅಳತೆ ಸಮೇತ ಇರುವ ಸ್ಥಳ ಸೇರಿ ಎಲ್ಲದರ ವಿಸ್ತಾರವಾದ ವಿವರ, ಮಾರಾಟವಾಗಿರುವ ಮೊತ್ತ, ಹಣ ಸ್ವೀಕರಿಸುವುದರ ಬಗ್ಗೆ ಸರಿಯಾದ ವಿವರ ಇತ್ಯಾದಿ.
ಮುಖ್ಯವಾಗಿ ಜಮೀನಿನ ಅಳತೆ ಹಾಗೂ ಚೆಕ್ಕು ಬಂದಿ ವಿವರ ಅಂದರೆ ನಾಲ್ಕು ದಿಕ್ಕಿನಲ್ಲಿ ಇರುವ ಸ್ಥಳಗಳ ಮಾಹಿತಿ ಹಾಗೂ ಅವರ ಮಾಲೀಕರ ಹೆಸರುಗಳು, ಇದನ್ನು ಕೂಡ ಬರೆದಿರಬೇಕು.
4. ಪೇಪರ್ ನ ಕೊನೆಯಲ್ಲಿ ಎಡಭಾಗದಲ್ಲಿ ಸಾಕ್ಷಿಗಳ ಹೆಸರು ಅದರ ಮುಂದೆ ಅವರ ಸಹಿ, ಫಸ್ಟ್ ಪಾರ್ಟಿ ಹಾಗೂ ಸೆಕೆಂಡ್ ಪಾರ್ಟಿ ಹೆಸರು ಹಾಗೂ ಸಹಿ ಇದು ಈ ಸ್ಟ್ಯಾಂಪ್ ಪೇಪರ್ ಬರೆಯುವ ಸರಿಯಾದ ವಿಧಾನ.