ಸ್ನೇಹಿತರೆ ಇಂದಿನ ಪುಟದಲ್ಲಿ ವಿಶೇಷ ಮಾಹಿತಿಯೊಂದನ್ನು ನಿಮಗಾಗಿ ತಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹಣದ ಅಭಾವ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಮಧ್ಯಮ ವರ್ಗದವರಂತು ಈ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಇಂದಿನ ಪುಟದಲ್ಲಿ ಹಣವನ್ನು ಹೇಗೆ ಉಳಿಸುವುದು, ಯಾಕೆ ಹಣ ನಮ್ಮ ಬಳಿ ಉಳಿಯುವುದಿಲ್ಲ ಎನ್ನುವ ಬಗ್ಗೆ ನೋಡೋಣ ಜೊತೆಗೆ ಇಲ್ಲಿ ಕೆಲುವು ಒಂದು ತಪ್ಪುಗಳ ಬಗ್ಗೆ ತಿಳಿದು ಎಚ್ಚರಿಕೆ ಇಂದ ಹೇಗೆ ಇರುವುದು ಎಂದು ನೋಡೋಣ.
ಹಾಗಾದರೆ ತಡ ಏಕೆ ಮುಂದೆ ಓದೋಣ ಬನ್ನಿ. ಮೊದಲೇನಯದಾಗಿ ಗಡಿಯಾರ ಯಾವುದೇ ಕಾರಣಕ್ಕೂ ನಿಂತಿರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಒಂದು ವೇಳೆ ಶೆಲ್ ಕಾಲಿಯಾಗಿದ್ದರೆ,ತಕ್ಷಣವೆ ಹೊಸದನ್ನು ಹಾಕಿ ಗಡಿಯಾರವನ್ನು ನಡೆಯುವಂತೆ ಮಾಡಬೇಕು ಮತ್ತು ಇನ್ನೊಂದು ಮುಖ್ಯವಾದ ವಿಷಯವೆಂದರೆ ಗಡಿಯಾರವನ್ನು ಸರಿಯಾದ ಸಮಯಕ್ಕೆ ಇಡದೆ ಇನ್ನು ಹಿಂದೆ ಇಡಬಾರದು.
ಮುಂದೆ ಇಟ್ಟರೂ ಪರವಾಗಿಲ್ಲ ಹಿಂದೆ ಇಡಬಾರದು ಇದರಿಂದ ಕೂಡ ಮನೆಯಲ್ಲಿ ಲಕ್ಷ್ಮಿಯು ನಿಲ್ಲುವುದಿಲ್ಲ. ಇನ್ನು ಎರಡನೆಯದಾಗಿ ಮನೆಯಲ್ಲಿ ಯಾವುದೇ ಸ್ಥಳದಲ್ಲಾಗಿರಬಹುದು ನಲ್ಲಿ ಅಥವಾ ಪೈಪುಗಳು ಹೊಡೆದು ನೀರು ಸೋರುತಿದ್ದರೆ ಮನೆಯಲ್ಲಿ ಹಣಗಳು ಕೂಡ ಸೋರುತ್ತದೆ ಎಂದು ಅರ್ಥ ಹೌದು ಮನೆಯಲ್ಲಿ ಯಾವುದೇ ಕಾರಣಕ್ಕೂ ನೀರು ಸೋರಿದರೆ, ಹಣವು ಮನೆಯಲ್ಲಿ ನಿಲ್ಲುವುದಿಲ್ಲ.
ಮೂರನೆಯದಾಗಿ ನಾವು ಮೈಲಿಗೆ ಆಗಿರುವ ಬಟ್ಟೆ ಆಗಿರಬಹುದು ಅಥವಾ ನಾವು ಕೊಳೆಯಾಗಿರುವ ಬಟ್ಟೆಯನ್ನು ಆಗಿರಬಹುದು ಯಾವುದೇ ಕಾರಣಕ್ಕೂ ತುಂಬಾ ದಿನಗಳವರೆಗೂ ಅದನ್ನು ಬಿಡಬಾರದು ಹಾಗೂ ಮನೆಯಲ್ಲಿ ಅಶುದ್ಧತೆಯಿಂದ ಕೂಡ ಲಕ್ಷ್ಮಿಯು ಮನೆಯಲ್ಲಿ ನಿಲ್ಲುವುದಿಲ್ಲ ಹಾಗಾಗಿ ಆಗಾಗ ಮನೆಯನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಬಟ್ಟೆಯನ್ನು ಬಹಳ ದಿನಗಳವರೆಗೂ ಹೋಗೆಯದೆ ಇಡಬಾರದು.
ನಾಲ್ಕನೆಯದಾಗಿ ಮನೆಯಲ್ಲಿ ಜೇಡ ಕಟ್ಟಿದರೆ ಅಥವಾ ಪಾರಿವಾಳಗಳ ಗೂಡು ಕಟ್ಟಿದ್ದರೆ ಇದನ್ನು ಸ್ವಚ್ಛ ಮಾಡಬೇಕು ವಾರಕ್ಕೊಮ್ಮೆ ಆದರೂ ಸಹ ಪರವಾಗಿಲ್ಲ ಅಥವಾ 15 ದಿನಕ್ಕೊಮ್ಮೆ ಜಾಡನ್ನು ತೆಗೆಯಬೇಕು ಏಕೆಂದರೆ ಮನೆಯ ಜಾಡು ಅಥವಾ ಪಾರಿವಾಳದ ಗೂಡು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಇನ್ನು ನಾವು ದಿನ ಮಲಗುವ ಹಾಸಿಗೆ ಮೇಲೆ ಪೊರಕೆಯನ್ನು ಬಳಸಿ ಹಾಸಿಗೆಯನ್ನು ಸ್ವಚ್ಛಗೊಳಿಸುವುದು ತಪ್ಪು ಏಕೆಂದರೆ ಲಕ್ಷ್ಮಿಯ ಸ್ವರೂಪವಾದ ಪುರಕೆಯನ್ನು ನಾವು ಮಲಗುವ ಹಾಸಿಗೆಯ ಮೇಲೆ ಹಾಕುವುದು ಬಹಳ ತಪ್ಪಾಗುತ್ತದೆ.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಆಗಾಗ ಪೊರಕೆಯಿಂದ ಮನೆಯನ್ನು ಉಳಿಸುವುದು ಕೂಡ ಮನೆಯಲ್ಲಿ ಹಣವನ್ನು ನಿಲ್ಲದ ಇರುವಿಕೆಗೆ ಒಂದು ಕಾರಣ. ಇನ್ನು ಸಂಜೆಯಾದ ನಂತರ ಕಸಗುಡಿಸುವುದು ಅಥವಾ ಕಸವನ್ನು ಎತ್ತಿ ಹಾಕುವುದು ಕೂಡ ತಪ್ಪು ಮತ್ತು ಪೊರಕೆಯನ್ನು ಕಸವನ್ನು ಗುಡಿಸಿದ ನಂತರ ನಿಲ್ಲುವ ರೀತಿಯಲ್ಲಿ ಇಡಬಾರದು ಅದನ್ನು ಕೆಳಗೆ ಮಲಗಿಸುವ ರೀತಿಯಲ್ಲಿ ಇಡಬೇಕು ಇನ್ನು ಕಸವನ್ನು ಮೂಲೆಗೆ ಗುಡಿಸಬಾರದು ಇದರಿಂದ ಕಸಗುಡಿಸಿದಂತಹ ಹೆಣ್ಣು ಮಗು ಹಬ್ಬ ಹಾಗೂ ಹರಿದಿನಗಳಲ್ಲಿ ಹೊರಗೆ ಆಗುವ ಸಾಧ್ಯತೆಗಳು ಹೆಚ್ಚು.
ಇನ್ನು ಪೊರಕೆಯನ್ನು ಕೂಡ ಯಾವುದೇ ಕಾರಣಕ್ಕೂ ದಾಟಬಾರದು ಹಾಗೂ ಮನೆ ಒಳಗೆ ಬಂದಾಗ ಕಣ್ಣಿಗೆ ಕಾಣಬಾರದು. ಅದಕ್ಕಾಗಿ ಕೆಲವು ಜನ ಬಾಗಿಲ ಹಿಂದೆ ಅಥವಾ ವಸ್ತುಗಳ ಹಿಂದೆ ಪೊರಕೆಯನ್ನು ಇಡುತ್ತಾರೆ. ಇನ್ನು ಮನೆಯಲ್ಲಿ ಕಲ್ಲುಪ್ಪನ್ನು ಹಾಕು ಅರಿಶಿನವನ್ನು ಯಥೇಚ್ಛವಾಗಿ ಇಟ್ಟುಕೊಳ್ಳಬೇಕು ಏಕೆಂದರೆ ಮನೆಯಲ್ಲಿ ಅರಿಶಿಣ ಹಾಗೂ ಕಲ್ಲು ಉಪ್ಪು ಖಾಲಿ ಆದರೆ ಮುಂದೆ ಹಣದ ಸಮಸ್ಯೆ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗೂ ಒಡವೆಯನ್ನು ಕೂಡ ಧರಿಸಬಾರದು ಕಾರಣ ಸ್ವಚ್ಛವಾದ ಪವಿತ್ರವಾದ ಜಾಗದಲ್ಲಿ ಬಳಸಬೇಕು ಹಾಗೂ ಹಣವನ್ನು ಒಂದು ನಿಗದಿತ ಜಾಗದಲ್ಲಿ ಇಡುವುದು ಒಳ್ಳೆಯದು.