ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುತ್ತಿರುವ ಸಮಸ್ಯೆಯ ಎಂದರೆ ಅದು ಹೊಟ್ಟೆಯ ಬೊಜ್ಜಿನ ಸಮಸ್ಯೆ. ಇದು ಹೆಚ್ಚಿನ ಜನರಿಗೆ ಹೊಟ್ಟೆಯ ಸುತ್ತಲೂ ಸಹ ಬೊಜ್ಜು ಶೇಖರಣೆ ಆಗುತ್ತದೆ. ಹೀಗೆ ಶೇಖರಣೆಯಾದ ಆದಂತಹ ಬೊಜ್ಜಿನಿಂದ ಅವರ ಸೌಂದರ್ಯವು ಹಾಳಾಗುತ್ತದೆ. ಅಷ್ಟೇ ಅಲ್ಲದೆ ಅವರು ಇಷ್ಟ ಪಟ್ಟಂತಹ ಬಟ್ಟೆಗಳನ್ನು ಹಾಕಿಕೊಳ್ಳಲು ಸಹ ಮುಜುಗರಕ್ಕೆ ಹೀಡಾಗುತ್ತಾರೆ ಇಂತಹ ಸಮಯದಲ್ಲಿ ಏನೇ ಮಾಡಿದರೂ ಸಹ ಅವರ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ತುಂಬಾ ಜನರು ಬೊಜ್ಜನ್ನು ಕರಗಿಸಲು ಊಟವನ್ನು ಸಹ ಬಿಟ್ಟು ದಿನದಲ್ಲಿ ಕೇವಲ ಒಂದು ಅಥವಾ ಎರಡು ಟೈಮ್ ಮಾತ್ರ ಊಟವನ್ನು ಸೇವನೆ ಮಾಡುತ್ತಾ ಇರುತ್ತಾರೆ. ಆದರೂ ಹೊಟ್ಟೆಯ ಬೊಜ್ಜು ಕರಗುವುದಿಲ್ಲ. ನಮ್ಮ ದೇಹದಲ್ಲಿ ಇರುವಂತಹ ಬೊಜ್ಜು ಕೇವಲ ನಮ್ಮ ಸೌಂದರ್ಯವನ್ನು ಹಾಳು ಮಾಡುವುದು ಅಷ್ಟೇ ಅಲ್ಲದೆ ನಮ್ಮ ಆರೋಗ್ಯದ ಮೇಲೂ ಸಹ ಅನೇಕ ರೀತಿಯಾದಂತಹ ಕೆಟ್ಟ ಪರಿಣಾಮಗಳನ್ನು ಬಿಡುತ್ತಿರುತ್ತದೆ.
ಆದ್ದರಿಂದ ನಮ್ಮ ದೇಹದಲ್ಲಿ ಶೇಖರಣೆಯಾಗಿ ಇರುವಂತಹ ಬೊಜ್ಜನ್ನು ಕರಗಿಸಲು ನಾವಿಲ್ಲಿ ಒಂದು ಸುಲಭವಾದಂತಹ ಮನೆಮದ್ದನ್ನು ತಿಳಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಬಳಸುವಂತಹ ಎರಡು ಪದಾರ್ಥಗಳನ್ನು ಬಳಸಿಕೊಂಡು ನಾವು ಈ ಮನೆಮದ್ದನ್ನು ಬಳಸಿ, ಒಂದು ಡ್ರಿಂಕ್ ತಯಾರು ಮಾಡಿ ಅದನ್ನು ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯ ಬೊಜ್ಜು ಕೇವಲ ಮೂರೇ ದಿನದಲ್ಲಿ ಕರಗಿ ಹೋಗುತ್ತದೆ. ಇದಕ್ಕೆ ಬೇಕಾಗಿರುವಂತಹ ಎರಡು ಮುಖ್ಯ ಸಾಮಾಗ್ರಿಗಳು ಯಾವವೆಂದರೆ ಹಸಿಶುಂಠಿ, ಹಾಗೆಯೆ ನಿಂಬೆಹಣ್ಣು. ಮಾಡುವ ವಿಧಾನವನ್ನು ನೋಡುವುದಾದರೆ ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ನಂತರ ಒಂದು ಇಂಚಿನಷ್ಟು ಶುಂಠಿಯನ್ನು ಸಣ್ಣಗೆ ಕಟ್ ಮಾಡಿಕೊಂಡು ನೀರಿನಲ್ಲಿ ಅದನ್ನು ಸೇರಿಸಿ ನಂತರ ಒಂದು ಮಧ್ಯಮ ಗಾತ್ರದ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕಟ್ ಮಾಡಿ ನೀರಿನ ಒಳಗೆ ಹಾಕಿ ಸ್ಟವ್ ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು ಚೆನ್ನಾಗಿ ಕುದಿಸಿ ಕೊಳ್ಳಬೇಕು. ಇದನ್ನು ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಅಥವಾ ಎರಡು ಲೋಟ ನೀರು ಒಂದು ಲೋಟ ಆಗುವವರೆಗು ಕುದಿಸಿಕೊಳ್ಳಿ, ನಂತರ ಇದನ್ನು ಶೋಧಿಸಿಕೊಂಡು ನೀವು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕಾಗುತ್ತದೆ.
ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅತಿವೇಗವಾಗಿ ನಮ್ಮ ಹೊಟ್ಟೆಯಲ್ಲಿನ ಬೊಜ್ಜು ಕರಗಿ ಹೋಗುತ್ತದೆ. ಯಾರಿಗೆಲ್ಲ ಅಸಿಡಿಟಿ ಸಮಸ್ಯೆ ಇರುತ್ತದೆ ಅಂತಹವ ಈ ನೀರನ್ನು ರಾತ್ರಿ ಊಟದ ನಂತರ ಅರ್ಧ ಗಂಟೆಯ ಆದಮೇಲೆ ಸೇವನೆ ಮಾಡಬೇಕು. ಹೀಗೆ ನೀವು ವಾರದಲ್ಲಿ ಎರಡರಿಂದ ಮೂರು ದಿನ ಕುಡಿಯುತ್ತಾ ಬಂದರೆ ನಿಮ್ಮ ಹೊಟ್ಟೆಯ ಸುತ್ತ ಇರುವಂತಹ ಬೊಜ್ಜನ್ನು ಕರಗಿಸಿಕೊಳ್ಳಬಹುದು. ನಮ್ಮ ಹಿಂದಿನ ತಲೆಮಾರುಗಳನ್ನು ನೋಡುವುದಾದರೆ ಅವರಲ್ಲಿ ಮಧ್ಯಮ ವಯಸ್ಕರಲ್ಲಿ ಈ ಒಂದು ಬೊಜ್ಜಿನ ಸಮಸ್ಯೆ ಕಂಡು ಬರುತ್ತಿತ್ತು. ಕಾರಣ ಅವರು ಶ್ರಮವಹಿಸಿ ಜೀವನವನ್ನು ನಡೆಸುತ್ತಿದ್ದರು ಆದರೆ ವಯಸ್ಸಾದಂತೆ ಅವರು ಕೆಲಸವನ್ನು ಅಷ್ಟೊಂದು ಮಾಡಲು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ಅವರಿಗೆ ಸ್ವಲ್ಪ ಬೊಜ್ಜಿನ ಸಮಸ್ಯೆ ಕಂಡು ಬರುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಕರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಕಾರಣ ಅವರು ಸೇವಿಸುತ್ತಿರುವ ಆಹಾರ ಅಂದರೆ ಹೆಚ್ಚಾಗಿ ಹೊರಗಿನ ತಿಂಡಿಗಳಿಗೆ ಮಾರುಹೋಗುತ್ತಿದ್ದಾರೆ ಅಲ್ಲದೆ ದೇಹಕ್ಕೆ ಬೇಕಾದಂತಹ ಕ್ಯಾಲ್ಸಿಯಂ, ಪ್ರೋಟೀನ್, ಪೈಬರ್ ನಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡದೆ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ ಅವರ ಬೊಜ್ಜು ಹೆಚ್ಚಾಗುತ್ತಿದೆ. ಯಾರಿಗೆಲ್ಲ ತಮ್ಮ ದೇಹದ ಬೊಜ್ಜನ್ನು ಕರಗಿಸಬೇಕೆಂದು ಆಸೆ ಇದೆಯೋ ಅಂತಹವರು ನಿಮ್ಮ ಆಹಾರ ಪದಾರ್ಥವನ್ನು ಉತ್ತಮವಾಗಿ ಇಟ್ಟುಕೊಳ್ಳಿ. ಅಂದರೆ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಅತಿ ಹೆಚ್ಚಾಗಿ ನೀರನ್ನು ಕುಡಿಯಬೇಕು ಅಂದರೆ ದಿನದಲ್ಲಿ ನಾಲ್ಕರಿಂದ ಐದು ಲೀಟರ್ ಗಳಷ್ಟು ನೀರನ್ನಾದರೂ ನೀವು ಕುಡಿತ್ತಾ ಬಂದಿದ್ದಲ್ಲಿ ನಿಮಗೆ ಬೊಜ್ಜು ಕರಗಿಸಲು ಇದು ಸಹಾಯಕವಾಗುತ್ತದೆ. ನಾವು ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನಮ್ಮ ಡೈಜೆಸ್ಟಿವ್ ಸಿಸ್ಟಮ್ ಚೆನ್ನಾಗಿ ಆಗುತ್ತದೆ ಇದರಿಂದ ನಮ್ಮ ದೇಹದಲ್ಲಿ ಶೇಖರಣೆಯಾಗಿ ಇರುವಂತಹ ಬೊಜ್ಜು ಕ್ರಮೇಣವಾಗಿ ಕರಗುತ್ತದೆ.
ಹಾಗೆಯೆ ಅತಿ ಹೆಚ್ಚಾಗಿ ನಾರಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ನೀವು ಸೇವನೆ ಮಾಡಬೇಕು, ಫೈಬರ್ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹಾಗೆಯೇ ಡ್ರೈ ಫ್ರೂಟ್ಸ್, ಹಣ್ಣುಗಳು, ತರಕಾರಿಗಳು ಇನ್ನು ಇಂತಹ ಸೊಪ್ಪುಗಳು ಈ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಹಸಿರು ಸೊಪ್ಪು, ತರಕಾರಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಅಲ್ಲದೆ ನಿಮ್ಮ ತೂಕ ಇಳಿಕೆಗೆ ಸಹ ಇದು ಸಹಾಯಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀವು ಸ್ವೀಟ್ಸ್ ತಿನ್ನುವುದನ್ನು ಕಡಿಮೆ ಮಾಡಬೇಕು. ಸಕ್ಕರೆಯಿಂದ ಮಾಡಿರುವಂತಹ ಸ್ವೀಟ್ ಗಳು ಅಥವಾ ಇನ್ನಿತರ ಯಾವುದೇ ಪದಾರ್ಥಗಳು ಸಹ ನಮ್ಮ ದೇಹಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಇದು ಅಷ್ಟೇ ಅಲ್ಲದೆ ಇದು ಬೊಜ್ಜನ್ನು ಹೆಚ್ಚಿಸಲು ಸಹ ಕಾರಣವಾಗುತ್ತದೆ ಆದ್ದರಿಂದ ಸಕ್ಕರೆಯಿಂದ ದೂರ ಇರುವುದು ತುಂಬಾ ಒಳ್ಳೆಯದು.