ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಹ’ಗ’ಲಿ ಇಂದಿಗೆ ಒಂದು ವರ್ಷಗಳು ಕಳೆಯುತ್ತಾ ಬಂದಿದೆ. ಮೊದಲನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಶಾಸ್ತ್ರೋತ್ರ ವಾಗಿ ಪೂಜೆಯನ್ನು ನೆರವೇರಿಸಿದ್ದಾರೆ ಹಾಗೆ ಅಪ್ಪು ಅವರಿಗೆ ಇಷ್ಟವಾದಂತಹ ತಿಂಡಿ ತಿನಿಸುಗಳನ್ನು ಇಟ್ಟು ದೊಡ್ಡ ಮನೆ ಕುಟುಂಬ ಸಮಾಧಿಯ ಮುಂದೆ ಪೂಜೆ ಮಾಡಿದ್ದಾರೆ ಅಪ್ಪು ಅವರ ಸಮಾಧಿಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ಆಗಮಿಸಿದ್ದು ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬಂದಂತಹ ಅಭಿಮಾನಿಗಳಿಗೆ ಉಪಹಾರ ಊಟ ನೀರಿನ ವ್ಯವಸ್ಥೆ ಸಹ ಏರ್ಪಡಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಕುಟುಂಬದವರು ಸಮಾಧಿಗೆ ಬಂದು ಸಮಾಧಿಯ ಬಳಿ ಪುನೀತ್ ಅವರಿಗೆ ಇಷ್ಟವಾಗುವಂತಹ ಎಲ್ಲ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಮಾಡಿ ದೊಡ್ಡ ಮನೆ ಕುಟುಂಬ ಈ ಒಂದು ಪೂಜೆಯಲ್ಲಿ ಭಾಗಿಯಾಗಿದ್ದರೂ ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದವರು ಅಪ್ಪು ಆಪ್ತರು ಸ್ನೇಹಿತರು ಪೂಜೆಯಲ್ಲಿ ಇದ್ದರು.
ಪುನೀತ್ ರಾಜ್ಕುಮಾರ್ ಅವರು ಗತಿಸಿ ಒಂದು ವರ್ಷವಾದರೂ ಕರುನಾಡಿನ ಜನತೆಗೆ ದುಃಖ ಕಣ್ಣೀರು ಮಾತ್ರ ಕಡಿಮೆಯಾಗಿಲ್ಲ ಕಳೆದ ಒಂದು ವರ್ಷದಿಂದ ಕಣ್ಣೀರಿನಲ್ಲಿಯೇ ಸಾಗುತ್ತಿದ್ದಾರೆ. ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸ ಕಾರ್ಯಗಳಿಂದ ಪುನೀತ್ ಜನರಿಗೆ ಹತ್ತಿರವಾದರೂ ಅವರ ಪುಣ್ಯ ಸ್ಮರಣೆ ಅಂಗವಾಗಿ ರಾಜ್ಯದ ವಿವಿಧ ಕಡೆ ಅನ್ನದಾನ ರಕ್ತದಾನ ಏರ್ಪಡಿಸಲಾಗಿದೆ ಇನ್ನೂ ಚಿತ್ರರಂಗದ ಅನೇಕ ಸ್ಟಾರ್ ನಟರುಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅದರಲ್ಲಿ ನಮ್ಮ ನಿಮ್ಮೆಲ್ಲರ ದರ್ಶನ್ ಡಿ ಬಾಸ್ ಸಹ ಅವರ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ.
ಹೌದು ಪುನೀತ್ ರಾಜ್ಕುಮಾರ್ ಅವರ ಆಪ್ತ ಸ್ನೇಹಿತರಾದ ದರ್ಶನ್ ಅವರು ಇಂದು ಪತ್ನಿಯ ಜೊತೆ ಪೂಜೆ ಸಲ್ಲಿಸಿ ಭಾವುಕರಾಗಿದ್ದಾರೆ ಯಾರು ಏನೇ ಹೇಳಿದರೂ ನನ್ನ ಮನಸ್ಸಿನಲ್ಲಿ ಜೀವಂತ ನಿನ್ನ ನಗು ಮರೆಯಲು ಸಾಧ್ಯವಿಲ್ಲ ನಮ್ಮ ಮನೆ ಮನದಲ್ಲೂ ಯಾವಾಗಲೂ ಶಾಶ್ವತವಾಗಿ ಇರುತ್ತೀರ ಎಂದು ಭಾವುಕರಾಗಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಹ ಪೂಜೆ ಸಲ್ಲಿಸಿ ಕಣ್ಣೀರನ್ನು ಹಾಕಿ ಭಾವುಕರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಮೊದಲನೇ ಪುಣ್ಯ ಸ್ಮರಣೆಯ ಸಲುವಾಗಿ ನೆನ್ನ ರಾತ್ರಿಯಿಂದ ಅಪ್ಪು ಸಮಾಧಿಯ ಬಳಿ ವಿಶೇಷವಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಜನಸಾಗರವೇ ಅಪ್ಪು ಸಮಾಧಿಗೆ ಹರಿದಿ ಬರುತ್ತಿದೆ ವಿಶೇಷವಾದಂತಹ ಪುಷ್ಪಲಂಕಾರವನ್ನು ಸಮಾಧಿಗೆ ಮಾಡಲಾಗಿದೆ ಅಷ್ಟೇ ಅಲ್ಲದೆ ಹಸಿರು ಶ್ವೇತಾಂಬರಿ ಹೂಗಳಿಂದ ಸಿಂಗಾರವಾಗಿದೆ.
ಅಷ್ಟೇ ಅಲ್ಲದೆ 24 ಗಂಟೆಗಳ ಸಂಗೀತ ನಮನವನ್ನು ಸಹ ಏರ್ಪಡಿಸಲಾಗಿದ್ದು ಈ ಒಂದು ಸಂಗೀತ ನಮನದಲ್ಲಿ ಶಿವರಾಜ್ ಕುಮಾರ್ ಹಾಗೆ ರಾಘವೇಂದ್ರ ರಾಜ್ಕುಮಾರ್ ಅವರು ಸಹ ಹಾಡನ್ನು ಹಾಡಿ ನಮನವನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ ಅಷ್ಟೇ ಅಪ್ಪು ಅವರ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿದ್ದು ಈ ಒಂದು ಚಿತ್ರಕ್ಕೆ ಸಾಕಷ್ಟು ಜನ ಮನ್ನಣೆ ಸಿಕ್ಕಿದೆ ಹಾಗೆ ಪ್ರತಿಯೊಬ್ಬರೂ ಈ ಒಂದು ಸಿನಿಮಾವನ್ನು ನೋಡಲೇಬೇಕು ಎನ್ನುವಂತಹ ಹಂಬಲವನ್ನು ಇಟ್ಟುಕೊಂಡಿದ್ದಾರೆ. ಚಿತ್ರವನ್ನು ನೋಡಿದಂತಹ ಸಾಕಷ್ಟು ಜನರು ಕಣ್ಣೀರನ್ನು ಹರಿಸಿ ಭಾವುಕರಾಗಿದ್ದಾರೆ ಈ ಚಿತ್ರದಲ್ಲಿ ಅಪ್ಪು ಅವರನ್ನು ಕಣ್ತುಂಬಿಕೊಂಡಿದ್ದಾರೆ. ನೀವು ಸಹ ಅಪ್ಪು ಅವರನ್ನು ಮರೆಯಲು ಸಾಧ್ಯವಿಲ್ಲದಿದ್ದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.