ಹಿಂದೂ ಉತ್ತರಾದಿತ್ವದ ಕಾಯಿದೆ 1956 ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು ಹೊಂದಿದ್ದಾರೆ ಎಂದಿದ್ದರೆ, 2005ರಲ್ಲಿ ತಿದ್ದುಪಡಿ ಆದ ಕಾಯ್ದೆ ಪ್ರಕಾರ ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕು ಇದೆ. ಕೂಡು ಕುಟುಂಬದ ಆಸ್ತಿ ವಿಭಾಗ ಮಾಡುವಾಗ ಕುಟುಂಬದ ಹೆಣ್ಣು ಮಗಳಿಗೂ ಸಮಾನವಾದ ಪಾಲನ್ನು ನೀಡಬೇಕು.
ಒಂದು ವೇಳೆ ತಂದೆಯ ಆಸ್ತಿಯಲ್ಲಿ ಪಾಲು ಕೊಡದೇ ಇದ್ದ ಪಕ್ಷದಲ್ಲಿ ನ್ಯಾಯಾಲಯಗಳಲ್ಲಿ ದಾವೇ ಹೂಡುವ ಮೂಲಕ ಕಾನೂನು ಬದ್ಧವಾಗಿ ತಮಗೆ ಬರಬೇಕಾದ ಆಸ್ತಿಯ ಪಾಲನ್ನು ಪಡೆಯಬಹುದು. ಆದರೆ ಈ ರೀತಿ ಆಸ್ತಿ ವಿಭಾಗ ಮಾಡುವ ಸಂದರ್ಭದಲ್ಲಿ ಆ ಹೆಣ್ಣು ಮಕ್ಕಳು ಬದುಕಿಲ್ಲ ಎಂದರೆ ಅವರಿಗೆ ಆಸ್ತಿ ಕೊಡಬೇಕಾ ಅಥವಾ ಆಸ್ತಿ ಪಾಲು ಕೊಡುವುದನ್ನು ನಿರಾಕರಣೆ ಮಾಡಬಹುದಾ ಎನ್ನುವ ಪ್ರಶ್ನೆ ಹಲವರಿಗೆ ಇದೆ.
ಅದಕ್ಕೆಲ್ಲ ಸ್ಪಷ್ಟ ಉತ್ತರ ಈ ಅಂಕಣದಲ್ಲಿ ಇದೆ ನೋಡಿ. ಒಂದು ಅವಿಭಕ್ತ ಕುಟುಂಬದ ಆಸ್ತಿಯನ್ನು ವಿಭಾಗ ಮಾಡುವ ಸಂದರ್ಭದಲ್ಲಿ ಆ ತಂದೆಗೆ ಎಷ್ಟು ಜನ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇದ್ದಾರೆ ಅವರ ಎಲ್ಲರ ಹೆಸರಿನಲ್ಲೂ ಕೂಡ ಸಮಾನವಾಗಿ ಆಸ್ತಿ ಭಾಗ ಆಗಬೇಕು. ಒಂದು ವೇಳೆ ಆ ಮಕ್ಕಳಲ್ಲಿ ಯಾವುದಾದರೂ ಒಬ್ಬ ಹೆಣ್ಣುಮಕ್ಕಳು ಬದುಕಿಲ್ಲ ಎಂದರೆ ಅವರ ಆಸ್ತಿಯ ಪಾಲನ್ನು ಕೊಡುವುದನ್ನು ನಿರಾಕರಣೆ ಮಾಡುವಂತಿಲ್ಲ.
ಆಕೆಯ ವಾರಸುದಾರರಾದ ಆಕೆಯ ಪತಿ ಅಥವಾ ಆಕೆಯ ಮಗನಿಗೆ ಆ ಆಸ್ತಿಯ ಪಾಲನ್ನು ಕೊಡಲೇಬೇಕು. ಒಂದು ವೇಳೆ ಕೊಡಲು ಒಪ್ಪದ ಪಕ್ಷದಲ್ಲಿ ವಾರಸುದಾರರು ನ್ಯಾಯದಲ್ಲಿ ಕೇಳಿ ಪಡೆಯಬಹುದು. ಆದರೆ ಆ ಮೃ.ತ ಮಗಳಿಗೆ ವಾರಸುದಾರರೇ ಇಲ್ಲ. ಆಕೆಯ ಪತಿಯೂ ಇಲ್ಲ, ಮಕ್ಕಳು ಇಲ್ಲ ಎಂದ ಪಕ್ಷದಲ್ಲಿ ಅದು ಯಾವ ಮೂಲದಿಂದ ಬಂದ ಆಸ್ತಿ ಎನ್ನುವುದರ ಮೇಲೆ ಅದು ಯಾರಿಗೆ ಸೇರಬೇಕು ಎನ್ನುವುದು ನಿರ್ಧಾರವಾಗುತ್ತದೆ.
