ಯಾವುದಾದರೂ ರಸ್ತೆ ಅಪಘಾತವಾದಾಗ ಖಂಡಿತವಾಗಿಯೂ ಅವಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ತೀವ್ರವಾದ ಅಪಘಾತ ಆಗದೆ ಸಣ್ಣ ಪುಟ್ಟ ಪೆಟ್ಟುಗಳಾಗಿ ಕೈಕಾಲು ಉಳುಕುವುದು ಈ ರೀತಿ ಆದಾಗ ಅಥವಾ ಕೈಕಾಲು ಮುರಿದಿದ್ದ ಕ್ಷಣದಲ್ಲಿ ತಿಳಿಯದೆ ನಂತರ ನೋವು ಬಂದು ಗೊತ್ತಾದಾಗ ಹೆಚ್ಚಿನ ಜನರು ಅದನ್ನು ನಾಟಿ ವೈದ್ಯದ ಮೂಲಕ ಗುಣಪಡಿಸಿಕೊಳ್ಳಲು ಹೋಗುತ್ತಾರೆ.
ಈ ರೀತಿ ಸಮಸ್ಯೆಗಳು ಆದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಂಡಾಗ ಎಷ್ಟು ಪರಿಣಾಮಕಾರಿಯಾಗಿ ಗುಣವಾಗುತ್ತದೆಯೋ ಅದಕ್ಕಿಂತಲೂ ಹೆಚ್ಚಿಗೆ ನಾಟಿ ವೈದ್ಯದಿಂದ ಇವೆಲ್ಲ ಕ್ಲಿಯರ್ ಆಗುತ್ತದೆ ಎನ್ನುವ ನಂಬಿಕೆ ಇನ್ನೂ ಸಹ ನಮ್ಮ ಜನರಿಗೆ ಇದೆ. ಯಾಕೆಂದರೆ, ಈ ನಾಟಿ ವೈದ್ಯ ಪದ್ಧತಿಯು ಅನಾದಿಕಾಲದಿಂದ ಬಂದಿದ್ದು ಹಾಗಾಗಿ ಜನರು ಇದರ ಮೊರೆ ಹೋಗುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಹಲವು ನಾಟಿ ವೈದ್ಯರು ಫೇಮಸ್ ಆಗಿದ್ದಾರೆ ಅದರಲ್ಲಿ ಉತ್ತರ ಕರ್ನಾಟಕದಕಡೆಯಲ್ಲಿ ಹೇಳುವುದಾದರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪನಟಿಗೆ ಗ್ರಾಮದಲ್ಲಿ ಹನುಮಂತರಾವ್ ಎನ್ನುವ ನಾಟಿ ವೈದ್ಯರು ಇದ್ದಾರೆ. ಇವರ ಬಳಿ ಚಿಕಿತ್ಸೆಗೆ ಬೆಂಗಳೂರು, ಮೈಸೂರಿನಿಂದ ಕೂಡ ಆಂಬುಲೆನ್ಸ್ ಮಾಡಿಕೊಂಡು ರೋಗಿಗಳು ಹೋಗುತ್ತಾರೆ. ಇವರು ಕೊಡುವ ನಾಟಿ ಔಷಧೀಯ ಚಿಕಿತ್ಸೆ ನೂರಕ್ಕೆ ನೂರರಷ್ಟು ಕೆಲಸ ಮಾಡುತ್ತದೆ ಎಂದು ಆ ಭಾಗದ ಎಲ್ಲರೂ ಕೂಡ ಮಾತನಾಡುತ್ತಾರೆ.
ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಅವರು ಈ ನಾಟಿ ಚಿಕಿತ್ಸೆ ಕುರಿತು ಹಲವು ಅಂಶಗಳನ್ನು ಹೇಳಿದ್ದಾರೆ. ಅವರು ಹೇಳಿದಂತೆ ಈ ರೀತಿ ಕೈಕಾಲು ಉಳುಕಿರುವುದಕ್ಕೆ ಅಥವಾ ನರ ಉಳುಕಿ ಊದುಕೊಂಡಿರುವುದಕ್ಕೆ ಮತ್ತು ಎಲುಬುಗಳು ಬಿಟ್ಟು ಹೋಗಿರುವುದಕ್ಕೆ ನಾಟಿ ಚಿಕಿತ್ಸೆಯಾಗಿ ಏನೇನು ಮಾಡುತ್ತಾರೆ ಮತ್ತು ಯಾವ ಎಣ್ಣೆಗಳನ್ನು ಮಸಾಜ್ ಮಾಡಲು ನೀಡುತ್ತಾರೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಇವರು ದೂರದಲ್ಲೆಲ್ಲೋ ಅಪಘಾತವಾದಾಗ ಮೊದಲು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಒಂದು ವಾರದ ಒಳಗೆ ನಾಟಿ ಚಿಕಿತ್ಸೆಗೆ ಬರಬಹುದು ಎಂದು ಸಲಹೆ ಕೊಡುತ್ತಾರೆ. ಜೊತೆಗೆ ಸಣ್ಣಪುಟ್ಟ ಉಳುಕಿದ ಸಮಸ್ಯೆ ಆದಾಗ ಒಂದು ಬೆಳ್ಳುಳ್ಳಿಯನ್ನು ಜಜ್ಜಿ ಉಳುಕಿರುವಂತಹ ಜಾಗದಲ್ಲಿ ಮಸಾಜ್ ಮಾಡಿ ಮೆಲ್ಲಗೆ ಎಳೆದಾಗ ಉಳುಕು ಬಿಟ್ಟು ಹೋಗುತ್ತದೆ.
ಈ ರೀತಿ ಕನಿಷ್ಠ 21 ದಿನಗಳವರೆಗೆ ಮಾಡಿದರೆ ಸಂಪೂರ್ಣ ಗುಣವಾಗುತ್ತದೆ ಎನ್ನುತ್ತಾರೆ. ಇವರ ಬಳಿ ಚಿಕಿತ್ಸೆಗೆ ಬರುವವರು ಒಂದು ಬಾರಿ ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿದರೆ ನಂತರ ರೋಗಿ ಬರಲು ಸಾಧ್ಯವಾಗದಿದ್ದರೆ ಯಾರೇ ಬಂದರೂ ಔಷಧಿ ಕೊಡುತ್ತಾರೆ ಅಥವಾ ಕೊರಿಯರ್ ಮಾಡಿ ಕಳುಹಿಸಿ ಕೊಡುತ್ತಾರೆ. ಆದರೆ ರೋಗಿಯು ಒಂದು ಬಾರಿ ಕೂಡ ಬರದೇ ಇದ್ದಲ್ಲಿ ಅವರಿಗೆ ಚಿಕಿತ್ಸೆಯನ್ನು ಕೊಡಲು ಆಗುವುದಿಲ್ಲ ಎಂದು ಹೇಳುತ್ತಾರೆ.
ನಾಟಿವೈದ್ಯ ಚಿಕಿತ್ಸೆಯಲ್ಲಿ ನರಗಳು ಹಾಗೂ ಎಲುಬುಗಳನ್ನು ಸರಿಪಡಿಸಲು ಮಸಾಜ್ ಮಾಡಲು ಬೇವಿನ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ರಾತ್ರಿ ಚೆನ್ನಾಗಿ ಬೇವಿನ ಎಣ್ಣೆ ಮಸಾಜ್ ಮಾಡಿ ಬೆಳಗ್ಗೆ ಬಿಸಿ ನೀರಿನಿಂದ ತೊಳೆಯುವುದರಿಂದ ನೋವು ನಿವಾರಣೆ ಆಗುತ್ತದೆ ಹಾಗೂ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ.
ಜೊತೆಗೆ ಕೆಲ ನಾಟಿ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯನ್ನು ಕೊಡಲಾಗುತ್ತದೆ ಇದನ್ನು ಜೇನುತುಪ್ಪದಲ್ಲಿ ಸೇವಿಸಲು ಕೊಡುತ್ತೇವೆ. ಎಲುಬುಗಳ ಸಮಸ್ಯೆ ಇದ್ದರೆ ಯಾವುದೇ ರೀತಿ ಪತ್ತೆ ಹೇಳುವುದಿಲ್ಲ ಬದಲಾಗಿ ಚೆನ್ನಾಗಿ ಆಹಾರ ಸೇವನೆ ಮಾಡಲು ಹೇಳುತ್ತೇವೆ ನರದ ಸಮಸ್ಯೆ ಕಂಡು ಬಂದರೆ ಮಾತ್ರ ಕಟ್ಟುನಿಟ್ಟಾದ ಪಥ್ಯ ಪಾಲಿಸಬೇಕಾಗುತ್ತದೆ ಎನ್ನುತ್ತಾರೆ. ನಾಟಿ ವೈದ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.