ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿ ವರದಕ್ಷಿಣೆ ಕೊಟ್ಟ ಮೇಲೂ ಹೆಣ್ಣು ಮಕ್ಕಳಿಗೆ ಅಪ್ಪನ ಮನೆ ಆಸ್ತಿ ಕೊಡುವುದು ಸರಿಯೇ.? ಕಾನೂನು ಇದರ ಬಗ್ಗೆ ಏನೆನ್ನುತ್ತದೆ ಗೊತ್ತ.?

ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಇರುತ್ತಾರೆ ಅವರಿಗೆ ಅಂದು ಕೊಂದಂತೆ ಮದುವೆಯನ್ನು ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರು ಯಾರೂ ಕೂಡ ಈ ರೀತಿ ಮದುವೆಯನ್ನು ಮಾಡಿರಬಾರ ದು ನನ್ನ ಮಗಳಿಗೆ ನಾನು ಇಷ್ಟೆಲ್ಲ ಖರ್ಚು ಮಾಡಿ ಅವಳಿಗೆ ಇಷ್ಟವಾಗು ವಂತೆ ಅಧೂರಿಯಾಗಿ ಮಾಡುತ್ತೇನೆ, ಎಂದು ಅವರ ಮನೆಯಲ್ಲಿರುವ ಅವರ ತಂದೆ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಒಟ್ಟಾರೆ ಸೇರಿ ಮನೆಯ ಹೆಣ್ಣು ಮಗಳಿಗೆ ಯಾವುದೇ ರೀತಿಯಲ್ಲೂ ಕೊರತೆ ಯಾಗದಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ.

ಆದರೆ ಕೆಲವೊಬ್ಬ ಹೆಣ್ಣು ಮಕ್ಕಳು ನನಗೆ ಈ ರೀತಿಯಾಗಿ ಮದುವೆ ಮಾಡಿ ಎಂದು ಹೇಳುವುದಿಲ್ಲ, ಆದರೆ ಕೆಲವೊಬ್ಬರು ಹೇಳುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೆ. ಲಕ್ಷ ಲಕ್ಷ ಹಣ ಖರ್ಚು ಮಾಡಿಯು ಕೂಡ ಅವರಿಗೆ ತಂದೆಯ ಆಸ್ತಿಯಲ್ಲಿ ಪಾಲನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ
? ಎಷ್ಟರ ಮಟ್ಟಿಗೆ ತಪ್ಪು.? ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಆದರೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಚಾರವಾಗಿ ಕಾನೂನನ್ನು ಪ್ರಶ್ನೆ ಕೇಳಿದರೆ ಇದಕ್ಕೆ ಕಾನೂನಿನಿಂದ ಬರುವ ಉತ್ತರ ಏನು ಎಂದರೆ? ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಇಷ್ಟು ಲಕ್ಷ ಹಣ ಖರ್ಚು ಮಾಡಿ ಮದುವೆಯನ್ನು ಮಾಡಬೇಕು ಎನ್ನುವ ಕಾನೂನು ಇಲ್ಲ, ಅದೇ ರೀತಿಯಾಗಿ ನೀವು ನಿಮಗೆ ಅನುಕೂಲ ವಾಗುವಂತೆ ಒಂದು ದೇವಸ್ಥಾನದಲ್ಲಿ ಮದುವೆ ಮಾಡಿದರು ಕೂಡ ಅದು ಮದುವೆ, ಆದರೆ ತಂದೆಯ ಆಸ್ತಿಯಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಆಸ್ತಿ ಕಡ್ಡಾಯವಾಗಿ ಕೊಡಲೇಬೇಕು.

ಹಾಗೂ ಈ ವಿಚಾರವಾಗಿ ಕಾನೂನಿನಲ್ಲಿ ಸ್ಪಷ್ಟವಾದಂತಹ ನಿರ್ಧಾರ ಇದೆ ಆದ್ದರಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡುವಂತಹ ಸಮಯದಲ್ಲಿ ವ್ಯರ್ಥವಾಗಿ ಬೇರೆ ಕೆಲಸಗಳಿಗೆ ಹಣವನ್ನು ಖರ್ಚು ಮಾಡುವುದರ ಬದಲು, ಆ ಹಣವನ್ನು ಕೂಡಿಟ್ಟು ಅಥವಾ ಅವರ ಹೆಸರಿಗೆ ಡೆಪಾಸಿಟ್ ಮಾಡಿಸುವುದರ ಮೂಲಕ ಆ ಹಣ ಅವರ ಮುಂದಿನ ಭವಿಷ್ಯಕ್ಕೆ ಉಪಯೋಗವಾಗುತ್ತದೆ. ಅದೇ ರೀತಿಯಾಗಿ ಕೆಲವೊಬ್ಬರು ಹೆಣ್ಣುಮಕ್ಕಳಿಗೆ ತನ್ನ ಮನೆಯಲ್ಲಿಯೂ ಕೂಡ ಆಸ್ತಿ ಸಿಗುತ್ತದೆ ಹಾಗೂ ಗಂಡನ ಮನೆಯಲ್ಲಿಯೂ ಕೂಡ ಆಸ್ತಿ ಸಿಗುತ್ತದೆ.

ಆದರೆ ತವರು ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳ ಅಣ್ಣ-ತಮ್ಮಂದಿರಿಗೆ ಇದರಿಂದ ತೊಂದರೆ ಉಂಟಾಗುವುದಿಲ್ಲವೇ ಅದರ ಬದಲು ಅವರು ತಂದೆಯ ಆಸ್ತಿ ಬೇಡ ಎನ್ನುವುದಕ್ಕೆ ಸಾಧ್ಯವಿಲ್ಲವ ಎಂದು ಕೆಲವರು ಪ್ರಶ್ನೆ ಕೇಳುತ್ತಾರೆ.? ಆದರೆ ಈ ಪ್ರಶ್ನೆ ಒಂದು ರೀತಿಯಿಂದ ಸರಿ ಎನ್ನಿಸಿದರು ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಯಾವುದೇ ರೀತಿಯ ಆಸೆಯನ್ನು ಪಡುವುದಿಲ್ಲ.

ಆದರೆ ಈಗಿನ ಕಾಲದಲ್ಲಿ ಪ್ರತಿಯೊಂದರ ಬೆಲೆಯು ಹೆಚ್ಚಾಗುತ್ತಿರುವುದರಿಂದ, ಎಲ್ಲರಿಗೂ ಹಣದ ಅವಶ್ಯಕತೆ ಇರುವುದರಿಂದ ಈ ರೀತಿಯ ನಿರ್ಧಾರ ಬರುವುದಕ್ಕೆ ಕಾರಣವಾಗುತ್ತಿದೆ. ಕೆಲವೊಮ್ಮೆ ಮನೆಯಲ್ಲಿರುವ ಗಂಡ ನಿನ್ನ ತಂದೆಯ ಮನೆಯಲ್ಲಿ ಆಸ್ತಿ ತೆಗೆದುಕೊಂಡು ಬಾ ಎಂದು ಹಿಂಸಿಸುತ್ತಿರುತ್ತಾರೆ. ಇದು ಕೂಡ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲನ್ನು ಕೇಳುವುದಕ್ಕೆ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು. ಆದರೆ ಹೆಣ್ಣು ಮಕ್ಕಳಿಗೆ ಇಷ್ಟು ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಬೇಕು ಎಂಬ ಕಾನೂನು ಇಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: