ವಿಲ್ ಪತ್ರವನ್ನು ಮೃ.ತ್ಯು ಪತ್ರ, ಮ.ರ.ಣ ಶಾಸನ ಪತ್ರ, ಉಯಿಲು ಎಂಬುದಾಗಿ ಕರೆಯುತ್ತಾರೆ. ಹಾಗೆ ದಾನ ಪತ್ರವನ್ನು ಭಕ್ಷೀಸು ಪತ್ರ, ಉಡುಗೊರೆ ಪತ್ರ, ಗಿಫ್ಟ್ ಡೀಡ್ ಎಂದು ಕರೆಯುತ್ತಾರೆ. ದಿನನಿತ್ಯ ನಾವು ಇವುಗಳನ್ನು ಸಾಮಾನ್ಯವಾಗಿ ವಿಲ್ ಪತ್ರ ಮತ್ತು ದಾನ ಪತ್ರ ಎಂಬುದಾಗಿ ಕರೆಯುತ್ತೇವೆ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತವಾಗಿರುವ ಆಸ್ತಿಯನ್ನು ಅಥವಾ ಆತನ ಸಂಪೂರ್ಣ ಮಾಲೀಕತ್ವದಲ್ಲಿ ಇರುವ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ಬದಲಾವಣೆ ಮಾಡುವುದಕ್ಕೆ ಬಯಸುವ ಸಂದರ್ಭದಲ್ಲಿ ವಿಲ್ ಪತ್ರದ ಮೂಲಕ ಮಾಡಬಹುದು ಅಥವಾ ದಾನ ಪತ್ರದ ಮೂಲಕ ಮಾಡಬಹುದು.
ಆದರೆ ವಿಲ್ ಪತ್ರ ಸೂಕ್ತವೋ ಅಥವಾ ದಾನ ಪತ್ರ ಸೂಕ್ತವೋ ಎಂದು ಹಲವು ಜನ ಕನ್ಫ್ಯೂಸ್ ಆಗುತ್ತಾರೆ. ಅದಕ್ಕಾಗಿ ಈ ಲೇಖನದಲ್ಲಿ ಅದರ ಬಗ್ಗೆ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಆಸ್ತಿ ಕೊಡಬೇಕು ಎಂದರು ಆತನಿಗೆ ಆಸ್ತಿ ಮೇಲೆ ಸಂಪೂರ್ಣ ಹಕ್ಕು ಇರಬೇಕು. ಅದು ಸ್ವಯಾರ್ಜಿತ ಆಸ್ತಿ ಆಗಿರಬೇಕು ಅಥವಾ ಸಂಪೂರ್ಣ ಹಕ್ಕು ಇರುವ ಆಸ್ತಿ ಆಗಿರಬೇಕು.
ಆ ಸಂದರ್ಭದಲ್ಲಿ ಮಾತ್ರ ವಿಲ್ ಪತ್ರ ಅಥವಾ ದಾನ ಪತ್ರ ಈ ಸರಳ ವಿಧಾನಗಳಲ್ಲಿ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ಆದರೂ ಕೆಲವೊಂದು ಪರಿಸ್ಥಿತಿ ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ಅವೆರಡರಲ್ಲಿ ಯಾವುದು ಸೂಕ್ತ, ಯಾವುದನ್ನು ಆಯ್ದುಕೊಂಡರೆ ಉತ್ತಮ ಎನ್ನುವುದನ್ನು ಯೋಚನೆ ಮಾಡಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ. ಆ ರೀತಿ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅನೇಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ.
ಇಲ್ಲವಾದಲ್ಲಿ ಮುಂದೊಂದು ದಿನ ಈ ವಿಚಾರವಾಗಿ ಸಮಸ್ಯೆಗಳು ಎದುರಾದಾಗ ಪಶ್ಚಾತಾಪ ಪಡುವ ರೀತಿ ಆಗಿರುತ್ತದೆ. ಹಾಗಾಗಿ ಯಾವ ಸಂದರ್ಭದಲ್ಲಿ ಯಾವುದು ಸೂಕ್ತ ಅದರ ಸಲಹೆ ಈ ರೀತಿ ಇದೆ ನೋಡಿ. ನೀವೇನಾದರೂ ಕಡಿಮೆ ಖರ್ಚಿನಲ್ಲಿ ನಿಮ್ಮ ಆಸ್ತಿಯನ್ನು ವರ್ಗಾವಣೆ ಮಾಡುವ ಮಾರ್ಗ ನೋಡುತ್ತಿದ್ದರೆ ಉಯಿಲು ಮಾಡುವುದು ಸೂಕ್ತ. ಯಾಕೆಂದರೆ ಉಯಿಲು ಮಾಡುವುದರಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿಬಿಡಬಹುದು.
ವಿಲ್ ಪತ್ರವನ್ನು ರಚನೆ ಮಾಡುವುದಕ್ಕೂ ಸಹ ನೀವು ಯಾವುದೇ ರೀತಿಯ ಹಣ ತೆರುವ ಅವಶ್ಯಕತೆ ಇರುವುದಿಲ್ಲ. ನೀವು ಏನೆಂದು ಬರೆಯಬೇಕು ಎಂದು ನಿರ್ಧರಿಸಿದ್ದೀರ ಆ ಅಂಶಗಳನ್ನೆಲ್ಲ ಒಂದು ಬಿಳಿ ಹಾಳೆಯ ಮೇಲೆ ಬರೆದು ಸಾಕ್ಷಿಗಳ ಮೂಲಕ ಸಹಿ ಹಾಕಿಸಿದರೆ ಸಾಕು ವಿಲ್ ಪತ್ರವನ್ನು ರಿಜಿಸ್ಟರ್ ಮಾಡಿಸಬೇಕಾದ ಪ್ರಮೇಯವೂ ಇರುವುದಿಲ್ಲ. ರಿಜಿಸ್ಟರ್ ಮಾಡಿಸಲೇಬೇಕು ಎನ್ನುವ ಯಾವ ನಿಯಮವು ಇಲ್ಲ ನಿಮಗೆ ಅನುಕೂಲತೆ ಇದ್ದರೆ ರಿಜಿಸ್ಟರ್ ಮಾಡಿಸಬಹುದು ಹಾಗೂ ನಿಮಗೆ ಅನುಕೂಲತೆ ಇದ್ದರೆ, ಬೇಕಾದರೆ ಮಾತ್ರ ಅದನ್ನು ನೋಟರಿ ಮಾಡಿಸಬಹುದು.
ಒಂದು ಆಸ್ತಿಯನ್ನು ತೀರಾ ಕಡಿಮೆ ಖರ್ಚಿನಲ್ಲಿ ವರ್ಗಾವಣೆ ಮಾಡಬೇಕು ಎಂದರೆ ವಿಲ್ ಪತ್ರ ಮಾಡಿಸುವ ಮಾರ್ಗ ಸೂಕ್ತ. ಯಾಕೆಂದರೆ ಅತಿ ಕಡಿಮೆ ಖರ್ಚಿನಲ್ಲಿ ಅದನ್ನು ಮಾಡಬಹುದು ಅದನ್ನು ನೀವು ನೋಂದಣಿ ಮಾಡಿಸುವ ನಿರ್ಧಾರ ಮಾಡಿದರು ಕೂಡ ಅದನ್ನು ಮುದ್ರಿಸುವ ಮುದ್ರಾಂಕ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಈ ವಿಧಾನವನ್ನು ಹೆಚ್ಚು ಜನ ಆಯ್ದುಕೊಳ್ಳುತ್ತಾರೆ. ಆದರೆ ಅದಕ್ಕೂ ಮುನ್ನ ದಾನ ಪತ್ರ ಮಾಡಿಸುವುದರಿಂದ ಯಾವ ರೀತಿ ಹೆಚ್ಚಿನ ಭದ್ರತೆ ಸಿಗುತ್ತದೆ ಅಥವಾ ಮತ್ಯಾವ ಅನುಕೂಲತೆ ಇದೆ ಎನ್ನುವುದನ್ನು ಸಹ ತಿಳಿದುಕೊಂಡಿರಬೇಕು. ಅದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
https://youtu.be/FExeVk9q2zo