ಕೋರ್ಟ್ ಕೇಸ್ ಎಂದ ಮೇಲೆ ಅದಕ್ಕೆ ಸಾಕ್ಷಿ ಬಹಳ ಮುಖ್ಯ. ಈ ರೀತಿ ಸಾಕ್ಷಿಯಾಗಿ ಪ್ರತ್ಯಕ್ಷದರ್ಶಿಯನ್ನು ಮಾತ್ರವಲ್ಲದೆ ವಿವಿಧ ಪ್ರಕರಣಗಳಲ್ಲಿ ಪ್ರಕರಣಕ್ಕೆ ಅನುಸಾರವಾಗಿ ಕೆಲವು ವಸ್ತುಗಳ ಸಾಕ್ಷಿಯನ್ನು ಕೂಡ ಸಾಕ್ಷಿಯಾಗಿ ನಂಬಬೇಕಾಗುತ್ತದೆ. ಫೋಟೋಗಳು, ವಾಯ್ಸ್ ರೆಕಾರ್ಡ್ ಇವುಗಳು ಕೂಡ ಸಾಕ್ಷಿಯನ್ನು ಧೃಡೀಕರಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಗಳಲ್ಲೂ ಕೂಡ ಮೊಬೈಲ್ ಫೋನ್ ಇರುವುದರಿಂದ ಬಹಳ ಸುಲಭವಾಗಿ ಮಾತನಾಡಿರುವುದನ್ನು ರೆಕಾರ್ಡ್ ಮಾಡುತ್ತಾರೆ, ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡುತ್ತಾರೆ. ಇದೆಲ್ಲವೂ ಕೂಡ ಕೋರ್ಟ್ ಗಳಲ್ಲಿ ಸಾಕ್ಷಿ ಆಗುತ್ತದೆಯಾ ಅಥವಾ ಇವುಗಳಲ್ಲಿ ಯಾವುದನ್ನು ಸಾಕ್ಷಿಯಾಗಿ ಕೊಟ್ಟರೆ ಹೆಚ್ಚು ಸಮಯ ತೆಗೆದುಕೊಳ್ಳದೆ ಬಹಳ ಬೇಗ ಕೇಸ್ ಕ್ಲಿಯರ್ ಆಗುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಸಾಮಾನ್ಯವಾಗಿ ಜನರು ಬೆದರಿಕೆಯ ವಿಷಗಳಿದ್ದಾಗ ಅಂತಹ ಕರೆಗಳ ವಾಯ್ಸ್ ರೆಕಾರ್ಡ್ ಮಾಡುತ್ತಾರೆ. ಕೌಟುಂಬಿಕ ಕಲಹಗಳ ವಿಚಾರದಲ್ಲೂ ಕೂಡ ವರದಕ್ಷಿಣೆ ಬೇಡಿಕೆ ಅಥವಾ ಇನ್ಯಾವುದೇ ರೀತಿಯ ಅಕ್ರಮ ಸಂಬಂಧದ ಆರೋಪ ಈ ವಿಷಯಗಳಿದ್ದಾಗ ಅದನ್ನು ರೆಕಾರ್ಡಿಂಗ್ ಮೂಲಕ ಸಾಬೀತು ಪಡಿಸಲು ನೋಡುತ್ತಾರೆ.
ಚೆಕ್ ಬೌನ್ಸ್, ಆ’ತ್ಮ’ಹ’ತ್ಯೆ ಪ್ರಚೋದನೆ, ಮಾನನಷ್ಟ ಮೊಕದ್ದಮೆ ಪ್ರಕರಣದಿಂದ ಹಿಡಿದು ಅನೇಕ ಪ್ರಕರಣಗಳಲ್ಲಿ ವಾಯ್ಸ್ ರೆಕಾರ್ಡ್ಸ್ ಅನ್ನು ಸಾಕ್ಷಿಯಾಗಿ ತಂದು ಕೋರ್ಟ್ ಗೆ ಸಾಬೀತು ಪಡಿಸುತ್ತಾರೆ. ಆದರೆ ಈ ರೀತಿ ವಾಯ್ಸ್ ರೆಕಾರ್ಡಿಂಗ್ ಕೊಟ್ಟ ತಕ್ಷಣ ಪ್ರಕರಣ ಇತ್ಯರ್ಥವಾಗುವುದಿಲ್ಲ.
