ಬೇರೆಯವರ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಸಿಗಲಿದೆಯಾ.? ರೈತರು ತಪ್ಪದೆ ಈ ಮಾಹಿತಿ ನೋಡಿ.!

 

ಕೇಂದ್ರ ಸರ್ಕಾರವು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ಕೂಡ ಒಂದು. ಈ ಯೋಜನೆಯ ಪ್ರಯೋಜನವನ್ನು ಇಂದು ಭಾರತ ದೇಶದ ಕೋಟ್ಯಾಂತರ ರೈತರುಗಳು ಪಡೆಯುತ್ತಿದ್ದಾರೆ. ಈ ಯೋಜನೆ ಅಡಿ ರೈತರ ಖಾತೆಗಳಿಗೆ DBT ಮೂಲಕ ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಲ್ಲಿ ತಲಾ 2,000 ರೂ.ಗಳಂತೆ ವಾರ್ಷಿಕವಾಗಿ 6,000 ಗಳು ನೇರ ವರ್ಗಾವಣೆ ಆಗುತ್ತಿದೆ.

ಈ ಯೋಜನೆಯ ಫಲಾನುಭವಿಗಳಾಗಲು ರೈತರಿಗೆ ಮುಖ್ಯವಾಗಿ ಇರಬೇಕಾದ ಅರ್ಹತೆ ಏನೆಂದರೆ ರೈತರ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು ಮತ್ತು ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ಆದರೆ ಇಂದು ದೇಶದಲ್ಲಿ ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿಲ್ಲದೆ ಇರುವ ಅನೇಕ ರೈತರುಗಳು ಇದ್ದಾರೆ ಸ್ವಂತ ಕೃಷಿ ಭೂಮಿ ಇಲ್ಲದ ರೈತರುಗಳು ಬೇರೆಯವರ ಜಮೀನಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಅವರು ಸಹ ರೈತರಾಗಿರುವುದರಿಂದ ಅವರಿಗೂ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಸಿಗಲಿದೆಯಾ ಎನ್ನುವುದು ಈ ಯೋಜನೆ ಶುರುವಾಗಲಿದ್ದಾಗಲೂ ಇರುವಂತಹ ಒಂದು ಗೊಂದಲ. ಆದರೆ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ ಫಲಾನುಭವಿಗಳನ್ನು ಗುರುತಿಸಲು ಸರ್ಕಾರವು ಇದೇ ಮಾನದಂಡವನ್ನು ಉಪಯೋಗಿಸಿದೆ. ಯಾರ ಹೆಸರಿನಲ್ಲಿ ಕೃಷಿ ಭೂಮಿ ಇದೆಯೋ ಅವರಿಗಷ್ಟೇ ಪಿಎಂ ಕಿಸಾನ್ ಸಮ್ಮಾನ್ ಹಣ ಪಡೆಯಲು ಸಾಧ್ಯವಾಗುತ್ತಿದೆ.

ಈ ಯೋಜನೆ ಆರಂಭವಾಗಿ ವರ್ಷಗಳು ಕಳೆದಂತೆ ವರ್ಷದಿಂದ ವರ್ಷಕ್ಕೆ ಯೋಜನೆಗೆ ಇರುವ ನಿಯಮಾವಳಿಗಳನ್ನು ಇನ್ನಷ್ಟು ಕಟ್ಟುನಿಟ್ಟು ಮಾಡುತ್ತಿದೆ. ಇಷ್ಟೆಲ್ಲ ಕಠಿಣ ಮಾರ್ಗಸೂಚಿ ಇದ್ದರೂ ಕೂಡ ನಖಲಿ ಫಲಾನುಭವಿಗಳು ಸರ್ಕಾರಕ್ಕೆ ವಂಚಿಸಿ ಪಿಎಂ ಕಿಸಾನ್ ಸಮ್ಮಾನ್ ಹಣ ಪಡೆಯುತ್ತಿರುವುದನ್ನು ಮನಗಂಡಿರುವ ಸರ್ಕಾರ ಈಗ ರೈತರಿಗೆ eKYC ಕಡ್ಡಾಯಗೊಳಿಸಿದೆ.

ರೈತರುಗಳು ಆಧಾರ್ ಕಾರ್ಡ್ ಅಲ್ಲಿ ಇರುವ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಹತ್ತಿರದಲ್ಲಿರುವ CSC ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಹೋಗಿ ಬಯೋಮೇಟ್ರಿಕ್ ಮಾಹಿತಿ ಕೊಡುವ ಮೂಲಕ ಅಥವಾ OTP ಹೇಳುವ ಮೂಲಕ eKYC ಅಪ್ಡೇಟ್ ಮಾಡಿಸಬೇಕು. ಸರ್ಕಾರ ಇದಕ್ಕಾಗಿ ಒಂದು ಆಪ್ ಕೂಡ ಬಿಡುಗಡೆ ಮಾಡಿದೆ ಆ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಮುಖ ಚಹರೆ ತೋರುವ ಮೂಲಕ ಕೂಡ ರೈತರು eKYC ಅಪ್ಡೇಟ್ ಮಾಡಬಹುದು.

ಒಂದು ವೇಳೆ eKYC ಅಪ್ಡೇಟ್ ಆಗದೆ ಇದ್ದಲ್ಲಿ ಮುಂದಿನ ಕಂತಿನ ಹಣ ಆ ರೈತರ ಖಾತೆಗಳಿಗೆ ಬಿಡುಗಡೆ ಆಗುವುದಿಲ್ಲ ಎನ್ನುವುದನ್ನು ಕೃಷಿ ಸಚಿವಾಲಯವು ಸ್ಪಷ್ಟವಾಗಿ ತಿಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂದಿನ ಕಂತಿನ ಹಣ ಬಿಡುಗಡೆ ಆಗುವುದರಿಂದ ರೈತರಿಗೆ ಇದು ಕಡೆ ಅವಕಾಶವಾಗಿದೆ ಕಳೆದ 13ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಹಣ ಬಿಡುಗಡೆಯಾದ ಸಮಯದಲ್ಲೂ ಕೂಡ ಅನೇಕ ರೈತರ ಹೆಸರು ಈ ಪಟ್ಟಿಯಿಂದ ಬಿಟ್ಟು ಹೋಗಿತ್ತು.

ಇದಕ್ಕೆ ಕಾರಣ ರೈತರು ಕೊಟ್ಟಿರುವ ಮಾಹಿತಿಗಳಲ್ಲಿ ಒಂದಕ್ಕೊಂದು ಹೊಂದಾಣಿಕೆ ಆಗದೆ ಇರುವುದು. ಈ ಕೂಡಲೇ ಅದನ್ನು ಸರಿ ಮಾಡಿಸಿ ರೈತರು ಮತ್ತೊಮ್ಮೆ ಕಿಸಾನ್ ಸಮ್ಮಾನ್ ನಿಧಿ ಹಣಕ್ಕೆ ಅರ್ಜಿ ಸಲ್ಲಿಸದೆ ಹೋದಲ್ಲಿ ಈ ಬಾರಿಯೂ ಕೂಡ ಅವರು ಸರ್ಕಾರದ ಈ ಯೋಜನೆಯ ಸಹಾಯಧನದಿಂದ ವಂಚಿತವಾಗಬಹುದು. ಆದ್ದರಿಂದ ತಪ್ಪದೇ ಈ ಎರಡು ಕೆಲಸಗಳನ್ನು ಈ ಕೂಡಲೇ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

%d bloggers like this: