ಲಿಂಗ ಸಮಾನತೆ ಎನ್ನುವುದು ಸಮಾನ ಆರ್ಥಿಕ ಹಕ್ಕಿನಲ್ಲೂ ಕೂಡ ಇರುತ್ತದೆ. ನಮ್ಮ ಭಾರತದಲ್ಲಿರುವ ಕಾನೂನಿನ ಪ್ರಕಾರ ವಿವಾಹಿತೆ ಆಗಿರುವ ಒಬ್ಬ ಮಹಿಳೆಯು ಅವರ ಪೋಷಕರ ಮತ್ತು ಪತಿಯ ಕುಟುಂಬದ ಆಸ್ತಿಯಲ್ಲಿ ಯಾವ ರೀತಿ ಹಕ್ಕು ಹೊಂದಿರುತ್ತಾರೆ ಎನ್ನುವುದನ್ನು ಕೂಡ ಉಲ್ಲೇಖಿಸಲಾಗಿದೆ. ಆ ಪ್ರಕಾರವಾಗಿ ನೋಡುವುದಾದರೆ ಒಬ್ಬ ವಿವಾಹಿತ ಮಹಿಳೆಗೆ ಪೋಷಕರ ಆಸ್ತಿಯಲ್ಲಿ ಉತ್ತರಾಧಿಕಾರದ ಹಕ್ಕು ಇರುತ್ತದೆ.
ಇದರೊಂದಿಗೆ ಆಕೆಗೆ ಹಾಗೂ ಅವಳ ಮಕ್ಕಳಿಗೂ ಸಹ ಅದನ್ನು ನಿರ್ವಹಣೆ ಮಾಡುವ ಹಕ್ಕು ಬರುತ್ತದೆ. ಮಹಿಳೆಯ ಇನ್ನಿತರ ಹಕ್ಕುಗಳಿಗೆ ಸಂಬಂಧಪಟ್ಟ ಹಾಗೆ ಕೂಡ ಅನೇಕ ಕಾನೂನುಗಳನ್ನು ಲಿಂಗ ಸಮಾನತೆ ಉದ್ದೇಶದಿಂದ ರೂಪಿಸಲಾಗಿದ್ದು ಇವುಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಹಿಂಸೆಯ ವಿರುದ್ಧದ ಹಕ್ಕು ಮಹತ್ವದ್ದಾಗಿದೆ. ನಿವಾಸದ ಹಕ್ಕು ಹಾಗೂ ಬಹುಪತ್ನಿತ್ವದ ವಿರುದ್ಧ ಹಕ್ಕನ್ನು ಕೂಡ ಹಿಂದೂ ಮಹಿಳೆಯರು ಹೊಂದಿದ್ದಾರೆ.
ವಿವಾಹಿತ ಮಹಿಳೆಗೆ ಆಸ್ತಿ ಹಕ್ಕಿನಲ್ಲಿ ಕೊಟ್ಟಿರುವ ಹಕ್ಕಿನ ಬಗ್ಗೆ ಹಿಂದೂ ಉತ್ತರಾಧಿಕತ್ವದ ಕಾಯಿದೆ ಏನು ಹೇಳುತ್ತದೆ ಮತ್ತು ಯಾವಗೆಲ್ಲಾ ಇದರ ತಿದ್ದುಪಡಿ ಆಗಿದೆ ಎನ್ನುವ ವಿಷಯವನ್ನು ನೋಡುವುದಾದರೆ, ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಪ್ರಕಾರ ಕಾರ್ಪೋಸರಿ ಆಸ್ತಿಯಲ್ಲಿ ಕೋಪಾರ್ಸೆನರ್ ಗಳು ಮಾತ್ರ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿತ್ತು ಕಾರ್ಪೋಸರಿ ಆಸ್ತಿ ಎಂದರೆ ನಾಲ್ಕು ತಲೆಮಾರುಗಳ ಪೂರ್ವಜರಿಂದ ಕುಟುಂಬದಲ್ಲಿ ಅವಿಭಜಿತವಾಗಿ ಹಾದು ಹೋಗಿರುವ ಆಸ್ತಿ.
ಹಿಂದೂ ಅವಿಭಾಜಿತ ಕುಟುಂಬದ ಪರಿಕಲ್ಪನೆ ಪ್ರಕಾರ ಮೊದಲ ನಾಲ್ಕು ತಲೆಮಾರುಗಳ ಪುರುಷ ಸದಸ್ಯರು ಹುಟ್ಟಿದಾಗಿನಿಂದಲೇ ಈ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುತ್ತಾರೆ. ಹಾಗೆಯೇ ಕೋಪಾರ್ಸೆನರ್ ಗಳ ಹೆಂಡತಿ ಮತ್ತು ಮಕ್ಕಳಗಳು ಕೂಡ ಇದರಲ್ಲಿ ಪಾಲು ಇದ್ದೇ ಇರುತ್ತದೆ. ಆದರೆ ಹಿಂದೂ ಅವಿಭಜಿತ ಕುಟುಂಬ ಪರಿಕಲ್ಪನೆಯ ಪ್ರಕಾರ ಪೂರ್ವಜರ ಸ್ವಯಂ ಸ್ವಾಧೀನ ಪಡಿಸಿಕೊಂಡ ಜಂಟಿ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ.
ಅವಿಭಜಿತ ಕುಟುಂಬದ ಸದಸ್ಯರಾಗಿರುತ್ತಾರೆ ಹೊರತು ಕೋಪಾರ್ಸೆನರ್ ಗಳು ಆಗುವುದಿಲ್ಲ ಎನ್ನುವುದನ್ನು ಈ ಕಾಯ್ದೆಯು ತಿಳಿಸುತ್ತದೆ. ಹಿಂದು ಉತ್ತರಾಧಿಕಾರದ ಕಾಯಿದೆ 1956 ಉತ್ತರಾಧಿಕಾರಗಳ ನಡುವೆ ಇಂಟರ್ ಸ್ಟೇಟ್ ಆಸ್ತಿ ಅಂದರೆ ಯಾವುದೇ ಮರಣ ಪತ್ರ ಉಯಿಲು ಅಥವಾ ಮೃತ್ಯು ಪತ್ರವನ್ನು ಮಾಡದೆ ಉಳಿದು ಹೋದ ಆಸ್ತಿ ವಿಭಜನೆಯ ಸಮಯದಲ್ಲೂ ಕೂಡ ಈ ಮೇಲೆ ತಿಳಿಸಿದ ನಿಬಂಧನೆಯೇ ಹಿಂದುಗಳಾದ ಎಲ್ಲರಿಗೂ ಕೂಡ ಅನ್ವಯಿಸುತ್ತದೆ.
ವಿವಾಹಿತ ಮಗಳು HUF ನ ಭಾಗವಾಗುವುದನ್ನು ನಿಲ್ಲಿಸುವುದರಿಂದ ತನ್ನ ತಂದೆ ಆಸ್ತಿ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎನ್ನುವ ಗೊಂದಲ ಹಲವರಲ್ಲಿ ಇದೆ. ಆದರೆ 2005ರಲ್ಲಿ ಮತ್ತೊಮ್ಮೆ ತಿದ್ದುಪಡಿ ಆದ ಕಾನೂನು ಮಗಳ ಸ್ಥಾನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ ಹುಟ್ಟಿದಾಗಿನಿಂದಲೇ ಮಗಳು ಕಾಪರ್ಸೆನರ್ ಆಗಿರಬೇಕು. ಅವಿಭಜಿತ ಕುಟುಂಬಗಳಲ್ಲಿ ಇವಳು ಸಹ ಇತರ ಕಾಪರ್ಸೆನರ್ ಗಳಿಗೆ ಸಮನಾದ ಉತ್ತರಾಧಿಕಾರವನ್ನು ಹೊಂದಿರುತ್ತಾಳೆ.
ಮಗನಂತೆ ಮಗಳು ಸಹ ಹೊಣೆಗಳನ್ನು ಹಾಗೂ ಉತ್ತರಾಧಿಕಾರಿಯನ್ನು ಹೊಂದಿರುತ್ತಾಳೆ. ಹೀಗಾಗಿ ತಂದೆ ಎಲ್ಲಾ ಆಸ್ತಿಯನ್ನು ಕೂಡ ಆಕೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾಳೆ ಎಂದು ತಿಳಿಸಲಾಗಿದೆ. ಈ ಹಿಂದೆ ಇದ್ದ ಕಾನೂನಿನ ಪ್ರಕಾರ HUF ಸದಸ್ಯೆ ಆಗಿದ್ದ ಆಕೆ ವಿಭಜನೆ ಕೋರಲು ಅರ್ಹರಾಗಿರಲಿಲ್ಲ. ಆದರೆ ಈಗ 2005 ಆಗ ತಿದ್ದುಪಡಿಯ ಮಹಿಳೆಯರನ್ನು ಕೂಡ ಕಾಪರ್ಸೆನರಿಯಲ್ಲಿ ಸೇರಿಸಬಹುದು ಎಂದು ತಿಳಿಸಿದೆ. ಹೆಣ್ಣು ಮಕ್ಕಳಿಗೆ ಮಾತ್ರ ಈ ಅಧಿಕಾರ ಇದ್ದು ಪತ್ನಿ ತಾಯಿ ಅಥವಾ ವಿಧವೆಯರನ್ನು ಇನ್ನೂ ಕಾರ್ಪೆಸನರಿ ಭಾಗವಾಗಿ ಮಾನ್ಯ ಮಾಡಿಲ್ಲ.