ಮತ್ಸ್ಯ ಕನ್ಯೆಯಾಗಿ ಎಲ್ಲೆಡೆ ಮಿಂಚುತ್ತಿದ್ದಾರೆ ಹರಿಪ್ರಿಯ ಹೌದು ಹರಿಪ್ರಿಯಾ ಅವರು ತಮ್ಮ ಬೆನ್ನಿನ ಮೇಲೆ ಮತ್ಸ್ಯ ಕನ್ಯೆ ಇರುವಂತಹ ಟ್ಯಾಟೋವನ್ನು ಹಾಕಿಸಿಕೊಂಡು ಇದನ್ನು ನೋಡಿದಂತಹ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದೇಹದ ಬೇರೆ ಬೇರೆ ಭಾಗಗಳಿಗೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಅದರಲ್ಲೂ ಕೆಲವರಂತೂ ದೇಹದ ತುಂಬಾ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ದೇಹದ ಬಹುತೇಕ ಎಲ್ಲಾ ಕಡೆ ಟ್ಯಾಟು ಹಾಕಿಸಿಕೊಂಡಿರುವಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ ತಮಗೆ ಇಷ್ಟವಾದಂತಹ ರೀತಿಯಲ್ಲಿ ಟ್ಯಾಟೋಗಳನ್ನು ಹಾಕಿಸಿಕೊಳ್ಳುವ ಮೂಲಕ ಸುದ್ದಿ ಆಗುತ್ತಿದ್ದಾರೆ. ನಟಿ ಹರಿಪ್ರಿಯಾ ಅವರನ್ನು ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟಿ ಎಂದೇ ಹೇಳಬಹುದು.
ಇವರು ಮಾಡಿರುವುದು ಕೆಲವು ಸಿನಿಮಾಗಳು ಆದರೂ ಸಹ ಇವರ ನಟನೆ ಅದ್ಭುತವಾಗಿದೆ. ಇವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ ಇವರು ಮೂಲತಃ ಚಿಕ್ಕಮಂಗಳೂರಿನವರು. 1991 ಇವರು ಚಿಕ್ಕಮಂಗಳೂರಿನಲ್ಲಿ ಜನಿಸುತ್ತಾರೆ. ಇವರ ಮೊದಲ ಹೆಸರು ಶೃತಿ ನಂತರ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಂತರ ಇವರ ಹೆಸರನ್ನು ಹರಿಪ್ರಿಯಾ ಎಂದು ಬದಲಾಯಿಸ ಲಾಗುತ್ತದೆ. ‘ಮನಸುಗಳ ಮಾತು ಮಧುರ’ ಎನ್ನುವಂತಹ ಕನ್ನಡ ಚಿತ್ರದ ಮೂಲಕ 2008 ರಲ್ಲಿ ಇವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ. ಈ ಚಿತ್ರ ಇವರಿಗೆ ಸ್ವಲ್ಪಮಟ್ಟದ ಹೆಸರನ್ನು ತಂದುಕೊಡುತ್ತದೆ ನಂತರ ಇವರು ಮಳೆ ಬರಲಿ ಮಂಜು ಇರಲಿ, ಚೆಲುವೆಯೇ ನಿನ್ನ ನೋಡಲು, ಉಗ್ರಂ, ರನ್ನ, ಬುಲೆಟ್ ಬಸ್ಯ, ಬಲೆ ಜೋಡಿ, ರಣತಂತ್ರ, ನೀರ್ದೋಸೆ, ಅಂಜನಿಪುತ್ರ, ಲೈಫ್ ಜೊತೆ ಒಂದ್ ಸೆಲ್ಫಿ, ಬೆಲ್ ಬಾಟಮ್, ಸೂಜಿದಾರ, ಪೆಟ್ರೋಮ್ಯಾಕ್ಸ್ ಈ ರೀತಿಯಾದಂತಹ ಕೆಲವೊಂದು ಚಿತ್ರಗಳಲ್ಲಿ ಕಾಣಿಸಿಕೊಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.
ಉಗ್ರಂ ಸಿನಿಮಾದಲ್ಲಿ ಇವರ ನಟನೆಗಾಗಿ ಸಾಕಷ್ಟು ಅಭಿಮಾನಿ ಬಳಗವೇ ಇವರಿಗೆ ಹುಟ್ಟಿಕೊಳ್ಳುತ್ತದೆ ಅಷ್ಟೇ ಅಲ್ಲದೆ ಬೆಲ್ ಬಾಟಮ್ ನಲ್ಲಿ ಇವರ ಒಂದು ಅಭಿನಯವು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ರಿಷಬ್ ಶೆಟ್ಟಿಯವರ ಜೊತೆಗೆ ಇವರ ಕಾಂಬಿನೇಷನ್ ತುಂಬಾ ಚೆನ್ನಾಗಿ ಪರದೆಯ ಮೇಲೆ ಮೂಡಿತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವಂತಹ ಹರಿಪ್ರಿಯಾ ಅವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಈ ಫೋಟೋಗಳಿಗೆ ಸಾಕಷ್ಟು ರೀತಿಯದಂತಹ ಲೈಕ್ಸ್ ಗಳು ಕೂಡ ಬರುತ್ತದೆ.
ಹರಿಪ್ರಿಯಾ ಅವರು ಮಾಡಿರುವಂತಹ ಈ ಒಂದು ಕೆಲಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗುತ್ತಿದೆ ನಟ ಮತ್ತು ನಟಿಯರು ಏನೇ ಮಾಡಿದರು ಸಹ ಅದನ್ನು ಜನರು ಬೇಗ ಗುರುತಿಸುತ್ತಾರೆ ಅಷ್ಟೇ ಅಲ್ಲದೆ ಅದು ವೈರಲ್ ಆಗುವಂತೆ ಮಾಡುತ್ತಾರೆ. ಅದೇ ಸಾಲಿನಲ್ಲಿ ನಟಿ ಹರಿಪ್ರಿಯಾ ಅವರು ಮಾಡಿರುವಂತಹ ಈ ಒಂದು ಕೆಲಸವೂ ಸಹ ವೈರಲ್ ಆಗುತ್ತಿದೆ ಅದು ಏನೆಂದರೆ ಹರಿಪ್ರಿಯಾ ಅವರು ತಮ್ಮ ಬೆನ್ನಿನ ಮೇಲೆ ಮತ್ಸ ಕನ್ಯೆ ಇರುವಂತಹ ಚಿತ್ರವನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಅವರು ಬೆನ್ನಿನ ಮೇಲೆ ಮತ್ಸ್ಯ ಕನ್ಯೆಯ ಟ್ಯಾಟೋ ಹಾಕಿಸಿಕೊಂಡಿರುವಂತಹ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.