ಹೊಸ ವರ್ಷದಿಂದ ನೂತನ ನಿಯಮ, ಸೈಟು ಮನೆ ಆಸ್ತಿ ಇರುವವರು ತಪ್ಪದೆ ನೋಡಲೇಬೇಕಾದ ಸುದ್ದಿ ಇದು.

 

ಸರ್ಕಾರವು ಜನಸ್ನೇಹಿ ಆಗಿದೆ ಹೀಗಾಗಿ ಈ ಕಾರಣದಿಂದ ಪ್ರತಿ ಬಾರಿ ಕೂಡ ಜನರ ಅನುಕೂಲಕ್ಕೆ ತಕ್ಕ ಹಾಗೆ ನಾನಾ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಈ ಹೊಸ ವರ್ಷದಿಂದ ಕಂದಾಯ ಇಲಾಖೆಯಲ್ಲಿ ಕೂಡ ಇಂತಹದೊಂದು ಬಾರಿ ನಿಯಮ ಬದಲಾಗಿದ್ದು ಇದರಿಂದ ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಅನುಕೂಲವಾಗಲಿದೆ. ಈಗಿನ ಕಾಲದಲ್ಲಿ ಆಸ್ತಿ ಖರೀದಿ ಮಾಡುವುದೇ ಕಷ್ಟ ಅದರ ಜೊತೆಗೆ ಖರೀದಿ ಆಗಿರುವ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದರೆ ತಿಂಗಳುಗಟ್ಟಲೇ ಕೆಲಸವನ್ನು ಬಿಟ್ಟು ಆಫೀಸ್ ಗಳಿಗೆ ಅಲೆಯ ಬೇಕಾಗಿತ್ತು.

ಇದುವರೆಗೆ ಕನಿಷ್ಠ 34 ದಿನಗಳಾದರು ಕನಿಷ್ಟ ಸಮಯ ಇದಕ್ಕಾಗಿ ಬೇಕಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರವು ಈಗ ಹೊಸ ವರ್ಷದಿಂದ ರೂಲ್ಸ್ ಒಂದನ್ನು ಜಾರಿಗೆ ತಂದಿದೆ. ಆಸ್ತಿ ಖರೀದಿದಾರರು ನೋಂದಣಿ ಮಾಡಿದ ಒಂದು ವಾರದ ಒಳಗಡೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಕಡ್ಡಾಯವಾಗಿ ಆಗಬೇಕು ಎನ್ನುವ ಹೊಸ ನಿಯಮವನ್ನು ಸರ್ಕಾರ ತಂದಿದೆ ಎಂದು ಸ್ವತಃ ಕಂದಾಯ ಸಚಿವರಾದ(Revenue minister) ಆರ್ ಅಶೋಕ್ ಅವರೇ ಘೋಷಿಸಿದ್ದಾರೆ.

ಇದರಿಂದ ಆಸ್ತಿ ಖರೀದಿಸುತ್ತಿದ್ದವರು ಅನುಭವಿಸುತ್ತಿದ್ದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಸುದ್ದಿಗಾರರ ಜೊತೆ ಮಾತನಾಡುತ್ತಾ ಇನ್ನಷ್ಟು ಕಂದಾಯ ಇಲಾಖೆಯಲ್ಲಿ ಆಗಿರುವ ಚರ್ಚೆಗಳ ವಿಚಾರವನ್ನು ಕೂಡ ಆರ್ ಅಶೋಕ್ ಅವರು ಹೇಳಿಕೊಂಡಿದ್ದಾರೆ. ಅದರಲ್ಲೂ ಲಕ್ಷಾಂತರ ಕಂದಾಯ ಅಧಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ ನಡೆಸಿತ್ತಿದೆ ಎನ್ನುವ ಬಗ್ಗೆ ಕೂಡ ಮಾತನಾಡಿದ್ದಾರೆ.

ರಾಜ್ಯದ ನಾನಾ ಭಾಗಗಳಲ್ಲಿ ಕಂದಾಯ ಜಾಗಗಳಲ್ಲಿ ಅನಧಿಕೃತ ನಿವೇಶನ ಮನೆ ಮತ್ತು ಆಸ್ತಿ ಆಗಿರುವ ಬಗ್ಗೆ ಆಗಾಗ ವಿಷಯ ಚರ್ಚೆ ಆಗುತ್ತದೆ. ಮಾಧ್ಯಮಗಳಲ್ಲಿ ಚುನಾವಣೆ ವಿಷಯ ಬಂದಾಗ ಅಷ್ಟೇ ಇವೆಲ್ಲ ಸುದ್ದಿಯಾದರು ನಂತರ ತಣ್ಣಗಾಗಿ ಹೋಗುತ್ತದೆ. ಆದರೆ ಈಗ ವಿಷಯಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವ ಬಗ್ಗೆ ಆರ್ ಅಶೋಕ್ ಅವರೇ ತಿಳಿಸಿದ್ದಾರೆ.

ಭೂ ಪರಿವರ್ತನೆ ವಿದಾಯಕ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನಾನಾ ಭಾಗಗಳಲ್ಲಿ ಈ ರೀತಿ ಕಂದಾಯ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಮನೆ ನಿವೇಶನ ಮತ್ತು ಆಸ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದವರಿಗೆ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ. ಭೂ ಪರಿವರ್ತನೆಯ ಪಾರದರ್ಶಕತೆಗಾಗಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಈ ನೂತನ ನಿಯಮವನ್ನು ಜಾರಿ ಮಾಡಲು ಯೋಚಿಸುತ್ತಿದೆ ಎಂದು ತಿಳಿಸಿದ್ದಾರೆ.

40 ಲಕ್ಷಕ್ಕೂ ಹೆಚ್ಚು ಆಸ್ತಿ ಅಕ್ರಮ ಮಾಡಲು ಸರ್ಕಾರ ಮಾತುಕತೆ ನಡೆಸುತ್ತಿದ್ದು ಈ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಸಕ್ರಮಕ್ಕು ಕೂಡ ಅಣುವು ಮಾಡಿ ಕೊಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆಯಂತೆ. ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟು ಕೃಷಿ ಭೂಮಿ ಮತ್ತು ಕೃತಿಯೇರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಸಕ್ರಮ ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರ ಇದನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ತಯಾರಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಎಲ್ಲ ವಿಚಾರಗಳ ಕುರಿತು ವಿದಾಯಕ ಮಂಡಿಸಲು ಸಿದ್ಧತೆ ನಡೆಯುತ್ತಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತಂದು ಸರ್ಕಾರ ಜನರಿಗೆ ಅನುಕೂಲ ಮಾಡುತ್ತಿದೆ ಎನ್ನುವುದನ್ನು ಆರ್. ಅಶೋಕ್ ಅವರು ಹೇಳಿಕೊಂಡಿದ್ದಾರೆ ಆದರೆ ಜನಸಾಮಾನ್ಯರು ಮಾತ್ರ ಇದು ಬಡವರ ಕೈಗೆ ದಕ್ಕುವುದಲ್ಲ ಸುಮ್ಮನೆ ಸರ್ಕಾರ ಬರೀ ಪ್ರಚಾರ ಮಾಡುತ್ತಿದೆ ಅಷ್ಟೇ ಇದು ಉಳ್ಳವರಿಗೆ, ಬಡವರಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಅಲ್ಲ ಎಂದು ಹೇಳುತ್ತಿದ್ದಾರೆ.

Leave a Comment

%d bloggers like this: