ಈ ಹಲ್ಲು ಪುಡಿಯನ್ನು ಒಮ್ಮೆ ಬಳಸಿ ನೋಡಿ ಎಲ್ಲಾ ತರಹದ ನೋವಿನ ಸಮಸ್ಯೆಯೂ ದೂರವಾಗುತ್ತದೆ ಸ್ನೇಹಿತರೆ ಇವತ್ತಿನ ಪುಟದಲ್ಲಿ ವಿಶೇಷವಾದ ಮಾಹಿತಿಯೊಂದಿಗೆ ನಿಮಗೆ ಇಂದು ತಿಳಸಲಿದ್ದೀವೆ, ಹಲ್ಲು ನೋವಿನ ಸಮಸ್ಯೆ ಹಲ್ಲಲ್ಲಿ ಹುಳುಕ ಆಗುವುದು ಮತ್ತು ಹಲ್ಲಿನ ಸೆನ್ಸಿಟಿವಿಟಿ ಸಮಸ್ಯೆ ಇವುಗಳಿಗೆ ಮನೆಮದ್ದನ್ನು ಮಾಡುವ ವಿಧಾನದ ಬಗ್ಗೆ ತಿಳಿಸಿಕೊಳಲಿದ್ದೇವೆ. ಸಾಮಾನ್ಯವಾಗಿ ಹಲ್ಲಿನಲ್ಲಿ ಹುಡುಕು ಚಿಕ್ಕ ವಯಸ್ಸಿನಲ್ಲಿ ಚಾಕಲೇಟ್ ಗಳನ್ನು ತಿನ್ನುವ ರೂಡಿಯಿಂದ ಬರುತ್ತದೆ ಇನ್ನು ಕೆಲವು ಜನಗಳಿಗೆ ಕೆಲವು ದುಷ್ಚಟಗಳಿಂದ ಹಲ್ಲಿನ ಸಮಸ್ಯೆಯು ಉದ್ಭವವಾಗುತ್ತದೆ ಆದರೆ ಹಲ್ಲು ನೋವಿನ ಮೂಲ ಸಮಸ್ಯೆಗೆ ಚಾಕ್ಲೆಟ್ ಹಾಗೂ ಕೆಲವು ಸಿಹಿ ಪದಾರ್ಥಗಳನ್ನು ತಿನ್ನುವ ಕಾರಣದಿಂದ ಬರುತ್ತದೆ.
ಹಾಗಾಗಿ ಮನೆಯಲ್ಲೇ ಮಾಡಿರುವಂತಹ ಸಿಹಿ ತಿನಿಸುಗಳನ್ನು ಆಗಾಗ ಕೊಡದೆ ಅಪರೂಪಕ್ಕೆ ಕೊಡುವುದರಿಂದ ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಹಾಗಾದರೆ ಈ ಹಲ್ಲು ನೋವಿನ ಸಮಸ್ಯೆಗೆ ಮನೆಮದ್ದನ್ನು ಹೇಗೆ ಮಾಡುವುದು ಮೊದಲು 100 ಗ್ರಾಮ್ ಲವಂಗ, 100 ಗ್ರಾಂ ಅರಿಶಿಣದ ಗೋಟು, 20 ಗ್ರಾಂ ಪಟಕ ನಂತರ ನಾಟಿ ಹಸುವಿನ ಬೆರಣಿಯನ್ನು ಸುಟ್ಟಿರುವಂತಹ ಬೂದಿ ಇದು ಒಂದು ಕಾಲ್ ಕೆಜಿ ಬೇಕು, ಇವೆಲ್ಲವನ್ನು ಚೆನ್ನಾಗಿ ಪುಡಿ ಮಾಡಿರುವಂತಹ ರೀತಿಯಲ್ಲಿ ತೆಗೆದುಕೊಳ್ಳಿ ಇವೆಲ್ಲವನ್ನು ಬೆರಣಿಯ ಪುಡಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
ಲವಂಗವು ಆಂಟಿಫಂಗಲ್ ಮತ್ತು ಆಂಟಿವೈರಲ್ ಆಗಿ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಹಲ್ಲುನೋವು , ಕೆಮ್ಮು, ನೋಯುತ್ತಿರುವ ಒಸಡುಗಳು, ಅಜೀರ್ಣ, ಆಸ್ತಮಾ, ಬಾಯಿ ಹುಣ್ಣು ಮತ್ತು ಒತ್ತಡದಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಲವಂಗವನ್ನು ಬಳಸಲಾಗುತ್ತದೆ. ಲವಂಗವು ಯುಜೆನಾಲ್ ಎಂದು ಕರೆಯಲ್ಪಡುವ ಬಲವಾದ ಅರಿವಳಿಕೆಯನ್ನು ಹೊಂದಿರುತ್ತದೆ, ಇದು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಲವಂಗವು ಕುಳಿಗಳ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಟೂತ್‌ಪೇಸ್ಟ್ ಮತ್ತು ಮೌತ್‌ವಾಶ್‌ನಂತಹ ಮೌಖಿಕ ಉತ್ಪನ್ನಗಳಿಗೆ ಹೆಚ್ಚಾಗಿ ಸೇರಿಸಲಾಗುತ್ತದೆ.
