ಈಗ ಜನ ನಿಧಾನವಾಗಿ ಆರ್ಗ್ಯಾನಿಕ್ ಆಹಾರ, ಆಯುರ್ವೇದ ಚಿಕಿತ್ಸೆ ಇವುಗಳ ಕಡೆ ನಂಬಿಕೆ ಇಡುತ್ತಿದ್ದಾರೆ, ಮನಸ್ಸು ಮಾಡುತ್ತಿದ್ದಾರೆ. ಕಾರಣ ಈ ಚಿಕಿತ್ಸೆಗಳಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು. ನಮ್ಮಲ್ಲಿರುವ ಎಲ್ಲಾ ಕಾಯಿಲೆಗಳಿಗೂ ಕೂಡ ಆಸ್ಪತ್ರೆಗಳಿಗೆ ಗುಣ ಮಾಡುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಾಟಿ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಇವುಗಳಿಗೆ ಎಲ್ಲವನ್ನು ಪರಿಹಾರ ಮಾಡುವ ಶಕ್ತಿ ಇದ್ದೇ ಇರುತ್ತದೆ.
ಈ ಇಂಗ್ಲಿಷ್ ಮೆಡಿಸಿನ್ ಆರಂಭ ಆಗುವುದಕ್ಕೂ ಮುಂಚೆ ನಮ್ಮ ದೇಶದಲ್ಲಿ ಆಯುರ್ವೇದ ಪದ್ಧತಿಯಿಂದ ಹಳ್ಳಿಗಳಲ್ಲಿ ನಾಟಿ ಔಷಧಿ ಕೊಡುವ ಮೂಲಕ ಎಲ್ಲಾ ಕಾಯಿಲೆಗಳನ್ನು ಕೂಡ ಗುಣಪಡಿಸುತ್ತಿದ್ದರು. ಪ್ರತಿ ಹಳ್ಳಿಯಲ್ಲೂ ಕೂಡ ವಂಶ ಪಾರಂಪರ್ಯವಾಗಿ ನಾಟಿ ಔಷಧಿ ಕೊಡುವ ಕುಟುಂಬ ಇರುತ್ತಿತ್ತು. ಅವರನ್ನೇ ವೈದ್ಯರೆಂದು ಜನರು ನಂಬಿ ಗೌರವ ಕೊಟ್ಟು ಅವರಿಂದ ಔಷಧಿ ಪಡೆದು ಕಾಯಿಲೆಯಿಂದ ಮುಕ್ತರಾಗುತ್ತಿದ್ದರು.
ಇತ್ತೀಚಿಗೆ ನಿಧಾನವಾಗಿ ಎಲ್ಲೆಡೆ ಈ ಪದ್ಧತಿ ಮಾಯ ಆಗುತ್ತಿದೆ. ಇದರ ನಡುವೆ ಅಲ್ಲಲ್ಲಿ ಇಂತಹ ಕುಟುಂಬಗಳ ವೈದ್ಯಕೀಯ ಪದ್ಧತಿ ಕೈಗುಣದ ಬಗ್ಗೆ ನಂಬಿಕೆ ಇರುವ ಜನರು ಈಗಲೂ ಸಹ ಅದನ್ನೇ ಪಾಲಿಸುತ್ತಿದ್ದಾರೆ. ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಹಾಬಾಳ ಎನ್ನುವ ಗ್ರಾಮದಲ್ಲಿ ಫೇಮಸ್ ನಾಟಿ ವೈದ್ಯರೊಬ್ಬರಿದ್ದಾರೆ. ಗುಲ್ಬರ್ಗದಿಂದ ಈ ಗ್ರಾಮ 60 ಕಿಲೋಮೀಟರ್ ಆಗುತ್ತದೆ.
ಸುಮಾರು 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದ ವೃದ್ಧರೊಬ್ಬರು ಇಲ್ಲಿ ಮನುಷ್ಯನ ಅನೇಕ ಕಾಯಿಲೆಗಳಿಗೆ ನಾಟಿ ಔಷಧ ಕೊಟ್ಟು ಗುಣ ಮಾಡುತ್ತಾರೆ. ಮೂಲವ್ಯಾಧಿ, ಕೈಕಾಲು ಮಂಡಿ ನೋವು, ಹಲ್ಲು ನೋವು, ಲಕ್ವ ಹೊಡೆಯುವುದು, ಪುರುಷರ ಲೈಂಗಿಕ ಸಮಸ್ಯೆಗಳು, ಮಕ್ಕಳಾಗುವ ಸಮಸ್ಯೆ, ಗಂಡು ಸಂತಾನದ ಸಮಸ್ಯೆ, ಶೀತ ಬಾಧೆ, ಕಿವಿ ಸೋರುವುದು ಇನ್ನು ಅನೇಕ ಕಾಯಿಲೆಗಳಿಗೆ ಇವರು ನಾಟಿ ಔಷಧ ಕೊಡುತ್ತಾರೆ.
