ಕೇವಲ 1,000 ರೂಪಾಯಿಗೆ ಒಂದು ಕೋಟಿ ಇನ್ಸೂರೆನ್ಸ್ ಸಿಗಲಿದೆ.! ಕುಟುಂಬವನ್ನು ಪ್ರೀತಿಸುವವರು ಈ ಇನ್ಸೂರೆನ್ಸ್ ಮಾಡಿಸಲೇಬೇಕು.

ಇನ್ಸೂರೆನ್ಸ್ ನಲ್ಲಿ (Insurance) ಹಲವು ವಿಧಗಳಿವೆ. ಹೋಂ ಇನ್ಸೂರೆನ್ಸ್, ವೆಹಿಕಲ್ ಇನ್ಸೂರೆನ್ಸ್ ಇವುಗಳು ನಾನ್ ಲೈಫ್ ಇನ್ಶುರೆನ್ಸ್ ಗಳಾಗುತ್ತವೆ. ಲೈಫ್ ಇನ್ಶುರೆನ್ಸ್ ಗಳಲ್ಲಿ ಟರ್ಮ್ ಇನ್ಶುರೆನ್ಸ್ (term Insurance) ಬಹಳ ಮಹತ್ವದ್ದು. ಒಂದರ್ಥದಲ್ಲಿ ಹೇಳಬೇಕು ಎಂದರೆ ಕುಟುಂಬವನ್ನು ಪ್ರೀತಿಸುವವರು ತನ್ನ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಕಾಡಬಾರದು ಎಂದು ಬಯಸುವವರು.

WhatsApp Group Join Now
Telegram Group Join Now

ಮತ್ತು ನಾಳೆ ಬಗ್ಗೆ ಇಂದೇ ಯೋಚಿಸುವರು ಮತ್ತು ಜೀವನದಲ್ಲಿ ನಿಶ್ಚಿಂತೆಯಾಗಿ ಬದುಕಲು ಇಚ್ಛಿಸುವವರು ಇನ್ಸೂರೆನ್ಸ್ ಮಾಡಿಸಲೇಬೇಕು ಯಾಕೆಂದರೆ ಟರ್ಮ್ ಇನ್ಸೂರೆನ್ಸ್ ಒಬ್ಬ ವ್ಯಕ್ತಿ ಅಕಾಲಿಕವಾಗಿ ಅನಾರೋಗ್ಯ ಅಥವಾ ಅ’ಪ’ಘಾ’ತದ ಕಾರಣದಿಂದಾಗಿ ಮೃ’ತ ಪಟ್ಟಾಗ ಆತನ ಕುಟುಂಬಕ್ಕೆ ಆಗಿರುವ ಆರ್ಥಿಕ ನ’ಷ್ಟವನ್ನು ತುಂಬುತ್ತದೆ.

18 ವರ್ಷ ಮೇಲ್ಪಟ್ಟ ಪ್ರತಿ ತಿಂಗಳು ಕೂಡ ಉದ್ಯೋಗ ಅಥವಾ ವ್ಯಾಪಾರ, ವ್ಯವಹಾರ ಇನ್ನಿತರ ಯಾವುದೇ ಮೂಲಗಳಿಂದ ಒಂದು ನಿಶ್ಚಿತ ಆದಾಯವನ್ನು ಹೊಂದಿರುವ ವ್ಯಕ್ತಿಯು ಟರ್ಮ್ ಇನ್ಸೂರೆನ್ಸ್ ಮಾಡಿಸಬಹುದು. ಹೆಚ್ಚಿನ ಜನರು ಮನಿ ಬ್ಯಾಕ್ ಇನ್ಶುರೆನ್ಸ್ ಅಥವಾ ಎಂಡೋವ್ಮೆಂಟ್ ಪಾಲಿಸಿಗಳನ್ನು ಖರೀದಿಸುತ್ತಾರೆ ಯಾಕೆಂದರೆ ಇವುಗಳಲ್ಲಿ ಮಾಡಿದ ಹೂಡಿಕೆ ಲಾಭ ದೊಂದಿಗೆ ವಾಪಸ್ಸು ಬರುತ್ತದೆ.

ಆದರೆ ಟರ್ಮ್ ಇನ್ಸೂರೆನ್ಸ್ ನಲ್ಲಿ ನೀವು ಕಟ್ಟುವ ಪ್ರೀಮಿಯಂ ನಿಮಗೆ ಏನಾದರೂ ಹೆಚ್ಚು ಕಡಿಮೆ ಆಗಿ, ತೊಂದರೆ ಆದಾಗ ಕುಟುಂಬಕ್ಕೆ ಸಿಗುತ್ತದೆ ಅದನ್ನು ಹೊರತುಪಡಿಸಿ ಇನ್ಯಾವುದೇ ರಿಟರ್ನ್ಸ್ ಸಿಗುವುದಿಲ್ಲ, ಒಂದು ರೀತಿಯಲ್ಲಿ ವೆಹಿಕಲ್ ಇನ್ಸೂರೆನ್ಸ್ ರೀತಿಯಲ್ಲಿ ಇದು ಕೂಡ ವರ್ಕ್ ಆಗುತ್ತದೆ.

ಹಾಗಾಗಿ ಹೆಚ್ಚಿನ ಜನರು ಒಂದು ವೇಳೆ ನಮಗೆ ಏನೂ ಆಗಲಿಲ್ಲ ಎಂದರೆ ನಾವು ಕಟ್ಟಿದ ಪ್ರೀಮಿಯಂ ವ್ಯರ್ಥ ಎಂದು ಭಾವಿಸಿ, ಇದರ ಬಗ್ಗೆ ಅಸಡ್ಡೆ ಮಾಡಬಹುದು ಆದರೆ ಯಾವ ಇನ್ಶುರೆನ್ಸ್ ಕೂಡ ಇಷ್ಟು ದೊಡ್ಡ ಮೊತ್ತದ ಕವರೇಜ್ ನೀಡುವುದಿಲ್ಲ ಈ ವಿಚಾರದಲ್ಲಿ ಟರ್ಮ್ ಇನ್ಸೂರೆನ್ಸ್ ನ್ನು ಮೆಚ್ಚಲೇಬೇಕು.

