ಹೆತ್ತವರ ಆಸ್ತಿಯನ್ನು ಮಕ್ಕಳು ಬರೆಸಿಕೊಂಡು ಮನೆಯಿಂದ ಆಚೆ ಹಾಕಿದಾಗ, ತಂದೆ-ತಾಯಿ ಆ ಆಸ್ತಿಯನ್ನು ಮರಳಿ ಪಡೆಯಬಹುದು ಹೇಗೆ ಗೊತ್ತ.?

ಹಿರಿಯರ ಕುಟುಂಬದ ಆಸ್ತಿ, ಹಣ್ಣೆಲೆ ವಯಸ್ಸಿನಲ್ಲಿ ಕಿರಿಯರು ಅವರ ಪೋಷಣೆ ಮಾಡಬೇಕಾದದ್ದು ಅವರ ಕರ್ತವ್ಯ. ಆದರೆ 60 ವರ್ಷ ಮೇಲ್ಪಟ್ಟ ವೃದ್ಧರನ್ನು ಅವರ ಆಸ್ತಿ ಬರೆಸಿಕೊಂಡು ಮನೆಯಿಂದ ಸ್ವಂತ ಮಕ್ಕಳೇ ಆಚೆ ಹಾಕುತ್ತಿದ್ದಾರೆ ಅಥವಾ ಅನಾಥಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಅಂತಹ ಸಮಯದಲ್ಲಿ ಹಿರಿಯರಿಗೆ ಮಕ್ಕಳ ಆ ನಿರ್ಧಾರ ಇಷ್ಟ ಆಗಲಿಲ್ಲ ಎಂದರೆ ತಾವು ಅವರಿಗೆ ಬರೆದು ಕೊಟ್ಟಿದ್ದ ಆಸ್ತಿಯನ್ನು ಹಿಂಪಡೆಯಬಹುದು ಅದಕ್ಕೆ ಕಾನೂನು ಅಡಿಯಲಿ ಕ್ರಮಗಳು ಇವೆ.

ಹಿರಿಯ ನಾಗರಿಕರ ಕಾಯ್ದೆ 2007 ಮತ್ತು ಪೋಷಕರ ಕಲ್ಯಾಣ ಮತ್ತು ನಿರ್ವಹಣ ಕಾಯ್ದೆ 2007 ಅಸ್ತ್ರವನ್ನು ಬಳಸಿ ಕಾನೂನು ಅಡಿಯಲ್ಲಿ ರಕ್ಷಣೆ ಪಡೆಯಬಹುದು. ಯಾವ ರೀತಿ ತಮ್ಮ ಮಕ್ಕಳಿಗೆ ಮಾಡಿಕೊಟ್ಟ ಆಸ್ತಿಯನ್ನು ವಾಪಸ್ಸು ಪಡೆಯಬಹುದು ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ. ಆ ರೀತಿ ಬರೆದುಕೊಟ್ಟ ಆಸ್ತಿಯನ್ನು ವಾಪಸ್ಸು ಪಡೆಯಬೇಕು ಎಂದರೆ ಮೊದಲಿಗೆ ಆಸ್ತಿಯ ದಾಖಲೆ ಪತ್ರಗಳನ್ನು ಪಡೆದುಕೊಳ್ಳಬೇಕು ನಂತರ ಮಕ್ಕಳು ವಾಸ ಮಾಡುತ್ತಿರುವ ಅಥವಾ ಆ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಾಸ ಸ್ಥಳ ಧೃಡೀಕರಣ ಪತ್ರ ಪಡೆದುಕೊಳ್ಳಬೇಕು.

ಆಮೇಲೆ ಕರ್ನಾಟಕದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಾಧಿಕರಣ ಪೀಠದಲ್ಲಿ ದಾವೆ ಸಲ್ಲಿಸಬಹುದು. ಇಲ್ಲಿ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ನಿರ್ವಹಣಾಧಿಕಾರಿ ಇರುತ್ತಾರೆ ಅಥವಾ ಕೆಲವೊಂದು ಜಿಲ್ಲೆಗಳಲ್ಲಿಯೇ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಿರ್ವಹಣಾಧಿಕಾರಿಗಳು ಇರುತ್ತಾರೆ. ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಹೇಳಿಕೊಂಡು ದೂರು ಕೊಟ್ಟರೆ ಅವರು ನ್ಯಾಯವಾದ ರೀತಿಯಲ್ಲಿ ಆ ಕುರಿತು ವಿಚಾರಣೆ ನಡೆಸಿ ಹಿರಿಯರಿಗೆ ಅವರ ಆಸ್ತಿ ವಾಪಸ್ ಸಿಗುವಂತೆ ಮಾಡುತ್ತಾರೆ.

