ಕೃಷಿ ಮಾಡುತ್ತಿರುವ ಅಥವಾ ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬ ರೈತ ಕೂಡ ತಿಳಿದುಕೊಳ್ಳಬೇಕಾದ ಮಾಹಿತಿ ಇದು. ಏಕೆಂದರೆ ಸರ್ಕಾರದಿಂದ ಸಿಗುತ್ತಿರುವ ಒಂದು ಅತ್ಯುತ್ತಮ ಯೋಜನೆ ಇದಾಗಿದೆ. ಯಾರು ತೋಟಗಾರಿಕೆ ಕೃಷಿ ಮೂಲಕ ತಮ್ಮ ಕೃಷಿ ಜಮೀನಿನಲ್ಲಿ ಮಾವು, ತೆಂಗು, ನಿಂಬೆ, ನುಗ್ಗೆ, ಪೇರಲೆ, ಸೀತಾಫಲ ಇನ್ನು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೋ ಅವರಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತಿದೆ.
ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆಯು ಸಂಪೂರ್ಣವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂತಹದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಂದು ಜಿಲ್ಲೆಯ ತೋಟಗಾರಿಕೆ ಇಲಾಖೆ ಕಚೇರಿ ಭೇಟಿ ಕೊಡುವುದರಿಂದ ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಈ ಅಂಕಣದಲ್ಲಿ ಸಹಾ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ, ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ಕರ್ನಾಟಕದಲ್ಲಿ ಈಗ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚು. ಇರುವ ಕಡಿಮೆ ಭೂಮಿಯಲ್ಲಿಯೇ ಹೆಚ್ಚು ಇಳುವರಿ ಇರುವ ಲಾಭದಾಯಕ ಬೆಳೆಯನ್ನು ಬೆಳೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ರೈತರನ್ನು ಉತ್ತೇಜಿಸಲು ಈ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ನಮೂನೆ 6 ತೆಗೆದುಕೊಂಡು ಅದರಲ್ಲಿ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಜೊತೆಗೆ ಕೆಲಸ ಮಾಡುವವರ ಜಾಬ್ ಕಾರ್ಡ್ ನಂಬರ್ ಬರೆದು ಸಂಬಂಧ ಪಟ್ಟ ಗ್ರಾಮ ಪಂಚಾಯತಿಯ PDO ಇಂದ ಸಹಿ ಪಡೆದುಕೊಳ್ಳಬೇಕು. ಎಷ್ಟು ಜನ ಕೆಲಸಗಾರರ ಹೆಸರು ಬರೆದಿರುತ್ತೀರೋ ಅಷ್ಟು ಜನರ ಜಾಬ್ ಕಾರ್ಡ್ ಪ್ರತಿ ಕೂಡ ಅರ್ಜಿ ಫಾರಂ ಜೊತೆ ಕೊಡಬೇಕು.
ತೋಟಗಾರಿಕೆ ಇಲಾಖೆಗೆ ಕೊಡಬೇಕಾದ ದಾಖಲೆಗಳು:-
● ನಮೂನೆ 6
● ರೇಷನ್ ಕಾರ್ಡ್
● ಆಧಾರ್ ಕಾರ್ಡ್
● ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದುಕೊಂಡ ನೀರು ಬಳಕೆ ಪತ್ರ
●20ರೂ ಸ್ಟ್ಯಾಂಪ್ ಪೇಪರ್
( ಹೇಳಿಕೆ ಮತ್ತು ಘೋಷಣೆ ಬರೆದು ನೋಟರಿ ಮಾಡಿಸಬೇಕು, ಮೊದಲನೆಯ ಪಾರ್ಟಿ ಎನ್ನುವಲ್ಲಿ ಅರ್ಜಿದಾರನ ಹೆಸರು ಹಾಗೂ ಎರಡನೇ ಪಾರ್ಟಿ ಹೆಸರು ಇರುವಲ್ಲಿ ತೋಟಗಾರಿಕೆ ಕಛೇರಿ ಎಂದು ಇರಬೇಕು).