ನೀವು ಒಂದು ಕೋಟಿಯವರೆಗೂ ಕೂಡ ಟರ್ಮ್ ಇನ್ಸೂರೆನ್ಸ್ ಖರೀದಿಸಬಹುದು. ಅದಕ್ಕೆ ತಕ್ಕನಾದ ಪ್ರೀಮಿಯಂ ಕಟ್ಟಬೇಕು, ಪ್ರೀಮಿಯಂ ನೀವು ಯಾವ ವಯಸ್ಸಿನಲ್ಲಿ ಟರ್ಮ್ ಇನ್ಸೂರೆನ್ಸ್ ಖರೀದಿಸುತ್ತಿದ್ದೀರ ಎನ್ನುವುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ. 22 ವರ್ಷದ ಯುವಕ ಅಥವಾ ಯುವತಿ 25 ಲಕ್ಷ ಕವರೇಜ್ ಟರ್ಮ್ ಇನ್ಸೂರೆನ್ಸ್ ಖರೀದಿಸಿದರೆ.

ಅವರ ಪ್ರತಿ ತಿಂಗಳ ಪ್ರೀಮಿಯಂ ರೂ.395 ಇರುತ್ತದೆ, 50 ಲಕ್ಷಕ್ಕೆ ರೂ.498 ಮಾತ್ರ, ಒಂದು ಕೋಟಿಗೆ ರೂ.773 ಇರುತ್ತದೆ, 65 ವರ್ಷಗಳವರೆಗೆ ಈ ಪ್ರೀಮಿಯಂ ಗಳನ್ನು ಕಟ್ಟುತ್ತಾ ಹೋಗಬೇಕು. ಇಷ್ಟು ಕಡಿಮೆ ಹಣಕ್ಕೆ ಅಷ್ಟು ದೊಡ್ಡ ಮೊತ್ತದ ಕವರೇಜ್ ನೀಡುವುದು ಟರ್ಮ್ ಇನ್ಸೂರೆನ್ಸ್ ನಲ್ಲಿ ಮಾತ್ರ.

ಟರ್ಮ್ ಇನ್ಸೂರೆನ್ಸ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಕೂಡ ಖರೀದಿಸಬಹುದು. ಆನ್ಲೈನ್ ನಲ್ಲಿ ಖರೀದಿಸುವುದಾದರೆ ಯಾವುದೇ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ನೇರವಾಗಿ ಇನ್ಸೂರೆನ್ಸ್ ಕಂಪನಿಗಳ ವೆಬ್ ಸೈಟ್ ಗಳಲ್ಲಿ ಅಥವಾ ಇನ್ಸೂರೆನ್ಸ್ ಅಗ್ರಿಗೇಟರ್ಸ್ ನಿಂದ ಇನ್ಶೂರೆನ್ಸ್ ಖರೀದಿಸಬಹುದು. HDFC, ICICI, LIC ಮುಂತಾದ ಕಂಪನಿಗಳಲ್ಲಿ ಟರ್ಮ್ ಇನ್ಸೂರೆನ್ಸ್ ಮಾಡಿಸಬಹುದು.

ಆದರೆ ಇನ್ಸುರೆನ್ಸ್ ಖರೀದಿಸುವಾಗ ನೀಡುವ ಫಾರಂನಲ್ಲಿ ತಪ್ಪದೆ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು, ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ಧೂಮಪಾನ ಮದ್ಯಪಾನ ಮುಂತಾದ ದು’ಶ್ಚ’ಟಗಳ ಅಭ್ಯಾಸ ಇದ್ದರೆ ನೈಜತೆ ತಿಳಿಸಬೇಕು ಇದರ ಆಧಾರದ ಮೇಲೆ ಕೂಡ ಪ್ರೀಮಿಯಂ ಮೊತ್ತಗಳಲ್ಲಿ ವ್ಯತ್ಯಾಸವಾಗುತ್ತದೆ.

ಜೊತೆಗೆ ಇದಕ್ಕೆ ಸಂಬಂಧಪಟ್ಟ ಮೆಡಿಕಲ್ ಟೆಸ್ಟ್ ಗಳು ಕೂಡ ಇರುತ್ತವೆ ಕೊಟ್ಟಿರುವ ಮಾಹಿತಿಗೂ ಟೆಸ್ಟ್ನಲ್ಲಿ ನೀಡಿರುವ ಮಾಹಿತಿಗೂ ಹೊಂದಾಣಿಕೆ ಇರದೆ ಹೋದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ನಿಮಗೆ ಯಾವುದೇ ಸಾಲ ಇದ್ದರೆ ಅಥವಾ ಕುಟುಂಬಕ್ಕೆ ನೀವು ಒಬ್ಬರೇ ಆಧಾರವಾಗಿದ್ದು ತಂದೆ ತಾಯಿ ಹೆಂಡತಿ ಮಕ್ಕಳು ನಿಮ್ಮ ಮೇಲೆ ಅವಲಂಬಿತರಾಗಿದ್ದರೆ ತಪ್ಪದೆ ಟರ್ಮ್ ಇನ್ಶುರೆನ್ಸ್ ಖರೀದಿಸಿ ಮತ್ತು ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now