ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವಂತಹ ಸ್ಟಾರ್ ನಟರುಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅವರು ಕೇವಲ ನಟರು ಮಾತ್ರವಲ್ಲದೇ ನಿರ್ದೇಶನ ಮತ್ತು ನಿರ್ಮಾಪಕರು ಕೂಡ ಹೌದು. ರಕ್ಷಿತ್ ಶೆಟ್ಟಿ ಅವರು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು ಎರಡು ವರ್ಷಗಳ ಕಾಲ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಕೂಡ ಮಾಡಿದ್ದಾರೆ ನಂತರದಲ್ಲಿ ನಟನೆಯ ಮೇಲೆ ಒಲವು ಉಂಟಾಗಿ ಇವರು ‘ನಮ್ಮ ಏರಿಯಾದಲ್ಲಿ ಒಂದು ದಿನ’ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ. ನಂತರದಲ್ಲಿ ಸಿಂಪಲ್ಲಾಗಿ ಒಂದು ಸ್ಟೋರಿ ಒಂದು ಲವ್ ಸ್ಟೋರಿ, ಉಳಿದವರು ಕಂಡಂತೆ ಈ ಸಿನಿಮಾಗಳಲ್ಲಿ ನಟಿಸಿ ಸ್ವಲ್ಪ ಮಟ್ಟದ ಮನ್ನಣೆಯನ್ನು ಪಡೆದುಕೊಳ್ಳುತ್ತಾರೆ.
ನಂತರದಲ್ಲಿ ಇವರಿಗೆ ಬ್ರೇಕ್ ಕೊಟ್ಟಂತಹ ಸಿನಿಮಾ ಎಂದರೆ ಅದು ‘ಕಿರಿಕ್ ಪಾರ್ಟಿ’ ಈ ಸಿನಿಮಾದ ಮೂಲಕ ನಟನಾಗಿ ಅಲ್ಲದೆ ನಿರ್ಮಾಪಕನಾಗಿಯೂ ಸಹ ಇವರಲ್ಲಿ ಇರುವಂತಹ ಪ್ರತಿಭೆ ಹೊರ ಬರುತ್ತದೆ. ಇವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಟ್ಟಂತಹ ಸಿನಿಮಾ 777 ಚಾರ್ಲಿ ಈ ಒಂದು ಸಿನಿಮಾದಲ್ಲಿ ಇವರ ನಟನ ಕೌಶಲ್ಯ ನೋಡುತ್ತಾ ಇದ್ದರೆ ಎಂತಹವರಿಗೂ ಸಹ ಇಷ್ಟವಾಗುತ್ತದೆ. ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು ಕಿರಿಕ್ ಪಾರ್ಟಿ ಚಿತ್ರದಲ್ಲಿ ಇವರ ಜೋಡಿಯನ್ನು ನೋಡಿದ ಅಭಿಮಾನಿಗಳು ಮೇಡ್ ಫಾರ್ ಈಚದರ್ ಎಂದು ಹೇಳಿದ್ದರು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಪರಿಚಯವಾದಂತಹ ರಶ್ಮಿಕಾ ಹಾಗೂ ರಕ್ಷಿತ್ ಇವರ ಸ್ನೇಹ ಪ್ರೀತಿಗೆ ತಿರುಗುತ್ತದೆ.
ಈ ಇಬ್ಬರು ಸಹ ಪ್ರೀತಿಸಿ ನಿಶ್ಚಿತಾರ್ಥವನ್ನು ಸಹ ಮಾಡಿಕೊಂಡಿರುತ್ತಾರೆ ಆದರೆ ನಿಶ್ಚಿತಾರ್ಥ ಕೆಲ ದಿನಗಳ ನಂತರ ಮುರಿದು ಬೀಳುತ್ತದೆ. ಈ ಜೋಡಿ ಒಟ್ಟಿಗೆ ಎಲ್ಲಿಯೂ ಸಹ ಕಾಣಿಸಿಕೊಂಡಿರಲಿಲ್ಲ. ಅಚ್ಚರಿಯನ್ನುವಂತೆ ಇಬ್ಬರು ರಕ್ಷಿತ್ ಶೆಟ್ಟಿ ಅವರ ಶ್ರೀಮನ್ನಾರಾಯಣ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಂತಹ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಒಳ್ಳೆಯ ಮಾತು ಕಥೆ ಇತ್ತು. ಒಳ್ಳೆಯ ಬಾಂಧವ್ಯ ಹೊಂದಿದ್ದರು ಶ್ರೀಮನ್ನಾರಾಯಣ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಂತಹ ಈ ಇಬ್ಬರನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದರು.
ನಂತರದಲ್ಲಿ ಇಬ್ಬರು ಸಹ ಒಂದು ಅವಾರ್ಡ್ ಫಂಕ್ಷನ್ ಭೇಟಿಯಾಗಿದ್ದರು ಹೌದು ಸೌತ್ ಇಂಡಿಯನ್ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದರು. ಕನ್ನಡದ ಬೆಸ್ಟ್ ನಟ ಕ್ರಿಟಿಕ್ಸ್ ನಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲಾಯಿತು, ಹಾಗೆಯೇ ರಶ್ಮಿಕಾ ಮಂದಣ್ಣ ಅವರಿಗರ ಕನ್ನಡದ ಬೆಸ್ಟ್ ನಟಿ ಕ್ರಿಟಿಕ್ಸ್ ನಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಇಬ್ಬರಿಗೂ ಸಹ ಒಂದೇ ವೇದಿಕೆಯಲ್ಲಿ ಒಂದೇ ತರಹನಾದ ಅವಾರ್ಡ್ ಸಿಕ್ಕಿರುವುದು ಆಶ್ಚರ್ಯ ವಿಷಯ ಇದಾದ ನಂತರ ಈ ಜೋಡಿ ಯಾವುದೇ ರೀತಿಯಾದಂತಹ ಮಾತುಕತೆ ಇಲ್ಲ. ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.