● ಯೋಜನೆಯ ಅರ್ಜಿ ಫಾರಂ ಪಡೆದು ಅದನ್ನು ಸಹ ಭರ್ತಿ ಮಾಡಬೇಕು
● ಬ್ಯಾಂಕ್ ಪಾಸ್ ಪುಸ್ತಕ
● ಪಹಣಿ ಪತ್ರ
ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಮತ್ತು ಹಣ ಬಿಡುಗಡೆ ಕ್ರಮದ ಬಗ್ಗೆ ಮಾಹಿತಿ:-
● ಈ ಮೇಲ್ಕಂಡ ಎಲ್ಲಾ ದಾಖಲೆಗಳ ಜೊತೆ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಛೇರಿಗೆ ಅರ್ಜಿ ಸಲ್ಲಿಸಬೇಕು.
● ತೋಟಗಾರಿಕೆ ಇಲಾಖೆ ಕ್ಷೇತ್ರ ಪ್ರತಿನಿಧಿಯು ಕಡತಗಳನ್ನು ಪರಿಶೀಲಿಸಿ, ಮೇಲಾಧಿಕಾರಿಯ ಅನುಮತಿ ಪಡೆದು ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳುತ್ತಾರೆ.
● ಇಲಾಖೆ ಕಂಪ್ಯೂಟರ್ ಅಲ್ಲಿ ಈ ಎಲ್ಲಾ ಡಾಟವನ್ನು ದಾಖಲಿಸಿದ ಮಾಡಿದ ಮೇಲೆ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ.
● ತೋಟಗಾರಿಕೆ ಇಲಾಖೆ ಕಛೇರಿಯಿಂದ ಕ್ಷೇತ್ರ ಪ್ರತಿನಿಧಿಗಳು ಬಂದು ನಿಮ್ಮ ಜಮೀನಿನ GPS ಮಾಡುತ್ತಾರೆ.
● ಜಮೀನಿನ ವಿಸ್ತೀರ್ಣ ಸಣ್ಣ ರೈತರು ದೊಡ್ಡ ರೈತರು ಇತ್ಯಾದಿ ಮಾಹಿತಿಗಳ ಆಧಾರದ ಮೇಲೆ ಕ್ರಿಯಾ ಯೋಜನೆಗೆ ತಕ್ಕಂತೆ ಹಣ ಬಿಡುಗಡೆ ಮಾಡಲಾಗುತ್ತದೆ.
● ಕೆಲವೊಂದು ಸಮಯದಲ್ಲಿ ಗುಣಮಟ್ಟದ ಬೀಜ ಅಥವಾ ಸಸಿಗಳನ್ನು ತೋಟಗಾರಿಕೆ ಇಲಾಖೆಯವರೇ ಕೊಡುತ್ತಾರೆ, ಇಲ್ಲವಾದಲ್ಲಿ ರೈತರು ಇಚ್ಛೆಯಂತೆ ಸಸಿಗಳನ್ನು ತಂದು ನೆಡಬಹುದು.
● ಕೆಲಸಗಾರಿಕೆ ಉದ್ಯೋಗ ಖಾತ್ರಿ ಯೋಜನೆ ಅಡಿ MNR ಕೆಲಸ ಮುಗಿಯುತ್ತಿದ್ದಂತೆ MIS ಮಾಡಿದರೆ ಹಣ ಅವರ ಖಾತೆಗೆ ಜಮೆ ಆಗುತ್ತದೆ.
● ದೊಡ್ಡ ರೈತರು ಕೂಡ ಯೋಜನೆಯ ಲಾಭ ಪಡೆಯಬಹುದು ಆದರೆ ಅವರ ಪಾಲಿನ ವಂತಿಕೆಯನ್ನು ಸಲ್ಲಿಸಬೇಕು.
● ಇಲಾಖೆ ಕ್ಷೇತ್ರ ಪ್ರತಿನಿಧಿಗಳು ಕಾಲಕಾಲಕ್ಕೆ ಬಂದು ನಿಮ್ಮ ಬೆಳೆಯನ್ನು ಪರಿಶೀಲನೆ ಮಾಡುತ್ತಾರೆ, ಸಸಿ ನೀಡುವುದರಿಂದ ಹಿಡಿದು ಫಲ ಬರುವವರೆಗೆ ಪ್ರತಿಯೊಂದು ಹಂತದಲ್ಲೂ ಕೂಡ ಮಾಹಿತಿಯನ್ನು ತೋಟಗಾರಿಕೆ ಇಲಾಖೆಯ ಗಮನಕ್ಕೆ ತರಬೇಕು.