ಸ್ನೇಹಿತರೆ ಮಳೆಗಾಲವಿರಲಿ, ಚಳಿಗಾಲವಿರಲಿ ನಮ್ಮ ಬಾಯಿಗೆ ಇಷ್ಟ ಆಗುವ ಅಡಿಗೆ ಎಂದರೆ ಅದು ಪಕೋಡ. ಹೌದು ಅದರಲ್ಲೂ ನಮ್ಮ ಭಾರತೀಯ ಜನರು ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ಪಕೋಡ ಮಾಡುವುದು ಹೇಗೆ ಇನ್ನು ಈ ಪಕೋಡ ಗರಿಗರಿಯಾಗಿ ಮಾಡುವುದು ಹೇಗೆ? ಆರಿದ ನಂತರವೂ ತುಂಬಾ ರುಚಿಯಾಗಿ ಗರಿಗರಿಯಾಗಿ ಇರುತ್ತದೆ ಇನ್ನು ಈ ಪಕೋಡ ಮಾಡಲು ಯಾವ ಯಾವ ಪದಾರ್ಥಗಳನ್ನು ಎಷ್ಟು ಹಾಕಬೇಕು, ಯಾವ ಯಾವ ಸಮಯದಲ್ಲಿ ಹಾಕಬೇಕು ಎಂದು ನೋಡೋಣ.
ಮೊದಲಿಗೆ ಎರಡು ಈರುಳ್ಳಿಯನ್ನು ಸಿಪ್ಪೆಯನ್ನು ತೆಗೆದು ಇಟ್ಟುಕೊಳ್ಳಬೇಕು ನಂತರ ನೀರಿನಲ್ಲಿ ತೊಳೆದು ಉದ್ದವಾಗಿ ಹಚ್ಚಬೇಕು. ಇದನ್ನು ಸಣ್ಣ ಸಣ್ಣದಾಗಿ ಹಚ್ಚುವುದು ಬೇಡ. ತೆಳ್ಳಗೆ ಉದ್ದಕ್ಕೆ ಹಚ್ಚಿ ನಮ್ಮ ಅವಶ್ಯಕತೆ ಎಷ್ಟು ಬೇಕೋ ಅಷ್ಟು ಈರುಳ್ಳಿಯನ್ನು ಪ್ರಮಾಣವನ್ನು ಹೆಚ್ಚಿಸಬಹುದು. ಈರುಳ್ಳಿಯ ದಪ್ಪ ಎಷ್ಟು ತೆಳ್ಳಗೆ ಇರುತ್ತದೋ ಅಷ್ಟು ಗರಿಗರಿಯಾಗಿ ಇರುತ್ತದೆ. ನಂತರ ಹಚ್ಚಿರುವಂತಹ ಈರುಳ್ಳಿಯನ್ನು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು ನಂತರ ಅದಕ್ಕೆ ಮೂರು ಸಣ್ಣ ಸಣ್ಣ ಹಸಿಮೆಣಸಿನ ಕಾಯಿಯನ್ನು ಸಣ್ಣಕ್ಕೆ ಹಚ್ಚಿ ಮಿಶ್ರಣ ಮಾಡಬೇಕು ಕಾರ ಹೆಚ್ಚಾಗಿ ತಿನ್ನುವವರು ಇನ್ನು ಸ್ವಲ್ಪ ಸೇರಿಸಿಕೊಳ್ಳಬಹುದು.
ಎರಡು ಚಮಚದಷ್ಟು ಸಣ್ಣ ಸಣ್ಣದಾಗಿ ಹಚ್ಚಿರುವಂತಹ ಕೊತ್ತಂಬರಿ ಸೊಪ್ಪು ಹಾಗೂ ಒಂದು ಟೇಬಲ್ ಚಮಚದಷ್ಟು ಹಚ್ಚಿರುವಂಥ ಕರಿಬೇವು, ಸ್ವಲ್ಪ ಓಂ ಕಾಳು. ಓಂ ಕಾಳು ಗಂಧವನ್ನು ಹೆಚ್ಚಿಸಿ ರುಚಿಯನ್ನು ಕೂಡ ಹೆಚ್ಚು ಮಾಡುತ್ತದೆ. ಈ ಓಂ ಕಾಳನ್ನು ಕೈನಲ್ಲಿ ಒಡೆದು ಪುಡಿ ಪುಡಿ ಮಾಡಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈರುಳ್ಳಿಯನ್ನು ಬಿಡಿ ಬಿಡಿಯಾಗುವಂತೆ ಮಾಡಬೇಕು. ಒಂದು ಸ್ಪೂನ್ ಅಚ್ಚ ಕಾರದ ಪುಡಿ, ಅರ್ಧ ಸ್ಪೂನ್ ಉಪ್ಪನ್ನು ಹಾಕಿಕೊಳ್ಳಬೇಕು, ಅರ್ಧ ಸ್ಪೂನಿನಷ್ಟೂ ಧನ್ಯ ಪುಡಿಯನ್ನು ಹಾಕಬೇಕು, ಹಾಗೂ ಕಾಲು ಚಮಚ ಜೀರಿಗೆ ಪುಡಿ ಹಾಕಬೇಕು.
ನಂತರ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಮಿಶ್ರಣವನ್ನು ಮಾಡಿದಾಗ ಈರುಳ್ಳಿಯು ಸ್ವಲ್ಪ ಮೆತ್ತಗೆ ಆಗುತ್ತದೆ. ಈ ರೀತಿ ಎರಡಂತ ಮೂರು ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಕೈಯಲ್ಲಿ ಮಾಡಿದರೆ ಈರುಳ್ಳಿಯಲ್ಲಿರುವಂತಹ ನೀರಿನ ಅಂಶವು ಬಿಟ್ಟುಕೊಳ್ಳುತ್ತದೆ ಈಗ ಅದಕ್ಕೆ ಒಂದು ಕಪ್ಪಿನಷ್ಟು ಕಡಲೆ ಹಿಟ್ಟನ್ನು ಹಾಕಿಕೊಳ್ಳುತ್ತಿದ್ದೇವೆ. ಅದಕ್ಕೆ ಕಾಲು ಕಪ್ ನಷ್ಟು ಅಕ್ಕಿ ಹಿಟ್ಟನ್ನು ಹಾಕಬೇಕು. ನಂತರ ಕಾಲ್ ಟೀ ಸ್ಪೂನ್ ನಷ್ಟು ಅಡುಗೆ ಸೋಡವನ್ನು ಹಾಕಿ ಕೈಯಲ್ಲಿ ಮಿಶ್ರಣ ಮಾಡಬೇಕು.
ಮಿಶ್ರಣವನ್ನು ಮಾಡಬೇಕಾದರೆ ಯಾವುದು ತರಹದ ನೀರನ್ನು ಹಾಕಬಾರದು ಒಂದೆರಡು ನಿಮಿಷಗಳ ಕಾಲ ಹಾಗೆ ಕೈನಲ್ಲಿ ಮಿಶ್ರಣ ಮಾಡುವುದರಿಂದ ಈರುಳ್ಳಿಯಲ್ಲಿ ಇರುವಂತಹ ನೀರಿನ ಅಂಶವನ್ನು ಬಿಟ್ಟುಕೊಂಡು ಹಾಕಿರುವ ಕಡಲೆ ಹಿಟ್ಟು ಹಾಗೂ ಅಕ್ಕಿ ಹಿಟ್ಟನ್ನು ಮೆತ್ತಗೆ ಮಾಡುತ್ತದೆ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು ಈಗಾಗಲೇ ನಾವು ಉಪ್ಪನ್ನು ಈ ಮೊದಲೇ ಸೇರಿಸುವುದರಿಂದ ಸ್ವಲ್ಪ ಉಪ್ಪನ್ನು ಹಾಕಿದರೆ ಸಾಕು ಇನ್ನು ಅದಕ್ಕೆ ಉರಿದು ಪುಡಿ ಮಾಡಿರುವಂತಹ ಕಡಲೆ ಬೀಜವನ್ನು ಹಾಕಿ ಮಿಶ್ರಣ ಮಾಡುವುದರಿಂದ ವಿಶೇಷವಾದ ರುಚಿಯನ್ನು ಈ ಅಡುಗೆ ನೀಡುತ್ತದೆ.
ನೀರನ್ನು ಹಾಕದೆ ಈರುಳ್ಳಿಯನ್ನು ಮಾಡುವುದರಿಂದ ಹೆಚ್ಚು ಗರಿಗರಿಯಾಗಿ ಬರುತ್ತದೆ, ಇದರೊಂದಿಗೆ ಎಣ್ಣೆಯನ್ನು ಕೂಡ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಇನ್ನು ಈ ಮಿಶ್ರಣವನ್ನು ಕಾದಿರುವ ಎಣ್ಣೆಗೆ ನಿಧಾನವಾಗಿ ತೆಳ್ಳಗೆ ಹಾಕಬೇಕು ಇದನ್ನು ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಎಣ್ಣೆಯಲ್ಲಿ ಬೇಯಿಸಬೇಕು, ತೆಳ್ಳಗೆ ಹಾಕುವುದರಿಂದ ಪಕೋಡವು ಹೆಚ್ಚು ಗರಿಗರಿಯಾಗಿ ಇರುತ್ತದೆ. ಇವೆಲ್ಲ ಆದ ನಂತರ ಹಸಿ ಕರಿಬೇವನ್ನು ತೊಳೆದು ಬಟ್ಟೆಯಲ್ಲಿ ಒರೆಸಿ ಎಣ್ಣೆಯಲ್ಲಿ ಕರೆದು ಪಕೋಡಗಳ ಮೇಲೆ ಹಾಕಬೇಕು ಈಗ ಮನೆಯಲ್ಲಿ ತಾಯಾರಿಸಬಹುದಾಗಿದೆ.