ಅನ್ನಭಾಗ್ಯ ಯೋಜನೆಯ DBT ಸ್ಟೇಟಸ್ ಚೆಕ್ ಮಾಡುವಾಗ NPCI ಚೆಕ್ ವಿಫಲವಾಗಿದೆ ಎಂದು ಬರುತ್ತಿದೆಯೇ.? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

 

ಸರ್ಕಾರವು ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳಿನ ಹೆಚ್ಚುವರಿ ಅಕ್ಕಿ ಹಣವನ್ನು (Annabhagya Scheme August month Money) ಜಿಲ್ಲಾವಾರು ಬಿಡುಗಡೆ ಮಾಡುತ್ತಿದೆ. ಜುಲೈ ತಿಂಗಳಿನಲ್ಲಿ ಈ ಹಣ ಪಡೆದಿದ್ದ ಎಲ್ಲರೂ ಕೂಡ ಆಗಸ್ಟ್ ತಿಂಗಳಲ್ಲಿಯೂ ಹಣ ಪಡೆಯಲಿದ್ದಾರೆ. ಆದರೆ ಜುಲೈ ತಿಂಗಳಲ್ಲಿ ಈ ಹಣಕ್ಕೆ ಅರ್ಹರಾಗಿದ್ದರೂ ಬ್ಯಾಂಕ್ ಮಾಹಿತಿಯಲ್ಲಿ ಅಥವಾ ರೇಷನ್ ಕಾರ್ಡ್ (Bank account and Ration card error correction) ಸಮಸ್ಯೆ ಇದ್ದ ಕಾರಣ ಈ ಯೋಜನೆಯ ಹಣ ಪಡೆಯಲು ಆಗದಿದ್ದವರು ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದರೆ ಅವರೂ ಕೂಡ ಆಗಸ್ಟ್ ತಿಂಗಳ ಕಂತಿನ ಹಣವನ್ನು ಪಡೆಯಲಿದ್ದಾರೆ.

ಈಗಲೂ ಸಹ ಸ್ಟೇಟಸ್ ಚೆಕ್ ಮಾಡಿದಾಗ NPCI ವಿಫಲವಾಗಿದೆ ಎಂದು ಬರುತ್ತಿದ್ದರೆ ಏನು ಮಾಡಬೇಕು ಮತ್ತು ಅನ್ನಭಾಗ್ಯ ಯೋಜನೆ ಹೆಚ್ಚುವರಿ ಹಣ DBT ಚೆಕ್ ಮಾಡುವ ಆಪ್ಷನ್ ತೆಗೆದಿರುವುದರಿಂದ ಯಾವ ರೀತಿ ಈ ಸ್ಟೇಟಸ್ (Annabhagya Status) ಚೆಕ್ ಮಾಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಟ್ಯಾಕ್ಸಿ, ಗೂಡ್ಸ್ ಟಾಟಾ ಏಸ್, ಕಾರ್ ಖರೀದಿ ಮಾಡುವವರಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡಿದಾಗ ಹಣ ವರ್ಗಾವಣೆ ಆಗಿರುವ ಜಿಲ್ಲೆಗಳ ಫಲಾನುಭವಿಗಳಿಗೆ ಕುಟುಂಬದ ಮುಖ್ಯಸ್ಥರ ಹೆಸರಿನ ಜೊತೆ ಅವರ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ, ಎಷ್ಟು ಹಣ ವರ್ಗಾವಣೆ ಆಗಿದೆ, ಎಷ್ಟು ಕೆಜಿ ಅಕ್ಕಿಗೆ ಕಾರ್ಡ್ ಅರ್ಹವಾಗಿದೆ ಎಂದು ಎಲ್ಲಾ ಮಾಹಿತಿಯ ಡಿಟೇಲ್ಸ್ ಕೂಡ ಬರುತ್ತದೆ. ಇನ್ನು ಸಹ ಹಣ ವರ್ಗಾವಣೆ ಆಗಬೇಕಿರುವ ಜಿಲ್ಲೆಗಳಲ್ಲಿ ಪಾವತಿ ಪ್ರಕ್ರಿಯೆಯಲ್ಲಿದೆ ಎನ್ನುವ ಮಾಹಿತಿ ಬರುತ್ತದೆ.