ಈ ರೀತಿ ಆರೋಪಹರಿಸುವ ವ್ಯಕ್ತಿಯು ಸಾಮಾನ್ಯವಾಗಿ ಈ ವಾಯ್ಸ್ ರೆಕಾರ್ಡ್ ಗಳನ್ನು ಪೆನ್ ಡ್ರೈವ್ ಅಥವಾ CD ಯಲ್ಲಿ ಹಾಕಿ ಕೋರ್ಟ್ ಗೆ ಸಬ್ಮಿಟ್ ಮಾಡುತ್ತಾರೆ. ಇಷ್ಟಾದ ಮಾತ್ರಕ್ಕೆ ಆ ಸಾಕ್ಷಿ ಮಾನ್ಯ ಆಗಿ ಬಿಡುವುದಿಲ್ಲ ನಂತರ ಇದಕ್ಕಿಂತ ಮುಖ್ಯವಾದ ಮತ್ತೊಂದು ಜವಾಬ್ದಾರಿ ಆರೋಪ ಮಾಡುವ ಅಥವಾ ಸಾಕ್ಷಿ ನೀಡುವ ವ್ಯಕ್ತಿಗೆ ಇರುತ್ತದೆ.
ಅದೇನಂದರೆ, ನೀವು ಯಾರ ಮೇಲೆ ಆರೋಪ ಮಾಡುತ್ತಿದ್ದೀರಾ ನೀವು ನೀಡಿರುವ ಸಾಕ್ಷಿಯು ಅದೇ ವ್ಯಕ್ತಿಗೆ ಸಂಬಂಧಪಟ್ಟಿದ್ದು ನೀವು ನೀಡಿರುವ ವಾಯ್ಸ್ ರೆಕಾರ್ಡ್ ನಲ್ಲಿ ಮಾತನಾಡಿರುವ ವ್ಯಕ್ತಿಯು ನೀವು ಆರೋಪ ಮಾಡಿರುವ ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ನೀವು ಫಾರೆನಾಸಿಕ್ಸ್ ಸೈನ್ಸ್ ಲ್ಯಾಬೋರೇಟರಿ (FSL) ನಿಂದ ನೀವು ದೃಢಪಡಿಸಿ ರಿಪೋರ್ಟ್ ತಂದು ಕೊಡಬೇಕು.
ಹೀಗೆ FSL ನಿಂದ ಸರ್ಟಿಫೈಡ್ ಮಾಡಿದ ಎವಿಡೆನ್ಸ್ ಗಳು ಮಾತ್ರ ಕೋರ್ಟ್ ನಲ್ಲಿ ಮಾನ್ಯವಾಗುತ್ತದೆ ಆದರೆ ಈ FSL ಲ್ಯಾಬೋರೇಟರಿ ರಿಪೋರ್ಟ್ ನೀವು ಬೇಕೆಂದ ತಕ್ಷಣವೇ ಸಿಗುವುದಿಲ್ಲ. ಕೇಸ್ ಗಳು ಹೆಚ್ಚಾಗಿರುವ ಕಾರಣ ಇರಬಹುದು ಅಥವಾ ಕೆಲವೊಮ್ಮೆ ನೀವು ಕೊಟ್ಟಿರುವ ಸಾಕ್ಷಿಗಳಲ್ಲಿ ಸಮಸ್ಯೆಗಳಿದ್ದು ವಿಳಂಬ ಆಗುತ್ತಿರಬಹುದು ಇದಕ್ಕಿಂತಲೂ ಬೇಗ ನಿಮಗೆ ಸಾಬೀತಾಗಬೇಕು ಎನ್ನುವುದಿದ್ದರೆ ಮತ್ತೊಂದು ಕ್ರಮವನ್ನು ಅನುಸರಿಸಬೇಕು.
ಸ್ಕ್ರೀನ್ ಶಾಟ್ಸ್ ಗಳು, ವಾಟ್ಸಾಪ್ ವಿಡಿಯೋ ಕಾಲ್ ಗಳು ಬಹಳ ಬೇಗ ಇದೇ ವ್ಯಕ್ತಿ ಹೇಳಿದೆಂದು ಸಾಕ್ಷಿಗಳಾಗಿವೆ. ಹಾಗಾಗಿ ಇವುಗಳನ್ನು ಪ್ರಸ್ತುತಪಡಿಸಿದರೆ ವಾಯ್ಸ್ ರೆಕಾರ್ಡ್ ಕಿಂತ ಹೆಚ್ಚು ಮಾನ್ಯ ಆಗುತ್ತದೆ ಎಂದು ಕೋರ್ಟ್ ಹೇಳುತ್ತದೆ. ಈ ರೀತಿಯ ಒಂದು ನಿಯಮ ಇತ್ತೀಚೆಗೆ ಬದಲಾಗಿದೆ. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ಕೋರ್ಟ್ ಕೇಸ್ ಗಳಿಗೆ ಸಂಬಂಧಪಟ್ಟ ಈ ಅಗತ್ಯ ಕಾನೂನು ಮಾಹಿತಿಯನ್ನು ತಪ್ಪದೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.