ಮನೆ ಕಟ್ಟಿಸುವಾಗ ಕ್ಯೂರಿಂಗ್ ಮಾಡಬೇಕು ಎನ್ನುವ ವಿಚಾರ ಗೊತ್ತಿರುತ್ತದೆ. ಅಕ್ಕಪಕ್ಕದ ಮನೆಯವರು ಮನೆ ಕಟ್ಟುವಾಗ ನೀರು ಎರಚುವುದನ್ನ ನೋಡಿರುತ್ತೇವೆ ಅಥವಾ ನಾವೇ ಚಿಕ್ಕವರಿದ್ದಾಗ ನಮ್ಮನೆ ಕಟ್ಟುವಾಗ ದೊಡ್ಡವರ ಜೊತೆ ಸೇರಿಕೊಂಡು ಗೋಡೆಗಳಿಗೆ, ಚಾವಣಿಗೆ, ಕಂಬಗಳಿಗೆ ನೀರು ಹಾಕಿದ ನೆನಪಿರುತ್ತದೆ.
ಆದರೆ ಹೀಗೆ ಕ್ಯೂರಿಂಗ್ ಯಾಕೆ ಮಾಡುತ್ತಾರೆ? ಎಷ್ಟು ದಿನಗಳವರೆಗೆ ಮಾಡುತ್ತಾರೆ? ಯಾಕೆ ಅಷ್ಟು ದಿನ ನೀರು ಹಾಕುತ್ತಿರಬೇಕು? ಹಾಕದೆ ಇದ್ದರೆ ಏನಾಗುತ್ತದೆ? ಎನ್ನುವ ಪ್ರಶ್ನೆ ಮಾಡುವವರ ಸಂಖ್ಯೆ ಬಹಳ ಕಡಿಮೆ ಇರುತ್ತಾರೆ. ಮೇಸ್ತಿ ಹೇಳಿದ್ದಾರೆ ಹಾಕುತ್ತಿದ್ದೇವೆ ಎನ್ನುವುದರ ಈ ಕೆಲಸ ಮಾಡುವುದರ ಹಿಂದಿನ ಕಾರಣ ಕೂಡ ಸರಿಯಾಗಿ ತಿಳಿದುಕೊಂಡರೆ ನೀವು ಇನ್ನಷ್ಟು ಜಾಗ್ರತೆಯಿಂದ ಕ್ಯೂರಿಂಗ್ ಮಾಡುತ್ತೀರಿ.
ಈ ಸುದ್ದಿ ಓದಿ:- ಈ 2 ಮಾವಿನ ತಳಿ ಬೆಳೆದರೆ ಸಾಕು ಜೇಬು ತುಂಬಾ ಕಾಸು, ಉತ್ತಮ ಆದಾಯಕ್ಕೆ ಈ ಕೃಷಿ ಮಾಡಿ.!
ಹಾಗಾಗಿ ಈ ಲೇಖನದಲ್ಲಿ ಇದರ ಕುರಿತು ಕೆಲವು ಮಾಹಿತಿ ತಿಳಿಸ ಬಯಸುತ್ತಿದ್ದೇವೆ ಕ್ಯೂರಿಂಗ್ ಯಾಕೆ ಮಾಡುತ್ತಾರೆ ಎಂದರೆ ಸಿಮೆಂಟ್ ಹಾಗೂ ನೀರನ್ನು ಮಿಶ್ರಣ ಮಾಡಿ ಮನೆ ಕಟ್ಟಿರುತ್ತೇವೆ. ಫ್ಲೋರಿಂಗ್ ನಲ್ಲಿ, ಮೋಲ್ಡ್ ಗೆ, ಪಿಲ್ಲರ್, ಗೋಡೆಗಳಿಗೆ ಇಟ್ಟಿಗೆ ಜೊತೆ ಸಿಮೆಂಟ್ ಹಾಗೂ ನೀರಿನ ಮಿಶ್ರಣ ಮಾಡಿ ಮನೆ ಕಟ್ಟುತ್ತಾರೆ.
ಹೀಗೆ ಮಾಡುವಾಗ ಆ ಸಿಮೆಂಟ್ ನೀರು ಮಿಕ್ಸ್ ಆಗಿ ಅದು ಚೆನ್ನಾಗಿ ಗಟ್ಟಿಯಾಗಬೇಕು ಈ ಕ್ರಿಯೆಗೆ ಹೈಡ್ರೇಶನ್ ಎನ್ನುತ್ತಾರೆ. ಈ ಹೈಡ್ರೇಶನ್ ಆಗುವಾಗ ವಾತಾವರಣ ತಂಪಾಗಿರಬೇಕು ಹಾಗಾಗಿ ಅಂತಹ ಟೆಂಪರೇಚರ್ ಮೇಂಟೈನ್ ಮಾಡಲು ಹೊರಗಿನಿಂದ ನೀರನ್ನು ಹಾಕಲಾಗುತ್ತದೆ.
ನಾವು ಎಷ್ಟು ನೀರು ಹಾಕುತ್ತೇವೆ ಅಷ್ಟು ಚೆನ್ನಾಗಿ ಅದು ಹೊಂದಿಕೊಂಡು ಕ್ಯೂರ್ ಆಗುವುದರಿಂದ ಇದಕ್ಕೆ ಕ್ಯೂರಿಂಗ್ ಎನ್ನುತ್ತಾರೆ. ಉದಾಹರಣೆಯಾಗಿ ಹೇಳುವುದಾದರೆ ನಮಗಾದ ಗಾಯ ವಾಸಿ ಆಗುವುದಕ್ಕೆ ಹೇಗೆ ಹೊರಗಿನ ಔಷಧಿ ಮುಖ್ಯವೋ ಹಾಗೆ ಮನೆ ಗಟ್ಟಿ ಆಗುವುದಕ್ಕೆ ಅದು ಸೆಟ್ ಆಗುವುದಕ್ಕೆ ಕ್ಯೂರಿಂಗ್ ಮುಖ್ಯ ಎನ್ನಬಹುದು.
ಈ ಸುದ್ದಿ ಓದಿ:- ಈ ಶಕ್ತಿಶಾಲಿ ಎಲೆ ನಿಮ್ಮಮನೆಯಲ್ಲಿದ್ದರೆ ಸಾಕು ಸಾಕಷ್ಟು ಹಣ ಬರ್ತಾನೆ ಇರುತ್ತೆ.!
ಕ್ಯೂರಿಂಗ್ 70% ಆದರೂ ಸಾಕು. ಹೀಗಾಗಬೇಕು ಎಂದರೆ ಏಳರಿಂದ ಹತ್ತು ದಿನ ನೀರು ಹಾಕಿದರೆ ಸಾಕು. ಆದರೆ ನೀವೇನಾದರೂ 14 ದಿನಗಳವರೆಗೆ ಕ್ಯೂರಿಂಗ್ ಮಾಡಿದರೆ 90% ಕ್ಯೂರಿಂಗ್ ಆಗುತ್ತದೆ. ಇದು ಇನ್ನು ಹೆಚ್ಚಿನ ಸ್ಟ್ರೆಂತ್ ಕೊಡುತ್ತದೆ ಕ್ಯೂರಿಂಗ್ ಚೆನ್ನಾಗಿ ಆದಷ್ಟು ಬಿಲ್ಡಿಂಗ್ಸ್ ಬಂದೋಬಸ್ತಾಗಿರುತ್ತದೆ.
