ಡಾರ್ಕ್ ಸರ್ಕಲ್ಸ್ ಗಳನ್ನು ದೂರ ಮಾಡಲು ಇಲ್ಲಿವೆ ಸರಳವಾದ ಮನೆಮದ್ದುಗಳು.
ಸಾಮಾನ್ಯವಾಗಿ ಎಲ್ಲಾ ಜನರಲ್ಲಿ ಕಾಡುವಂತಹ ಸಮಸ್ಯೆ ಎಂದರೆ ಡಾರ್ಕ್ ಸರ್ಕಲ್. ಕಣ್ಣಿನ ಸುತ್ತ ಇರುವ ಕಪ್ಪು ಭಾಗವನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತೇವೆ. ಹೈಪರ್ಪಿಗ್ಮೆಂಟೇಶನ್‌ಗೆ ಕಾರಣವಾಗುವ ಸಂಕುಚಿತ ರಕ್ತನಾಳಗಳಿಂದ ಅಥವಾ ಕಣ್ಣುಗಳ ಸುತ್ತಲಿನ ಚರ್ಮವು ತೆಳುವಾಗುವುದರಿಂದ ಕಣ್ಣುಗಳ ಕೆಳಗಿರುವ ಪ್ರದೇಶವು ಗಾಢವಾಗಿ ಕಾಣಿಸಬಹುದು. ಆಯಾಸ ಮತ್ತು ನಿದ್ರೆಯ ಕೊರತೆಯಿಂದಾಗಿ ಕಪ್ಪು ವೃತ್ತಗಳು ಉಂಟಾಗುತ್ತವೆ ಎಂದು ಜನರು ಭಾವಿಸುತ್ತಾರೆ.
ಇದು ಒಂದು ಕಾರಣವಾಗಿದ್ದರೂ ಸಹ, ಅಲರ್ಜಿಗಳು ಅಥವಾ ನೈಸರ್ಗಿಕ ವಯಸ್ಸಾದ ಪ್ರಕ್ರಿಯೆಯಂತಹ ಕಣ್ಣಿನ ಕೆಳಗೆ ಕಪ್ಪು ವಲಯಗಳಿಗೆ ಇತರ ಕಾರಣಗಳಿವೆ. ಇಂದು ನಾವು ಹೇಳುವ ಮನೆ ಮದ್ದುಗಳನ್ನು ನೀವು ಮಾಡಿದರೆ ಕಪ್ಪು ಕಲೆಗಳನ್ನು ಶಾಶ್ವತವಾಗಿ ದೂರ ಮಾಡಬಹುದು. ಈ ಮನೆಮದ್ದುಗಳನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಮಾಡಲಾಗಿದೆ.
ಇನ್ನು ಮದಲನೆಯ ಮನೆ ಮದ್ದು ಎಂದರೆ ಆಲುಗಡ್ಡೆ ಹಾಗೂ ಹರಿಶಿನ, ಇದನ್ನು ಹೇಗೆ ಬಳಸುವುದು ಎಂದರೆ ಆಲೂಗಡ್ಡೆಯ ಜ್ಯೂಸನ್ನು ಅರಿಶಿನಕ್ಕೆ ಬೆರೆಸಿ ಕಣ್ಣಿನ ಸುತ್ತ ಹಚ್ಚಬೇಕು ಇದನ್ನು ರಾತ್ರಿ ಮಲಗುವ ಮುನ್ನ ಮಾಡಿ ಬೆಳಗ್ಗೆ ಎದ್ದು ತೊಳೆದುಕೊಂಡರೆ ಕ್ರಮೇಣವಾಗಿ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಕಡಿಮೆ ಮಾಡಬಹುದು.
ಇನ್ನು ಎರಡನೆಯದಾಗಿ ಗ್ರೀನ್ ಟೀ ಬ್ಯಾಗ್, ಹೌದು ಉತ್ಕರ್ಷಣ ನಿರೋಧಕಗಳು ಮತ್ತು ಸಾಕಷ್ಟು ಟ್ಯಾನಿನ್‌ಗಳಿಂದ ತುಂಬಿದ ಹಸಿರು ಚಹಾ ಬಹುಶಃ ಈ ಸಮಸ್ಯೆಗಳನ್ನು ಗುಣಪಡಿಸಲು ಉತ್ತಮ ಪರಿಹಾರವಾಗಿದೆ. ಹಸಿರು ಚಹಾವು ಕ್ಯಾಟೆಚಿನ್‌ಗಳು, ವಿಟಮಿನ್ ಸಿ, ವಿಟಮಿನ್ ಇ, ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.
ಈ ಘಟಕಗಳು ಕಣ್ಣಿನ ಸೂಕ್ಷ್ಮ ಅಂಗಾಂಶಗಳನ್ನು ರಕ್ಷಿಸುತ್ತದೆ ಮತ್ತು ಗ್ಲುಕೋಮಾದಂತಹ ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎರಡು ಟೀ ಬ್ಯಾಗ್ ಗಳನ್ನು ನೀರಿನಲ್ಲಿ ನೆನಸಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಗಳು ಕಡಿಮೆಯಾಗುತ್ತದೆ.
ಇನ್ನು ಮೂರನೆಯದಾಗಿ ಕಾಫಿ ಹಾಗೂ ಟೀ ಎರಡರ ಮಿಶ್ರಣದಿಂದ ಕೂಡ ಡಾರ್ಕ್ ಸರ್ಕಲ್ ನಿವಾರಣೆಗೆ ಸಹಾಯ ಮಾಡುತ್ತದೆ ಇದನ್ನು ಹೇಗೆ ಬಳಸುವುದು ಎಂದರೆ ಮೊದಲಿಗೆ ಬ್ಲಾಕ್ ಟೀ ತಯಾರಿಸಿ ಒಂದು ಚಮಚ ಟೀ ಗೆ ಒಂದು ಚಮಚ ಕಾಫಿ ಪುಡಿಯನ್ನು ಬಳಸಿ ಕಣ್ಣಿನ ಸುತ್ತ ಮಸಾಜ್ ಮಾಡಬೇಕು ಇದರಿಂದ ಡಾರ್ಕ್ ಸರ್ಕಲ್ಸ್ ಗಳು ಕಡಿಮೆಯಾಗುತ್ತದೆ.
ಇನ್ನು ಐಸ್ ಇಂದ ಮಸಾಜ್ ಮಾಡ ಬೇಕು, ಹೌದು ಕ್ಯಾರೆಟನ್ನು ಚೆನ್ನಾಗಿ ತುರಿದುಕೊಂಡು ಐಸ್ ಇಡುವ ಫ್ರೀಸರ್ ಬೌಲ್ಗೆ ಕ್ಯಾರಟ್ ತುರಿ ಹಾಗೂ ನೀರನ್ನು ಬೆರೆಸಿ ಫ್ರೀಜ್ ಮಾಡಬೇಕು. ನಂತರ ಈ ಕ್ಯಾರಟ್ ನ ಐಸ್ಕ್ಯೂಬನ್ನು ಬಳಸಿ ಕಣ್ಣಿನ ಸುತ್ತ ಮಸಾಜ್ ಮಾಡ್ಬೇಕು ಹೀಗೆ ಮಾಡುತ್ತಾ ಬಂದಲ್ಲಿ ಕ್ರಮೇಣವಾಗಿ ಕಣ್ಣಿನ ಸುತ್ತ ಇರುವ ಕಪ್ಪು ಕಡಿಮೆಯಾಗುತ್ತದೆ.
ಇನ್ನು ಕೊನೆಯದಾಗಿ ಗುಲಾಬಿ ಹೂವು ಹಾಗೂ ಬಾದಾಮಿ ಎಣ್ಣೆಯಿಂದ ಮನೆ ಮದನ್ನು ಮಾಡಬಹುದು ಹೇಗೆ ಎಂದು ತಿಳಿಯೋಣ ಹೌದು ಗುಲಾಬಿ ಹೂವಿನ ದಳವನ್ನು ಬಿಡಿಸಿ ಚೆನ್ನಾಗಿ ಚೆಚ್ಚಿ ಕೊಳ್ಳಬೇಕು ಅದಕ್ಕೆ ಬಾದಾಮಿ ಎಣ್ಣೆಯನ್ನು ಬೆರೆಸಬೇಕು ಈ ಎರಡರ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಬೇಕು, ಡಾರ್ಕ್ ಸರ್ಕಲ್ ಗಳು ಶಾಶ್ವತವಾಗಿ ದೂರ ಉಳಿಯುತ್ತದೆ.
ಈ ಮೇಲೆ ತಿಳಿಸಿರುವ ಯಾವುದೇ ಒಂದು ಮನೆಮದ್ದನ್ನು ಬೆಳೆಸಿದರು ಕಣ್ಣಿನ ಸುತ್ತ ಇರುವ ಕಪ್ಪನ್ನು ಶಾಶ್ವತವಾಗಿ ದೂರ ಮಾಡಬಹುದು ಇದರ ಜೊತೆಗೆ ಸರಿಯಾದ ನಿದ್ದೆಯೂ ಕಣ್ಣಿನ ಹಾಗೂ ಮಾಸಿಕ ಆರೋಗ್ಯಕ್ಕೆ ಅವಶ್ಯಕವಾಗಿದೆ.