ಈ ರೀತಿ ಘೋಷಣೆ ಬಂದರೆ ಅವರಿಗೆ ಈ ತಿಂಗಳ ಕೊನೆಯೊಳಗೆ ಹಣ ವರ್ಗಾವಣೆ ಆಗುತ್ತದೆ ಎಂದು ಅರ್ಥ. ಆದರೆ ಇನ್ನೂ ಕೆಲವು ಫಲಾನುಭವಿಗಳಿಗೆ ಅವರ ಜಿಲ್ಲೆಗೆ ಹಣ ವರ್ಗಾವಣೆ ಆಗಿದ್ದರೂ ಕೂಡ ರೇಷನ್ ಕಾರ್ಡ್ ಡೇಟಾವನ್ನು ಆಧಾರ್ ದೃಢೀಕರಣ ಪರಿಶೀಲನೆ ಮತ್ತು NPCI ದೃಢೀಕರಣ ಪರಿಶೀಲನೆಗೆ ಕಳುಹಿಸಲಾಗಿತ್ತು ಆದರೆ NPCI ಚೆಕ್ ವಿಫಲವಾಗಿದೆ ಎನ್ನುವ ಘೋಷಣೆ ಬರುತ್ತಿದೆ.

ಸೆಪ್ಟೆಂಬರ್ 1 ರಿಂದ 587 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

ಈ ರೀತಿ ಬಂದರೆ ಈ ತಿಂಗಳು ಕೂಡ ನಿಮಗೆ ಹಣ ವರ್ಗಾವಣೆ ಆಗುವುದಿಲ್ಲ. ನೀವು ಈ ಕೂಡಲೇ ತಪ್ಪದೆ ನಿಮ್ಮ ಬ್ಯಾಂಕ್ ಗೆ ಶಾಖೆಗೆ ಭೇಟಿಕೊಟ್ಟು ನಿಮ್ಮ ಆಧಾರ್ ಕಾರ್ಡ್ ಪ್ರತಿ ಜೋತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (Aadhar Seeding NPCI Mapping) ಅರ್ಜಿ ಸಲ್ಲಿಸಿ ಈ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ಮಾತ್ರ ಮುಂದಿನ ತಿಂಗಳಿಂದ ನೀವು ಈ ಯೋಜನೆಯ ಹಣವನ್ನು ಪಡೆಯಬಹುದು.

ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಸ್ಟೇಟಸ್ ಚೆಕ್ ಮಾಡುವ ವಿಧಾನ:-

● ಮೊದಲಿಗೆ ಅನ್ನ ಭಾಗ್ಯ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.
● ಇ-ಸೇವೆಗಳು ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ, ಎಡಭಾಗದಲ್ಲಿ ಇರುವ ಸೇವೆಗಳ ಲಿಸ್ಟ್ ಅಲ್ಲಿ ಇ-ಸ್ಥಿತಿ ಎನ್ನುವುದನ್ನು ಕ್ಲಿಕ್ ಮಾಡಿದಾಗ ಈ ಹಿಂದೆ DBT ಸ್ಟೇಟಸ್ ಎನ್ನುವ ಆಪ್ಷನ್ ಬರುತ್ತಿತ್ತು ಆದರೆ ಈಗ ಆ ಆಪ್ಷನ್ ಇಲ್ಲ.

ಪೋಸ್ಟ್ ಆಫೀಸ್’ನಾ ಈ ಸ್ಕೀಮ್ ನಲ್ಲಿ 1,000 ಕಟ್ಟಿದ್ರೆ ಸಾಕು 3,25,457/- ಸಿಗುತ್ತೆ.! ಹೆಚ್ಚು ಲಾಭ ಕೊಡುವ ಸ್ಕೀಮ್ ಇದು.!

● ಅದರ ಬದಲಾಗಿ ನೀವು ಹೊಸ / ಹಾಲಿ ಪಡಿತರ ಚೀಟಿ ಸ್ಥಿತಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಜಿಲ್ಲಾವಾರು ಲಿಂಕ್ ಬರುತ್ತದೆ.
● ನಿಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆಗಸ್ಟ್ ತಿಂಗಳು ಸೆಲೆಕ್ಟ್ ಮಾಡಿ ನಿಮ್ಮ RC ನಂಬರ್ ಹಾಕಿ ವರ್ಡ್ ಕ್ಯಾಪ್ಚಾ ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.

Leave a Comment

%d bloggers like this: