ಮನೆ ಬಳಕೆಯ ಅಗತ್ಯ ವಸ್ತುಗಳಲ್ಲಿ ನೀರು ಅತೀ ಮುಖ್ಯವಾದದ್ದು. ಮನೆಯಲ್ಲಿ ಪಾತ್ರೆ ತೊಳೆಯಲು, ಅಡುಗೆ ಮಾಡಲು, ಬಟ್ಟೆ ಕ್ಲೀನ್ ಮಾಡಲು, ಮನೆ ಸ್ವಚ್ಛವಾಗಿಟ್ಟುಕೊಳ್ಳಲು ಕುಡಿಯಲು ಹೀಗೆ ನಾನಾ ಕಾರಣಕ್ಕೆ ನೀರನ್ನು ಬಳಸುತ್ತೇವೆ. ಈ ನೀರು ಎಷ್ಟು ಆರೋಗ್ಯಕರವಾಗಿದೆ ಎನ್ನುವುದರ ಆಧಾರದ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ.
ಯಾಕೆಂದರೆ ಈಗಿನ ಕಾಲದಲ್ಲಿ ಬಹುತೇಕ ಎಲ್ಲರೂ ಕೂಡ ಮನೆ ಮೇಲಿನ ಟ್ಯಾಂಕ್ ನಲ್ಲಿ ಶೇಖರಣೆಯಾಗಿರುವ ನೀರನ್ನು ಅಡುಗೆಗೆ ಹಾಗೂ ಕುಡಿಯಲು ಬಳಸುತ್ತಿರುವುದು. ಹಾಗಾಗಿ ನಿಮ್ಮ ಟ್ಯಾಂಕ್ ಎಷ್ಟು ಆರೋಗ್ಯಕರವಾಗಿದೆ? ಯಾವ ಟ್ಯಾಂಕ್ ನೀರು ಸ್ಟೋರ್ ಮಾಡಲು ಉತ್ತಮ? ಇದಕ್ಕೂ ಆರೋಗ್ಯಕ್ಕೂ ಹೇಗೆ ಸಂಬಂಧ? ಇತ್ಯಾದಿ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಪ್ಲಾಸ್ಟಿಕ್ ನಲ್ಲಿ RP ಎಂದು ಬರುತ್ತದೆ. ಇದು ರಿಪ್ರೊಡಕ್ಟಿವ್ ಎಂದರ್ಥ ಅಂದರೆ ಈಗಾಗಲೇ ಪ್ಲಾಸ್ಟಿಕ್ ವಸ್ತುವಾಗಿದ್ದ ವಸ್ತುಗಳನ್ನು ಮತ್ತೊಮ್ಮೆ ಬಳಕೆ ಮಾಡಿ ಪ್ಲಾಸ್ಟಿಕ್ ತಯಾರಿಸಲಾಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಇವುಗಳಲ್ಲೂ ಮೊದಲ ಬಾರಿ ಮರು ಬಳಕೆಯಾದರೆ ಫಸ್ಟ್ ಸೈಕಲ್, ಎರಡನೇ ಸೈಕಲ್, ಮೂರನೇ ಸೈಕಲ್ ಹೀಗೆ ಬಳಸುತ್ತಲೇ ಇರುತ್ತಾರೆ.
ಪ್ರತಿ ಬಾರಿ ರೀ ಸೈಕಲ್ ಆದಾಗಲು ಅದು ಹೆಚ್ಚು ಡೇಂಜರಸ್ ಆಗುತ್ತಿರುತ್ತದೆ. ಮೊದಲ ಬಳಕೆಯ ಪ್ಲಾಸ್ಟಿಕ್ ಗಿಂತ ಈ ರೀತಿ ಬಳಕೆಯಾದ ಪ್ಲಾಸ್ಟಿಕ್ ಗಳಿಗೆ ಬೆಲೆ ಕಡಿಮೆ ಇರುತ್ತದೆ ಯಾಕೆ ಕಡಿಮೆ ಇರುತ್ತದೆ ಎಂದರೆ ಪ್ಲಾಸ್ಟಿಕ್ ಗೆ ಬೇರೊಂದು ವಸ್ತುವಿನ ಜೊತೆ ರಾಸಾಯನಿಕವಾಗಿ ವಿಘಟನೆ ಹೊಂದುವ ಶಕ್ತಿ ಇರುತ್ತದೆ.
ಆದರೆ ಈಗಾಗಲು ಅದಕ್ಕೆ ಬೆಂಕಿ ಹಾಗೂ ನೀರಿನ ಸಂಪರ್ಕಕ್ಕೆ ಬೇಕು. ಈಗ ಯೋಚಿಸಿ ನಾವು ಕಡಿಮೆ ದುಡ್ಡು ಎಂದು ಕೊಂಡುಕೊಳ್ಳುವ ಪ್ಲಾಸ್ಟಿಕ್ ಕ್ವಾಲಿಟಿ ಕಡಿಮೆ ಇರುವುದರಿಂದ ಇದು ಹೆಚ್ಚು ರಿಯಾಕ್ಟ್ ಆದರೆ ಆರೋಗ್ಯಕ್ಕೆ ಒಳ್ಳೆಯದೋ? ಅಥವಾ ಕೆಟ್ಟದ್ದೋ? ಎಂದು.
ಇನ್ನು ನೇರವಾಗಿ ಇದನ್ನು ನೀರಿನ ಟ್ಯಾಂಕರಗಳಲಯೂ ಬಳಸುತ್ತಾರೆ. ಈ ವಿಚಾರಕ್ಕೆ ಬಂದರೆ ಹಿಂದೆಲ್ಲ ಒಂದು ಲೇಯರ್ ಇರುವ ನೀರಿನ ಟ್ಯಾಂಕ್ ಬಳಸುತ್ತಿದ್ದರು. ಬಳಿಕ ಒಳಗಿರುವ ಗಲೀಜು ಕಾಣಲಿ ಎನ್ನುವ ಕಾರಣಕ್ಕಾಗಿ ಒಳಗೆ ಬಿಳಿ ಕೋಟ್ ಕೊಟ್ಟು ಎರಡು ಲೇಯರ್ ತಂದರು.
ಈಗ ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಮೂರು ಲೇಯರ್ ಬಂತು ಈ ರೀತಿ ಮೂರು ಲೇಯರ್ ನಲ್ಲಿ ಮಧ್ಯದ ಲೇಯರ್ ಈ RP ಪ್ಲಾಸ್ಟಿಕ್ ಆಗಿರುತ್ತದೆ. ಒಂದು ವೇಳೆ ಇದನ್ನು ಒಳಗಿನ ಲೇಯರ್ ಗೆ ಹಾಕಿ ಕಡಿಮೆ ದುಡ್ಡಿಗೆ ಮಾರಿದರೂ ಆಶ್ಚರ್ಯವಿಲ್ಲ ಹಾಗಾಗಿ ಕಡಿಮೆ ದುಡ್ಡಿಗೆ ಟ್ಯಾಂಕ್ ಸಿಗುತ್ತದೆ ಎಂದುಕೊಂಡು ಖರೀದಿಸುವ ಮುನ್ನ ಈ ಬಗ್ಗೆ ಯೋಚಿಸಿ ನಿರ್ಧರಿಸಿ.
ಇನ್ನು ಟ್ಯಾಂಕ್ ಗಳ ಬಾಳಿಕೆ ಬಗ್ಗೆ ಹೇಳುವುದಾದರೆ ಮೋಲ್ಡ್ ಟ್ಯಾಂಕ್ ಗಳು ವರ್ಟಿಕಲ್ ಆಗಿ ಎರಡು ಭಾಗದಂತೆ ತಯಾರಾಗಿ ಮಧ್ಯದಲ್ಲಿ ಜಾಯಿಂಟ್ ಹೊಂದಿರುತ್ತದೆ. ಇವುಗಳ ಸಮಸ್ಯೆ ಎಂದರೆ ನೀರಿನ ಫೋರ್ಸ್ ಹೆಚ್ಚಾದಾಗ ಮಧ್ಯಕ್ಕೆ ಭಾಗವಾಗಬಹುದು ಮತ್ತು ಇವುಗಳಲ್ಲಿ ಮಧ್ಯದ ಜಾಯಿಂಟ್ ಗೆ ಹೆಚ್ಚಿನ ಸಮಯದಲ್ಲಿ ನಲ್ಲಿ ಅಳವಡಿಸಿರುತ್ತಾರೆ. ಅದರಿಂದ ಇವುಗಳಿಗಿಂತ ಹಾರಿಜಾಂಟಲ್ ಆಗಿ ತಯಾರಾಗಿರುವ ಟ್ಯಾಂಕ್ ಮೇಲೆ ಮಾತ್ರ ಜಾಯಿಂಟ್ ಹೊಂದಿರುತ್ತದೆ ಇದು ಬೆಸ್ಟ್.
ಒಂದು ವೇಳೆ ಡ್ಯಾಮೇಜ್ ಆದರೂ ಬಹಳ ಈಸಿಯಾಗಿ ಇದನ್ನು ಮ್ಯಾನೇಜ್ ಮಾಡಬಹುದು. ಹೀಗೆ ಟ್ಯಾಂಕ್ ಎನ್ನುವುದು ಒಂದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ ಇದರ ಬಗ್ಗೆ ಎಷ್ಟು ತಿಳಿದುಕೊಂಡರು ಕೂಡ ಮುಗಿಯದು. ಈ ವಿಚಾರದ ಬಗ್ಗೆ ಇನ್ನಷ್ಟು ಡಿಟೇಲ್ ಆಗಿ ಮಾಹಿತಿ ಪಡೆದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.