ಹೆಚ್ಚುವರಿಯಾಗಿ, ದಂತವೈದ್ಯರು ಲವಂಗದ ಎಣ್ಣೆಯನ್ನು ಸತು ಆಕ್ಸೈಡ್‌ನೊಂದಿಗೆ ಬೆರೆಸಿ ಸೂಕ್ಷ್ಮ ಹಲ್ಲಿನ ನರಗಳನ್ನು ಶಾಂತಗೊಳಿಸಲು ತಾತ್ಕಾಲಿಕ ಭರ್ತಿಯನ್ನು ಸೃಷ್ಟಿಸುತ್ತಾರೆ. ಇನ್ನು ಇದರಲ್ಲಿ ಬಳಸುತ್ತಿರುವ ಹಸುವಿನ ಸಗಣಿಯ ಬೆರಣಿಯಲ್ಲಿ ಹಲ್ಲು ನೋವನ್ನು ತೊಲಗಿಸುವಂತಹ ಆಂಟಿ ಬ್ಯಾಕ್ಟೀರಿಯಗಳು ಯಥೇಚ್ಛವಾಗಿ ಕಂಡುಬರುತ್ತದೆ ಹಾಗಾಗಿ ಈ ಪುಡಿಯನ್ನು ಬಳಸುವುದರಿಂದ ನಮ್ಮ ಹಲ್ಲು ನೋವು ಬೇಗ ಕಡಿಮೆಯಾಗುತ್ತದೆ.
ಬೆಳಿಗ್ಗೆ ಹಲ್ಲು ಉಜ್ಜುವ ಸಮಯಕ್ಕೆ ಈ ಪುಡಿಯನ್ನು ಬಳಸಿ ಮಧ್ಯ ಬೆರಳಿನಲ್ಲಿ ಹಲ್ಲನ್ನು ಉಜ್ಜಬೇಕು ಇನ್ನು ಇದನ್ನು ಕುಕ್ಕರಗಾಲಲ್ಲಿ ಕುಳಿತಿರುವ ರೀತಿಯಲ್ಲಿ ಹಲ್ಲು ಉಜ್ಜಬೇಕು, ಆಗ ಹಲ್ಲಿನ ಸಮಸ್ಯೆಯೂ ಬರುವುದಿಲ್ಲ ಈಗಾಗಲೇ ಬಂದಿರುವವರಿಗು ಇದು ಉತ್ತಮವಾದ ಪರಿಹಾರ. ಇನ್ನೊಂದು ಮುಖ್ಯವಾದ ವಿಷಯವೆಂದರೆ ನಾವು ಪೇಸ್ಟ್ ಗಳನ್ನು ಬಳಸುವುದು ದೂರ ಮಾಡಬೇಕು ಏಕೆಂದರೆ ಇದರಲ್ಲಿ ಸಿಹಿ ಹಾಗೂ ಫ್ಲೋರೈಡ್ನ ಅಂಶವು ಯಥೇಚ್ಛವಾಗಿ ಇರುವ ಕಾರಣ ಹಲ್ಲುಗಳಿಗೆ ಆರೋಗ್ಯದ ವಿಷಯವಾಗಿ ತಪ್ಪು.
ಇನ್ನು ಇದರಿಂದ ಮೌತ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಹಾಗಾಗಿ ಆದಷ್ಟು ಟೂಥ್ ಪೇಸ್ಟ್ ಬಳಸುವುದನ್ನು ತಪ್ಪಿಸಬೇಕು. ಇನ್ನು ಹಲ್ಲು ನೋವು ಬಂದರೆ ಲವಂಗವನ್ನು ಪುಡಿ ಮಾಡಿ ಸಾಸಿವೆ ಎಣ್ಣೆಯ ಜೊತೆ ಬೆರಸಿ ನೋವು ಇದ್ದ ಹಲ್ಲಿನ ಮೇಲೆ ಕೆಲ ನಿಮಿಷಗಳ ಕಾಲದ ನಂತರ ಬೆಚ್ಚಗಿನ ನೀರಲ್ಲಿ ಬಾಯಿಯನ್ನು ಮುಕ್ಕಳಿಸುವುದು ಇದರಿಂದ ಹಲ್ಲು ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇವಿಷ್ಟು ಹಲ್ಲಿನ ನೋವಿಗಳಿಗೆ ಉತ್ತಮವಾದ ಸಲಹೆಯಾಗಿದೆ ಕೆಲವೊಂದು ನಿರಾಕರಿಸಬೇಕು ಇನ್ನು ಕೆಲವೊಂದು ಇಲ್ಲಿ ಪಾಲಿಸಬೇಕಾಗಿದೆ.