ಕೇವಲ ಮೂರು ದಿನಗಳಲ್ಲಿ ಈ ಮನೆಮದ್ದನ್ನೂ ಉಪಯೋಗಿಸಿ, ಮೊಡವೆಗಳಿಂದ ದೂರ ಉಳಿಯಬಹುದು
ಸ್ನೇಹಿತರೆ ಇಂದು ನಾವು ನಮ್ಮ ಮುಖದ ಮೇಲಿರುವಂತಹ ಮೊಡವೆಗಳ ಓಡಿಸುವ ಮನೆಮದ್ದನ್ನು ನೋಡೋಣ. ಸಾಮಾನ್ಯವಾಗಿ ಮೊಡವೆಗಳು ಪ್ರಕೃತಿಯಲ್ಲಿರುವಂತಹ ಧೂಳಿಂದ ಇರಬಹುದು, ನಾವು ತಿನ್ನುವ ಜಿಡ್ಡಿನ ಅಂಶದ ಆಹಾರ ವಿರಬಹುದು, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಬದಲಾವಣೆಗಳಿರಬಹುದು ಹೀಗೆ ನಾನಾತರಹದ ಕಾರಣಗಳಿಂದ ನಮ್ಮ ಮುಖದ ಮೇಲೆ ಆವರಿಸಿಕೊಳ್ಳುತ್ತದೆ ಜೊತೆಗೆ ನಮ್ಮ ತಲೆಯಲ್ಲಿ ಆಗುವ ಒಟ್ಟುಗಳಿಂದ ಕೂಡ ಹೆಚ್ಚಾಗುತ್ತದೆ.
ಇನ್ನು ಬಿಸಿಲಿಂದ ಓಡಾಡುವಾಗ ಜಿಟಿನಂಶದ ಪ್ರಭಾವದಿಂದ ಮುಖದ ಮೇಲೆ ಮೊಡವೆಗಳು ಹೆಚ್ಚಾಗಿ ಕಾಣಿಸುತ್ತದೆ ಇಂತಹ ಮೊಡವೆಗಳಿಂದ ಸಾಮಾನ್ಯವಾಗಿ ವಯಸ್ಸಿನ ಹುಡುಗ ಹುಡುಗಿಯರಿಗೆ ಹೆಚ್ಚು ತೊಂದರೆ ಆಗುತ್ತದೆ ಇಂದು ಕೆಲವು ಅದನ್ನು ಉಜ್ವ ಮೂಲಕ ಪದೇಪದೇ ಮುಟ್ಟುವ ಮೂಲಕ ಕೂಡ ಮೊಡವೆಗಳು ಹೆಚ್ಚಾಗುತ್ತದೆ ಇದರಿಂದ ಮುಖದ ಮೇಲೆ ಕಿರಿಕಿರಿ ಉಂಟಾಗಿ ನೋವುಗಳು ಕೂಡ ನಮ್ಮನ್ನು ಬಾಧಿಸುತ್ತದೆ ಇಂತಹ ಮೊಡವೆಗಳನ್ನು ಶಾಶ್ವತವಾಗಿ ದೂರ ಮಾಡಲು ಇಂದು ನಾವು ಹೇಳುವ ಮನೆಮದ್ದನ್ನು ಮಾಡಿ ನೋಡಿ.
ಇದಕ್ಕೆ ಬೇಕಾಗಿರುವಂತಹ ವಸ್ತುಗಳು ಎಂದರೆ ಅಲೋವೆರಾ ಅಥವಾ ಲೋಳೆ ಸರ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಅರ್ಧ ಹೋಳು ನಿಂಬೆಹಣ್ಣು ಸ್ವಲ್ಪ ಅರಿಶಿಣ. ಅಲೋವೆರಾ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಮಿನರಲ್ಸ್ ಗಳು ಮತ್ತು ವಿಟಮಿನ್ ಬಿ, ಸಿ, ಇ ಮತ್ತು ಫೋಲಿಕ್ ಆಮ್ಲದಂತಹ ಅನೇಕ ಖನಿಜಗಳನ್ನು ಒಳಗೊಂಡಿದೆ.
ಆಲೋವೆರಾದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುತ್ತದೆ ಅಲೋವೆರಾ ಜೆಲ್ ನೀರು ಆಧಾರಿತ ಮಾಯಿಶ್ಚರೈಸರ್ ಆಗಿದ್ದು ಇದು ಚರ್ಮದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಲೋವೆರಾ ಜೆಲ್ ಚರ್ಮದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲೋವೆರಾ ಎರಿಥೆಮಾ ನಂತಹ ಚರ್ಮದ ಸ್ಥಿತಿಗಳನ್ನು ಸುಧಾರಿಸುತ್ತದೆ ಎಂದು ತಿಳಿದುಬಂದಿದೆ ಮತ್ತು ಸೋರಿಯಾಸಿಸ್ ಅನ್ನು ಸುಧಾರಿಸಲು ನೆರವಾಗುತ್ತದೆ.
ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ನಿಮ್ಮ ಚರ್ಮ ಮತ್ತು ಕೂದಲಿಗೆ ಸೂಕ್ತವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಂಬೆ ಸಿಟ್ರಸ್ ಹಣ್ಣು, ಮತ್ತು ಅದರ ಸಾರಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ, ಇದು ಚರ್ಮದಲ್ಲಿ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ, ಚರ್ಮದ ಕಾಲಜನ್ ಮಟ್ಟವನ್ನು ಹೆಚ್ಚಿಸಲು ಅವು ಸಹಾಯ ಮಾಡುತ್ತವೆ.
ಮೊಡವೆ ಮುಕ್ತ ಚರ್ಮವನ್ನು ಪಡೆಯಲು ನಿಂಬೆ ನಿಮಗೆ ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿರುವ ಪ್ರೊಬಯೋಟಿಕ್ಸ್, ಆ್ಯಂಟಿ ಆಕ್ಸಿಡೆಂಟ್ಸ್, ನ್ಯೂಟ್ರಿಯೆಂಟ್ಸ್ ಹಾಗೂ ಎಂಜೈಮ್ಸ್ ಸೇರಿ ತ್ವಚೆಯ ಆರೋಗ್ಯ ಕಾಪಾಡುತ್ತವೆ. ಅಷ್ಟೇ ಅಲ್ಲ, ಇದು ಮುಖದಲ್ಲಿ ಮಾಯಿಶ್ಚರೈಸರ್ ಉಳಿವಂತೆ ಮಾಡಿ ಸುಕ್ಕಾಗುವುದನ್ನು ಕಡಿಮೆ ಮಾಡುತ್ತದೆ.
ಅರಿಶಿಣದಲ್ಲಿರುವ ಕರ್ಕ್ಯುಮಿನಾಯ್ಡ್ಸ್ ಎಂಬ ಸಕ್ರಿಯ ಸಂಯುಕ್ತಗಳು ಚರ್ಮದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಗುಣಲಕ್ಷಣಳಿದ್ದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹೈಪರ್ ಪಿಗ್ಮೆಂಟೇಶನ್ ಮತ್ತು ಕಲೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಇನ್ನು ಒಂದು ಬಟ್ಟಲಿಗೆ ಆಲೋವೆರದ ಮಧ್ಯ ಭಾಗದಲ್ಲಿರುವ ಜೆಲ್ ಅನ್ನು ಹಾಕಬೇಕು, ಅದಕ್ಕೆ ನಿಂಬೆ ರಸವನ್ನು ಹಿಂಡಬೇಕು ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಹಾಕಬೇಕು, ಒಂದು ಚೀಟಿಗೆ ಹರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಗೊಳಿಸಬೇಕು. ಇದನ್ನು ದಿನಕ್ಕೆ ಎರಡು ಬಾರಿ ಮುಖಕ್ಕೆ ಅಚ್ಚಬೇಕು, ಮೂರು ದಿನಗಳ ಕಾಲ ಬಿಡದೆ ಮಾಡಿದರೆ ಮೊಡವೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ.