ಡ್ರಾಮ ಜೂನಿಯರ್ಸ್ ಸೀಸನ್ 4 ಗೆ ವಿಶೇಷ ತೀರ್ಪುಗಾರರಾಗಿ ಎಂಟ್ರಿ ಕೊಟ್ಟ ನಟಿ ಖುಷ್ಬೂ. ಪ್ರೇಮ ಲೋಕ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ನೋಡಿ.

ಜೀ ಕನ್ನಡ ವಾಹಿನಿಯು ಒಂದಲ್ಲಾ ಒಂದು ಪ್ರಯೋಗಗಳನ್ನು ಅಥವಾ ಹೊಸತನವನ್ನು ತೆಗೆದುಕೊಂಡು ಬರುತ್ತಲೇ‌ ಇದೆ ಅದರ ಜೊತೆ ಜೊತೆಗೆ ಒಂದಿಷ್ಟು ಒಳ್ಳೆಯ ಸನ್ನಿವೇಶಗಳನ್ನು ವೇದಿಕೆ ಮೇಲೆ ಕ್ರಿಯೇಟ್ ಮಾಡುತ್ತಿದೆ. ಜೀ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಅವರ ಮನ ಸೆಳೆದುಕೊಂಡಿವೆ ಅದಲ್ಲದೆ ವಾರದ ಕೊನೆಯ ದಿನಗಳಲ್ಲಿ ಹಲವಾರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿವೆ.
ಹೀಗಾಗಿ ಈ ಜೀ ಕನ್ನಡ ಚಾನಲ್ ಒಳ್ಳೆಯ ಟಿ ಆರ್ ಪಿ ಅನ್ನು ಗಳಿಸಿಕೊಳ್ಳತ್ತಾ ಬಂದಿದೆ. ಅದಕ್ಕಾಗಿಯೇ ಜೀ ಕನ್ನಡ ವಾಹಿನಿಯು ಪ್ರಸಾರ ಮಾಡುವ ರಿಯಾಲಿಟಿ ಶೋಗಳಲ್ಲಿ ಒಂದಾದ ಡ್ರಾಮ ಜೂನಿಯರ್ಸ್ ಸೀಸನ್ 4 ಶೋನಲ್ಲಿಯು ಒಂದು ಹೊಸತನವನ್ನು ನೀಡಿ ಉತ್ತಮವಾದ ಸನ್ನಿವೇಶವನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಆ ಹೊಸತನ ಏನು? ಹೊಸದಾಗಿ ಯಾವ ಸನ್ನಿವೇಶವನ್ನು ಸೃಷ್ಟಿಸುತ್ತಿದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಒಳ್ಳೆಯ ಟಿ ಆರ್ ಪಿ ಅನ್ನು ಗಳಿಸಿ ಮುನ್ನುಗುತ್ತಿರುವ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್ ಸೀಸನ್ 4 ನಲ್ಲಿ ಒಬ್ಬ ನಟಿಯನ್ನು ಹೊಸ ಸ್ಪೆಷಲ್ ಗೇಸ್ಟ್ ಆಗಿ ಕರೆಸಿದ್ದಾರೆ. ಈಗಾಗಲೇ ಈ ಶೋ ನಲ್ಲಿ ಮೂರು ಜಡ್ಜ್ ಗಳಾಗಿ ಕ್ರೇಜೀ ಸ್ಟಾರ್ ರವಿಚಂದ್ರನ್, ಲಕ್ಷ್ಮಿ, ಡಿಂಪಲ್ ಕ್ವಿನ್ ರಚಿತಾ ರಮ್ ಅವರು ಇದ್ದಾರೆ.
ಅಲ್ಲದೇ ನಟಿ ಪ್ರೇಮ ಅವರನ್ನು ಸ್ಪೇಷಲ್ ಜಡ್ಜ್ ಆಗಿ ಕರೆಸಿದ್ದರು, ಈಗ ಈ ಶೋ ಗೆ ಮತ್ತೊಬ್ಬ ಸ್ಪೆಷಲ್ ಜಡ್ಜ್ ಆಗಿ ಬಹು ಭಾಷಾ ನಟಿ ಆದ ಖುಷ್ಬೂ ಅವರನ್ನು ಕರೆಸುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಖುಷ್ಬೂ ಅವರ ಜೋಡಿ ಒಂದು ಕಾಲದಲ್ಲಿ ಸಖತ್ ಫೇಮಸ್ ಆಗಿದ್ದಂತಹ ಜೋಡಿ. ಇವರಿಬ್ಬರು ಜೋಡಿಗಳಾಗಿ ಅಭಿನಯಿಸಿದ‌ ಪ್ರೇಮ ಲೋಕ ಸಿನಿಮಾ ಹಾಗೂ ಆ ಸಿನಿಮಾದಲ್ಲಿ ಇದ್ದಂತಹ ಪ್ರತಿ ಒಂದು ಹಾಡು ಕೂಡ ಸೂಪರ್ ಹಿಟ್ ಆಗಿದ್ದವು. ಪ್ರೇಮ ಲೋಕ ಸಿನಿಮಾವನ್ನು ಎವರ್ ಗ್ರೀನ್ ಸಿನಿಮಾ ಎಂದು ಕೂಡ ಕರೆಯಲಾಗುತ್ತದೆ. ನಂತರ ಹಲವು ಚಿತ್ರಗಳಲ್ಲಿ ನಟಿಸಿ, ಬೇರೆ ಬೇರೆ ಭಾಷೆಗಳಲ್ಲಿಯೂ‌ ನಟನೆ ಮಾಡಿ‌ ನಂತರ ಹಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು.
ಇದೀಗ ಜೀ ಕನ್ನಡ ವಾಹಿನಿಯು ನಟಿ ಖುಷ್ಬೂ ಅವರನ್ನು ಮತ್ತೆ ತೆರೆಯ ಮೇಲೆ ಅದರಲ್ಲೂ ಡ್ರಾಮ ಜೂನಿಯರ್ಸ್ ಸೀಸನ್ 4 ಶೋನಲ್ಲಿ ಕರೆಸುತ್ತಿದ್ದು ಈ ಶೋ ನ ಮೂಲಕ ರವಿಚಂದ್ರನ್ ಮತ್ತು ಖುಷ್ಬೂ ಅವರನ್ನು ಮತ್ತೆ ಒಂದು ಮಾಡುತ್ತಿದೆ ಜೀ ಕನ್ನಡವಾಹಿನಿ. ಡ್ರಾಮ ಜೂನಿಯರ್ಸ್ ವೇದಿಕೆ ಮೇಲೆ ಪ್ರೇಮ ಲೋಕ ಸಿನಿಮಾದ ಒಂದು ಹಾಡಿಗೆ ರವಿಚಂದ್ರನ್ ಮತ್ತು ಖುಷ್ಬೂ ಅವರು ಡ್ಯಾನ್ಸ್ ಮಾಡುತ್ತಾರೆ. ಹೀಗಾಗಿ ಪ್ರೇಮಲೋಕದ ಅಭಿಮಾನಿಗಳು ‌ಯಾರು ಯಾರು ಇದ್ದರೋ ಅವರಿಗೆಲ್ಲಾ ಸಖತ್ ಖುಷಿಯಾಗಿದೆ. ಈ ಒಂದು ವಿಶೇಷ ಸನ್ನಿವೇಶವನ್ನು ನೀವು ನೋಡಬೇಕು ಎಂದರೆ ಶನಿವಾರ ಮತ್ತು ಭಾನುವಾರ ಸಂಜೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮ‌ ಜೂನಿಯರ್ಸ ಸೀಸನ್ 4 ಶೋ ಅನ್ನು ತಪ್ಪದೇ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now