ನಟ ಪ್ರೇಮ್ ಕಣ್ಣೀರಿನಿನ ಕಥೆ, ಪ್ರೇಮ್ ಹೆಂಡತಿಯ ತ್ಯಾಗ ನೋಡಿದ್ರೆ ನಿಜಕ್ಕೂ ಹೆಮ್ಮೆ ಆಗುತ್ತೆ.

ಕನ್ನಡ ಚಲನಚಿತ್ರ ರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ಪ್ರೇಮ್ ಅವರು ಸ್ಯಾಂಡ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡುವುದನ್ನು ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ನಟ ಪ್ರೇಮ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಹೇಗಿದ್ದರೂ ಈಗಲೂ ಸಹ ಅದೇ ರೀತಿಯಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ಪ್ರೇಮ್ ಅವರು ಕನ್ನಡದಲ್ಲಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಪ್ರಾಣ ಈ ಒಂದು ಸಿನಿಮಾದಲ್ಲಿ ಅಂದುಕೊಂಡಸ್ಟರ ಮಟ್ಟಿಗೆ ಇವರಿಗೆ ಯಶಸ್ಸು ಸಿಗಲಿಲ್ಲ ನಂತರದಲ್ಲಿ 2005 ತೆರೆ ಕಂಡಂತಹ ಪ್ರೇಮ ಮತ್ತು ರಮ್ಯಾ ಅವರ ನಟನೆಯ ನೆನಪಿರಲಿ ಸಿನಿಮಾ ಸದ್ದು ಮಾಡಿದ್ದು ಈ ಒಂದು ಸಿನಿಮಾಗೆ ಹೆಚ್ಚಿನ ಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿತು.

WhatsApp Group Join Now
Telegram Group Join Now

ನಂತರದಲ್ಲಿ ಪ್ರೇಮ್ ಅವರಿಗೆ ಹಿಟ್ ಕೊಟ್ಟಂತಹ ಸಿನಿಮಾ ಎಂದರೆ ಅದು ಚಾರ್ಮಿನಾರ್ ಈ ಒಂದು ಸಿನಿಮಾ ಅತ್ಯದ್ಭುತವಾಗಿ ಮೂಡಿಬಂದು ಈ ಸಿನಿಮಾಗಾಗಿ ಇವರಿಗೆ ಫಿಲಂ ಫೇರ್ ಅವಾರ್ಡ್ ಕೂಡ ಬಂದಿದೆ. ನಂತರದಲ್ಲಿ ಇವರು ನಟಿಸಿರುವಂತಹ ಸಿನಿಮಾಗಳೆಂದರೆ ಫೇರ್ ಅಂಡ್ ಲವ್ಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಗೌತಮ್, ಸವಿ ಸವಿ ನೆನಪು, ಯಜಮಾನ, ಲೈಫ್ ಜೊತೆ ಒಂದ್ ಸೆಲ್ಫಿ, ಪ್ರೇಮಂ ಪೂಜ್ಯಂ ಇನ್ನು ಕೆಲವೊಂದಷ್ಟು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಪ್ರೇಮ್ ಅವರ ಆರಂಭದ ಬದುಕು ಅಷ್ಟೇನೂ ಸುಂದರವಾಗಿರಲಿಲ್ಲ ಬಡ ಕುಟುಂಬದಿಂದ ಬಂದಂತಹ ಪ್ರೇಮ ಅವರ ತಂದೆ ನೇಕಾರರಾಗಿದ್ದರು. ಆಗ ಇವರು ಸಂಪಾದನೆಗಾಗಿ ತುಂಬಾ ಕಷ್ಟಪಟ್ಟಿದ್ದಾರೆ ನಂತರದಲ್ಲಿ ಇವರು ಜ್ಯೋತಿ ಎಂಬುವವರನ್ನು ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುತ್ತಾರೆ ಆದರೆ ಎರಡು ಕುಟುಂಬಗಳಿಗೂ ಸಹ ಈ ಮದುವೆ ಒಪ್ಪಿಗೆ ಇರುವುದಿಲ್ಲ ಆದರೂ ಸಹ ವಿರೋಧಯವನ್ನು ಕಟ್ಟಿಕೊಂಡು ಮದುವೆಯಾಗುತ್ತಾರೆ.

ಪ್ರೇಮ್ ಅವರು ನೆನಪಿರಲಿ ಸಿನಿಮಾಗೂ ಮೊದಲು ಕೆಲವೊಂದಷ್ಟು ಸಾಲವನ್ನು ಮಾಡಿಕೊಂಡಿರುತ್ತಾರೆ ಆಗ ಅವರು ಸಾಲವನ್ನು ತೀರಿಸಲು ಆಗದೆ ಕಷ್ಟ ಪಡುತ್ತಿರುವಂತಹ ಸಂದರ್ಭದಲ್ಲಿ ಪ್ರೇಮ್ ಅವರ ಹೆಂಡತಿ ಜ್ಯೋತಿ ಅವರು ತಮ್ಮ ತಾಯಿ ತಮಗೆ ನೀಡಿದಂತಹ ತಾಳಿ ಸರವನ್ನು ಪ್ರೇಮವರಿಗೆ ಕೊಟ್ಟು ಅದರಿಂದ ಅದನ್ನು ಅಡವಿಟ್ಟು ನಂತರದಲ್ಲಿ ದುಡ್ಡು ತೆಗೆದುಕೊಂಡು ಸಾಲ ತೀರಿಸುವುದಾಗಿ ಹೇಳುತ್ತಾರೆ ಅಂತಹ ಕಷ್ಟದ ದಿನಗಳಲ್ಲಿ ಜ್ಯೋತಿಯವರು ಪ್ರೇಮ್ ಅವರ ಕೈಯನ್ನು ಬಿಡದೆ ಅವರ ಬೆನ್ನೆಲುಬಾಗಿ ನಿಂತಿದ್ದರು. ಪ್ರೇಮ್ ಅವರ ಕಷ್ಟದ ದಿನಗಳಲ್ಲಿ ಅವರ ಹೆಂಡತಿ ಧೈರ್ಯವನ್ನು ಹೇಳಿ ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತದೆ ಎಂದು ಅವರಿಗೆ ಧೈರ್ಯವನ್ನು ತುಂಬಿಸಿದರು ಇಂತಹ ಹೆಂಡತಿ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ.

ಉದಾಹರಣೆಗೆ ಚಿತ್ರರಂಗದಲ್ಲಿ ನೋಡುವುದಾದರೆ ಕೆಲವೊಂದು ಜೋಡಿಗಳಲ್ಲಿ ಕಷ್ಟ ಬಂತು ಎಂದು ವಿ’ಚ್ಚೇ’ದ’ನದವರೆಗೂ ಹೋಗಿರುವುದನ್ನು ನಾವು ನೋಡಿರುತ್ತೇವೆ. ಆದರೆ ಪ್ರೀತಿಸಿ ಮದುವೆಯಾಗಿ ಎಂತಹ ಸಂದರ್ಭದಲ್ಲಿ ಕೈ ಬಿಡಬಾರದು ಎನ್ನುವಂತಹ ನಿರ್ಧಾರವನ್ನು ತೊಟ್ಟಿದಂತಹ ಪ್ರೇಮ ಅವರ ಹೆಂಡತಿ ಜ್ಯೋತಿ ಅವರನ್ನು ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ಲವ್ಲಿ ಸ್ಟಾರ್ ಪ್ರೇಮಿ ಪ್ರೇಮ್ ಅವರಿಗೆ ಈಗ ಇಬ್ಬರು ಮುದ್ದಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ, ಇವರ ಕುಟುಂಬ ತುಂಬಾ ಸುಂದರವಾಗಿ ಸಾಗುತ್ತಿದೆ. ಜ್ಯೋತಿ ಅವರ ಉತ್ತಮ ವ್ಯಕ್ತಿತ್ವ ನಿಮಗೆ ಹೇಗೆ ಅನಿಸುತ್ತದೆ ಎಂದು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now