ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government) ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಮಹಿಳಾ ಪರ ಯೋಜನೆಗಳನ್ನು (for Womens) ಜಾರಿಗೆ ತಂದಿವೆ. ಹಣಕಾಸು ವಿಚಾರದಲ್ಲೂ ಕೂಡ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯಮ ಸ್ಥಾಪನೆಗೆ ವಿವಿಧ ಯೋಜನೆಗಳ ಮೂಲಕ ಹಣಕಾಸಿನ ನೆರವು ಒದಗಿಸುತ್ತಿದೆ.
ಸರ್ಕಾರ ಮಾತ್ರವಲ್ಲದೆ ಸರ್ಕಾರದ ಸಹಭಾಗಿತ್ವದಲ್ಲಿ ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಸ್ತ್ರೀಶಕ್ತಿ ಪರವಾಗಿ ಕಾಳಜಿ ಮೆರೆಯುತ್ತಿವೆ. ಈ ಹಾದಿಯಲ್ಲಿ SBI ಬ್ಯಾಂಕ್ (State Bank Of India New Scheme) ಕೂಡ ಹೊಸದಾಗಿ ಒಂದು ಯೋಜನೆ ಪರಿಚಯಿಸಿದ್ದು.
ಈ ಸುದ್ದಿ ಓದಿ:-ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600
ಈ ಯೋಜನೆಯ ಮೂಲಕ ಅರ್ಹ ಮಹಿಳಾಮ ಫಲಾನುಭವಿಗಳು ಸ್ವಂತ ವ್ಯಾಪಾರಕ್ಕಾಗಿ ಅಥವಾ ಉದ್ಯೋಗ ಆರಂಭಿಸುವುದಕ್ಕಾಗಿ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಬಡ್ಡಿಯಲ್ಲಿ 25 ಲಕ್ಷ ರೂ.ವರೆಗೆ ಸಾಲ (loan) ಪಡೆಯಬಹುದು ಈ ವಿಶೇಷ ಯೋಜನೆ ಕುರಿತು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಯೋಜನೆಯ ಹೆಸರು:- SBI ಸ್ತ್ರೀಶಕ್ತಿ ಯೋಜನೆ – 2024
ಯೋಜನೆಯ ಉದ್ದೇಶ:-
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು.
ಯೋಜನೆ ಕುರಿತ ಕೆಲ ಪ್ರಮುಖ ಸಂಗತಿಗಳು:-
* SBI ನ ಈ ಯೋಜನೆ ಮೂಲಕ ಗರಿಷ್ಠವಾಗಿ 25 ಲಕ್ಷದವರೆಗೆ ಸಾಲ ಪಡೆಯಬಹುದು. 5 ಲಕ್ಷದ ಒಳಗಿನ ಸಾಲಕ್ಕೆ ಯಾವುದೇ ಮೇಲಾಧಾರ ಒದಗಿಸುವ ಅಗತ್ಯ ಇಲ್ಲ. ರೂ.5 ರಿಂದ 25 ಲಕ್ಷದ ಸಾಲಗಳಿಗೆ ಬ್ಯಾಂಕ್ ನಿಯಮಗಳ ಪ್ರಕಾರವಾಗಿ ಕೇಳಲಾಗುವ ದಾಖಲೆಗಳನ್ನು ಒದಗಿಸಬೇಕು.
* ಮಹಿಳೆಯು ರೂ.2,00,000 ಕ್ಕಿಂತ ಹೆಚ್ಚು ಮೊತ್ತದ ವ್ಯಾಪಾರ ಸಾಲವನ್ನು ತೆಗೆದುಕೊಂಡರೆ, ಅವರು 0.5% ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
* ಕೃಷಿ ಉತ್ಪನ್ನಗಳ ವ್ಯಾಪಾರ, 14C ಸೋಪ್ ಮತ್ತು ಡಿಟರ್ಜೆಂಟ್ ವ್ಯಾಪಾರ, ಡೈರಿ ವ್ಯಾಪಾರ, ಬಟ್ಟೆ ತಯಾರಿಕಾ ವ್ಯಾಪಾರ, ಪಾಪಡ್ ಮಾಡುವ ವ್ಯಾಪಾರ, ರಸಗೊಬ್ಬರಗಳ ಮಾರಾಟ, ಗುಡಿ ಕೈಗಾರಿಕೆ, ಕಾಸ್ಮೆಟಿಕ್ ವಸ್ತುಗಳು, ಬ್ಯೂಟಿ ಪಾರ್ಲರ್ ಇತ್ಯಾದಿ ಬಿಸಿನೆಸ್ ಗಳಿಗೆ ಸಾಲ ಪಡೆಯಬಹುದು.
ಈ ಸುದ್ದಿ ಓದಿ:-ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!
ಸಿಗುವ ನೆರವು:-
ಗರಿಷ್ಠ 25 ಲಕ್ಷದವರೆಗೆ ಈ ಯೋಜನೆಯಲ್ಲಿ ದಾಖಲೆಗಳನ್ನು ಒದಗಿಸಿ, ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು.
ಕೇಳಲಾಗುವ ಅರ್ಹತೆಗಳು:-
* ಭಾರತದಲ್ಲಿ ಖಾಯಂ ನಿವಾಸಿಯಾಗಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು.
* ಯಾವುದೇ ವ್ಯವಹಾರದಲ್ಲಿ ಮಹಿಳೆಯು ಕನಿಷ್ಠ 50% ಅಥವಾ ಹೆಚ್ಚಿನ ಪಾಲುದಾರಿಕೆ ಹೊಂದಿದ್ದಾಗ ಮಾತ್ರ ಸಾಲ ಪಡೆಯಬಹುದು
ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದಲ್ಲಿರುವ ನಿಮ್ಮSBI ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ನೀವು SBI ಸ್ತ್ರೀ ಶಕ್ತಿ ಯೋಜನೆಯಡಿ ಸಾಲ ಪಡೆಯಲು ಬಯಸುತ್ತಿದ್ದೀರಾ ಎಂದು ತಿಳಿಸಿ ಅರ್ಜಿ ಸಲ್ಲಿಸಬೇಕು.
* ಈ ಸಮಯದಲ್ಲಿ ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಕೂಡ ಅರ್ಜಿ ಜೊತೆಗೆ ಲಗತ್ತಿಸಬೇಕು
* ನಿಮ್ಮ ಅರ್ಜಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಆದ ಬಳಿಕ ಬ್ಯಾಂಕ್ ಖಾತೆಗೆ DBT ಮೂಲಕ ಸಾಲದ ಮೊತ್ತವು ನೇರವಾಗಿ ಜಮೆ ಆಗುತ್ತದೆ
ಸಲ್ಲಿಸಬೇಕಾದ ದಾಖಲೆಗಳು:-
* ತುಂಬಿದ ಅರ್ಜಿ ನಮೂನೆ
* ಅರ್ಜಿದಾರರ ಆಧಾರ್ ಕಾರ್ಡ್
* ವಿಳಾಸ ಪುರಾವೆ
* ಗುರುತಿನ ಚೀಟಿ
* ಕಂಪನಿ ಮಾಲೀಕತ್ವದ ಪ್ರಮಾಣಪತ್ರ
* ಬ್ಯಾಂಕ್ ಲೆಕ್ಕವಿವರಣೆ
* ಕಳೆದ 2 ವರ್ಷಗಳ ITR
ಪ್ರಮಾಣಪತ್ರ
* ಮೊಬೈಲ್ ನಂಬರ್
* ಪಾಸ್ಪೋರ್ಟ್ ಗಾತ್ರದ ಫೋಟೋ
* ವ್ಯಾಪಾರ ಯೋಜನೆ ಲಾಭ ಮತ್ತು ನಷ್ಟದ ಹೇಳಿಕೆ