ಸರ್ಕಾರವು ಆಗಾಗ ವಾಹನಗಳ ಕಾಯ್ದೆ ನಿಯಮದಲ್ಲಿ ನಾನು ಮಾರ್ಪಾಡು ಮಾಡುತ್ತಿರುತ್ತದೆ. ಈ ಎಲ್ಲಾ ಕಾನೂನು ಹಾಗೂ ಕಾಯ್ದೆಗಳ ಉದ್ದೇಶ ಸಾರ್ವಜನಿಕ ಹಿತಾಸಕ್ತಿಯೇ ಆಗಿರುತ್ತದೆ. ಪರಿಸರ ಮಾಲಿನ್ಯ, ವಾಹನ ದಟ್ಟಣೆ, ಸಂಚಾರದಟ್ಟಣೆ ಇವುಗಳನ್ನು ಕಡಿಮೆ ಮಾಡುವುದು, ನೈಸರ್ಗಿಕ ಇಂಧನಗಳ ಕ್ಷೀಣತೆ ತಪ್ಪಿಸುವುದು ಮತ್ತು ಇನ್ನಿತರ ವಿಷಯಗಳ ಸಲುವಾಗಿ ಈಗಾಗಲೇ ಇಂತಹ ಹಲವಾರು ಕಾನೂನುಗಳು ಜಾರಿಗೊಳಿಸಿದೆ.
ಈಗ ಸರ್ಕಾರದ ಕಡೆಯಿಂದ ಮತ್ತೊಂದು ಅನೌನ್ಸ್ಮೆಂಟ್ ಆಗಿದ್ದು ಈ ಬಾರಿ ಅದು ಸೆಕೆಂಡ್ ಹ್ಯಾಂಡ್ ಬೈಕ್ ಹಾಗೂ ಕಾರು ಕೋಳ್ಳುವವರ ಜೇಬಿಗೆ ಕತ್ತರಿ ಹಾಕಲಿದೆ. ಸರ್ಕಾರ ಮಾಡಿರುವ ಈ ಹೊಸ ಕಾನೂನು ಏನು ಎಂದರೆ ಎಲ್ಲಾ ಹಳೆಯ ವಾಹನಗಳ ನೋಂದಣಿ ಮತ್ತು ಹಳೆಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಹಾಗಾಗಿ ನಿಮ್ಮ ಮನೆಯಲ್ಲಿ ಏನಾದರೂ ಹಳೆಯ ವಾಹನಗಳು ಇದ್ದರೆ ಅದು ಒಳ್ಳೆ ಸ್ಥಿತಿಯಲ್ಲೇ ಇದೆ ಎಂದು ನೀವು ಬದಲಿಸದೆ ಹಾಗೆ ಇಟ್ಟುಕೊಂಡಿದ್ದು ಅದನ್ನು ರೋಡಿಗೆ ತಂದರೆ ತೊಂದರೆ ಉಂಟಾಗಬಹುದು. ಇದರಿಂದ ನೀವು ಕಾನೂನು ತೊಡಕಿನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು ಅಥವಾ ದಂಡ ಹಾಕಿಸಿಕೊಳ್ಳಲು ಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ ಸಾರ್ವಜನಿಕ ವಲಯ ವಾಹನ ಸಂಸ್ಥೆಗಳ ಕುರಿತಂತೆ ಸರ್ಕಾರವು ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು ಈ ಕುರಿತು ಆದೇಶವನ್ನು ನೀಡಿದೆ.
ಹಾಗಾಗಿ ಇನ್ನು ಮುಂದೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ನಿಯಮದಡಿ ಕೆಲಸ ಮಾಡಲಿದೆ. ಅದರ ಮುಂದಿನ ಮೂರು ತಿಂಗಳವರೆಗೆ ಯಾವ ಸಮಸ್ಯೆ ಇಲ್ಲ ಯಾಕೆಂದರೆ ಈ ನಿಯಮವು ಏಪ್ರಿಲ್ 1, 2023ರ ನಂತರ ಜಾರಿಗೆ ಬರಲಿದೆ. ವಿಶೇಷ ಉದ್ದೇಶದ ವಾಹನಗಳಿಗೆ ಇದು ಅನ್ವಯಿಸುವುದಿಲ್ಲ ಎಂದೂ ತಿಳಿದು ಬಂದಿದೆ.