ವಿಭಾಗವಾಗುತ್ತಿರುವ ಆಸ್ತಿಯೂ ತಂದೆ ಮೂಲದಿಂದ ಬಂದ ಆಸ್ತಿ ಆಗಿದ್ದರೆ ಅದು ತಂದೆಯ ಕಡೆಯ ಮೊದಲ ವರ್ಗದ ವಾರಸುದಾರರಿಗೆ ಸೇರುತ್ತದೆ ಒಂದು ವೇಳೆ ಆಸ್ತಿಯು ತಾಯಿಯ ಕಡೆಯ ಮೂಲದ ಆಸ್ತಿಯಾಗಿದ್ದರೆ ತಾಯಿಯ ಕಡೆಯ ಮೊದಲ ವರ್ಗದ ವರ್ಷದವರೆಗೆ ಆಸ್ತಿ ಸೇರುತ್ತದೆ. ಮತ್ತೊಂದು ಪ್ರಶ್ನೆ ಹಲವರಿಗೆ ಇದೆ ಅದೇನೆಂದರೆ ಒಂದು ವೇಳೆ ಒಬ್ಬ ಹೆಣ್ಣು ಮಗಳು ಪ್ರೀತಿ ವಿಶ್ವಾಸದಿಂದ ಆಸ್ತಿಯ ಮೇಲಿರುವ ಹಕ್ಕನ್ನು ಹಕ್ಕು ಬಿಡುಗಡೆ ಮಾಡಿಕೊಟ್ಟ ಪಕ್ಷದಲ್ಲಿ ಆ ಆಸ್ತಿ ಹೇಗೆ ಭಾಗವಾಗುತ್ತದೆ ಎಂದು ಅದಕ್ಕೆ ಉತ್ತರ ಈ ರೀತಿ ಇದೆ ನೋಡಿ.
ಉದಾಹರಣೆಗೆ ಒಬ್ಬ ವ್ಯಕ್ತಿಯ ಐದು ಮಕ್ಕಳಲ್ಲಿ ಮೂರು ಹೆಣ್ಣು ಮಕ್ಕಳು ಎರಡು ಕಣ್ಣು ಮಕ್ಕಳು ಇರುತ್ತಾರೆ. ಮೂರು ಹೆಣ್ಣು ಮಕ್ಕಳಲ್ಲಿ ಒಬ್ಬ ಮಗಳು ಈ ರೀತಿ ತನಗೆ ಆಸ್ತಿ ಬೇಡ ಎಂದು ಆಸ್ತಿ ಮೇಲಿನ ಹಕ್ಕನ್ನು ಬಿಡುಗಡೆ ಮಾಡಿಕೊಟ್ಟರೆ ಉಳಿದ ನಾಲ್ಕು ಜನರಿಗೂ ಕೂಡ ಆ ಆಸ್ತಿ ಸಮಾನವಾಗಿ ವಿಭಾಗವಾಗಬೇಕು. ಆ ಒಬ್ಬ ಮಗಳನ್ನು ಬಿಟ್ಟು ಉಳಿದ ನಾಲ್ಕು ಮಕ್ಕಳಿಗೂ ಕೂಡ ಆಸ್ತಿಯನ್ನು ಸಮಾನವಾಗಿ ವಿಭಾಗ ಮಾಡಲಾಗುತ್ತದೆ. ಈ ಒಂದು ವಿಷಯದ ಕುರಿತು ಏನೇ ಗೊಂದಲಗಳಿದ್ದರೂ ಕೂಡ ನುರಿತ ವಕೀಲರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ.