ಜಾಯಿಂಟ್ ಪೈನ್ ಅಥವಾ ಕೀಲು ನೋವಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಸಾಮಾನ್ಯವಾಗಿ ಎಲ್ಲರೂ ಸಹ ಈ ಒಂದು ಕೀಲು ನೋವನ್ನು ಅನುಭವಿಸುತ್ತಿದ್ದಾರೆ. ಮೊದಲೆಲ್ಲಾ ವಯಸ್ಸಾದ ನಂತರ ಜಾಯಿಂಟ್ ಪೈನ್ ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಗೂ ಸಹಾಯ ಈ ಒಂದು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಯಸ್ಸಾದ ನಂತರ ಸಾಮಾನ್ಯವಾಗಿ ಎಲ್ಲರಿಗೂ ಈ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ನಾನಾ ರೀತಿಯ ಕಾರಣಗಳನ್ನು ನಾವು ನೋಡುತ್ತೇವೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ನ ಕೊರತೆ ಇದ್ದರೆ ನಮಗೆ ಈ ಒಂದು ಸಮಸ್ಯೆ ಉಂಟಾಗುತ್ತದೆ. ನಾವು ಕ್ಯಾಲ್ಸಿಯಂ ವುಳ್ಳಂತಹ ಆಹಾರವನ್ನು ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ ಆದ್ದರಿಂದ ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು.
ಕ್ಯಾಲ್ಸಿಯಂ ರಿಚ್ ಆಗಿರುವಂತಹ ಪದಾರ್ಥಗಳನ್ನು ನಾವು ದಿನನಿತ್ಯದಲ್ಲಿ ಸೇವಿಸಬೇಕು ಉದಾಹರಣೆಗೆ ವಾಲ್ನಟ್, ಬಾದಾಮಿ, ಎಳ್ಳು ಮತ್ತೆ ರಾಗಿ ಈ ಒಂದು ವಾಲ್ನಟ್ ಅನ್ನು ನಾವು ದಿನದಲ್ಲಿ ಮೂರರಿಂದ ನಾಲ್ಕು ತಿನ್ನಬೇಕು ಈ ಒಂದು ಒಣ ವಾಲ್ನಟ್ ನಲ್ಲಿ ನಮ್ಮ ಮೂಳೆಗಳನ್ನು ಶಕ್ತಿಯುತವಾಗಿ ಮಾಡಿಸುವಂತಹ ಗಿಣವನ್ನು ಹೊಂದಿರುವುದರಿಂದ ಇದನ್ನು ನಾವು ದೈನಂದಿನ ವಾಗಿ ಸೇವನೆ ಮಾಡುತ್ತಾ ಬರಬೇಕು. ಹಾಗೆಯೇ ನಾಲ್ಕರಿಂದ ಐದು ಬಾದಾಮಿಯನ್ನು ರಾತ್ರಿ ನೆನೆಸಿ ಅದನ್ನು ಬೆಳಗ್ಗೆ ಎದ್ದು ಸಿಪ್ಪೆತೆಗೆದು ತಿನ್ನುವುದರಿಂದ ನಿಮಗೆ ಮೂಳೆಗಳನ್ನು ಶಕ್ತಿಯುತವಾಗಿ ಹಾಗೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ. ರಾಗಿ ಸಹ ಹೆಚ್ಚಿನ ಪೈಬರ್, ಕ್ಯಾಲ್ಸಿಯಂನಂತಹ ಗುಣಗಳನ್ನು ಹೊಂದಿರುವುದರಿಂದ ನಾವು ದೈನಂದಿನ ವಾಗಿ ರಾಗಿಯಿಂದ ಮಾಡಿದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಉದಾಹರಣೆಗೆ ರಾಗಿ ಮುದ್ದೆ, ರಾಗಿ ಗಂಜಿ, ರಾಗಿ ದೋಸೆ ಇನ್ನಿತರ ಹಲವಾರು ರೀತಿಯ ಆಹಾರ ಪದಾರ್ಥಗಳನ್ನು ಮಾಡಿ ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು.
ಹಾಗೆಯೇ ನಮ್ಮ ಹಾರದಲ್ಲಿ ಎಳ್ಳಿನ ಸೇವನೆಯನ್ನು ಸಹ ಮಾಡಬೇಕು ನಾವು ಮಾಡುವಂತಹ ಆಹಾರ ಪದಾರ್ಥಗಳಲ್ಲಿ ಎಳ್ಳಿನ ಮಿಶ್ರಣಮಾಡಿ ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಹಿಂದಿನ ಕಾಲದ ಜನರು ಹೆಚ್ಚಾಗಿ ರಾಗಿಯನ್ನು ಬಳಸುತ್ತಿದ್ದರು ತಮ್ಮ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ರಾಗಿ, ಗೋಧಿಯಂತಹ ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ನಿಂದ ಅಧಿಕವಾಗಿ ಇದ್ದಂತಹ ಧಾನ್ಯಗಳನ್ನು ಇವರು ಸೇವಿಸುತ್ತ ಬರುತ್ತಿದ್ದರು ಆದ್ದರಿಂದ ಇವರಿಗೆ ಎಷ್ಟೇ ವಯಸ್ಸಾದರ ಕೀಲು ನೋವಿನ ಸಮಸ್ಯೆ ಅಥವಾ ಮೂಳೆಗಳ ಸಮಸ್ಯೆ ಕಂಡು ಬರುತ್ತಾ ಇರಲಿಲ್ಲ. ಆದರೆ ನಾವು ಆಧುನಿಕ ವಾದಂತಹ ಜಗತ್ತಿನಲ್ಲಿ ನಮ್ಮ ಆಹಾರ ಪದ್ಧತಿಗಳು ಹಾನಿಕಾರಕವಾಗಿದೆ ಜಂಗ್ ಫುಡ್ ಹಾಗೆಯೇ ಬಾಯಿಗೆ ರುಚಿಯಾಗಿ ಇರುವಂತಹ ಪದಾರ್ಥಗಳನ್ನು ಸೇವನೆ ಮಾಡುತ್ತಾ ಇರುತ್ತೇವೆ ಇದರಿಂದ ನಮ್ಮ ದೇಹಕ್ಕೆ ಅನೇಕ ರೀತಿಯಾದಂತಹ ರೋಗಗಳು ಕಾಣಿಸಿಕೊಳ್ಳುತ್ತಿದೆ. ಹೌದು ನಾವು ಸೇವನೆ ಮಾಡುವಂತಹ ಆಹಾರದಲ್ಲಿಯೂ ಸಹ ನಮ್ಮ ಆರೋಗ್ಯ ಇರುತ್ತದೆ ಆದ್ದರಿಂದ ನಾವು ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.
ಆರೋಗ್ಯಯುತವಾದ ಆಹಾರವನ್ನು ಸೇವನೆ ಮಾಡಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ ನಮ್ಮ ಆರೋಗ್ಯ ಎನ್ನುವಂತಹದ್ದು ನಮ್ಮ ಕೈಯಲ್ಲಿ ಇರುತ್ತದೆ ಅಂದರೆ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬಹುದು. ನಾವು ಇಲ್ಲಿ ಮೇಲೆ ತಿಳಿಸಿದಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ರೂಡಿ ಮಾಡಿಕೊಂಡರೆ ನಿಮಗೆ ವಯಸ್ಸಾದರೂ ಸಹ ಯಾವುದೇ ರೀತಿಯಾದಂತಹ ಜಾಯಿಂಟ್ ಅಥವಾ ಕೀಲು ನೋವಿನ ಸಮಸ್ಯೆ ಕಂಡುಬರುವುದಿಲ್ಲ. ನಿಮಗೆ ಏನಾದರೂ ಜಾಯಿನ್ ಪೈನ್ ಇದ್ದಲ್ಲಿ ನಾವಿಲ್ಲಿ ತಿಳಿಸುವಂತಹ ಮನೆಮದ್ದನ್ನು ಉಪಯೋಗಿಸಿಕೊಳ್ಳಿ. ಈ ಮನೆಮದ್ದನ್ನು ತಯಾರಿಸಲು ಬೇಕಾಗಿರುವಂತಹ ಸಾಮಾಗ್ರಿಗಳು ಅರಿಶಿಣ ಪುಡಿ, ಉಪ್ಪು, ಹರಳೆಣ್ಣೆ ಈ ಮನೆ ಮದ್ದನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ನೋಡುವುದಾದರೆ ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಅರಿಶಿಣ ಪುಡಿ, ಅರ್ಧ ಟೇಬಲ್ ಸ್ಪೂನ್ ಉಪ್ಪು ಹಾಗೆ ಒಂದು ಟೇಬಲ್ ಸ್ಪೂನ್ ನಷ್ಟು ಹರಳೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಿಕ್ಸ್ ಮಾಡಿದ ನಂತರ ನಿಮಗೆ ಎಲ್ಲಿ ಕೀಲು ನೋವಿನ ಸಮಸ್ಯೆ ಕಂಡುಬರುತ್ತದೆ ಅಂತಹ ಜಾಗಕ್ಕೆ ಈ ಒಂದು ಮನೆಮದ್ದನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
ಮಸಾಜ್ ಮಾಡಿದ ನಂತರ ಒಂದು ಶುಚಿಯಾದ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ತವಾದ ಮೇಲೆ ಬಿಸಿಮಾಡಿಕೊಳ್ಳಿ ನೀವು ಮಸಾಜ್ ಮಾಡಿರುವಂತಹ ಸ್ಥಳಕ್ಕೆ ಬಟ್ಟೆಯಿಂದ ಶಾಖವನ್ನು ಕೊಟ್ಟು ಕೊಳ್ಳಿ ಅಥವಾ ಆ ಜಾಗಕ್ಕೆ ನೀವು ಆ ಬಟ್ಟೆಯನ್ನು ಕಟ್ಟಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮಗೆ ಇರುವಂತಹ ಜಾಯಿಂಟ್ ಪೈನ್ ಸಮಸ್ಯೆ ನಿವಾರಣೆಯಾಗುತ್ತದೆ. ಸಾಕಷ್ಟು ಜನರು ಜಾಯಿಂಟ್ ಪೈನ್ ಸಮಸ್ಯೆಯನ್ನು ಅನುಭವಿಸುತ್ತಿದ್ದು ಎದ್ದರೆ ಕೂರಲು ಆಗುವುದಿಲ್ಲ, ಕೂತರೆ ಏಳಲಾಗುವುದಿಲ್ಲ ಇಂತಹ ಸ್ಥಿತಿಯಲ್ಲಿ ಅವರು ಅನೇಕ ರೀತಿಯಾದಂತಹ ನೋವನ್ನು ಅನುಭವಿಸುತ್ತಿರುತ್ತಾರೆ. ಅಂತಹವರಿಗೆ ಮೇಲೆ ತಿಳಿಸಿದಂತಹ ಮಾರ್ಗವನ್ನು ಅನುಸರಿಸಿದಲ್ಲಿ ನೀವು ನಿಮ್ಮ ಸಮಸ್ಯೆಯಿಂದ ಅಥವಾ ಕೀಲು ನೋವಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಹಾಗೆಯೇ ಆರೋಗ್ಯಕರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.