ದೇವರ ದರ್ಶನ ಮಾಡೋಕು ಮುಂಚೆ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆದು ಯಾಕೆ ಒಳಗೆ ಹೋಗ್ತಾರೆ ಗೊತ್ತ.? ಇದರ ಹಿಂದಿರುವ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ

ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ವಿಭಿನ್ನತೆಯಿಂದ ಕೂಡಿದೆ ಅನೇಕ ಬೇರೆ ದೇಶಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ಭಾರತದಲ್ಲಿ ಕೋಟ್ಯಂತರ ದೇವಾಲಯಗಳು ಇದ್ದು ಒಂದೊಂದು ದೇವಾಲಯವು ತನ್ನದೇ ಆದಂತಹ ವೈಶಿಷ್ಟತೆಗಳನ್ನ ಒಳಗೊಂಡಿದೆ ಅದರಲ್ಲಿಯೂ ನಮ್ಮ ದಕ್ಷಿಣ ಭಾರತದ ದೇವಾಲಯಗಳು ತುಂಬಾ ವಿಶಿಷ್ಟತೆಯಿಂದ ಕೂಡಿದೆ. ಒಂದೊಂದು ದೇವಾಲಯವು ಕೂಡ ಪುರಾತನ ಕಥೆಗಳನ್ನ ಒಳಗೊಂಡಿರುತ್ತದೆ ಆ ಒಂದು ದೇವಸ್ಥಾನ ನಿರ್ಮಾಣವಾಗಬೇಕಾದರೆ ತನ್ನದೇ ಆದಂತಹ ಹಿನ್ನೆಲೆಯನ್ನು ಒಳಗೊಂಡು ನಿರ್ಮಾಣವಾಗಿರುತ್ತದೆ. ಭಾರತೀಯರು ದೇವರುಗಳನ್ನು ಹೆಚ್ಚಾಗಿ ನಂಬುತ್ತಾರೆ ತಮ್ಮ ಕಷ್ಟ ಸುಖ ನೋವು ನಲಿವು ಏನೇ ಇದ್ದರೂ ಸಹ ದೇವರಲ್ಲಿ ಹೇಳಿಕೊಂಡು ತಲೆಬಾಗಿ ಕೈ ಮುಗಿಯುತ್ತಾರೆ ಈ ಒಂದು ಸಂಸ್ಕೃತಿಯು ಹಿಂದಿನ ಕಾಲದಿಂದಲೂ ಸಹ ಮುಂದುವರಿದುಕೊಂಡು ಬರುತ್ತಿದೆ.

WhatsApp Group Join Now
Telegram Group Join Now

ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಹ ಒಂದೊಂದು ದೇವಾಲಯಗಳು ಇದೆ ಹಾಗೆ ತನ್ನದೇ ಆದಂತಹ ವೈಶಿಷ್ಟತೆಗಳನ್ನು ಒಳಗೊಂಡಿದೆ ಕೆಲವೊಂದು ದೇವಾಲಯಗಳಿಗೆ ಹೋಗಬೇಕಾದರೆ ಪುರುಷರು ತಮ್ಮ ಶರ್ಟ್ ಮತ್ತು ಬನಿಯನ್ ಅನ್ನು ತೆಗೆದು ನಂತರ ದೇವಸ್ಥಾನದ ಒಳಗೆ ಹೋಗಬೇಕು ಈ ಒಂದು ಅಭ್ಯಾಸವು ಸನಾತನ ಕಾಲದಿಂದಲೂ ಸಹ ನಡೆದುಕೊಂಡು ಬಂದಿದೆ ಆದರೆ ಕೆಲವೊಬ್ಬರು ಇತ್ತೀಚಿನ ದಿನಗಳಲ್ಲಿ ಇದನ್ನು ವಿರೋಧ ಮಾಡುತ್ತಾರೆ. ಇದರ ಬಗ್ಗೆ ಕೋರ್ಟ್ ನಲ್ಲಿ ಹಲವಾರು ವಾದ ವಿವಾದಗಳು ಸಹ ನಡೆದಿದೆ. ಇದರ ಹಿಂದೆ ಇರುವಂತಹ ಕಾರಣ ನಾವು ನೋಡುವುದಾದರೆ ಮೊದಲನೇದಾಗಿ ದೇವಸ್ಥಾನಕ್ಕೆ ಬರುವಂತಹ ದಾರಿ ಮಧ್ಯದಲ್ಲಿ ಭಕ್ತಾದಿಗಳು ಏನನ್ನಾದರೂ ಮುಟ್ಟಿ ತಮ್ಮ ಬಟ್ಟೆಯನ್ನು ಕೊಳಕು ಮಾಡಿಕೊಂಡಿರುತ್ತಾರೆ ಎಂದು ಈ ರೀತಿಯ ವಿಧಾನವನ್ನು ಅನುಸರಿಸಲಾಗುತ್ತದೆ ಎಂದು ಕೆಲವರು ಹೇಳುತ್ತಾರೆ.

ಹಾಗೆಯೇ ಬರುವಂತಹ ಭಕ್ತಾದಿಗಳು ಸಕಾರಾತ್ಮಕವಾಗಿ ಯಾವಾಗಲೂ ಚಿಂತನೆಯನ್ನು ಮಾಡಬೇಕು ನಕಾರಾತ್ಮಕ ಶಕ್ತಿ ಅವರ ಬಟ್ಟೆಗಳಲ್ಲಿ ಇದ್ದು ಅದರಿಂದ ದೇವಸ್ಥಾನದ ಒಳಗಡೆ ಬಂದರೆ ದೇವರಿಗೆ ಪೂಜೆಗೆ ಲೋಪವಾಗುತ್ತದೆ ಹಾಗೆಯೇ ದರ್ಶನ ಮಾಡಿದಂತಹ ಫಲವು ಆ ಒಂದು ಭಕ್ತರಿಗೆ ದೊರೆಯುವುದಿಲ್ಲ ಆದ್ದರಿಂದ ಈ ರೀತಿಯಾಗಿ ಶರ್ಟ್ ಮತ್ತು ಬನಿಯನ್ ಅನ್ನು ತೆಗೆದು ದೇವಸ್ಥಾನದ ಒಳಗಡೆ ಹೋಗಬೇಕು. ಮತ್ತೊಂದು ಕಾರಣ ಏನೆಂದರೆ ಭಕ್ತಾದಿಗಳು ತಮ್ಮ ಬೇಡಿಕೆಯನ್ನು ಹೊತ್ತು ಬಂದಿರುತ್ತಾರೆ. ಆದ್ದರಿಂದ ದೇವಸ್ಥಾನದ ಒಳಗಡೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ತಮ್ಮ ಬೇಡಿಕೆಗಳನ್ನು ದೇವರ ಬಳಿ ಇಡಬೇಕು ಎಂದರೆ ಯಾವುದೇ ಅಡೆತಡೆಗಳು ಇರಬಾರದು ಆದ್ದರಿಂದ ಈ ರೀತಿಯಾದಂತಹ ಒಂದು ವಿಧಾನವನ್ನು ಅನುಸರಿಸಲಾಗುತ್ತದೆ ಎಂದು ಹೇಳುತ್ತಾರೆ.

ನಾವು ದೇವಸ್ಥಾನಗಳಿಗೆ ಹೋಗಬೇಕಾದರೆ ತುಂಬಾ ಮಡಿ ಮತ್ತು ಶುದ್ಧತೆಯಿಂದ ಹೋಗಬೇಕು ಅಲ್ಲಿ ಪೂಜೆ ಮಾಡುವಂತಹ ಪುರೋಹಿತರು ತುಂಬಾ ಶ್ರದ್ಧೆ ಮತ್ತು ಭಕ್ತಿಯಿಂದ ಮಡಿಯಿಂದ ಪೂಜೆ ಮಾಡುತ್ತಾರೆ ಆದ್ದರಂತೆ ಅಲ್ಲಿಗೆ ಭೇಟಿ ನೀಡುವಂತಹ ಭಕ್ತರು ಸಹ ಶುದ್ಧತೆಯಿಂದ ಹೋಗಿ ದೇವರ ದರ್ಶನವನ್ನು ಮಾಡಬೇಕು ಎನ್ನುವುದು ಪ್ರತೀತಿ. ಇತ್ತೀಚಿನ ದಿನಗಳಲ್ಲಿ ಹಲವರು ದೇವಸ್ಥಾನಗಳಿಗೆ ಹೋಗಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸುವುದಿಲ್ಲ ಹಾಗೆ ದೇವರನ್ನು ಸಹ ನಂಬುವುದಿಲ್ಲ ನಾವು ಸಕಾರಾತ್ಮಕವಾಗಿ ದೇವರನ್ನು ಶ್ರದ್ದೆ ಭಕ್ತಿಯಿಂದ ಪೂಜೆ ಮಾಡಿದ್ದೆ ಆದಲ್ಲಿ ನಮ್ಮ ಬೇಡಿಕೆಗಳು ಎಲ್ಲವೂ ಹೀಡೇರುತ್ತವೆ ಆದ್ದರಿಂದ ದೇವರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸಹ ತಾತ್ಸರ ಮನೋಭಾವ ಇರಬಾರದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now