ಈ ಒಂದು ವಸ್ತು ಇದ್ದರೆ ಸಾಕು ಟಾಯ್ಲೆಟ್ ಗಳನ್ನು ಉಜ್ಜುವುದೇ ಬೇಡ, ಬ್ರಷನ್ನು ಬಳಸದೆ ಸ್ವಚ್ಛವಾಗಿ ಹೊಳೆಯುತ್ತದೆ. ಸ್ನೇಹಿತರೆ ಇಂದು ಮಹಿಳೆಯರಿಗೆ ಪ್ರಿಯವಾದ ವಿಷಯದೊಂದಿಗೆ ನಿಮ್ಮ ಮುಂದೆ ತಿಳಿಸಲು ಬಂದಿದ್ದೇವೆ ಹೌದು ಮಹಿಳೆಯರಿಗೆ ದಿನವೂ ಕಾಡುತ್ತಿರುವ ದೊಡ್ಡ ಸವಾಲು ಎಂದರೆ ಮನೆಯ ಸ್ವಚ್ಛತೆ. ಮನೆಯ ಎಲ್ಲಾ ಭಾಗಗಳಲ್ಲೂ ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಮಹಿಳೆಯರಿಗೆ ದೊಡ್ಡ ಕೆಲಸ ಅದರಲ್ಲೂ ಅಡುಗೆ ಕೋಣೆ ಹಾಗೂ ಸ್ನಾನ ಮಾಡುವ ಕೋಣೆಗಳನ್ನು ಸ್ವಚ್ಛ ಮಾಡುವುದು ಬಹಳ ಕಷ್ಟ ಅಂತಹ ಕಷ್ಟದ ಕೆಲಸವನ್ನು ಸುಲಭವನ್ನಾಗಿ ಮಾಡುವಂತಹ ಹೊಸ ವಿಷಯವನ್ನು ತಂದಿದ್ದೇವೆ.
ಹೌದು ಸ್ನೇಹಿತರೆ ದಿನವೂ ಟಾಯ್ಲೆಟಗಳನ್ನು ತಿಕ್ಕಿ ತಿಕ್ಕಿ ತೊಳೆಯುವುದು ಹಾಗೂ ಟೈಲ್ಸ್ ಗಳನ್ನು ತೊಳೆಯುವುದು ಕಷ್ಟವೇ ಸರಿ. ಇಂದು ಮನೆಯ ಸ್ವಚ್ಛತೆಗೆ ಬೇಕಾಗಿರುವಂತಹ ಒಂದು ಅದ್ಭುತವಾದ ಮ್ಯಾಜಿಕ್ ಬಾಂಬ್ ಅನ್ನು ತಯಾರಿಸಲು ಹೇಳಿಕೊಡುತ್ತಿದ್ದೇವೆ. ಈ ಒಂದು ಮಾಜಿಕ್ ಬಾಂಬ್ ಇದ್ದಾರೆ ಸಾಕು ಎಲ್ಲಾ ಮೂಲೆಗಳನ್ನು ಸುಲಭವಾಗಿ ಸ್ವಚ್ಛವಾಗುತ್ತದೆ. ಬಾತ್ರೂಮ್, ಟಾಯ್ಲೆಟ್, ಟಾಯ್ಲೆಟ್ ನ ಕಮೊಡ್, ಅಲ್ಲದೆ ಅಡುಗೆಮನೆಯ ವಸ್ತುಗಳು ಫ್ರಿಜ್ ಮಿಕ್ಸಿ ಗಳಲ್ಲಿ ಸ್ವಚ್ಛ ಮಾಡಬಹುದು.
ಇನ್ನು ಟಾಯ್ಲೆಟ್ ನ ಕಮೋಡ್ ಸ್ವಚ್ಛ ಮಾಡಲು ಬಹಳ ಕಷ್ಟವೇ ಅದರಲ್ಲೂ ಇದು ದುರ್ವಾಸನೆ ಭರಿತವಾಗಿರುವಂತಹ ಕಮೋಡನ್ನು ಸ್ವಚ್ಛ ಮಾಡುವುದು ದೊಡ್ಡ ಚಾಲೆಂಜ್ ಆಗಿರುತ್ತದೆ. ಇನ್ನು ಈ ಮ್ಯಾಜಿಕ್ ಬಾಂಬ್ ಅನ್ನು ಬಳಸುವುದರಿಂದ ಕಮೋಡ್ಗಳು ವಾಸನೆ ರಹಿತವಾಗಿ ಜೊತೆಗೆ ಪಳಪಳ ಎಂದು ಹೊಳೆಯುತ್ತದೆ. ಮತ್ತಿನ್ನೇಕೆ ತಡ ಬನ್ನಿ ಸ್ನೇಹಿತರೆ ಈ ಮ್ಯಾಜಿಕ್ ಬಾಂಬ್ ಅನ್ನು ಹೇಗೆ ತಯಾರಿಸುವುದು ಎಂದು ನೋಡೋಣ. ಮೊದಲಿಗೆ ಒಂದು ಬೌಲ್ ಗೆ ಒಂದು ಕಪ್ ನಷ್ಟು ಅಡುಗೆ ಸೋಡವನ್ನು ಹಾಕಬೇಕು ನಂತರ ಸಿಟ್ರಿಕ್ ಪೌಡರ್ ಅಥವಾ ಲೆಮನ್ ಸಾಲ್ಟ್ ಅನ್ನು ಹಾಕಬೇಕು.
ಲೆಮನ್ ಸಾಲ್ಟ್ ಎಲ್ಲಾ ದಿನಸಿ ಅಂಗಡಿಗಳಲ್ಲೂ 10-20 ಗಳಿಗೆ ದೊರೆಯುತ್ತದೆ ಇನ್ನು ಇವೆಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಒಂದು ದೊಡ್ಡ ಚಮಚದಲ್ಲಿ ಲಿಕ್ವಿಡ್ ವಾಶನ್ನು ಹಾಕಬೇಕು ನಿಮ್ಮ ಚಮಚ ಚಿಕ್ಕದಾದಲ್ಲಿ ಎರಡು ಚಮಚ ಹಾಕಿದರೆ ಸಾಕು ಇನ್ನು ಇದಕ್ಕೆ ಜಾಸ್ತಿ ಲಿಕ್ವಿಡ್ ವಾಶ್ ಹಾಕಿದರೆ ತೆಳ್ಳಗೆ ಆಗುತ್ತದೆ ಇದರಿಂದ ಬಾಮ್ಗಳು ಆಗುವುದಿಲ್ಲ ಹಾಗಾಗಿ ನೋಡಿಕೊಂಡು ಲಿಕ್ವಿಡ್ ವಾಶನ್ನು ಬಳಸಬೇಕು. ಇನ್ನು ಇದನ್ನು ಒಂದು ಐಸ್ ಟ್ರಾಯ್ ಗೊ ಅಥವಾ ಒಂದು ಪೇಪರ್ ಕಪ್ ಗೆ ಹಾಕಬೇಕು.
ಇನ್ನು ಇದನ್ನು ಫ್ರಿಜಿನಲ್ಲಿ ಇಟ್ಟರೆ ನೀರಾಗುತ್ತದೆ ಹಾಗಾಗಿ ಇದನ್ನು ಆಚೆಗೆ ನಾಲ್ಕರಿಂದ ಐದು ಗಂಟೆಯವರೆಗೂ ಇಟ್ಟು ನಂತರ ತೆಗಿಯಬೇಕು ಇದು ಮೊದಲು ಹಾಕಿದಾಗ ಸ್ವಲ್ಪ ಉಬ್ಬುತ್ತದೆ ಆದರೆ ಎದುರುವುದು ಬೇಡ ಅದು ಹಾಗೆ ಸೆಟ್ ಆಗುತ್ತದೆ. ಇದನ್ನು ನಂತರ ತೆಗೆದು ಒಂದು ಡಬ್ಬಕ್ಕೆ ಹಾಕಿ ಮೂರು ತಿಂಗಳವರೆಗೂ ಬಳಸಬಹುದು ಇದು ಮ್ಯಾಜಿಕ್ ಬೊಂಬನ್ನು ತಯಾರಿಸುವ ವಿಧಾನವಾದರೆ ಇನ್ನು ಇದನ್ನು ಹೇಗೆ ಬಳಸುವುದು ಎಂದು ನೋಡೋಣ. ಮೊದಲು ಇದನ್ನು ಒಂದು ಬೌಲ್ನಲ್ಲಿ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಒಂದು ಮ್ಯಾಜಿಕ್ ಬಾಂಬನ್ನು ಹಾಕಿ ಕರಗಿಸಿಕೊಳ್ಳಬೇಕು
ಈ ನೀರನ್ನು ಗ್ಯಾಸ್ ಸ್ಟವ್, ಮಿಕ್ಸಿ , ಫ್ರಿಡ್ಜ್ ಒರಿಸಲು ಬಳಸಬಹುದು. ಇನ್ನು ಟೈಲ್ಸ್ಗಳಲ್ಲಿ ಕಲೆಗಳು ಕಟ್ಟಿರುತ್ತದೆ ಅದನ್ನು ಸ್ವಚ್ಛ ಮಾಡಲು ಬೇರೆ ಬೇರೆ ವಾಶ್ಗಳನ್ನು ಬಳಸುವ ಬದಲು ಇದನ್ನು ಹಾಕಿ ಒಮ್ಮೆ ಸ್ಕ್ರಬ್ಬರ್ ಇಂದ ತೊಳೆದರೆ ಸಾಕು ಟೈಲ್ಸ್ಗಳು ಅದ್ಭುತವಾಗಿ ಸ್ವಚ್ಛವಾಗುತ್ತದೆ. ಇನ್ನು ಟಾಯ್ಲೆಟ್ ಗಳಲ್ಲಿ ಫ್ಲಶ್ ಟ್ಯಾಂಕ್ಗೆ ಈ ಮ್ಯಾಜಿಕ್ ಬಾಂಬನ್ನು ಹಾಕಿದರೆ ಪ್ರತಿಯೊಂದು ಫ್ಲಶ್ನಲ್ಲು ಫ್ರೆಶ್ ಆಗಿ ಸ್ವಚ್ಛವಾಗುತ್ತದೆ ಹೀಗೆ ವಾರಕ್ಕೆ ಎರಡು ಬಾರಿ ಮ್ಯಾಜಿಕ್ ಬಾಂಬ್ ಬಳಸಿದರೆ ಕಮೋಡ್ಗಳು ಸ್ವಚ್ಛವಾಗುತ್ತದೆ.