ಮದುವೆಯಾಗಿ ಹಲವು ವರ್ಷಗಳಾದರೂ ಕೂಡ ಮಕ್ಕಳಾಗಿಲ್ಲ ಅಂದರೆ ಆ ದಂಪತಿಗಳಿಗೆ ಆಗುವ ನೋವು ಅಷ್ಟಿಷ್ಟಲ್ಲ. ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ಅವರು ಆಡಿಕೊಳ್ಳುವ ವಸ್ತುವಾಗಿ ಬಿಡುತ್ತಾರೆ. ಅಲ್ಲದೆ ಸಂತಾನ ಇಲ್ಲದೆ ಇದ್ದವರು ಅನುಭವಿಸುವ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಹಾಗಾಗಿ ಇಂತಹ ದಂಪತಿಗಳು ಯಾರು ಯಾವುದೇ ಪೂಜೆ ಹೇಳಿದರು ಮಾಡುತ್ತಾರೆ.
ಯಾವುದೇ ದೇವಸ್ಥಾನಕ್ಕೆ ಹೋಗಿ ಎಂದು ಸಲಹೆ ಕೊಟ್ಟರು ಕೂಡ ಅದನ್ನು ತಪ್ಪದೇ ಪಾಲಿಸುತ್ತಾರೆ. ಆಸ್ಪತ್ರೆಗಳಿಗಂತೂ ಲೆಕ್ಕವೇ ಇಲ್ಲ ಇಷ್ಟೆಲ್ಲಾ ಆದಮೇಲೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ಸಂತಾನ ಪ್ರಾಪ್ತಿ ಆಗದೆ ಇದ್ದರೆ ಈ ವಿಶೇಷ ದೇವಸ್ಥಾನಕ್ಕೆ ಭೇಟಿ ಕೊಡಿ ವರ್ಷ ತುಂಬುವುದರ ಒಳಗೆ ನಿಮ್ಮ ಮನೆಯಲ್ಲಿ ತೊಟ್ಟಿಲು ತೂಗುತ್ತದೆ.
ಪಾರ್ವತಿ ಮಾತೆಯ ಮತ್ತೊಂದು ರೂಪವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪ್ರತಿಯೊಬ್ಬರೂ ಕೂಡ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಶಕ್ತಿ ದೇವತೆಯ ಸನ್ನಿಧಾನಕ್ಕೆ ಭೇಟಿ ಕೊಟ್ಟು ತಾಯಿಯ ದರ್ಶನವನ್ನು ಪಡೆದು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹಂಬಲಿಸುತ್ತಾರೆ.
ಈ ರೀತಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡುವವರು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ವನದುರ್ಗದೇವಿ ದೇವಸ್ಥಾನಕ್ಕೂ ಹೋದರೆ ಬಹಳ ಒಳ್ಳೆಯದು. ಆದರೆ ಅನೇಕರಿಗೆ ಇದರ ಬಗ್ಗೆ ಮಾಹಿತಿ ತಿಳಿಯದ ಕಾರಣ ಈ ದೇವಸ್ಥಾನಕ್ಕೆ ಹೋಗುವುದಿಲ್ಲ. ಆ ಮಾರ್ಗವಾಗಿ ಹೋಗುವಾಗ ಒಂದು ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನದ ಕಡೆ ನೋಡಿದರೆ ದೇವಸ್ಥಾನದ ಹೊರ ಭಾಗವೆಲ್ಲ ಸಣ್ಣ ಸಣ್ಣ ತೊಟ್ಟಿಲುಗಳಿಂದ ತುಂಬಿ ಹೋಗಿರುತ್ತದೆ. ಈ ದೇವಸ್ಥಾನದ ವಿಶೇಷತೆಯೇ ಇದಾಗಿದೆ.