ಬಹು ದಿನಗಳ ಹಿಂದೆಯೇ ಅಂದರೆ 2021 ಹಾಗೂ 2022ರ ಬಜೆಟ್ ಘೋಷಣೆ ವೇಳೆಗೆ ಕೇಂದ್ರ ಸರ್ಕಾರವು ಒಂದು ನಿಯಮವನ್ನು ಘೋಷಣೆ ಮಾಡಿತ್ತು. ಅದರ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು 15 ವರ್ಷದ ನಂತರ ಫಿಟ್ನೆಸ್ ಟೆಸ್ಟ್ ಅಲ್ಲಿ ಕಡಾ ಖಂಡಿತವಾಗಿ ಭಾಗಿ ಆಗಬೇಕು, ಅದರ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದು ಹೇಳಿತ್ತು ಅಲ್ಲದೆ ತುಂಬಾ ಹಳೆಯದಾದ ವಾಹನಗಳ ನಿಷೇಧವನ್ನು ಕೂಡ ಸಾರಿತ್ತು.
ಈಗ ಆ ನಿಯಮ ಹಿಂದಿಗಿಂತಲೂ ಹೆಚ್ಚು ತೀಕ್ಷ್ಣವಾಗಿ ಜಾರಿಗೆ ಬರಲಿದೆ ಮತ್ತು ಇದರ ಜೊತೆಗೆ ವಿಶೇಷ ಆಫರ್ ಕೂಡ ಸರ್ಕಾರ ಕಡೆಯಿಂದ ಸಿಗುತ್ತಿದೆ. ಅದೇನೆಂದರೆ ಈಗ 15 ವರ್ಷದ ವಾಣಿಜ್ಯ ವಾಹನ, ಮತ್ತು 20 ವರ್ಷದ ಖಾಸಗಿ ವಾಹನಗಳ ನೋಂದಣಿ ಮತ್ತು ಸಂಚಾರ ರದ್ದಾಗಿರುವುದರಿಂದ ಅದನ್ನು ಕೊಟ್ಟು ಹೊಸ ವಾಹನ ಖರೀದಿಸುವ ಖರೀದಿದಾರರಿಗೆ ಶೇಕಡ 25% ರಷ್ಟು ತೆರಿಗೆಯನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ. ಇದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಕೂಡ ಅನ್ವಯ ಆಗಲಿದೆ.
ಈಗಾಗಲೇ ಸರ್ಕಾರ ಎಲ್ಲ ರಾಜ್ಯಗಳಿಗೂ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಏಪ್ರಿಲ್ ಒಂದರಿಂದ ಈಗಾಗಿರುವ ಕಾನೂನಿನ ಪ್ರಕಾರವೇ ವಾಹನಗಳು ರೋಡಿಗಿಳಿಯುವುದು. ಈಗ ಇರುವ ದರದ ಪ್ರಕಾರ ನೋಂದಣಿ ನವೀಕರಣಕ್ಕೆ 600 ವೆಚ್ಚ ಆಗುತ್ತಿದೆ, ಇದು ಮೂರು ತಿಂಗಳ ನಂತರ ಇದು 600ರಿಂದ ಐದು ಸಾವಿರಕ್ಕೆ ಏರುವ ಲಕ್ಷಣಗಳು ಕಾಣುತ್ತಿವೆ. ಸರ್ಕಾರದ ಎಲ್ಲಾ ನಿಯಮಗಳು ಕೂಡ ನಾಗರಿಕರಿಗಾಗಿಯೇ ಆಗಿದೆ ನಾವು ಅವರ ಉದ್ದೇಶವನ್ನು ಗೌರವಿಸಿ ಅದೇ ರೀತಿ ನಡೆದುಕೊಳ್ಳೋಣ.