ಇಲ್ಲಿಗೆ ಬರುವವರಲ್ಲಿ ಹೆಚ್ಚಿನ ಜನರು ಇವರ ಬಳಿ ಔಷಧಿ ತೆಗೆದುಕೊಂಡರೆ ಗಂಡು ಮಕ್ಕಳಾಗುತ್ತದೆ ಎಂದು ನಂಬಿಕೆ ಇಟ್ಟುಕೊಂಡು ಬರುತ್ತಾರೆ. ಈ ವಿಷಯ ವಿಜ್ಞಾನಕ್ಕೆ ಸವಾಲು ಆಗಬಹುದು ಅಥವಾ ವಿಜ್ಞಾನದಲ್ಲಿ ಇದನ್ನು ಸುಳ್ಳು ಎಂದು ಹೇಳಬಹುದು ಆದರೆ ನಂಬಿಕೆ ಇಟ್ಟು ಇವರು ಕೊಟ್ಟ ಔಷಧಿ ತೆಗೆದುಕೊಂಡು ಆ ಪದ್ಧತಿ ಮೂಲಕ ನಡೆದುಕೊಂಡವರಿಗೆಲ್ಲ ಆಶ್ಚರ್ಯಕರ ರೀತಿಯಲ್ಲಿ ಗಂಡು ಮಕ್ಕಳೇ ಆಗಿರುವ ಉದಾಹರಣೆಗಳು ಇವೆ.
ಸುಮಾರು ಸಾವಿರಾರು ಜನರಿಗೆ ಇವರು ಈ ರೀತಿ ಗಂಡು ಸಂತಾನಕ್ಕಾಗಿ ಚಿಕಿತ್ಸೆ ಕೊಟ್ಟಿದ್ದಾರೆ. ಅದಕ್ಕಾಗಿ 1000 ರೂಪಾಯಿಯನ್ನು ಮಾತ್ರ ಕಾಣಿಕೆ ಆಗಿ ತೆಗೆದುಕೊಳ್ಳುತ್ತಾರೆ. ಹಣಕ್ಕಾಗಿ ಅಲ್ಲದೆ ಒಂದೊಳ್ಳೆ ಉದ್ದೇಶದಿಂದ ತಾವು ಚಿಕಿತ್ಸೆ ಕೊಡುತ್ತಿರುವುದಾಗಿ ಹೇಳುತ್ತಾರೆ.
ಗಂಡು ಮಕ್ಕಳೇ ಆಗಬೇಕು ಎಂದು ಆಸೆಪಡುವ ಹೆಣ್ಣು ಮಕ್ಕಳು ತಾವು ಗರ್ಭ ಧರಿಸಿದ ತಕ್ಷಣ ಬಂದು ಇವರು ಕೊಡುವ ನಾಟಿ ಔಷಧಿಯನ್ನು ಕಾಣಿಕೆ ಕೊಟ್ಟು ತೆಗೆದುಕೊಂಡು ಹೋಗಬೇಕು. 450 ರೂಪಾಯಿ ಖರ್ಚಿನಲ್ಲಿ ಇವರು ಇದಕ್ಕೆ ಬೇಕಾದ ಔಷಧಿ ತಂದು ಮಿಕ್ಸ್ ಮಾಡಿ ಕೊಡುತ್ತಾರೆ. ಮೂರು ತಿಂಗಳವರೆಗೆ ಪ್ರತಿದಿನವೂ ಕೂಡ ತಪ್ಪದೆ ಗುಳಿಗೆ ಗಾತ್ರದಲ್ಲಿ ಈ ಔಷಧವನ್ನು ಪ್ರತಿನಿತ್ಯವೂ ಕೂಡ ತಪ್ಪದೆ ಸೇವಿಸಬೇಕು.
ಒಂದು ದಿನವೂ ಕೂಡ ಮಿಸ್ ಮಾಡದೆ ಈ ರೀತಿ ಇವರು ಹೇಳುವ ಪ್ರಕಾರ ಔಷಧಿಯನ್ನು ತೆಗೆದುಕೊಂಡು ಹಾಗೇ ನಡೆದುಕೊಂಡರೆ ಅವರಿಗೆ ಕಡಾ ಖಂಡಿತವಾಗಿ ಗಂಡು ಮಕ್ಕಳು ಆಗುತ್ತದೆ ಎಂದು ಈ ಭಾಗದ ಜನರು ನಂಬಿದ್ದಾರೆ. ಇವರ ಬಳಿ ಚಿಕಿತ್ಸೆ ತೆಗೆದುಕೊಳ್ಳಲು ಇಚ್ಚಿಸುವವರು ಬೀರಪ್ಪ ಪೂಜಾರಿ 9964698513 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.