ಇಲ್ಲಿನ ಅರ್ಚಕರು ಹೇಳುವ ವನದುರ್ಗ ದೇವಿಯು ಮಕ್ಕಳಾಗದ ದಂಪತಿಗಳಿಗೆ ಸಂತಾನ ಭಾಗ್ಯವನ್ನು ದೊರಕಿಸುವ ದೇವಿಯಾಗಿದ್ದಾರೆ. ಇಲ್ಲಿಗೆ ಬರುವ ಭಕ್ತಾದಿಗಳ ಪೈಕಿ ಹೆಚ್ಚಿನ ಮಂದಿ ಸಂತಾನ ಭಾಗ್ಯಕ್ಕಾಗಿ ಹರಕೆ ಹೊರುವವರೇ ಆಗಿರುತ್ತಾರೆ. ಈ ಸಮಸ್ಯೆಗೆ ಮಾತ್ರವಲ್ಲದೆ ವ್ಯಾಪಾರ ವ್ಯವಹಾರ ಅಭಿವೃದ್ಧಿ ಅನಾರೋಗ್ಯ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸ ಈ ರೀತಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರೂ ಕೂಡ ಇಲ್ಲಿಗೆ ಬಂದು ಹರಕೆ ಕಟ್ಟಿಕೊಂಡು ಹೋದರೆ ಅದು ಶೀಘ್ರವಾಗಿ ಪರಿಹಾರ ಆಗುತ್ತದೆ ಎನ್ನುವುದು ಇಲ್ಲಿನ ಭಕ್ತಾದಿಗಳು ನಂಬಿಕೆ.
ಅದರಲ್ಲೂ ಸಂತಾನ ಭಾಗ್ಯಕ್ಕಾಗಿ ಹರಕೆ ಕಟ್ಟಿಕೊಂಡು ಹೋದರೆ ಒಂದು ವರ್ಷದ ಒಳಗಡೆ ಅವರಿಗೆ ಮಕ್ಕಳ ಭಾಗ್ಯ ಸಿಗುತ್ತದೆ. ಮತ್ತು ಈ ರೀತಿ ಅವರ ಕೋರಿಕೆ ನೆರವೇರಿದ ನಂತರ ಆ ದಂಪತಿಗಳು ತಪ್ಪದೆ ಈ ದೇವಸ್ಥಾನಕ್ಕೆ ಬಂದು ಮಂಗಳಾರತಿ ಮಾಡಿಸಿ ಪೂಜೆ ಮಾಡಿಸಿ ಒಂದು ಮರದ ತೊಟ್ಟಿಲನ್ನು ತಾಯಿಗೆ ಕಟ್ಟಿ ಹೋಗುತ್ತಾರೆ. ಹಾಗಾಗಿ ದೇವಸ್ಥಾನ ಪೂರ್ತಿ ಈ ರೀತಿ ಸಣ್ಣ ಸಣ್ಣ ತೊಟ್ಟಿಲುಗಳಿಂದ ತುಂಬಿಹೋಗಿದೆ .
ಬೇರೆ ಸಮಸ್ಯೆಗಳಿಗೆ ಹರಕೆ ಹುಟ್ಟಿದವರು ಅವರ ಕೋರಿಕೆ ನೆರವೇರಿದ ಅಥವಾ ಸಮಸ್ಯೆ ಪರಿಹಾರವಾದ ಬಳಿಕ ಇಲ್ಲಿ ಘಂಟೆಯನ್ನು ಕಟ್ಟುತ್ತಾರೆ ಅಥವಾ ಕುರಿ ಕೋಳಿಗಳನ್ನು ಬಲಿಕೊಡುವುದಾಗಿ ಹರಕೆ ಹೊತ್ತು , ಹರಕೆಯನ್ನು ಪೂರೈಸುತ್ತಾರೆ ಅಥವಾ ವಸ್ತ್ರವನ್ನಾಗಲಿ ದೀಪಗಳನ್ನೇ ಆಗಲಿ ಇನ್ಯಾವುದೇ ರೀತಿಯ ಕಾಣಿಕೆಗಳನ್ನು ಕೂಡ ಅವರು ಯಾವ ರೀತಿ ಹರಕೆ ಮಾಡಿದ್ದರೂ ಆ ರೀತಿ ಕೊಡುತ್ತಾರೆ. ಈ ದೇವಿಯನ್ನು ಮಾಸ್ತಿಯಮ್ಮ ಎಂದು ಕೂಡ ಕರೆಯುತ್ತಾರೆ. ಮುಂದಿನ ಬಾರಿ ನೀವು ಕೊಲ್ಲೂರು ಮೂಕಾಂಬಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ತಪ್ಪದೆ ಈ ದೇವಸ್ಥಾನಕ್ಕೂ ಕೂಡ ಹೋಗಿ ಮಾಸ್ತಿ ಅಮ್ಮನ ದರ್ಶನ ಮಾಡಿ ಬನ್ನಿ.