ಲೇಬರ್ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತ.? ತಿಂಗಳ ಖರ್ಚಿನಲ್ಲಿ 50% ಭಾಗ ಉಳಿತಾಯ ಆಗುತ್ತೆ.

ಕರ್ನಾಟಕ ಸರ್ಕಾರವು ಆಗಾಗ ಹಲವು ಯೋಜನೆಗಳನ್ನು ಜಾರಿ ಮಾಡಿ ಜನಸಾಮಾನ್ಯರಿಗೆ ಮಾಡುತ್ತಿರುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಕಟ್ಟಡ ಕಾರ್ಮಿಕರಿಗಾಗಿ ಕೂಡ ಲೇಬರ್ ಕಾರ್ಡ್ ಯೋಜನೆ ಹೊರತಂದಿದ್ದು ಇದರ ಮೂಲಕ ಅನೇಕ ಅನುಕೂಲತೆಗಳನ್ನು ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಮಾಡುತ್ತಿದ್ದೆ. ಈ ರೀತಿ ಕಟ್ಟಡ ಕಾರ್ಮಿಕರು ಈ ಎಲ್ಲಾ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದರೆ ಅವರು ಕಡಾ ಖಂಡಿತವಾಗಿ ಆ ಲೇಬರ್ ಕಾರ್ಡನ್ನು ಹೊಂದಿರಲೇಬೇಕು.

WhatsApp Group Join Now
Telegram Group Join Now

ಹಾಗಾದರೆ ಇಷ್ಟೆಲ್ಲಾ ಉಪಯೋಗ ಕೊಡುವ ಈ ಲೇಬರ್ ಕಾರ್ಡನ್ನು ಮಾಡಿಸುವುದು ಹೇಗೆ ಅನ್ನುವುದನ್ನು ಮೊದಲು ತಿಳಿದುಕೊಳ್ಳಿ. ಈ ಅನುಕೂಲ ಪಡೆಯಲು ಮೊದಲು ನೀವು ಕರ್ನಾಟಕದವರಾಗಿರಬೇಕು ಮತ್ತು ನಿಮ್ಮ ಬಳಿ ಕಟ್ಟಡ ಕಾರ್ಮಿಕ ಎನ್ನುವುದಕ್ಕೆ ಗೊತ್ತಿಗೆದಾರ
ರಿಂದ ಪಡೆದ ಪ್ರಮಾಣ ಪತ್ರ ಇರಬೇಕು ಅಥವಾ ಆ ಫಾರ್ಮ್ ಫೀಲ್ ಆಗಿರಬೇಕು ನಿಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್ ಮತ್ತು ಪ್ಯಾನ್ ಕಾರ್ಡ್ ಪ್ರತಿಗಳು ಇಷ್ಟು ಇದ್ದರೆ ಸಾಕು.

ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಅಥವಾ ಬೆಂಗಳೂರು ಒನ್ ಅಥವಾ ಆನ್ಲೈನ್ ಮೂಲಕ ಅಪ್ಲೈ ಮಾಡಿ ಕಾರ್ಮಿಕರ ಕಾರ್ಡ್ ಪಡೆದುಕೊಳ್ಳಬಹುದು. ಈ ಲೇಬರ್ ಕಾರ್ಡ್ ಪಡೆದುಕೊಳ್ಳುವುದರ ಜೊತೆಗೆ ಅದರಿಂದ ನಂತರ ಸಿಗುವ ಉಪಯೋಗಗಳು ಏನು ಎಂದು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ಕಾರ್ಡನ್ನು ಪುರುಷ ಅಥವಾ ಮಹಿಳೆ ಎನ್ನುವ ಭೇದ ಭಾವ ಇಲ್ಲದೆ ಯಾರು ಬೇಕಾದರೂ ಹೊಂದಬಹುದು.

ಲೇಬರ್ ಕಾರ್ಡ್ ಅನ್ನು ಹೊಂದಿರುವ ವ್ಯಕ್ತಿಯು ಇಡೀ ಕರ್ನಾಟಕದಾದ್ಯಂತ ಉಚಿತವಾಗಿ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಪ್ರಯಾಣಿಸಬಹುದು. ಪ್ರತಿ ತಿಂಗಳು ಇವರಿಗೆ ಒಂದು ಸಾವಿರದವರೆಗೆ ಪಿಂಚಣಿ ಬರುತ್ತದೆ. ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವ ಇವರು ಮನೆ ಹೊಂದದೆ ಇದ್ದಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಆದರೂ ಮನೆ ಕಟ್ಟಿಕೊಳ್ಳಲು ಇಚ್ಛಿಸಿದರೆ ಎರಡು ಲಕ್ಷಗಳವರೆಗೆ ಮುಂಗಡ ಸಾಲ ಸಿಗುತ್ತದೆ.

ಕಟ್ಟಡ ಕಾರ್ಮಿಕ ಕಾರ್ಡ್ ಹೊಂದಿರುವವರು ಕೆಲಸ ಮಾಡುವಾಗ ಅಪಘಾತ ಹೊಂದಿ ಅಂಗವಿಕಲರಾದರೆ ಎರಡು ಲಕ್ಷಗಳವರೆಗೆ ಪರಿಹಾರ ಸಿಗುತ್ತದೆ. ಅಥವಾ ಅವರು ಮರಣ ಹೊಂದಿದ ಪಕ್ಷದಲ್ಲಿ ಅವರ ಕುಟುಂಬದವರಿಗೆ 5 ಲಕ್ಷ ವಿಮೆ ಸಿಗುತ್ತದೆ. ಕಟ್ಟಡ ಕಾರ್ಮಿಕರ ಮಹಿಳೆ ಗಂಡು ಮಗುವಿಗೆ ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಿದರೆ 20000 ದ ವರೆಗೆ ಹಣ ಸಹಾಯ ದೊರೆಯುತ್ತದೆ.

ಮತ್ತು ಕಟ್ಟಡ ಕಾರ್ಮಿಕರ ಕುಟುಂಬಕ್ಕೂ ಕೂಡ ಅನುಕೂಲತೆಗಳಿದ್ದು ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಹೊಂದುತ್ತಿದ್ದಾರೆ ಅವರಿಗೆ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕವೂ ವಿದ್ಯಾರ್ಥಿ ವೇತನ ಬರುತ್ತದೆ. ಮತ್ತು ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂಕಗಳ ಆಧಾರದ ಮೇಲೆ ಇನ್ನೂ ಹೆಚ್ಚಿಗೆ ವಿದ್ಯಾರ್ಥಿ ವೇತನ ಕೂಡ ಸಿಗುತ್ತದೆ. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ 50,000 ವರೆಗೆ ಧನ ಪ್ರೋತ್ಸಾಹ ದೊರೆಯುತ್ತದೆ. ಇಷ್ಟೆಲ್ಲಾ ಅನುಕೂಲತೆ ಇರುವ ಈ ಕಾರ್ಡ್ ನ ಮಾಹಿತಿ ತಿಳಿದುಕೊಂಡು ನೀವು ಸಹ ಕಟ್ಟಡ ಕಾರ್ಮಿಕರಾಗಿದ್ದರೆ ತಪ್ಪದೇ ಆದಷ್ಟೂ ಬೇಗ ಕಾರ್ಡ್ ಪಡೆದುಕೊಂಡು ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now