ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರ ಗಂಧದಗುಡಿ ಸಿನಿಮಾ ಇದೇ ಅಕ್ಟೋಬರ್ 28ರಂದು ರಿಲೀಸ್ ಆಗಿದ್ದು ನಮ್ಮ ಕರ್ನಾಟಕದಲ್ಲಿಡೇ ಯಶಸ್ವಿಯಾದಂತ ಪ್ರದರ್ಶನವನ್ನು ಕಾಣುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವಂತಹ ಈ ಗಂಧದಗುಡಿ ಸಿನಿಮಾವನ್ನು ಶಾಲಾ ಮಕ್ಕಳಿಗೆ ತೋರಿಸಬೇಕು ಎನ್ನುವಂತಹ ಚಿಂತನೆಗಳು ಸಹ ನಡೆಯುತ್ತಿದೆ ಈ ಕುರಿತಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್ ಅಭಿಮಾನಿಗಳು ಸಹ ಸಾತ್ ನೀಡಿದರೆ ಪ್ರತಿ ಟ್ವೀಟ್ ಅನ್ನು ಶಿಕ್ಷಣ ಸಚಿವ ಸಚಿವರಿಗೆ ಟ್ಯಾಗ್ ಮಾಡುವ ಮೂಲಕ ಒತ್ತಾಯಿಸಲಾಗುತ್ತಿದೆ.
ಚಕ್ರವರ್ತಿ ಸೂಲಿಬೆಲೆ ಅವರು ಸಹ ಈ ಒಂದು ವಿಚಾರದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದಾರೆ ಇದು ಮಕ್ಕಳಿಗೆ ತುಂಬಾ ಉಪಯುಕ್ತವಾದಂತಹದ್ದು ಆದ್ದರಿಂದ ಎಲ್ಲಾ ಶಾಲಾ ಮಕ್ಕಳಿಗೂ ಸಹ ಗಂಧದ ಗುಡಿ ಸಿನಿಮಾವನ್ನು ತೋರಿಸಬೇಕು ಎನ್ನುವ ಕಡೆ ಮುಖ ಮಾಡಿದ್ದಾರೆ. ಇದಕ್ಕಾಗಿ ಚಕ್ರವರ್ತಿ ಸೂಲಿಬೆಲೆ ಅವರು ಒಂದು ಅಭಿಯಾನವನ್ನೇ ಆರಂಭಿಸಿದ್ದಾರೆ ಇಂದಿನ ಪೀಳಿಗೆಗೆ ಪ್ರಕೃತಿ ವನ್ಯಜೀವಿಗಳು ಹಾಗೆಯೇ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಅಷ್ಟೇನೂ ಅರಿವು ಇಲ್ಲ ಆದ್ದರಿಂದ ಈ ಸಿನಿಮಾದಲ್ಲಿ ಭವಿಷ್ಯದ ಪೀಳಿಗೆಗೆ ಪ್ರಕೃತಿ ವನ್ಯ ಜೀವಿಗಳ ಕುರಿತು ಆಸಕ್ತಿ ಹಾಗೂ ಪ್ರೀತಿ ಹುಟ್ಟಿಸುತ್ತದೆ ಎನ್ನುವಂತಹ ಉದ್ದೇಶದಿಂದ ಶಾಲಾ ಮಕ್ಕಳಿಗೆ ಗಂಧದಗುಡಿ ಸಿನಿಮಾವನ್ನು ತೋರಿಸಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದಾರೆ.
ಸರ್ಕಾರವೇ ಎಲ್ಲಾ ಕಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ಅವರ ನೆನಪು ಹಾಗೂ ಕಾಡಿನ ಮೇಲಿನ ಗೌರವ ಎರಡು ಶಾಶ್ವತವಾಗಿ ಇರುತ್ತದೆ ಎಂದು ಸೂಲಿಬೆಲೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಇನ್ನು ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಕರ್ನಾಟಕ ಪ್ರತಿಷ್ಠಿತ ಪ್ರಶಸ್ತಿ ಆದಂತಹ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಇಂದು ನಾಲ್ಕು ಗಂಟೆಗೆ ಆರಂಭವಾಗಲಿದೆ ಈ ಒಂದು ಪ್ರಶಸ್ತಿಯನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪಡೆದುಕೊಳ್ಳಲಿದ್ದಾರೆ. ಪ್ರಶಸ್ತಿಯನ್ನು ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಈ ಒಂದು ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಹಾಗೆ ಜೂನಿಯರ್ ಎನ್ ಟಿ ಆರ್ ಆಗಮಿಸಲಿದ್ದಾರೆ ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಸಹ ಮುಕ್ತವಾದ ಅಂತಹ ಅವಕಾಶಗಳು ಇರುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿಗೆ.
ಗಂಧದಗುಡಿ ಸಿನಿಮಾಾವು ನಮ್ಮ ಕನ್ನಡಿಗರಿಗೆ ಒಂದು ಹೆಮ್ಮೆ ಗಂಧದಗುಡಿಯಲ್ಲಿ ಅಪ್ಪು ಅವರ ಜರ್ನಿ ದೊಡ್ಡದಾಗಿತ್ತು ನಾಗರಹೊಳೆಯಿಂದ ಹಿಡಿದು ದಾಂಡೇಲಿಯ ಕಾಡಿನ ಉಗಮ ಸ್ಥಾನದ ವರೆಗೂ ಸಹ ಅಪ್ಪು ಅವರು ತಮ್ಮ ಪಯಣವನ್ನು ಮುಂದುವರಿಸಿದ್ದಾರೆ. ನಮ್ಮ ಕರ್ನಾಟಕದ ಸೊಬಗನ್ನು ತೋರಿಸುವಲ್ಲಿ ಅಪ್ಪು ಮುಂದಾಗಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಕರ್ನಾಟಕ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದು ಈ ಚಿತ್ರದ ಮೂಲಕ ನಮಗೆ ತಿಳಿಯುತ್ತದೆ ನಮ್ಮ ಕಾಡಿನ ಸೌಂದರ್ಯ ನದಿ, ಹೊಳೆ, ಜರಿ ಹಾಗೆಯೇ ಪ್ರಾಣಿ ಪಕ್ಷಿ ಎಲ್ಲವೂ ಸಹ ಈ ಸಿನಿಮಾದಲ್ಲಿ ಬಂದು ಹೋಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಶಾಲಾ ಮಕ್ಕಳು ಸಹ ತಪ್ಪದೆ ಈ ಸಿನಿಮಾವನ್ನು ನೋಡಬೇಕು ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.