ಉಪ ವಿಭಾಗಾಧಿಕಾರಿಗಳು ಉಪನಂದಾಣಿಕಾರರ ಕಚೇರಿಗೆ ಸಂಪರ್ಕಿಸಿ ಈಗಾಗಲೇ ವರ್ಗಾವಣೆ ಆಗಿದ್ದ ಆಸ್ತಿ ಪತ್ರ ರದ್ದು ಮಾಡುವಂತೆ ಆದೇಶ ಕೊಡುತ್ತಾರೆ. ಅದು ಮಾಡಿದ ನಂತರ ಉಪ ನೋಂದಾಣಿ ಅಧಿಕಾರಿಗಳು ಹಿರಿಯರ ಹೆಸರಿಗೆ ಖಾತೆ ವರ್ಗಾವಣೆ ಮಾಡಿ ಎಲ್ಲಾ ದಾಖಲೆಗಳನ್ನು ವೃದ್ಧರ ಹೆಸರಿಗೆ ಮಾಡಿಕೊಡುತ್ತಾರೆ. ಇಂತಹ ಸಮಸ್ಯೆ ಬರಬಾರದು ಎಂದು ಯೋಚಿಸುವುದಾದರೆ ಹೀಗೆ ವೃದ್ಧರು ದಾನ ಪತ್ರದ ಆಸ್ತಿ ವರ್ಗಾವಣೆ ಮಾಡುವುದರ ಬದಲು ಉಯಿಲು ಬರೆದು ಇಡಬಹುದು.

ಉಯಿಲು ಮಾಡಿಸಿ ತಾವು ಮರಣ ಹೊಂದಿದ ಬಳಿಕ ಮಾತ್ರ ಮಕ್ಕಳಿಗೆ ಆಸ್ತಿ ಹೋಗಬೇಕು ಎಂದು ಬರೆದರೆ ಈ ಸಮಸ್ಯೆ ಬರುವುದೇ ಇಲ್ಲ. ಮಕ್ಕಳು ಆಸ್ತಿ ಆಸೆಯಿಂದ ಆದರೂ ಸಂಧ್ಯಾ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಒಂದು ವೇಳೆ ಆಸ್ತಿ ಇಲ್ಲದಿದ್ದರೂ ಸಹ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಕರ್ತವ್ಯ ಹಾಗೂ ಅವರನ್ನು ಆ ಸಮಯದಲ್ಲಿ ಪೋಷಣೆ ಮಾಡಬೇಕಾದ ಜವಾಬ್ದಾರಿ ಮಕ್ಕಳಿಗೆ ಇರುತ್ತದೆ. ಒಂದು ವೇಳೆ ಅವರು ಅದನ್ನು ಸರಿಯಾಗಿ ಮಾಡಿಲ್ಲ ಎಂದರೆ ಕಾನೂನು ಮೊರೆ ಹೋಗಿ ನಿರ್ವಹಣಾ ವೆಚ್ಚಕ್ಕಾಗಿ ಜೀವನಾಂಶ ಪಡೆಯಬಹುದು.

ಹಿಂದೂ ವಾರಸ್ದಾರ ಕಾಯ್ದೆ ಅನ್ವಯ ಲಿಗಲೇಯರ್ಸ್ ವಿರುದ್ಧ ನಿರ್ವಹಣ ವೆಚ್ಚಕ್ಕಾಗಿ ನ್ಯಾಯಾಲಯದ ಪೀಠದ ಮುಂದೆ ದಾವೇ ಕೊಡಬಹುದು. ಆದೇಶ ನೀಡಿದ ಮೇಲೆ ಅದನ್ನು ಸರಿಯಾಗಿ ಒಂದು ತಿಂಗಳ ಒಳಗೆ ನಿರ್ವಹಿಸದೇ ಹೋದರೆ ಜೈಲು ಶಿಕ್ಷೆಗೂ ಗುರಿ ಆಗಬೇಕಾಗುತ್ತದೆ ಅಥವಾ ವೃದ್ಧರಿಗೆ ಇದೇ ವಿಷಯಕ್ಕಾಗಿ ತೊಂದರೆ ಕೊಟ್ಟರೆ ಶಿಕ್ಷೆ ಮುಂದುವರೆದು ಮೂರು ತಿಂಗಳವರೆಗೂ ಕೂಡ ಜಾರಿಯಾಗಬಹುದು.

Leave a Comment

%d bloggers like this: