ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಕಾಮಿಡಿ ಟೈಮಿಂಗ್ ಮತ್ತೆ ವಿಶೇಷವಾದಂತಹ ಮ್ಯಾನರಿಸಂನ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಿರುವಂತಹ ಚಿಕ್ಕಣ್ಣ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮೇರು ಹಾಸ್ಯ ಕಲಾವಿದ ಎಂದೇ ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನೆ ಅಥವಾ ಹಾಸ್ಯ ಪ್ರಜ್ಞೆ ಎನ್ನುವಂತಹದ್ದು ಎಲ್ಲರಲ್ಲಿಯೂ ಸಹ ಇರುವುದಿಲ್ಲ ಕೆಲವರಲ್ಲಿ ಇದ್ದರೂ ಸಹ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ, ಆದರೆ ಚಿಕ್ಕಣ್ಣ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರ ಜೊತೆಯಲ್ಲಿ ನಟಿಸಿರುವಂತಹ ಚಿಕ್ಕಣ್ಣ ಅವರು ಕೆಲವೊಂದು ಸಿನಿಮಾಗಳಲ್ಲಿ ಹೀರೋಗಿಂತ ಹೆಚ್ಚಾಗಿ ಅವರೇ ಮಿಂಚಿದ್ದಾರೆ ಅಷ್ಟರ ಮಟ್ಟಿಗೆ ಇವರ ಕಾಮಿಡಿ ಟೈಮಿಂಗ್ ಅದ್ಭುತವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬ್ಯುಸಿ ಆಗಿರುವಂತಹ ನಟರ ಪೈಕಿಯಲ್ಲಿ ಚಿಕ್ಕಣ್ಣ ಅವರು ಸಹ ಒಬ್ಬರು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಚಿಕ್ಕಣ್ಣ ಅವರ ಕೈಯಲ್ಲಿದ್ದು, ಮೊಟ್ಟ ಮೊದಲ ಬಾರಿಗೆ ತಾವೇ ಹೀರೋ ಆಗಿ ನಟಿಸುತ್ತಿರುವಂತಹ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಸಹ ನಡೆಯುತ್ತದೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವಂತಹ ಚಿಕ್ಕಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅಂತಹದ್ದೇ ಒಂದು ಸುದ್ದಿ ಇದೀಗ ಸಮಾಜಿಕ ಜಾಲತಾಣದಲ್ಲಿ ಚಿಕ್ಕಣ್ಣ ಅವರ ಬಗ್ಗೆ ನಡೆಯುತ್ತಿದೆ. ಚಿಕ್ಕಣ್ಣ ಅವರು ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವಂತಹ ವದಂತಿ ಕೇಳಿ ಬರುತ್ತಿದೆ ಈ ಪ್ರಶ್ನೆಗಳಿಗೆಲ್ಲ ಚಿಕ್ಕಣ್ಣ ಅವರು ಸ್ವತಹ ತಾವೇ ಉತ್ತರವನ್ನು ನೀಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮಧ್ಯದಲ್ಲಿ ಸಂದರ್ಶನ ಒಂದರಲ್ಲಿ ಭಾಗವಹಿಸಿದಂತಹ ಚಿಕ್ಕಣ್ಣ ಅವರು ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ ಆ ಎಲ್ಲಾ ಪ್ರಶ್ನೆಗಳಿಗೂ ಸಹ ಚಿಕ್ಕಣ್ಣ ಅವರು ಉತ್ತರಿಸುತ್ತಾರೆ.
ಅದರಂತೆಯೇ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದಾಗ ಚಿಕ್ಕಣ್ಣ ಅವರು ಕಂಕಣ ಬಲ ಯಾವಾಗ ಕೂಡಿಬರುತ್ತದೆಯೋ ಆವಾಗ ಮದುವೆ ನಡೆಯುತ್ತದೆ ಎಂದು ಉತ್ತರವನ್ನು ನೀಡಿದ್ದಾರೆ. ಸಾಕಷ್ಟು ಜನರು ಚಿಕ್ಕಣ್ಣ ಅವರ ಕೈ ಹಿಡಿಯಲಿರುವ ಹುಡುಗಿಯ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವಂತಹ ಕುತೂಹಲವನ್ನು ಹೊಂದಿದ್ದಾರೆ ಹಾಗೆಯೇ ಮದುವೆಯ ನಂತರ ಚಿಕ್ಕಣ್ಣ ಅವರು ತಮ್ಮ ಮಡದಿಯನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವಂತಹ ಕುತೂಹಲವು ಸಹ ಸಾಕಷ್ಟು ಜನರಲ್ಲಿ ಇದೆ. ಬಡ ಕುಟುಂಬದಿಂದ ಬಂದಂತಹ ಚಿಕ್ಕಣ್ಣ ಅವರು ತಮ್ಮ ಚಿಕ್ಕವ ಯಸ್ಸಿನಿಂದಲೂ ಸಹ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.
ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಸಹ ಅನುಭವಿಸಿದ್ದಾರೆ ಕಷ್ಟಪಟ್ಟು ಮೇಲೆ ಬಂದವರು ಯಾವಾಗಲೂ ಸಹ ಚೆನ್ನಾಗಿರುತ್ತೆ ಎಂದು ಹೇಳುವುದಕ್ಕೆ ಚಿಕ್ಕಣ್ಣ ಅವರೇ ಸಾಕ್ಷಿ ಅದರಂತೆ ಚಿಕ್ಕಣ್ಣ ಅವರು ತಮ್ಮ ಹಿಂದಿನ ದಿನಗಳನ್ನು ಸಹ ಆಗಾಗ ನೆನಪು ಮಾಡಿಕೊಳ್ಳುತ್ತಾ ಇರುತ್ತಾರೆ. ಒಬ್ಬ ವ್ಯಕ್ತಿ ಒಂದು ಉನ್ನತ ಸ್ಥಾನಕ್ಕೆ ಬರಬೇಕು ಎಂದರೆ ಅದಕ್ಕೆ ಆದಂತಹ ಪರಿಶ್ರಮವು ಹಾಕಬೇಕು. ಎಲ್ಲಾ ಹಾಸ್ಯ ಕಲಾವಿದರ ಬದುಕು ಸಹ ಉತ್ತಮವಾಗಿ ಇರುವುದಿಲ್ಲ ಅವರ ವೈಯಕ್ತಿಕ ಜೀವನವು ಸಹ ಕೆಲವೊಂದಷ್ಟು ನೋವು ನಲಿವುಗಳನ್ನು ಸಹ ಒಳಗೊಂಡಿರುತ್ತದೆ. ಚಿಕ್ಕಣ್ಣ ಅವರು ನಟಿಸುತ್ತಿರುವಂತಹ ಉಪಾಧ್ಯಕ್ಷ ಸಿನಿಮಾದ ನಿರೀಕ್ಷೆಯಲ್ಲಿ ಎಲ್ಲರೂ ಸಹ ಇದ್ದಾರೆ ಈ ಒಂದು ಸಿನಿಮಾ ಅವರಿಗೆ ಉತ್ತಮ ಯಶಸ್ಸನ್ನು ಕೊಡಲಿ ಎಂದು ಅಭಿಮಾನಿಗಳ ಹಾರೈಕೆ.