ಡಿ-ವೋರ್ಸ್ ಆದ ಮೇಲೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುತ್ತ.?

 

ವಿ.ಚ್ಛೇಧನ ಎನ್ನುವುದು ನಮ್ಮ ಸಂಸ್ಕೃತಿಗೆ ಮಾರಕ. ಯಾವ ವಿವಾಹಗಳೂ ಕೂಡ ಈ ಉದ್ದೇಶಕ್ಕಾಗಿ ಜರುಗುವುದಿಲ್ಲ ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ವಿ.ಚ್ಛೇದನದ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಸಿನಿಮಾ ಸ್ಟಾರ್ ಗಳು ಸೆಲೆಬ್ರೆಟಿಗಳು ಮಾತ್ರ ಅಲ್ಲದೆ ನಮ್ಮ ನಿಮ್ಮ ಕುಟುಂಬಗಳ ಸದಸ್ಯರ ಮತ್ತು ಸ್ನೇಹಿತರ ವಿವಾಹಗಳು ಮುರಿದು ಬೀಳುತ್ತಿರುವುದನ್ನು, ವಿ.ಚ್ಛೇದನ ಪಡೆದುಕೊಂಡಿರುವುದನ್ನು ನಾವು ಕೇಳುತ್ತಿದ್ದೇವೆ.

ವಿ.ಚ್ಛೇದನ ಎನ್ನುವುದು ಈಗ ಒಂದು ರೀತಿ ಸಾಮಾನ್ಯ ವಿಷಯವೇ ಆಗಿ ಹೋಗಿದೆ. ಆದರೆ ಇದಾದ ಬಳಿಕ ಆಗುವ ಪರಿಣಾಮಗಳ ಬಗ್ಗೆ ಕೂಡ ಅರಿವಿರಬೇಕು. ಅದರಲ್ಲಿ ಮುಖ್ಯವಾಗಿ ವಿ.ಚ್ಛೇದನ ಆದಮೇಲೆ ಗಂಡನ ಆಸ್ತಿಯ ಕುರಿತು ಹೆಂಡತಿಗೆ ಏನು ಪಾಲು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲೇಬೇಕು. ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ವಿವಾಹ ಎನ್ನುವುದು ಪತಿ ಪತ್ನಿಯ ಸಂಬಂಧವನ್ನು ಬೆಸೆದು ದಾಂಪತ್ಯ ಎನ್ನುವ ಒಂದೇ ಹೆಸರಿನಲ್ಲಿ ಬೆಸೆಯುವ ಸ್ಪಂದನ. ಆದರೆ ವಿಚ್ಛೇದನ ಎನ್ನುವುದು ಇಬ್ಬರ ದಾರಿಯನ್ನು ಕವಲು ಮಾಡಿ ಬಿಡುತ್ತದೆ. ಆ ಸಮಯದಲ್ಲಿ ಮಹಿಳೆ ಒಬ್ಬಳ ಆರ್ಥಿಕ ಭದ್ರತೆ ಕೂಡ ಮುಖ್ಯ. ಹಾಗಾಗಿ ಇದರ ಬಗ್ಗೆ ಪ್ರತಿಯೊಬ್ಬ ಮಹಿಳೆಯರು ತಿಳಿದುಕೊಂಡಿರಬೇಕು.

ವಿ.ಚ್ಛೇಧನ ಪಡೆದ ಮಹಿಳೆಗೆ ಆತನ ಗಂಡನ ಹೆಸರಿನಲ್ಲಿ ರಿಜಿಸ್ಟರ್ ಆಗಿರುವ ಮನೆ ಆಸ್ತಿ ಸೈಟು ಜಮೀನು ಇವುಗಳ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ ಅದು ಆತನ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ. ಆದರೆ ಆಸ್ತಿ ಖರೀದಿಗೆ ಮಹಿಳೆಯು ಕೂಡ ಹೂಡಿಕೆ ಮಾಡಿದ್ದರೆ ಆಕೆ ಅದಕ್ಕೆ ದಾಖಲೆ ಸಮೇತ ವಿವರ ಕೊಟ್ಟಾಗ ಆಕೆ ಹೂಡಿಕೆ ಮಾಡಿದ್ದ ಮೊತ್ತದ ಹಣವನ್ನು ವಾಪಸ್ಸು ಪಡೆಯಬಹುದು.

ಒಂದು ವೇಳೆ ಗಂಡ ಹೆಂಡತಿ ಇಬ್ಬರು ಸೇರಿ ಯಾವುದಾದರೂ ಪ್ರಾಪರ್ಟಿಯನ್ನು ಖರೀದಿಸಿ ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ರಿಜಿಸ್ಟರ್ ಆಗಿದ್ದರೆ ಅದು ಕೂಡ ಅದು ಗಂಡನ ಹೆಸರಿಗಾಗುತ್ತದೆ ಆದರೆ ಹೆಂಡತಿ ತನ್ನ ಪಾಲು ಎಷ್ಟು ಇದೆಯೋ ಅಷ್ಟು ಮೊತ್ತದ ಹಣವನ್ನು ಡಿ.ವೋರ್ಸ್ ಆದ ಮೇಲೆ ಪಡೆಯಬಹುದು ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ.

ಇದು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಚಲಿಸಲಾಗದ ಆಸ್ತಿಗಳ ವಿವರವಾಗಿದ್ದರೆ ಮದುವೆ ಸಂದರ್ಭದಲ್ಲಿ ಕೊಡುವಂತಹ ಗಿಫ್ಟ್ ಗಳ ಒಡೆತನದ ಹಕ್ಕು ಬೇರೆ ರೀತಿ ಇರುತ್ತದೆ. ಮದುವೆ ಸಂದರ್ಭದಲ್ಲಿ ಪಡೆದ ಗಿಫ್ಟ್ ಗಳನ್ನು ಹೆಂಡತಿ ಪಡೆಯಬಹುದು. ಅಲ್ಲದೆ ಮದುವೆಯಾದ ಬಳಿಕ ಆಕೆ ಯಾವುದೇ ಚಿನ್ನಾಭರಣಗಳ ಖರೀದಿ ಮಾಡಿದ್ದರು ಕೂಡ ಅದೆಲ್ಲವೂ ಆಕೆಗೆ ಸೇರುತ್ತದೆ.

ಒಂದು ವೇಳೆ ಆ ಚಿನ್ನಾಭರಣ ಅಥವಾ ಅಮೂಲ್ಯ ವಸ್ತುಗಳ ಖರೀದಿಗೆ ಪತಿ ಹಣ ಹೂಡಿದ್ದರೆ ಅದನ್ನು ಆತ ನಿರೂಪಿಸಿದಾಗ ಅದರಲ್ಲೂ ಆತನಿಗೂ ಪಾಲು ಹೋಗುತ್ತದೆ. ಇನ್ಸೂರೆನ್ಸ್ ಮತ್ತು ಇತರ ಹೂಡಿಕೆಗಳಲ್ಲಿ ನಾಮಿನಿ ಆಗಿದ್ದರೆ ಮತ್ತು ಅವುಗಳ ಪ್ರೀಮಿಯಂ ಗಳನ್ನು ಪತಿಯೇ ಪಾವತಿಸುತ್ತಿದ್ದರೆ ನಾಮಿನಿ ಬದಲಾವಣೆಗೆ ಅವಕಾಶ ಇರುತ್ತದೆ.

ಒಂದು ವೇಳೆ ಡಿ.ವೋರ್ಸ್ ಪಡೆಯದೆ ಪರಸ್ಪರ ದೂರ ಇದ್ದು ಪತಿ ಮ.ರಣ ಹೊಂದಿದ್ದರೆ ಆತನ ಎಲ್ಲಾ ಆಸ್ತಿಯೂ ಪತ್ನಿಗೆ ಹೋಗುತ್ತದೆ. ಒಂದು ವೇಳೆ ಡಿ.ವೋರ್ಸ್ ಪಡೆಯದೆ ಪರಸ್ಪರ ದೂರ ಇದ್ದು ಆತ ಮತ್ತೊಂದು ಮದುವೆ ಆಗಿದ್ದರೆ ಇಬ್ಬರು ಹೆಂಡತಿಯರು, ಮತ್ತು ಇಬ್ಬರು ಪತ್ನಿಯರ ಮಕ್ಕಳು ಕೂಡ ಇದರಲ್ಲಿ ಹಕ್ಕು ಹೊಂದಿರುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಡಿ ಅಥವಾ ಸೂಕ್ತ ವಕೀಲರ ಪ್ರಶ್ನೆ ಮಾಡಿ ಗೊಂದಲ ಪರಿಹರಿಸಿಕೊಳ್ಳಿ.

Leave a Comment

%d bloggers like this: