ಇತ್ತೀಚಿನ ದಿನಗಳಲ್ಲಿ ಶುಗರ್ ಅಂದರೆ ಡಯಾಬಿಟಿಸ್ ಎನ್ನುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಅನೇಕ ಜನರಲ್ಲಿ ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 2019 ರ ಸರ್ವೆಯ ಪ್ರಕಾರ ಪ್ರಪಂಚದಲ್ಲಿ 463 ಮಿಲಿಯನ್ ನಷ್ಟು ಜನರಿಗೆ ಈ ಒಂದು ಶುಗರ್ ಕಾಯಿಲೆ ಎನ್ನುವಂತಹದ್ದು ಬಂದಿದೆಯೆಂದು ವರದಿಯನ್ನು ಮಾಡಲಾಗಿದೆ. ನಮ್ಮ ದೇಹದಲ್ಲಿ ಇರುವಂತಹ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹಾಗು ಗ್ಲೂಕೋಸ್ ಪ್ರಮಾಣ ಹೆಚ್ಚಾದರೆ ನಮಗೆ ಆ ಡಯಾಬಿಟಿಸ್ ಬಂದಿದೆ ಎಂದರ್ಥ. ನಮ್ಮ ದೇಹವು ಈ ಒಂದು ಸಕ್ಕರೆಯಂಶವನ್ನು ಬಳಸಿಕೊಳ್ಳಲಾಗದೆ ಅದನ್ನು ಕಿಡ್ನಿಗೆ ಕಳಿಸುತ್ತದೆ, ಕಿಡ್ನಿಯು ಅದನ್ನು ಹೊರಹಾಕುವಾಗ ನಮ್ಮ ದೇಹದಲ್ಲಿ ಇರುವಂತಹ ನೀರಿನಂಶವನ್ನು ಸಹ ಜೊತೆಯಲ್ಲಿ ಹೊರಗೆ ಹಾಕುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸುತ್ತದೆ ಹಾಗೆಯೇ ಹಲವಾರು ಜನರು ಹಲವು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಮಾಡುವುದಕ್ಕಿಂತ ಹೆಚ್ಚಾಗಿ ಡಯಾಬಿಟಿಸ್ ಇರುವವರು ಮೂತ್ರ ವಿಸರ್ಜನೆ ಮಾಡುತ್ತಾರೆ.
ಯಾರಿಗೆಲ್ಲ ಶುಗರ್ ಇರುತ್ತದೆಯೋ ಅಂತಹವರು ನೀರಿನ ದಾಹ ಹೆಚ್ಚಾಗಿ ಕಂಡುಬರುತ್ತದೆ. ಕಾರಣ ಅವರ ದೇಹದಿಂದ ಹೆಚ್ಚಿನ ನೀರು ಹೊರಹಾಕಲ್ಪಡುತ್ತದೆ ಆದ್ದರಿಂದ ಅವರಿಗೆ ಹೆಚ್ಚಿನ ಮಟ್ಟದಲ್ಲಿ ದಾಹ ಉಂಟಾಗುತ್ತದೆ. ಈ ಒಂದು ಶುಗರ್ ಇರುವಂತಹವರು ಕೆಲವರ ದೇಹದ ತೂಕ ಹೆಚ್ಚಾಗುತ್ತದೆ, ಆದರೆ ಇನ್ನು ಕೆಲವರಿಗೆ ದೇಹದ ತೂಕ ಕಡಿಮೆಯಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೆ ಇಂತಹವರಿಗೆ ಹಸಿವಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಬ್ಬರಿಗೆ ಚರ್ಮದ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತದೆ ಚರ್ಮ ಒಣಗುವುದು ಅಥವಾ ಚರ್ಮದಲ್ಲಿ ತುರಿಕೆ ಬರುವುದು ಹಾಗೆಯೇ ಅವರ ಕತ್ತಿನ ಸುತ್ತ ಕಪ್ಪಾಗುತ್ತದೆ.
ಹಾಗೆಯೆ ಕಂಕಳಿನ ಕೆಳಗಡೆ ಸಹ ಕಪ್ಪಾಗುವುದು ಈ ರೀತಿಯಾದಂತಹ ಕೆಲವೊಂದು ಸಮಸ್ಯೆಗಳನ್ನು ಡಯಾಬಿಟಿಸ್ ಅಂದರೆ ಶುಗರ್ ಇರುವಂತಹವರು ಅನುಭವಿಸುತ್ತಿರುತ್ತಾರೆ. ಅಲ್ಲದೆ ಡಯಾಬಿಟಿಸ್ ಇರುವವರಿಗೆ ದೇಹದ ಯಾವ ಭಾಗದಲ್ಲಾದರೂ ಗಾಯ ಉಂಟಾದರೆ ಅವರಿಗೆ ಬೇಗ ಗುಣವಾಗುವುದಿಲ್ಲ. ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವು ಹೆಚ್ಚಾಗಿರುವುದರಿಂದ ಗಾಯವಾದ ಜಾಗಕ್ಕೆ ಬೇಕಾದಂತಹ ರಕ್ತ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಇಂತಹವರಿಗೆ ಗಾಯಗಳು ಬೇಗ ಗುಣವಾಗುವುದಿಲ್ಲ. ಡಯಾಬಿಟಿಸ್ ಇರುವವರಿಗೆ ದೃಷ್ಟಿದೋಷ ಕಂಡುಬರುತ್ತದೆ ಅವರ ಕಣ್ಣು ಮಸುಕಾಗಿ ಕಾಣುತ್ತದೆ ಅಲ್ಲದೆ ಅವರ ದೇಹವು ಮರಗಟ್ಟಿದಂತೆ ಆಗುತ್ತದೆ ಮೈ ಜುಮ್ಮೆನಿಸುವ ರೀತಿಯಲ್ಲಿ ಆಗುತ್ತದೆ. ಇಷ್ಟೆಲ್ಲ ಸಮಸ್ಯೆಗಳನ್ನು ಡಯಾಬಿಟಿಸ್ ಪೇಷಂಟ್ ಗಳು ಅನುಭವಿಸುತ್ತಿರುತ್ತಾರೆ.
ಇಂತಹವರು ತಮ್ಮ ಜೀವನಶೈಲಿಯನ್ನು ಆದಷ್ಟು ಸರಿಯಾದ ಮಟ್ಟದಲ್ಲಿ ಇರಿಸಿಕೊಳ್ಳಬೇಕು ಅಂದರೆ ಇವರು ಸಕ್ಕರೆ ಅಂಶ ಇರುವ ಆಹಾರ ಪದಾರ್ಥಗಳನ್ನು ಕಡಿಮೆ ತಿನ್ನಬೇಕು. ಕೆಲವೊಂದು ಮನೆಮದ್ದುಗಳನ್ನು ಸಹ ಮಾಡಿಕೊಂಡು ಇವರು ತಮ್ಮ ಶುಗರ್ ಲೆವೆಲ್ ಅನ್ನು ಇಳಿಸಿಕೊಳ್ಳಬಹುದು. ನಾವು ಕೇವಲ ಮಾತ್ರೆಗಳನ್ನು ತೆಗೆದುಕೊಂಡರೆ ನಮ್ಮ ಶುಗರ್ ಲೆವೆಲ್ ಎನ್ನುವಂತಹದ್ದು ಕಡಿಮೆಯಾಗುವುದಿಲ್ಲ ಅದರ ಬದಲಾಗಿ ನಮ್ಮ ದೇಹದಲ್ಲಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವಂತಹ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಬೇಕು. ಅದಕ್ಕೆ ಮುಖ್ಯವಾದಂತಹ ಆಹಾರ ಪದಾರ್ಥ ಎಂದರೆ ಮೆಂತೆಕಾಳು ಇದರಲ್ಲಿ ಗ್ಯಾಲಿಟೋ ಮೆನನ್ ಎಂಬಂತಹ ನಾರಿನಂಶ ಇದ್ದು ನಮ್ಮ ದೇಹದ ರಕ್ತದಲ್ಲಿ ಇರುವಂತಹ ಗ್ಲೂಕೋಸ್ ಅಂಶವನ್ನು ಹೀರುವಂತಹ ಕೆಲಸ ಮಾಡುತ್ತದೆ ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
ನಾವಿಲ್ಲಿ ತಿಳಿಸುವಂತಹ ಮನೆಮದ್ದನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ 100 ಗ್ರಾಂ ನಷ್ಟು ಮೆಂತೆಕಾಳನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ, ಈ ಪೌಡರ್ ಅನ್ನು ನೀವು ಸ್ಟೋರ್ ಮಾಡಿ ಕೂಡ ಇಟ್ಕೆಳಗಡೆ ಳಬಹುದು. ನಂತರ 1 ಟೇಬಲ್ ಸ್ಪೂನ್ ಮೆಂತ್ಯೆ ಕಾಳಿನ ಪೌಡರ್ ಗೆ 2 ಟೇಬಲ್ ಸ್ಪೂನ್ ನಷ್ಟು ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಎರಡು ಗಂಟೆಗಳ ನಂತರ ನೀವು ಸೇವನೆ ಮಾಡಬೇಕು. ಹೀಗೆ ನೀವು ದಿನದಲ್ಲಿ ಒಂದು ಸಾರಿ ಇದನ್ನು ಸೇವನೆ ಮಾಡಬಹುದು ಅಥವಾ ದಿನಬಿಟ್ಟು ದಿನ ಸಹ ನೀವು ಇದನ್ನು ಸೇವನೆ ಮಾಡಬಹುದು. ಯಾರಿಗೆಲ್ಲ ಶುಗರ್ ಲೆವೆಲ್ ನಾರ್ಮಲ್ ಆಗಿರುತ್ತದೆಯೋ ಅಂತಹವರು ವಾರದಲ್ಲಿ ಒಂದು ದಿನ ಅಥವಾ ಎರಡು ದಿನಗಳು ಈ ಮೆಂತೆ ಮತ್ತು ಮೊಸರಿನ ಸೇವನೆಯನ್ನು ಮಾಡಬಹುದು.
ಯಾವುದೇ ಕಾರಣಕ್ಕು ಈ ಒಂದು ಮಿಶ್ರಣವನ್ನು ನೀವು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಇದರ ಸೇವನೆಯನ್ನು ಮಾಡಬಾರದು ಈ ಎರಡರ ಮಿಶ್ರಣವು ಸಹ ಸೇರಿ ಒಂದು ರೀತಿಯಾದಂತಹ ವಾಸನೆ ಉಂಟಾಗಿರುತ್ತದೆ ಆದ್ದರಿಂದ ನೀವು ಇದನ್ನು ತಯಾರಿಸಿದ ಎರಡು ಗಂಟೆಯ ಒಳಗೆ ಇದನ್ನು ಸೇವನೆ ಮಾಡಬೇಕು. ಹಾಗೆಯೇ ಯಾರಿಗೆಲ್ಲ ಮಲಬದ್ಧತೆಯ ಸಮಸ್ಯೆ ಇರುತ್ತದೆಯೋ ಅಂತಹವರು ಈ ಮೆಂತೆ ಕಾಳಿನ ಸೇವನೆಯನ್ನು ನಿಲ್ಲಿಸಬೇಕು ಈ ಮೆಂತ್ಯೆ ಕಾಳಿನಲ್ಲಿ ಹೊಟ್ಟೆಯನ್ನು ಗಟ್ಟಿಯಾಗಿಸುವಂತಹ ಅಂಶವಿದ್ದು ಅಂದರೆ ನಮಗೆ ಮೋಷನ್ ಹೋಗಲು ಇದು ಗಟ್ಟಿಯಾಗಿಸುತ್ತದೆ ಆದ್ದರಿಂದ ನಮಗೆ ಸರಿಯಾದ ರೀತಿಯಲ್ಲಿ ಮೋಷನ್ ಹೋಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮಲಬದ್ಧತೆ ಸಮಸ್ಯೆ ಇರುವವರು ಈ ಮೆಂತ್ಯ ಕಾಳಿನ ಸೇವನೆಯನ್ನು ನಿಲ್ಲಿಸಬೇಕು.