ಜಾಯಿಂಟ್ ಪೇನ್ ಎನ್ನುವುದು ಒಂದು ವಯೋಸಹಜ ಕಾಯಿಲೆ ಆಗಿತ್ತು ಸಾಮಾನ್ಯವಾಗಿ ಮನುಷ್ಯನಿಗೆ ಹೆಚ್ಚು ವಯಸ್ಸಾದಾಗ ಅವನ ದೇಹದಲ್ಲಿ ಶಕ್ತಿ ಕಡಿಮೆಯಾಗಿ ಮೂಳೆಗಳು ದುರ್ಬಲವಾಗಿರುವುದರಿಂದ ಈ ರೀತಿ ನೋವುಗಳು ಕಾಣಿಸಿಕೊಳ್ಳುತ್ತದೆ. ಆದರೆ ಈಗಿನ ಕಾಲದಲ್ಲಿ ವಯಸ್ಸಾಗುವ ಮುಂಚೆ ಯುವಕರ ಯುವತಿಯರಲ್ಲೇ ಈ ಸಮಸ್ಯೆ ಕಾಡುತ್ತಿರುವುದು ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಈಗಿನ ಕಾಲದ ಜೀವನ ಪದ್ಧತಿ ಹಾಗೂ ಈಗಿನ ಕಾಲದ ಆಹಾರ ಪದಾರ್ಥಗಳಲ್ಲಿ ಪೋಷಕಾಂಶಗಳು ಇಲ್ಲದೆ ಎಲ್ಲವೂ ರಾಸಾಯನಿಕ ಭರಿತವಾಗಿರುವುದೇ ಎಲ್ಲಾತರದ ನೋವುಗಳಿಗೆ ಮೂಲ ಕಾರಣ ಎನ್ನಬಹುದು. ಹಾಗೂ ಮೊದಲೆಲ್ಲ ಗದ್ದೆ ಜಮೀನುಗಳಲ್ಲಿ ಜನರು ಕಷ್ಟಪಟ್ಟು ದುಡಿಯುತ್ತಿದ್ದರು ಹೀಗಾಗಿ ಅವರ ಮೂಳೆಗಳು ಗಟ್ಟಿಯಾಗಿ ಸದೃಢವಾಗಿರುತ್ತಿದ್ದವು. ಆದರೆ ಈಗಿನ ಕಾಲದಲ್ಲಿ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವವರು ಹೆಚ್ಚು ಮತ್ತು ಜನರು ಹೆಚ್ಚು ದೇಹ ಶ್ರಮ ಉಪಯೋಗಿಸಿ ಮಾಡುವ ಕೆಲಸಗಳನ್ನು ಮಾಡುತ್ತಿಲ್ಲ.
ಈ ಕಾರಣಗಳಿಂದಲೂ ವಯಸ್ಸಿಗೆ ಮುಂಚೆಯೇ ಈಗ ಎಲ್ಲರಲ್ಲೂ ಜಾಯಿಂಟ್ ಪೇನ್ ಸಹಜ ಖಾಯಿಲೆಯಾಗಿದೆ. ಈ ನೋವಿಗೆ ಆಸ್ಪತ್ರೆಗಳ ಔಷಧಿಗೆ ಮೊರೆ ಹೋಗುವುದು ಸಹ ಸರ್ವೇಸಾಮಾನ್ಯ. ಆದರೆ ಇದು ಕೆಲಕಾಲ ನೋವು ನಿವಾರಣೆಗಾಗಿ ಕೆಲಸ ಮಾಡಿ ನಂತರ ಮತ್ತೆ ಅದೇ ನೋವು ಎದುರಾಗುತ್ತದೆ. ಆದ್ದರಿಂದ ಇವುಗಳನ್ನು ಸಂಪೂರ್ಣವಾಗಿ ಮತ್ತೊಮ್ಮೆ ಬರೆದಂತೆಯೇ ಗುಣಪಡಿಸಿ ಕೊಳ್ಳವುದು ಒಳ್ಳೆಯದು. ಈ ರೀತಿ ಮಾಡಬೇಕು ಎಂದರೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಮನೆಮದ್ದುಗಳನ್ನು ಮಾಡಬೇಕು. ಈ ಜಾಯಿಂಟ್ ಪೇನ್ ಗೆ ರಾಮಬಾಣವಾಗಿ ಕೆಲಸ ಮಾಡುವುದು ನೀಲಗಿರಿ ಎಲೆಗಳು. ಸಾಮಾನ್ಯವಾಗಿ ಹೆಚ್ಚಾಗಿ ಮಂಡಿ ನೋವು, ಬೆನ್ನು ನೋವು, ಜಾಯಿಂಟ್ ಗಳಲ್ಲಿ ಊತ ಈ ರೀತಿ ಸಮಸ್ಯೆಗಳನ್ನು ಅನುಭವಿಸುವವರು ನೀಲಗಿರಿ ಎಣ್ಣೆಗಳಿಂದ ಮಸಾಜ್ ಮಾಡಿಕೊಳ್ಳುತ್ತಾರೆ. ಇದು ಕೂಡ ಒಳ್ಳೆಯದೇ ಆದರೆ ಇದಕ್ಕಿಂತಲೂ ಹೆಚ್ಚಾಗಿ ನೀಲಗಿರಿ ಎಲೆಗಳನ್ನು ಉಪಯೋಗಿಸಿಕೊಂಡು ಪರಿಣಾಮಕಾರಿಯಾದ ಔಷಧಿಗಳನ್ನು ತಯಾರಿಸಿಕೊಳ್ಳಬಹುದು.
ಅದು ಹೇಗೆಂದರೆ ನೀಲಗಿರಿ ಸೊಪ್ಪನ್ನು ಚೆನ್ನಾಗಿ ಅರೆದು ಪೇಸ್ಟನ್ನು ಜೈಂಟ್ ಪೆನ್ ಇರುವ ಕಡೆ ಲೇಪನ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಎಷ್ಟೇ ಹಳೆಯ ನೋವಿದ್ದರೂ ಕೂಡ ತಕ್ಷಣ ಪರಿಹಾರವಾಗುತ್ತದೆ. ಹಾಗೂ ನಾವು ಸ್ನಾನ ಮಾಡುವ ನೀರಿಗೆ ಸ್ವಲ್ಪ ನೀಲಗಿರಿ ಮರದ ಎಲೆಗಳನ್ನು ಹಾಕಿ ಬಿಸಿ ನೀರನ್ನು ಚೆನ್ನಾಗಿ ಕಾಯಿಸಿ ಸ್ನಾನ ಮಾಡುವುದರಿಂದ ಕೂಡ ದೇಹದ ಯಾವುದೇ ಮೂಳೆಗಳಲ್ಲಿ ನೋವಿದ್ದರೂ ಕೂಡ ಅದು ಕ್ರಮೇಣ ಸಂಪೂರ್ಣವಾಗಿ ಪರಿಹಾರವಾಗುತ್ತಾ ಬರುತ್ತದೆ. ಅಲ್ಲದೆ ಈ ನೀಲಗಿರಿ ಎಲೆಗಳಿಂದ ಇನ್ನೂ ಅನೇಕ ಉಪಯೋಗಗಳಿವೆ. ನೀಲಗಿರಿ ಎಲೆಯನ್ನು ಚೆನ್ನಾಗಿ ಅರೆದು ಹಲ್ಲು ನೋವು ಇರುವ ಕಡೆ ಹಲ್ಲಿಗೆ ಇಟ್ಟುಕೊಳ್ಳುವುದರಿಂದ ಹಲ್ಲು ನೋವಿನಿಂದ ತಕ್ಷಣ ಪರಿಹಾರ ಪಡೆಯಬಹುದು. ಯಾರಿಗಾದರೂ ವಿಪರೀತವಾಗಿ ತಲೆನೋವು ಕಾಡುತ್ತಿದ್ದರೆ ಈ ರೀತಿ ನೀಲಗಿರಿ ಎಲೆಗಳಿಂದ ಮಾಡಿದ ಪೇಸ್ಟನ್ನು ಅರೆದು ತಲೆಗೆ ಹಚ್ಚಿ ಮಸಾಜ್ ಮಾಡುತ್ತಿದ್ದರೆ ಖಂಡಿತವಾಗಿ ತಲೆನೋವು ವಾಸಿಯಾಗುತ್ತದೆ.
ಇದೇ ರೀತಿ ಎಲೆಗಳಿಂದ ಮಾಡಿದ ಪೇಸ್ಟನ್ನು ಒಂದು ಚಮಚ ತಿಂದು ಆ ನಂತರ ಬಿಸಿ ನೀರು ಕುಡಿಯುವುದರಿಂದ ಬಾಯಿಯ ದುರ್ವಾಸನೆ ಇರುವವರು ಆ ಸಮಸ್ಯೆಯಿಂದ ಪರಿಹಾರ ಕಂಡು ಕೊಳ್ಳಬಹುದು. ಇಷ್ಟೇ ಅಲ್ಲದೆ ಈ ಎಲೆಗಳಿಂದ ಕಷಾಯ ಕೂಡ ತಯಾರಿಸಿ ಕುಡಿಯಬಹುದು. ಅದು ಹೇಗೆಂದರೆ ಎರಡು ಲೋಟ ನೀರಿಗೆ ನಾಲ್ಕೈದು ನೀಲಗಿರಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅದು ಒಂದುವರೆ ಲೋಟದಷ್ಟು ನೀರು ಆಗುವವರೆಗೂ ಕುದಿಸಿ ನಂತರ ಸೋಸಿಕೊಂಡು ಆ ನೀರನ್ನು ಒಂದೊಂದೇ ಗುಟುಕಾಗಿ ಪೂರ್ತಿ ಕುಡಿದರೆ ಬಾಯಿಯ ದುರ್ವಾಸನೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಕುದಿಯುವ ನೀರಿಗೆ ಈ ನೀಲಗಿರಿ ಎಲೆಗಳನ್ನು ಹಾಕಿ ಅದರ ಸ್ಕೀಮನ್ನು ತೆಗೆದುಕೊಳ್ಳುವುದರಿಂದ ನೆಗಡಿ ಕೆಮ್ಮು ಶೀತ ತಲೆನೋವು ಈ ರೀತಿಯ ಎಲ್ಲ ಸಮಸ್ಯೆಗಳು ಕೂಡ ತಕ್ಷಣವೇ ಕಡಿಮೆಯಾಗುತ್ತವೆ. ಅಲ್ಲದೆ ನೀಲಗಿರಿ ವಾಸನೆಯು ತುಂಬಾ ಪಾಸಿಟಿವ್ ಎನರ್ಜಿಯನ್ನು ಕೊಡುತ್ತದೆ.
ಈ ಎಲೆಯ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಎಂತಹ ಕೆಟ್ಟ ಮೂಡ್ ಇದ್ದರೂ ಕೂಡ ಸರಿಯಾಗಿ ಮೈಂಡ್ ಫ್ರೆಶ್ ಆಗುತ್ತದೆ. ಅಷ್ಟೆಲ್ಲಾ ಒಳ್ಳೆಯ ಗುಣಗಳು ಈ ನೀಲಗಿರಿ ಮರದ ಎಲೆಗಳಿಗೆ ಇವೆ. ಈ ನೀಲಗಿರಿ ಮರದ ಎಲೆಗಳು ಮಾತ್ರವಲ್ಲದೆ ಚಕ್ಕೆ ಹೂವು ಕಾಯಿ ಇವೆಲ್ಲವೂ ಕೂಡ ಇದೇ ರೀತಿ ಸುವಾಸನೆಯಿಂದ ಕೂಡಿವೆ. ಬಿಸಿನೀರಿನಿಂದ ಸ್ಟೀಮ್ ತೆಗೆದುಕೊಳ್ಳುವಾಗ ಇವೆಲ್ಲವನ್ನು ಹಾಕಿ ಕೂಡ ಸ್ಟೀಮ್ ತೆಗೆದುಕೊಳ್ಳಬಹುದು. ಎಲೆಯಲ್ಲಿ ಇರುವಷ್ಟೇ ಸತ್ವವು ಮರದ ಎಲ್ಲಾ ಭಾಗಗಳಿಗೂ ಇದೆ. ಇಷ್ಟೆಲ್ಲ ಉತ್ತಮ ಆಯುರ್ವೇದಿಕ್ ಗುಣಗಳು ಈ ನೀಲಗಿರಿ ಮರದಲ್ಲಿ ಇರುವುದರಿಂದ ಈಗ ಮಾರುಕಟ್ಟೆಯಲ್ಲಿ ನೀಲಗಿರಿ ಎಣ್ಣೆ ಬಹಳ ಬೇಡಿಕೆ ಇದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