ಯಾವುದೇ ಡಿಸೈನ್ ಮಾಡಿದರು ಅದಕ್ಕೆ ಫಿನಿಶಿಂಗ್ ಚೆನ್ನಾಗಿರುತ್ತದೆ ಹಾಗೆ ಸರಿಯಾಗಿ ಕ್ಯೂರಿಂಗ್ ಮಾಡದೇ ಇದ್ದರೆ ಈ ಮೇಲೆ ತಿಳಿಸಿದಂತೆ ಕಟ್ಟಡ ಬರದೇ ಅರೂಪಗಳು ಉಂಟಾಗುತ್ತದೆ. ಅದರಲ್ಲೂ ಕ್ರ್ಯಾಕಿಂಗ್ ತಕ್ಷಣಕ್ಕೆ ಬರದೆ ಹೋದರು ವರ್ಷಗಳು ಕಳೆಯುತ್ತಾ ಇದೆ ಸಮಸ್ಯೆಯಾಗಿ ಬಿಡುತ್ತದೆ ಹಾಗಾಗಿ ಮನೆ ಕಟ್ಟಿಸುವ ವಿಚಾರದಲ್ಲಿ ಕ್ಯೂರಿಂಗ್ ವಿಷಯ ಬಂದಾಗ ಮಾತ್ರ ಕಾಂಪ್ರಮೈಸ್ ಆಗಲೇಬಾರದು ಯಾವುದೇ ಎಮರ್ಜೆನ್ಸಿ ಇದ್ದರೂ ಇದರ ಇಂಪಾರ್ಟೆನ್ಸ್ ಮರೆಯುವಂತಿಲ್ಲ.
ಹಲವು ವಿಧಾನಗಳಲ್ಲಿ ಕ್ಯೂರಿಂಗ್ ಮಾಡಲಾಗುತ್ತದೆ. ನಾವು ಪೈಪ್ ನಲ್ಲಿ ನೀರು ಹಿಡಿಡು ಸ್ಪ್ರೇ ಮಾಡುವುದನ್ನು ಸ್ಪ್ರಿಂಕಲ್ ಕ್ಯೂರಿಂಗ್ ಎನ್ನುತ್ತಾರೆ, ಚಾವಣಿಗಳಲ್ಲಿ ಪಾತೆ ರೀತಿ ಕಟ್ಟೆ ಕಟ್ಟಿ ನೀರನ್ನು ನಿಲ್ಲಿಸಲಾಗುತ್ತದೆ ಇದನ್ನು ಬಾಂಡ್ ಕ್ಯೂರಿಂಗ್ ಎನ್ನುತ್ತಾರೆ, ಕಾಲಂಗಳಿಗೆ ಗನ್ನಿ ಬ್ಯಾಗ್ಸ್ ಹಾಕಿ ಕ್ಯೂರಿಂಗ್ ಮಾಡಲಾಗುತ್ತದೆ, ಹೀಗೆ ಸಾಕಷ್ಟು ವಿಧಾನಗಳು ಇವೆ.
ಈ ಸುದ್ದಿ ಓದಿ:- ಮನೆ ತಾರಸಿ ಮೇಲೆ ಮಿನಿ ತೋಟ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಕಾರಿಗಳನ್ನು ಮನೆ ಮೇಲೆ ಬೆಳೆಯುವ ಸುಲಭ ವಿಧಾನ.!
ಮೇಲಿನ ಪೋಶನ್ ಕಟ್ಟುವ ಅಗತ್ಯತೆ ಇದ್ದರೆ 70% ಕ್ಯೂರಿಂಗ್ ಮಾಡಿದರೂ ಸಾಕು ಸರಿ ಹೋಗುತ್ತದೆ ಮೇಲೆ ಮತ್ತೆ ಕಟ್ಟುವಾಗ ಕ್ಯೂರಿಂಗ್ ಮಾಡುವುದರಿಂದ ಅಥವಾ ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡುವಾಗ ಕ್ಯೂರಿಂಗ್ ಮಾಡುವುದರಿಂದ ಇದು ಸರಿ ಹೋಗುತ್ತದೆ. ಇಲ್ಲವಾದಲ್ಲಿ 14 ದಿನದವರೆಗೆ ತಾಳ್ಮೆಯಿಂದ ನೀಟಾಗಿ ಕ್ಯೂರಿಂಗ್ ಮಾಡಿ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.