ಮನೆ ಕಟ್ಟಬೇಕು ಎನ್ನುವುದು ಒಂದು ದೊಡ್ಡ ಸಾಧನೆಯೇ ಸರಿ. ಮದುವೆ, ಮನೆ ಕಟ್ಟುವುದು, ಮಕ್ಕಳನ್ನು ಓದಿಸುವುದು ಇವು ಮನುಷ್ಯನ ಜೀವನದ ದೊಡ್ಡ ಪ್ರಾಜೆಕ್ಟ್ ಗಳು ಹಾಗೂ ಅಷ್ಟೇ ಕನ್ಫ್ಯೂಸಿಂಗ್ ವಿಷಯಗಳು. ಯಾಕೆಂದರೆ ಇವು ಹೈ ಬಜೆಟ್ ಯೋಜನೆಗಳಾಗಿವೆ ನಮ್ಮ ಮದುವೆಯಾಗಲಿ, ಮಕ್ಕಳ ಮದುವೆಯಾಗಲಿ ಕೈ ತುಂಬಾ ಹಣ ಇಟ್ಟುಕೊಂಡೇ ಕೈ ಹಾಕಬೇಕು.
ನಾವು ಎಷ್ಟು ಖರ್ಚು ಮಾಡಿದರು ಅಷ್ಟು ಖರ್ಚು ಹಿಡಿಯುತ್ತದೆ. ಹಾಗೆಯೇ ಮಕ್ಕಳನ್ನು ಓದಿಸುವ ವಿಚಾರ ಕೂಡ, ಒಂದು ಹೆಜ್ಜೆ ತಪ್ಪಾಗಿ ಇಟ್ಟರು ಮಕ್ಕಳ ಭವಿಷ್ಯದ ಜೊತೆ ಆಟವಾಡಿದ ರೀತಿ ಆಗುತ್ತದೆ. ಇಷ್ಟೇ ರಿಸ್ಕಿನ ಮತ್ತೊಂದು ವಿಷಯ ಎಂದರೆ ಮನೆ ಕಟ್ಟುವ ವಿಚಾರ.
ಮನೆ ಕಟ್ಟುವ ವಿಷಯದಲ್ಲಿ ಸ್ವಲ್ಪ ಯಾಮಾರಿದರೂ ಹಣ ವ್ಯರ್ಥವಾಗಿ ಕಳೆದುಕೊಂಡದ್ದಕ್ಕಾಗಿ ಅಥವಾ ಇಚ್ಛೆ ಪ್ರಕಾರ ಮನೆ ಬಂದಿಲ್ಲ ಎಂದು ಜೀವನಪೂರ್ತಿ ಪ’ಶ್ಚಾ’ತಾ’ಪದಲ್ಲಿ ಇರಬೇಕಾಗುತ್ತದೆ. ಯಾಕೆಂದರೆ ಪದೇ ಪದೇ ಮನೆ ಕಟ್ಟುವ ಯೋಗ ಹಾಗೂ ಅನುಕೂಲ ಎಲ್ಲರಿಗೂ ಇರುವುದಿಲ್ಲ.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಹಾಗಾಗಿ ತಾಳ್ಮೆಯಿಂದ ಪ್ರತಿಯೊಂದು ಹಂತದಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮನೆ ಕಟ್ಟುವ ವಿಷಯವಂತೂ ಒಂದು ದಿನ ಅಥವಾ ಒಂದು ವಾರ ಅಥವಾ ಒಂದು ತಿಂಗಳಿಗೆ ಮುಗಿಯುವಂತದ್ದಲ್ಲ. ಮನೆ ಕಟ್ಟಿ ಮುಗಿಯುವವರೆಗೂ ಅದು ಆರು ತಿಂಗಳಾಗಬಹುದು, ವರ್ಷವಾಗಬಹುದು ಅಥವಾ ನಿಮ್ಮ ಬಜೆಟ್ ಅನುಕೂಲತೆ ಆಧಾರದ ಮೇಲೆ ನೀವು ಬಯಸುವ ವಿನ್ಯಾಸದ ಆಧಾರದ ಮೇಲೆ ಎರಡು ವರ್ಷಗಳವರೆಗೂ ಹಿಡಿಯಬಹುದು.
ಅಲ್ಲಿಯವರೆಗೂ ಕೂಡ ಪ್ರತಿಯೊಂದು ನಿಮಿಷ ಪ್ರತಿಯೊಂದು ದಿನ ಪ್ರತಿಯೊಂದು ಸಣ್ಣ ಪುಟ್ಟ ಸಂಗತಿಗಳಿಗೂ ಕೂಡ ಅಷ್ಟೇ ನಿಗಾವಹಿಸಿ ನಿಮ್ಮ ಮನೆಗೆ ನೀವು ಪ್ರತಿಯೊಂದು ವಸ್ತುಗಳನ್ನು ಖರೀದಿಸಬೇಕು. ಮಣ್ಣು, ಸಿಮೆಂಟ್, ಕಬ್ಬಿಣ ಇವುಗಳು ಮಾತ್ರವಲ್ಲದೇ ವಿಂಡೋಗಳು, ಮೇನ್ ಡೋರ್, ಇಂಟೀರಿಯರ್ ಲ್ಯಾಮಿನೇಟ್ ಫರ್ನಿಚರ್ಸ್ ಎಲ್ಲವೂ ಕೂಡ ಮನೆ ಬಾಳಿಕೆ ಮತ್ತು ಅಂದ ನಿರ್ಧಾರ ಮಾಡುವ ಮತ್ತು ನಿಮ್ಮ ಹೊರೆಯನ್ನು ಏರಿಸುವ ಅಥವಾ ಇಳಿಸುವ ಪಾಯಿಂಟ್ ಗಳಾಗಿವೆ.
ಹೀಗಾಗಿ ಎಷ್ಟು ಸಾಧ್ಯ ಅಷ್ಟು ವಿಚಾರ ಮಾಡಿ ತಾಳ್ಮೆಯಿಂದ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡೇ ನಿರ್ಧಾರ ಮಾಡಿ. ನಿಮಗೆ ಅನುಕೂಲತೆ ಮಾಡಿಕೊಡಲು ವಿಂಡೋ ವಿಚಾರದ ಬಗ್ಗೆ ನಾವಿಂದು ಈ ಲೇಖನದಲ್ಲಿ ಒಂದು ಸಲಹೆ ಕೊಡುತ್ತಿದ್ದೇವೆ. ಸಾಮಾನ್ಯವಾಗಿ ಕಿಟಕಿ, ಬಾಗಿಲು, ಡೋರ್ ಫ್ರೇಮ್ ಗಳಿಗೆ ಎಲ್ಲರೂ ವುಡ್ ಬಳಸುತ್ತಾರೆ ವುಡ್ ತುಂಬಾ ರಾಯಲ್ ಲುಕ್ ಕೊಡುತ್ತದೆ ನಿಜ.
ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!
ಆದರೆ ಬಾಳಿಕೆ ವಿಚಾರ ಬಂದರೆ ಇದು ಮಳೆಗಾಲ ಬಂದಾಗ, ಬೇಸಿಗೆ ಕಾಲ ಬಂದಾಗ, ಚಳಿಗಾಲ ಬಂದಾಗ ವೆದರ್ ಗೆ ತಕ್ಕ ಹಾಗೆ ರಿಯಾಕ್ಟ್ ಆಗುತ್ತದೆ, ನೀರು ಬಿದ್ದರೆ ಬಾಳಿಕೆ ಕಡಿಮೆ ಆಗುತ್ತದೆ, ಬೆಂಕಿ ವಿಚಾರದಲ್ಲಿ ಜಾಗೃತೆಯಿಂದ ಇರಬೇಕಾಗುತ್ತದೆ ಇನ್ನು ಇವುಗಳಿಗೆ ಕುಟ್ಟೆ ಹಿಡಿದು ಹುಳವಾಗಿ ಸ್ಟ್ರೆಂಥ್ ಕಡಿಮೆ ಆಗುತ್ತದೆ.
ಹಾಗಾಗಿ ಕೆಲವು ವಿಚಾರಗಳಲ್ಲಿ ವುಡ್ ಗಿಂತ WPC ಬೆಟರ್ ಆಪ್ಷನ್. ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಏಕೆಂದರೆ ವಾಟರ್ ಪ್ರೂಫ್, ಫೈಯರ್ ಪ್ರೂಫ್ ಆಗಿರುತ್ತದೆ. ಲುಕ್ ವೈಸ್ ಕೂಡ ವುಡ್ ನಂತೆಯೇ ಇರುತ್ತದೆ. ಯಾವುದೇ ರೀತಿ ಹುಳ ಬೀಳುವುದಿಲ್ಲ. ಹಾಗಾಗಿ ವುಡ್ ಗಿಂತಲೂ WPC ಡೋರ್, WPC ವಿಂಡೋ, WPC ಫ್ರೇಮ್ ಬಳಸುವುದೇ ಬೆಸ್ಟ್ ಎನ್ನುವುದು ತಜ್ಞರ ಅಭಿಪ್ರಾಯ. ಈ ವಿಚಾರವಾಗಿ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.
https://youtu.be/z2yCtoTrveg?si=QhcpzLZ5UpDgze7d