ಇತ್ತೀಚಿಗಷ್ಟೇ ಮದುವೆಯಾದ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ನಟಿ, ನಿರೂಪಕಿ ಮಹಾಲಕ್ಷ್ಮಿ ಈ ಇಬ್ಬರು ಸಹ ದೂರ ದೂರವಾಗುವಂತಹ ಸಂದರ್ಭ ಒದಗಿ ಬಂದಿದೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರಿಗೂ ಸಹ ಇಂತಹ ಸ್ಥಿತಿ ಬರಬಾರದು ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ನಟಿ ಮಹಾಲಕ್ಷ್ಮಿ ಅವರು ನಿರೂಪಕಿ ಅಷ್ಟೇ ಅಲ್ಲದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ 1 ರಂದು ಈ ಇಬ್ಬರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆಯ ಸುಂದರ ಕ್ಷಣದ ಫೋಟೋಗಳು ಹಾಗೆ ಇವರಿಬ್ಬರೂ ಹನಿಮೂನ್ ಗೆ ತೆರಳಿ ಅಲ್ಲಿ ತೆಗೆದುಕೊಂಡಿರುವಂತಹ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳೊಂದಿಗೆ ಖುಷಿಯನ್ನು ವ್ಯಕ್ತಪಡಿಸಿಕೊಂಡಿದ್ದರು.
ಕೇವಲ ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಕೂಡ ಮಹಾಲಕ್ಷ್ಮೀ ಅವರು ಜನಪ್ರಿಯತೆ ಪಡೆದಿದ್ದಾರೆ. ನಿರ್ಮಾಪಕ ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ನಟಿಸಿದ್ದರು. ಈ ಒಂದು ಸಿನಿಮಾದಲ್ಲಿ ನಟಿಸಿದ ನಂತರ ಈ ಇಬ್ಬರಿಗೂ ಪರಿಚಯವಾಗಿ ಇವರ ಪರಿಚಯ ಸ್ನೇಹಕ್ಕೆ ತಿರುಗುತ್ತದೆ ಕಾಲ ಕಳೆದ ಹಾಗೆ ಇಬ್ಬರ ನಡುವೆ ಆ ಪ್ರೀತಿ ಏರ್ಪಡುತ್ತದೆ ರವೀಂದರ್ ಮತ್ತು ಮಹಾಲಕ್ಷ್ಮಿ ಅವರಿಗೆ ಇಬ್ಬರಿಗೂ ಹೊಂದಿಕೆ ಆಗುವಂತಹ ಒಂದು ವಿಷಯ ಎಂದರೆ ಈ ಇಬ್ಬರು ಸಹ ಮೊದಲೇ ಒಂದು ಮದುವೆಯನ್ನು ಆಗಿದ್ದು ಅವರಿಂದ ದೂರ ಉಳಿದುಕೊಂಡಿದ್ದಾರೆ. ಈ ಒಂದು ಕಾರಣಕ್ಕೆ ಇಬ್ಬರಿಗೂ ಪ್ರೀತಿ ಉಂಟಾಗಿರಬಹುದು ಎನ್ನುವಂತಹ ವಿಷಯಗಳು ಆಗಾಗ ಕೇಳಿ ಬರುತ್ತದೆ. ಮಹಾಲಕ್ಷ್ಮಿ ಅವರು ನಟಿಸಿರುವಂತಹ ಧಾರಾವಾಹಿಗಳೆಂದರೆ ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಹೆಚ್ಚಿನ ಕೀರ್ತಿಯನ್ನು ಪಡೆದುಕೊಂಡರು.
ಅದೇ ರೀತಿಯಲ್ಲಿ ರವೀಂದರ್ ಚಂದ್ರಶೇಖರನ್ ಅವರು ಕೂಡ ನಟ್ಪುನ ಎನ್ನಡು ಥೆರಿಯುಮ, ಮುರುಂಗೈಕೈ ಚಿಪ್ಸ್, ವಿಡಿಯುಮ್ ವಾರೈ ಕಾಥಿರು, ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇಬ್ಬರಿಗೂ ಸಹ ನೋಡಲು ಎಷ್ಟು ವ್ಯತ್ಯಾಸಗಳಿದೆಯೋ ಅವರ ವಯಸ್ಸಿನಲ್ಲಿಯೂ ಅಷ್ಟೇ ಅಂತರ ಇದೆ ನಟಿ ಮಹಾಲಕ್ಷ್ಮಿ ಅವರಿಗೆ ಈಗ 32 ವರ್ಷ ಆದರೆ ರವೀಂದರ್ ಚಂದ್ರಶೇಖರ್ ಅವರಿಗೆ ಈಗ 52 ವರ್ಷ ಈ ಇಬ್ಬರ ನಡುವೆ ಸುಮಾರು 20 ವರ್ಷಗಳ ಏರುಪೇರು ಇದ್ದು ಆದರೂ ಸಹ ನಟಿ ಮಹಾಲಕ್ಷ್ಮಿ ಅವರು ಒಪ್ಪಿಕೊಂಡು ಮದುವೆಯಾಗಿದ್ದಾರೆ.
ಇವರ ಜೋಡಿಯನ್ನು ನೋಡಿದಂತಹ ಕೆಲವರು ಪ್ರೀತಿಗೆ ಕಣ್ಣಿಲ್ಲ ಎಂದು ಹೇಳಿದರೆ ಇನ್ನು ಕೆಲವರು ದುಡ್ಡಿಗಾಗಿ ಈ ರೀತಿಯಾಗಿ ಮದುವೆಯಾಗಿದ್ದಾರೆ ಎನ್ನುವಂತಹ ಸುದ್ದಿಗಳು ಕೇಳಿ ಬರುತ್ತಿವೆ. ಈ ಇಬ್ಬರು ಮದುವೆಯಾದ ನಂತರ ಬೇರೆ ಬೇರೆ ಆಗುತ್ತಿರುವ ಕಾರಣ ಏನೆಂದರೆ ರವೀಂದರ್ ಚಂದ್ರಶೇಖರ್ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎನ್ನುವಂತಹ ಊಹಾ ಪೋಹಗಳು ಸೃಷ್ಟಿಯಾಗಿದ್ದವು. ಆದರೆ ಈ ಒಂದು ವಿಷಯಕ್ಕೆ ತೆರೆ ಬಿದ್ದದೆ ರವೀಂದರ್ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಸ್ವತಹ ಅವರೇ ಹೇಳಿಕೊಂಡಿದ್ದಾರೆ. ಇನ್ನು ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.