ಮನೆ ಕಟ್ಟಿಸಬೇಕು ಎನ್ನುವುದು ಸುಲಭವಾದ ವಿಚಾರವಲ್ಲ ಮನೆ ಕಟ್ಟಿಸುವಾಗ ಪಾಯ ತೆಗೆಯುವುದರಿಂದ ಹಿಡಿದು ಬೆಡ್ ಹಾಕುವವರಿಗೆ, ಇಂಟೀರಿಯರ್ ಮಾಡಿಸುವುದರಿಂದ ಹಿಡಿದು ಪೇಂಟ್ ಆಗುವವರಿಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ವಿಚಾರ ಪ್ರತಿಯೊಂದರಲ್ಲೂ ಎಚ್ಚರಿಕೆಯಿಂದ ಇರಬೇಕು.
ಇಲ್ಲವಾದಲ್ಲಿ ಯಾವುದೇ ವ್ಯತ್ಯಾಸಗಳಾದರೂ ನಂತರ ಸುಮ್ಮನೆ ಸರಿಪಡಿಸುವುದಕ್ಕೆ ಹಣ ಹಾಗೂ ಸಮಯ ವ್ಯರ್ಥವಾಗುವುದಲ್ಲದೆ ಅಥವಾ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡಬೇಕು. ಇದರಲ್ಲಿ ಮನೆಯ ಪ್ಲಂಬಿಂಗ್ ವಿಚಾರ ಕೂಡ ಬಹಳ ಮುಖ್ಯ ಪಾತ್ರ ವಹಿಸುವಂಥದ್ದು ಹಾಗಾಗಿ ಇಂದು ಈ ಲೇಖನದಲ್ಲಿ ಮನೆ ಕಟ್ಟಿಸುವವರು ಪ್ಲಂಬಿಂಗ್ ವಿಚಾರವಾಗಿ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಮನೆಗೆ ಪ್ಲಂಬಿಂಗ್ ಮಾಡಿಸುವಾಗ ಮುಖ್ಯವಾಗಿ ಈ ವಿಚಾರಗಳು ಗೊತ್ತಿರಲಿ, ಇಲ್ಲವಾದಲ್ಲಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ..
* ಸಾಮಾನ್ಯವಾಗಿ ನಾವು ಎಲ್ಲಾದಕ್ಕೂ ಒಂದೇ ಸೈಜಿನ ಪೈಪ್ ಗಳನ್ನು ತರುತ್ತೇವೆ. ಇದು ತಪ್ಪು, ಇನ್ ಲೆಟ್ ಎಷ್ಟಿರಬೇಕು? ಔಟ್ ಲೆಟ್ ಎಷ್ಪಿರಬೇಕು, ಫ್ಲೋರಿಂಗ್ ಗೆ ಗೇಜ್ ಎಷ್ಟಿರಬೇಕು, ವರ್ಟಿಕಲ್ ಆದರೆ ಎಷ್ಟಿರಬೇಕು? ಎಂದು ಸರಿಯಾಗಿ ಕೇಳಿಕೊಂಡು ಮುಂದುವರಿಯಬೇಕು.
* ಪ್ರತಿಯೊಂದು ಮನೆಗೂ ಪ್ರತ್ಯೇಕವಾಗಿ ಯೂನಿಟ್ ಇರಬೇಕು ರೆಡ್ಯೂಸರ್ ಹಾಕಿಕೊಂಡು ಬೇರೆ ಮನೆಗೆ ಕನೆಕ್ಟ್ ಮಾಡಿದರೆ ತಪ್ಪಾಗುತ್ತದೆ, ಪ್ರೆಷರ್ ಬರುವುದಿಲ್ಲ. ಪ್ರತಿಯೊಂದು ಮನೆಗೂ ಕೂಡ ಪ್ರತ್ಯೇಕವಾದ ಲೈನ್ ಬರಬೇಕು.
* ಇನ್ ಫ್ಲೋ 3/4 ಅಥವಾ 1 ಇಂಚು ಇರುತ್ತದೆ ಎಂದುಕೊಳ್ಳೋಣ ಔಟ್ ಗೋಯಿಂಗ್ ಗೆ ಸಾಲಿಡ್ ಲಿಕ್ವಿಡ್ ವೇಸ್ಟೇಜ್ ಎರಡು ಕೂಡ ಅಂಡರ್ ಡ್ರೈನೇಜ್ ಕನೆಕ್ಷನ್ ಅಥವಾ ಸೆಫ್ಟಿಕ್ ಟ್ಯಾಂಕ್ ಕನೆಕ್ಷನ್ ಹೊಂದಿದ್ದರೆ ಎರಡು ವೇಸ್ಟೇಜ್ ಗಳನ್ನು ಕನೆಕ್ಟ್ ಮಾಡಿ ಬಿಡಬಹುದು.
ಈ ಸುದ್ದಿ ಓದಿ:- ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ನೆರವು.! ಆಸಕ್ತರು ಅರ್ಜಿ ಸಲ್ಲಿಸಿ.!
ಸಪರೇಟ್ ಆಗಿ ಫಿಟ್ ಹೊಡೆದು ಮಾಡುವುದಾದರೆ ಸಾಲಿಡ್ ವೇಸ್ಟ್ ಗಳಾದ ಟಾಯ್ಲೆಟ್ ವೇಸ್ಟ್ ಹಾಗೂ ಕಿಚನ್ ವೇಸ್ಟ್ ಗಳು ಸಪರೇಟ್ ಆಗಿ ಒಂದು ಕನೆಕ್ಷನ್, ಪ್ಯಾಸೇಜ್ ನಲ್ಲಿ ಬಿದ್ದ ನೀರು ಡ್ರೈನೆಜ್ ಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಈ ರೀತಿ ಕನೆಕ್ಷನ್ ಬಿಡುವಾಗ ಎರಡನ್ನು ಒಂದಕ್ಕೆ ಕನೆಕ್ಟ್ ಮಾಡಿ ಬಿಟ್ಟರೆ ಬೇಗನೆ ಫಿಟ್ ಗಳು ತುಂಬಿ ಹೋಗುತ್ತವೆ.
ಆಗ ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಒಂದೊಂದು ಫಿಟ್ ತೆಗೆಯಬೇಕಾಗುತ್ತದೆ. ಹಾಗಾಗಿ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕು ಡ್ರೈನೇಜ್ ಗೆ ಹೋಗುವುದು ಡ್ರೈನೆಜ್ ಗೆ ಬಿಡಬೇಕು, ಫಿಟ್ ಗೆ ಹೋಗಬೇಕಾದದ್ದನ್ನು ಫಿಟ್ ಗೆ ಬಿಡಬೇಕು.
* ಆಚೆಗೆ ಹೋಗುವ ಎಲ್ಲಾ ಕನೆಕ್ಷನ್ ಗಳು 5-6 ಇಂಚು ಇರಬೇಕು ಇದು ಸ್ಟ್ಯಾಂಡರ್ಡ್. ಹಾರಿಜಾಂಟಲ್ ಸರ್ಫೇಸ್ ನಲ್ಲಿ ಹೋಗುವ ಎಲ್ಲವೂ ಕೂಡ ದೊಡ್ಡ ಪೈಪ್ ಗಳು ದೊಡ್ಡದಾಗಿರಬೇಕು, ವರ್ಟಿಕಲ್ ಆಗಿ ಇಳಿಯುವಂತಹ ಕನೆಕ್ಷನ್ ಗಳಿಗೆಲ್ಲಾ 4 ಇಂಚು ಇದ್ದರೆ ಸಾಕು, ಈ ರೀತಿ ಇದ್ದಾಗ ಬ್ಲಾಕೇಜ್ ಗಳು ಆಗುವ ಸಾಧ್ಯತೆ ಬಹಳ ಕಡಿಮೆ ಎನ್ನುವ ಮಾತುಗಳಿವೆ.
ಈ ಸುದ್ದಿ ಓದಿ:- ಸೀತಾರಾಮ್ ಜಿಂದಾಲ್ ವಿದ್ಯಾರ್ಥಿ ವೇತನ, ಪ್ರತಿ ತಿಂಗಳು 3,200 ಸ್ಕಾಲರ್ಶಿಪ್ ಬರುತ್ತೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.!
* ಯಾವುದೇ ಪೈಪ್ ಗಳನ್ನು ಹಾಕುವಾಗ ಎಚ್ಚರ ವಹಿಸಲೇಬೇಕಾದ ಮತ್ತೊಂದು ವಿಚಾರವೇನೆಂದರೆ ನೀರು ಹೋಗಲು ಪೈಪ್ ಗಳನ್ನು ಅನುಕೂಲವಾಗುವಂತೆ ಕನೆಕ್ಟ್ ಮಾಡುವುದು ಮಾತ್ರವಲ್ಲದೆ ಸಿವಿಲ್ ವರ್ಕ್ ನಲ್ಲೂ ಕೂಡ ಆ ಏರಿಯಾಗಳು ಸ್ಲೋಪ್ ಆಗಿರುವಂತೆ ನೋಡಿಕೊಳ್ಳಬೇಕು.
ಆಗ ಮಾತ್ರ ವಾಟರ್ ಫ್ಲೋ ಈಸಿಯಾಗಿ ಆಗುತ್ತದೆ, ಎಲ್ಲೂ ಬ್ಲಾಕ್ ಆಗುವುದಿಲ್ಲ. ಮುಖ್ಯವಾಗಿ ಟಾಯ್ಲೆಟ್ ನಲ್ಲೂ ಕೂಡ ಔಟ್ಲೆಟ್ ಹೊರಗೆ ಕೊಟ್ಟಿದ್ದರು ಆ ಚೇಂಬರ್ ಗೆ ಫ್ಲೋ ಹೋಗಲು ಸ್ಲೋಪ್ ಆಗಿರುವಂತೆ ನೋಡಿಕೊಳ್ಳಬೇಕು. ಈ ವಿಚಾರದ ಬಗ್ಗೆ ಇನ್ನೂ ಇತ್ಯಾದಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.